Home / Kannada

Browsing Tag: Kannada

ಬಳಲಿದ ಬಾಳಿಗೆ ಭೆರವಸೆಯಾಗಲಿ ಇಂದಿನ ಸಂಕ್ರಾಂತಿ ಒಣಗಿದ ಹಾಳೆಗೆ ಹೊಸ ಮಳೆ ಸುರಿಯಲಿ ಮೂಡಲಿ ಶುಭಶಾಂತಿ ದಿಕ್ಕುಗಳೆಲ್ಲವು ಪ್ರಸನ್ನವಾಗಲಿ ಬೀಸಲಿ ತಂಗಾಳಿ, ಬತ್ತಿದ ನದಿಗಳ ಪಾತ್ರವು ತುಂಬಲಿ ಗಂಗೆಯೆ ಮೈತಾಳಿ, ತೂಗುತಿರಲಿ ಹೊಲಗದ್ದೆಗಳು ತೆನೆಯ ಹಾ...

ಆಕಾರ ತಪ್ಪುವಂತಿಲ್ಲ ಹದ ಮೀರುವಂತಿಲ್ಲ ರೊಟ್ಟಿ ಸದಾ ಗುಂಡಗೇ ಇರಬೇಕೆಂಬ ಹಠ ಹಸಿವೆಗೆ. ಯಾಂತ್ರಿಕ ಮಾಟದ ಕಟ್ಟಳೆ ಮೀರಿ ಪೊಗರೆಂದರೂ ಸರಿ ಚಿತ್ತ ಚಿತ್ತಾರದ ವಿಶಿಷ್ಟಾಕೃತಿಗಳ ರೊಟ್ಟಿ ಅರಳುತ್ತಲೇ ಜೀವಂತ....

ಮುತ್ತಿನ ಹನಿಯ ಮಂಜು ಮರ್ಮರದ ಗಾಳಿ ಬೀಸಿ ಚಳಿಗಾಲದ ನೀಲ ಆಕಾಶ ಖಾಲಿ ಒಡಲೊಳಗಿನ ಏಕಾಂತದ ಮೌನಕೆ ಏನಾಗಿದೆ ಎಂಬುದು ಯಾರೂ ಕೇಳುವದಿಲ್ಲ. ಕವಿತೆ ಹಾಡುವದಿಲ್ಲ. ಆಕಾಶದ ಎತ್ತರಕೆ, ಅದಕೆ ಭೂಮಿಯ ಅನಿವಾರ್ಯತೆ ಹೊತ್ತ ಕಂಬಳಿಯಡಿ ಹೊರಳಾಡಿವೆ ಈ ನೆಲದ ಹಂ...

ಮುಗಿಲ ಹಣೆಯಲಿ ಹೊಳೆವ ಅಳಿತಾರೆಗಳು ರವಿಯು ಹಗಲಿನಲಿ ಹುಟ್ಟುತಿರೆ ಮಾಸಿಹೋಗುವ ತೆರದಿ, ಭಾವಗಳು, ಬಯಕೆಗಳು, ನೂರಾರು ಚಿಂತೆಗಳು, ಕನಸು ಮನವಾವರಿಸೆ, ಒಲವ ಸುಂದರ ರವದಿ ಮಾಯವಾಗುತಲಿಹವು, ಉರುಳಿರುವ ತಾರೆಗಳ ಗತಿಯ ಕೇಳುವುದೇಕೆ? ಹಗಲಿನೆಳಬಿಸಿಲಿನಲ...

ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ ಕಮರು, ಇನ್ನೂ ಒಂದು; ದೀಪಾವಳಿ ಯಲ್ಲಿ ...

ಮರಗಳು ಪಾಪ ಎಲ್ಲಿಗೂ ಹೋಗುವುದಿಲ್ಲ ಅವು ಹುಟ್ಟಿದಲ್ಲೇ ಬೆಳೆಯುತ್ತವೆ ಯಾವ ದೇಶವನ್ನೂ ಸುತ್ತುವುದಿಲ್ಲ ಯಾವ ನದಿಗಳನ್ನೂ ದಾಟುವುದಿಲ್ಲ ಅವು ಇದ್ದಲ್ಲೆ ಇರುತ್ತವೆ ಮೌನವಾಗಿರುತ್ತವೆ ಅವಕ್ಕೆ ಸುದ್ದಿಗಳು ತಿಳಿಯುವ ಬಗೆ ಹೇಗೆ ? ಬಳಲಿದ ಯಾತ್ರಿಕರು ...

ನಾವೇಕೆ ಹೀಗೆ ಮುಖವಾಡಧಾರಿಗಳುಎದುರಿನಲ್ಲಿ ಹೊಗಳಿಕೆ-ಹೊನ್ನಶೂಲದ ತಿಮಿತಹಿಂದೆ-ವ್ಯಂಗ್ಯಕಟಕಿ ಕುಹಕಪವಿತ್ರ ಸ್ನೇಹಕ್ಕೆ ಕೊರತೆಯೇ? ನಮ್ಮ ನಗುವೇಕೆ ಹೀಗೆ?ತುಟಿ ತೆರೆದು, ಹಲ್ಲು ತೋರಿಸಿ ವಕ್ರನಗೆ ಬಿರಿದು, ಸ್ನೇಹಸ್ಮಿತವಲ್ಲ ಅದುಅಣಕು ನಗುವೇ? ನಮ್...

ತುಂಬ ತಡವಾಯಿತು ಗೆಳೆಯಾ ಈ ತನಕ ಇದ್ದೆ ಇನ್ನಿಲ್ಲ. ಬರುತ್ತೇನೆ ಎಂದು ಹೇಳಿದ್ದೆಯಲ್ಲ? ಯಾಕೆ ಬರಲಿಲ್ಲ? ನಾನು ಕಾದಿದ್ದೆ. ಚುಕ್ಕಿಗಳ ಎಣಿಸುತ್ತ ಇರುಳುಗಳ ಗುಣಿಸುತ್ತ. ನಾನು ಕಾದಿದ್ದೆ, ನನ್ನದೇನೂ ತಪ್ಪಿಲ್ಲ. ಹೌದು ನಾನು ಕಾದಿದ್ದೆ, ಹೃದಯ ಬಾವ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...