Home / ಕನ್ನಡ ಕಾದಂಬರಿ

Browsing Tag: ಕನ್ನಡ ಕಾದಂಬರಿ

ಅಧ್ಯಾಯ ೨೫ ಡ್ರೆಸ್ಸಿಂಗ್ ಟೇಬಲಿನ ಕನ್ನಡಿಯಲ್ಲಿ ತನ್ನನ್ನು ತಾನೇ ನೋಡಿಕೊಂಡಳು ರಾಣಿ ಕಿತ್ತು ತೆಗೆದಷ್ಟೂ ಬೆಳೆಯುತ್ತಿದ್ದ ಬಿಳಿ ಕೂದಲುಗಳು, ನಿದ್ದೆಯಿಲ್ಲದಂತಿದ್ದ ಕಣ್ಣುಗಳು. ನೋಡಿದಷ್ಟೂ ಆಗುತ್ತಿದ್ದ ನಿರಾಸೆ, ಭಯಂಕರ ಒಂಟಿತನ, ವಯಸ್ಸು ತನ್ನ...

ಅಧ್ಯಾಯ ೨೩ ಪ್ರಭಾಕರ ರೆಡ್ಡಿ ಕೇಳಿದ : “ರಾಜಾರಾಮನಿಗೆ ಸ್ಟೇಟ್ಸ್ಗೆ ಹೋಗಲು ಪೋರ್ಡ್ ಫೌಂಡೇಶನ್ ನ ಹಣ ಕೊಡಿಸಿದ್ದಾರೆ ಗೊತ್ತೆ?” ರೆಡ್ಡಿ ತುಂಬಾ ರೇಗಿಕೊಂಡಂತಿತ್ತು. ತನಗೆ ಗ್ರಾಂಟ್ ಸಿಗಲಿಲ್ಲವೆಂದಲ್ಲ. ರೆಡ್ಡಿಯನ್ನು ಅರಿತವರು ಯಾ...

ಅಧ್ಯಾಯ ೨೧ ಶಕುಂತಳೆಯ ಚೆಲುವು ಮೈಕಟ್ಟಿಗಾಗಲಿ, ಮೈ ಬಣ್ಣಕ್ಕಾಗಲಿ ಸೇರಿದುದಲ್ಲ. ಒಮ್ಮೆ ನೋಡಿದರೆ ಎರಡನೆ ಬಾರಿ ನೋಡಬೇಕೆನ್ನಿಸುವ ರೂಪು ಅವಳದಲ್ಲ. ತುಸು ಹೆಚ್ಚು ನೀಳವೆನ್ನಬಹುದಾದ ಮೋರೆ, ನಸುಗಪ್ಪಿನ ಮೈ. ಅವಳ ಉಡುಗೆ ತೊಡುಗೆಗಳೂ ಸರಳವೇ. ಆದರೂ ...

ಅಧ್ಯಾಯ ೧೯ ಆಗಾಗ ಕೈಕೊಡುತ್ತಿದ್ದ ಫ್ಯಾನು, ಕೆಟ್ಟ ಸೆಕೆ, ಪಕ್ಕದ ರೂಮಿನ ಜೋಡಿಯ ಸದ್ದು, ಸೊಳ್ಳೆಗಳು-ಇವೆಲ್ಲವುಗಳಿಂದಾಗಿ ಅರವಿಂದನಿಗೆ ನಿದ್ದೆ ಇಲ್ಲ. ಜೊಂಪು ಹತ್ತುವಷ್ಟರಲ್ಲಿ ಬೆಳಗೂ ಆಗಿತ್ತು. ಕಣ್ಣುಗಳಲ್ಲಿ ಉಸುಕುದಂತೆ ಉರಿ, ಸರಿಯಾದೊಂದು ವ...

ಅಧ್ಯಾಯ ೧೭ ಪ್ರೊಫೆಸರ್ ಖಾಡಿಲ್ಕರ್‌ ದೇಹವನ್ನು ತಮ್ಮ ಮೋರಿಸ್ ಮೈನರ್ ಕಾರಿನಲ್ಲಿ ತುರುಕಿಕೊಂಡು ಗಂಟೆಗೆ ಹದಿನೈದು ಕಿಲೋಮೀಟರ್ ವೇಗದಲ್ಲಿ ಅಸ್ಪತ್ರೆಯ ಕಡೆ ನಡೆಸಿದರು. ಹನ್ನೆರಡು ವರ್ಷಗಳ ಹಿಂದೆ ಮದರಾಸಿನಿಂದ ಕೊಂಡ ಕಾರು ಅದು. ಮದರಾಸಿನಿಂದ ಹೈದ...

