ನಿಂಬಿಹಣ್ಣ ಜೂಜಾ ಮಾಮೋಜಾ

ನಿಂಬಿಹಣ್ಣ ಜೂಜಾ ಮಾಮೋಚಾ ನಾ ರಾಜಾ
ಬೋಜಾ ಕಳಿಯೋಣು ಬಾಬಾಬಾ ||ಪಲ್ಲ||

ಜರದ ಪಟಗಾ ಮಾರಿ ಜೋರ್‍ದಾರ ಆಡೋಣು
ಸರ್‍ದಾರ ಯಾರಪ್ಪಾ ಹುರ್ರುರ್‍ಯೋ
ಹೇಂತೀಯ ಸೀರೀಯ ಒತ್ತಿಟ್ಟು ಆಡೋಣು
ಗಣಸೂರು ಮನಿಬಿಟ್ಟು ಬರ್‍ಬರ್ರೋ ||೧||

ನೂರ್ಕಪ್ಪು ಚಾಜೂಜು ಕಟ್ಟೀದ ಕರಿಯಪ್ಪ
ಚಿತ್ತಾರೆ ಚಾಚಾರೆ ಬಿದ್ದಾನೊ
ಐನೂರು ಇಡ್ಲೀಯ ಜೂಜ್ನಾಗ ಐನೋರ
ಐಯ್ಯಪ್ಪ ಐಯ್ಯಂತ ಸತ್ತಾನೊ ||೨||

ಮಿರ್ಚೀಯ ಜೂಜಪ್ಪ ಬೋಂಡಾದ ಮೋಜಪ್ಪ
ಭರಮಪ್ಪ ಹೊಟ್ಟೊಡೆದು ಹೋಗ್ಯಾನೊ
ಸುಡಗಾಡು ಗಟ್ಯಾನ ಹೆಣ ತರುವ ಜೂಜಕಟ್ಟಿ
ಕಲ್ಲಪ್ಪ ಹೇತಾಡಿ ಸತ್ತಾನೊ ||೩||

ಆರಕ್ಕ ಅರವತ್ತು ರೂಪಾಯಿ ಗೆದ್ದೇನೊ
ಹೇಂತೀಗೆ ಹೆಂಡಾವ ಕುಡಿಸೇನೊ
ನಿರಿ ಇಟ್ಟು ಗುರಿ ಇಟ್ಟು ನಿಂಬೀಯ ಒಗದೇನೊ
ಬೊಟ್ಟಿಟ್ಟು ಬುಂದೇವು ತಿಂದೇನೊ ||೪||

ಬಸವಣ್ಣ ಗುಡಿಯಿಂದ ಮಾಂತನ ಮಠತಂಕ
ನಿಂಬೀಯ ಹಣ್ಣಾ ತೂರೇನೊ
ದ್ಯಾಮೀಯ ಕಟಿಯಿಂದ ದರಗಾದ ದೊರಿತಂಕ
ನಿಂಬೀಯ ಹಣ್ಣಾ ಮುಟಿಸೇನೊ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಡುಗೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೭

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…