ಹನಿಗವನ ಉಮರನ ಒಸಗೆ – ೩೪ ಡಿ ವಿ ಗುಂಡಪ್ಪ September 10, 2024May 25, 2024 ಸಖನೆ, ನೀಂ ಬಹುದಿನದ ಪಿಂತೆನ್ನ ಮನೆಯೊಳಗೆ ಪೊಸ ಮದುವೆಯೌತಣಕೆ ಬಂದಿರ್ದೆಯಲ್ತೆ? ಒಣ ಬಂಜೆ ತರ್ಕ ವನಿತೆಯನಂದು ನಾಂ ತೊರೆದು ದ್ರಾಕ್ಷಿಯೆಂಬಳ ಸುತೆಯ ಮೆದುಗೈಯ ಪಿಡಿದೆಂ. ***** Read More
ಹನಿಗವನ ಉಮರನ ಒಸಗೆ – ೩೩ ಡಿ ವಿ ಗುಂಡಪ್ಪ September 3, 2024May 25, 2024 ಏಸುದಿನ, ಹಾ! ಏಸುದಿನ ಕೊನೆಯ ಕಾಣದಿಹ ಈ ಘಾಸಿ ಆತರ್ಕಗಳ ಬವಣೆ ನಮಗೆ? ಕೈಗೆ ಸಿಲುಕದ ಕಹಿಯ ಫಲವನೇನರಸುವುದು, ಮುದವ ಕಣ್ಗಿಂಬಾದ ದ್ರಾಕ್ಷಿ ಬೀರುತಿರೆ? ***** Read More
ಹನಿಗವನ ಉಮರನ ಒಸಗೆ – ೩೨ ಡಿ ವಿ ಗುಂಡಪ್ಪ August 27, 2024May 25, 2024 ಜೀವನದ ಸೊದೆಯ ನಾಮೀನಿಮಿಷ ಸವಿಯದಿರೆ ಕರೆವುದಿನ್ನೊಂದು ನಿಮಿಷದಲಿ ಸುಡುಗಾಡು; ರವಿಶಶಿಗಳೋಡುತಿಹರೆಲ್ಲ ಶೂನ್ಯೋದಯಕೆ; ಸಾಗುತಿಹರಕಟ! ಬಾ, ಸೊಗವಡುವ ಬೇಗ. ***** Read More
ಹನಿಗವನ ಉಮರನ ಒಸಗೆ – ೩೧ ಡಿ ವಿ ಗುಂಡಪ್ಪ August 20, 2024May 25, 2024 ಹಾ! ತುಂಬು ಬಟ್ಟಲನು. ಕಾಲವದು ತಾಂ ನುಣ್ಚಿ ಕೈಗೆ ದೊರೆಯದೆ ಪರಿವ ಪರಿಯ ವಿವರಿಸಲೇಂ? ನಿನ್ನೆ ಸತ್ತಿಹುದಿನ್ನು, ನಾಳೆ ಹುಟ್ಟದೆಯಿಹುದು; ಇಂದು ಸೊಗವಿರಲವನ್ನು ನೆನೆದಳುವುದೇಕೆ? ***** Read More
ಹನಿಗವನ ಉಮರನ ಒಸಗೆ – ೩೦ ಡಿ ವಿ ಗುಂಡಪ್ಪ August 13, 2024May 25, 2024 ಆಹ! ಅಂತಿರಬಹುದು. ಈ ಮಣ್ಣು ಹೊದ್ದಿಕೆಯೊ ಳೆನಿಬರೋ ಹುದುಗಿಹರು ನಮಗೆಡೆಯ ಬಿಟ್ಟು; ಅವರಂತೆ ನಾವಿಂದು ತಿರೆಯೌತಣವನುಂಡು, ಮರೆಯಾಗಿ ಬಳಿಕಿದನು ಕಿರಿಯರ್ಗೆ ಬಿಡುವಂ. ***** Read More
