ನೀ ಮನಸುಮಾಡಿದರೆ

ನೀ ಮನಸುಮಾಡಿದರೆ ಮಹದೇನು? ನಿನ್ನೀ ಜಗದಿ ಅಸಾಧ್ಯ ಇಹುದೇನು|| ನೀ ಮನಸುಮಾಡಿದರೆ ಮೂಗನು ಹಾಡುವನು| ನೀ ಮನಸು ಮಾಡಿದರೆ ಹೆಳವನು ಓಡುವನು| ನೀ ಮನಸು ಮಾಡಿದರೆ ಕುರುಡನೀಜಗವ ನೋಡಿ ಸಂಭ್ರಮಿಸುವನು|| ನೀ ಮನಸು ಮಾಡಿದರೆ...

ಸ್ವಗತ

ನನ್ನ ಎದೆಯನ್ನೇ ಬಗೆದಿಟ್ಟ ಹಾಗಿದೆ ಹೆಣ್ಣನ್ನು ಗುಳೆ ಎಬ್ಬಿಸುವ ವಿವಾಹವೆಂಬ ಈ ಶಿಷ್ಟಾಚಾರದ ಗೊಂದಲ ಗಿಜಿ, ಗಿಜಿ ಯಾರು ಯಾರೋ ಏನೇನೋ ಹೇಳುತ್ತಿರುತ್ತಾರೆ ಕೇಳುತ್ತಿರುತ್ತಾರೆ ಒಂದರ ತಲೆ ಬುಡವೂ ಗೊತ್ತಾಗುವುದಿಲ್ಲ ನಾನು, ಈ ಜನರ...

ನಿನ್ನ ದಯೆಯಿಂದಲೇ

ನಿನ್ನ ದಯೆಯಿಂದಲೇ ನಾ ನಿನ್ನೀ ಜಗದಲಿ ಕಣ್ಣ ತೆರೆದಿರುವೆ| ನಿನ್ನ ಕೃಪೆಯಿಂದಲೇ ನಾನಿಲ್ಲಿ ನರನಾಗಿ ಜನ್ಮ ತಳೆದಿರುವೆ| ಏನು ಪುಣ್ಯವೊಕಾಣೆ ಎನ್ನ ತಾಯಿತಂದೆಯ ಮೇಲಾಣೆ ನಾ ಧನ್ಯನಾಗಿರುವೆ| ನಿನಗೆ ಸದಾ‌ಋಣಿಯಾಗಿರುವೆ|| ನನ್ನೆಲ್ಲಾ ಇಷ್ಟಾರ್ಥಗಳ ನನಗರಿವಿಲ್ಲದೆ...

ನನ್ನವಳು

ಅರಳಿತು ಜೀವ ನನ್ನೊಳಗೆ ನಾ ಅಂದು ನೋಡಿದ ದಿನದಿಂದಲೇ ಕರಗಿ ಹೋದೆ ನಾ ನಿನ್ನ ನೋಟಕೆ ನೀನಾದೆ ಪಾಠ ನನ್ನ ಬಾಳ ಪುಟಕೆ. ನಿನ್ನಯ ಸಾಂಗತ್ಯ ಹಸಿರಾಗಿ ನನ್ನಯ ಒಡಲ ನೀ ಉಸಿರಾಗಿ ಮಧುರ...

ಶಬ್ದ ಸತ್ತಿತು ವಾಕ್ಯ ಸತ್ತಿತು

ಶಬ್ದ ಸತ್ತಿತು ವಾಕ್ಯ ಸತ್ತಿತು ಕಾವ್ಯ ಸತ್ತಿತ್ತು ಅಳಿಯಿತು ಸತ್ತಿತೆಂಬಾ ಶಬ್ದ ಸತ್ತಿತು ಸತ್ಯ ಮಾತ್ರವೆ ಉಳಿಯಿತು ||೧|| ತಿಳಿಯ ತಿಂಗಳ ಹೊಳೆಯ ಅಂಗಳ ತಂಪು ತನನನ ನುಡಿಯಿತು ಆತ್ಮ ಗೋಪುರ ಮೌನ ರೂಪುರ...

ಮನುಜನಿಗಿಂತ ಮೃಗ

ಮನುಜನಿಗಿಂತ ಮೃಗಪ್ರಾಣಿಯೊಂದಿಲ್ಲ ಕಾಡುಮೃಗ ಹೊಟ್ಟೆಪಾಡಿಗೆ ಭೇಟೆಯಾಡಿದರೆ| ಮನುಜ ಅಹಂಕಾರ, ಸ್ವಾರ್ಥಕೆ ಇನ್ನೊಬ್ಬರ ಜೀವದನದ ಜೊತೆ ಬೇಟೆಯಾಡುತ ಮನುಕುಲಕೆ ಮೃತ್ಯುವಾಗಿಹನು|| ಮನುಜ ಮನುಜನಂತೆ ನಡೆದರೆ ಬೇಕಿಲ್ಲ ಮಾನವನ ಶಿಕ್ಷೆ ರಕ್ಷಣೆಯ ಕಾನೂನು, ಬಂದಿಖಾನೆ| ಮನುಜ ಮಾನವೀಯತೆಯಲಿ...

ನಾವು ದೇವರಲ್ಲ

ನಾನು ರಾಜ್ಯವನ್ನಾಳಿದೆ, ರಾಜನಾಗಿ ಮೆರೆದೆ ಜನತೆಯ ಹಿತಕೆ ನನ್ನಯ ತನಕ್ಕೆ ನಾನು ದಾರ್ಶನಿಕನಾಗಿ ಜಗದಲಿ ಬೆಳೆದೆ ಜನರ ದಾರಿದ್ರ್ಯವ ಕಳೆಯಲು ಯತ್ನಿಸಿದೆ ನಾನು ಸಾಧೂ ಸಂತನಾಗಿ ಭೂಮಿಯಲ್ಲಿ ನಿಂತೆ ಸಮಾಜಕ್ಕೆಲ್ಲ ಸಾಂತ್ವನ ಹೇಳಿದೆ ನಾನು...

ನಿಂಬಿಹಣ್ಣ ಜೂಜಾ ಮಾಮೋಜಾ

ನಿಂಬಿಹಣ್ಣ ಜೂಜಾ ಮಾಮೋಚಾ ನಾ ರಾಜಾ ಬೋಜಾ ಕಳಿಯೋಣು ಬಾಬಾಬಾ ||ಪಲ್ಲ|| ಜರದ ಪಟಗಾ ಮಾರಿ ಜೋರ್‍ದಾರ ಆಡೋಣು ಸರ್‍ದಾರ ಯಾರಪ್ಪಾ ಹುರ್ರುರ್‍ಯೋ ಹೇಂತೀಯ ಸೀರೀಯ ಒತ್ತಿಟ್ಟು ಆಡೋಣು ಗಣಸೂರು ಮನಿಬಿಟ್ಟು ಬರ್‍ಬರ್ರೋ ||೧||...