ಅಧ್ಯಾಯ ೧೫ ಇಂಟರ್ವ್ಯೂಗೆ ಇನ್ನೂ ಎರಡು ದಿನಗಳಿರುವಾಗಲೇ ಅರವಿಂದ ಹೈದರಾಬಾದು ತಲುಪಿದ. ಬೆಂಗಳೂರಿಗೆ ಬಸ್ಸಿನಲ್ಲಿ ಬಂದು ಅಲ್ಲಿಂದ ರೈಲು ಹತ್ತಿದ್ದ. ಬೇಸಿಗೆ ರಜೆಯಲ್ಲಿ ಓಡಾಡುವ ಮಂದಿ ಸ್ಟೇಷನಿನಲ್ಲಿ ಗಿಜಿಗಿಜಿ ತುಂಬಿದ್ದರು. ರಿಸರ್ವೇಶನಿಗೆ ಪ್ರ...

ಅಧ್ಯಾಯ ೧೩ ಶಾಮರಾಯರು ಟೆಂಟನ್ನು ಪ್ರವೇಶಿಸಿದಾಗ ಬಯಲಾಟದ ಯಾವುದೋ ರಸವತ್ತಾದ ಪ್ರಸಂಗ ನಡೆಯುತ್ತಿತ್ತು. ಭವ್ಯವಾದ ರಂಗಮಂಟಪ, ಡೈನಮೋ ಲೈಟು ಹಾಕಿ ಜಗಜಗಿಸುತ್ತಿತ್ತು. ಶಾಮರಾಯರು ಸುತ್ತಲೂ ನೋಡಿದರು. ಟೆಂಟು ಜನರಿಂದ ಭರ್ತಿಯಾಗಿರುವುದನ್ನು ಕಂಡು ಖ...

ಅಧ್ಯಾಯ ೧೧ ಅರವಿಂದ ಮನೆ ತಲುಪಿದಾಗ ತಾಯಿಗೆ ಉಸಿರು ಮಾತ್ರ ಇತ್ತು. ಪ್ರಜ್ಞೆ ಇರಲಿಲ್ಲ. ಅವಳಿಗೆ ಮೇಲಿಂದ ಮೇಲೆ ಸ್ಟ್ರೋಕು ಬಡಿದಿತ್ತು. ಡಾಕ್ಟರನ್ನು ಕರೆಸಿದರೂ ಏನೂ ಉಪಯೋಗವಾಗಲಿಲ್ಲ. ಇಷ್ಟು ವಯಸ್ಸಾದ ಮೇಲೆ ಟ್ರೀಟ್‍ಮೆಂಟ್ ಕಷ್ಟ ಎಂದರು ಡಾಕ್ಟರ...

ಅಧ್ಯಾಯ ೯ ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯಕರ್ತನೊಬ್ಬ ನಾಗೂರಿಗೆ ಬಂದು ಮುಷ್ಕರದ ಕರಪತ್ರಗಳನ್ನು ಹಂಚತೊಡಗಿದ. ಓದುಬಾರದವರಿಗೆ ಓದಿ ಹೇಳುತ್ತಿದ್ದ. ಮುಂದಿನ ವಾರದಿಂದ-ಅಷ್ಟರೊಳಗಾಗಿ ಬೇಡಿಕೆಗಳ ಮಾನ್ಯವಾಗದಿದ್ದರೆ-ಎಲ್ಲ ಕಾರ್ಮಿಕರು ಮುಷ್ಕರ ಹೂಡಬ...

ಅಧ್ಯಾಯ ೭ ಮರೀನಾ ತೆಳ್ಳಗೆ ಬೆಳ್ಳಗೆ ಇದ್ದಳು. ಸೊಂಪಾಗಿ ಬೆಳೆದ ತಲೆಗೂದಲು. ಆಯಾಸಗೊಂಡ ಕಣ್ಣುಗಳು. ಮಧ್ಯಾಹ್ನ ಬಸ್ಸಿನಲ್ಲಿ ಬಂದು ಸ್ನಾನ ಊಟ ಮುಗಿಸಿ ಚಿಕ್ಕ ನಿದ್ದೆ ಮಾಡಿ ಎದ್ದಿದ್ದಳು. ಮೆಸ್ಕರೆನ್ನಾ ಒಮ್ಮೆ ಅರವಿಂದನಿಗೆ ತಮ್ಮ ಫ್ಯಾಮಿಲಿ ಆಲ್ಬ...

1...2627282930...33

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...