ನಾವು ದೇವರಲ್ಲ

ನಾನು ರಾಜ್ಯವನ್ನಾಳಿದೆ, ರಾಜನಾಗಿ ಮೆರೆದೆ
ಜನತೆಯ ಹಿತಕೆ ನನ್ನಯ ತನಕ್ಕೆ

ನಾನು ದಾರ್ಶನಿಕನಾಗಿ ಜಗದಲಿ ಬೆಳೆದೆ
ಜನರ ದಾರಿದ್ರ್ಯವ ಕಳೆಯಲು ಯತ್ನಿಸಿದೆ

ನಾನು ಸಾಧೂ ಸಂತನಾಗಿ ಭೂಮಿಯಲ್ಲಿ ನಿಂತೆ
ಸಮಾಜಕ್ಕೆಲ್ಲ ಸಾಂತ್ವನ ಹೇಳಿದೆ

ನಾನು ಮಹಾತ್ಮನಾಗಿ ಮುನ್ನುಗ್ಗಿದೆ
ಮಹಾ ಜನತೆಯ ಸೇವೆಯನ್ನು ಗೈದೆ

ನಾನು ಧರ್ಮ ಸಂಸ್ಥಾಪಕನಾಗಿ ನಿಂತೆ
ಜಗ ಜೀವನದ ದಾರಿಯ ತೋರಿದೆ

ನಾವೆಲ್ಲಾ ಕೂಡಿ ಹೇಳಿದೆವು ಜಗದ ಜನರೇ
ನೀವೆಲ್ಲರೂ ಕೂಡಿ ಬಾಳಿರಿ ಎಂದು

ಆದರೆ… ನಾವೆಲ್ಲೂ ಹೇಳಲಿಲ್ಲ ನಮ್ಮನು
ದೇವರಂತೆ ಇಟ್ಟು ಪೂಜೆ ಮಾಡಿರೆಂದು

ನಾವೆಲ್ಲೂ ಹೇಳಲಿಲ್ಲ ನಮಗಾಗಿ ನೀವು
ಗುಡಿ ಗುಂಡಾರ ಮಸೀದಿ ಚರ್ಚ್ ಬಸದಿ ಕಟ್ಟಿರೆಂದು

ನಾವೆಲ್ಲೂ ಹೇಳಲಿಲ್ಲ ಆರಾಧಿಸುವ ಭರದಲಿ
ನೀವು ನೀವೇ ಕಿತ್ತಾಡಿ ಸಾಯಿರಿ ಎಂದು

ಅದೇಕೋ…. ಜನರೆ ನೀವು ಈ ರೀತಿಯಲ್ಲಿ
ಬದುಕು ನಡೆಸುತ್ತಿರುವಿರಿ ನಮಗೇನೂ ತಿಳಿಯದು

ನಾವೆಲ್ಲರೂ ದೇವರಲ್ಲ ನಿಮ್ಮಂತೆ ಮಾನವರು
ನಮಗಾಗಿ ನೀವು ಜೀವ ಕೊಡ ಬೇಕು ಏಕೆ?

ಜಗದ ಸೃಷ್ಟಿಗೆ ಕಾರಣನಾದ ದೇವರು ಯಾರೆಂದು
ನಮಗೇ ಇನ್ನೂ ತಿಳಿದಿಲ್ಲ

ನಮ್ಮನ್ನು ದೇವರಂತೆ ಮೂರ್ತಿ ಮಾಡಿ ಪೂಜೆ
ಮಾಡುವುದು ನಮಗೆ ಬೇಕಿಲ್ಲ

ನಮ್ಮೆಲ್ಲರ ಆಸೆ ಒಂದೇ ಮಾನವತೆಯ ಅರಿತು ಬಾಳಿರಿ
ಸುಖ ಸಮೃದ್ಧಿಯ ಬಾಳು ನಿಮ್ಮದಾಗಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಭ್ರಮ
Next post ಜೇಬು

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…