ಅಂತ್ಯವಲ್ಲ

ಇಷ್ಟಿಷ್ಟೆ ಆವರಿಸಿದ್ದು
ಬದುಕಿಗೂ ವಿಸ್ತಾರವೇ
ತೂಗಿದಷ್ಟು ತೂಕ
ಅಹಂಮಿಕೆ ಭಾರ
ದೂರ ದೂರ ನೇಪಥ್ಯಕ್ಕೆ
ಸರಿದು

ಉಳಿದುದೊಂದೇ ಒಂದು
ರುದ್ರವಿಶಾದದ ಭಾವ
ಮಿಕ್ಕೆಲ್ಲವೂ ಸೊನ್ನೆ
ಘೋರತೆಯ ಶೂನ್ಯ
ಸೊನ್ನೆಯ ಪಕ್ಕಕೆ
ಅಂಕೆಯು

ಆಗಷ್ಟೇ ಸೊನ್ನೆಗೆ ಅರ್ಥವು
ಮನಸ್ಸು ಮನಸ್ಸುಗಳ
ಕಡೆಯುವಿಕೆ, ಹೆಚ್ಚಾಯಿತೇನೋ
ಸಿಗಲಾರದ ಬೆಣ್ಣೆ
ಬದುಕೆಂದರೇ ಇದೆ ಏನು?
ಮಾತು ಮಾತುಗಳ ಕೋಲಾಟ
ಅಂತರಂಗದಲಿ ಬರಿ ಸೆಣಸಾಟ
ಮತ್ತದೇ ಹುಡುಕಾಟ

ಬಣವೆಯಲಿ ಸೂಜಿ
ಹುಡುಕುವ ವ್ಯರ್ಥಶ್ರಮ
ಆದರೂ ಪ್ರಯತ್ನಕ್ಕೆ
ಕೊನೆ ಇಲ್ಲಾ

ಇದು ಅಂತ್ಯವೂ ಅಲ್ಲಾ
ಆದಿಯೂ ಅಲ್ಲಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈಗ ಯಾರ ಕ್ಷಮಿಸಬೇಕು?
Next post ಸರ್ಕಸ್ಸು

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…