ಹನಿಗವನ ಉಮರನ ಒಸಗೆ – ೨೯ ಡಿ ವಿ ಗುಂಡಪ್ಪ August 6, 2024May 25, 2024 ಈ ಗುಲಾಬಿಯ ಕೆಂಚದೆತ್ತಣದೊ! ಇದರ ಬೇ ರೀಂಟಿತೇಂ ಚಲುವೆಯೊರ್ವಳ ರಕುತ ಕಣವ? ಈ ನದಿಯನಪ್ಪಿರುವ ಪಸುರೊ! ಪಿಂತಿತ್ತಳಿದ ಬಿರಯಿಯೋರ್ವನ ತಲೆಯ ಪಾಗಿದಕೆ ಬೇರೇಂ? ***** Read More
ಹನಿಗವನ ಉಮರನ ಒಸಗೆ – ೨೮ ಡಿ ವಿ ಗುಂಡಪ್ಪ July 30, 2024May 25, 2024 ಇಂತೊರೆದ ಕುಡಿಕೆ ತಾಂ ಪಿಂತೊಂದು ಜನ್ಮದಲಿ ಉಸಿರಿಡುತ ಕೂರ್ಮೆಯಿಂ ಬಾಳ್ದುದಿರಬಹುದು; ಎನ್ನ ತುಟಿ ಸೋಂಕಿದಾ ತಣ್ಪುಳ್ಳ ನುಣ್ದುಟಿಯ ದೆನಿಸು ಮುತ್ತನು ಕೊಟ್ಟು, ಎನಿಸ ಕೊಂಡಿತ್ತೋ! ***** Read More
ಹನಿಗವನ ಉಮರನ ಒಸಗೆ – ೨೭ ಡಿ ವಿ ಗುಂಡಪ್ಪ July 23, 2024May 25, 2024 ಬಳಿಕ ನಾಂ ಬೇಸತ್ತು ಜೀವರಸವನು ಬಯಸಿ ಈ ತುಟಿಯನಾಮಣ್ಣು ಕುಡಿಕೆಗಾನಿಸಲು, ಅದರ ತುಟಿಯಿದಕೆ ತತ್ತ್ವವನುಸಿರಿತೀ ತೆರದಿ: "ಕುಡಿ, ಸತ್ತ ಬಳಿಕ ನೀನಿತ್ತ ಬರಲಾರೆ." ***** Read More
ಹನಿಗವನ ಉಮರನ ಒಸಗೆ – ೨೬ ಡಿ ವಿ ಗುಂಡಪ್ಪ July 16, 2024May 25, 2024 ಇದರಿಂದೆ ನಾಂ ಕೊರಗಿ ನಭಕೊಮ್ಮೆ ಕೈಮುಗಿದು, ಬಿದಿ ತನ್ನ ಪುಟ್ಟ ಮಕ್ಕಳ ನಡೆಯ ನಡಿಸೆ ಈ ಕತ್ತಲೆಯೊಳಾವ ಬೆಳಕನಿರಿಸಿಹನೆನಲು, "ಕುರುಡರಿವೆ"- ಎನುತಾಗಲೊರೆದುದಾಗಸವು. ***** Read More
ಹನಿಗವನ ಉಮರನ ಒಸಗೆ – ೨೫ ಡಿ ವಿ ಗುಂಡಪ್ಪ July 9, 2024May 25, 2024 ಪಿಂದೆಸೆಯ ಬಾಗಿಲಿನ ಬೀಗಕ್ಕೆ ಕೈಯಿಲ್ಲ; ಮುಂದೆಸೆಯ ತೆರೆಯೆತ್ತಿ ನೋಡಲಳವಲ್ಲ; ಈಯೆಡೆಯೊಳೆರಡುದಿನ ನೀವು ನಾವೆಂಬ ನುಡಿ ಯಾಡುವೆವು; ಬಳಿಕಿಲ್ಲ ನೀವು ನಾವುಗಳು. ***** Read More