ಹುಡುಗಿ ದಿನಚರಿ ಬರೆಯುತ್ತಾಳೆ

ಹುಡುಗಿ ದಿನಚರಿ ಬರೆಯುತ್ತಾಳೆ. ಸುಂದರ ಹಗಲುಗಳ ಇಂಚಿಂಚನ್ನೂ ವರ್ಣರಂಜಿತ ಪುಟಗಳಲ್ಲಿ ಸೆರೆಹಿಡಿಯುತ್ತಾಳೆ. ನೂರೆಂಟು ಬಾರಿ ಯೋಚಿಸಿದರೂ ಕರಾಳ ರಾತ್ರಿಯ ಬಗ್ಗೆ ಒಂದೇ ಒಂದು ಸಾಲು ಬರೆಯಲಾಗದೆ ಮಿಡುಕುತ್ತಾಳೆ. ಕಪ್ಪೆಲ್ಲವನ್ನೂ ಕಂಗಳಲ್ಲೆ ತುಂಬಿಕೊಂಡು ಶಬ್ದಗಳಿಗಾಗಿ ತಡಕಾಡುತ್ತಾಳೆ....

ಹೇಳಲೇಬೇಕಾದ ಮಾತುಗಳು

ಹೇಳಬಾರದು, ಅಂದುಕೊಂಡರೂ ದಿಗ್ಗನೆ ಎದೆಗೆ ಒದ್ದು ದುಡುದುಡು ಓಡಿಬಂದು ಗಂಟಲಲ್ಲಿ ಗಕ್ಕನೆ ಕೂತು ಹೊರಳಿ-ತೆವಳಿ ನಾಲಿಗೆಯ ತುದಿಗೆ ಬಂದು ನಿಂತಾಗ ಕಿಕ್ಕಿರಿದ ಸಭಾಂಗಣದಲ್ಲಿ ಹೆಜ್ಜೆತಪ್ಪಿದ ನರ್ತಕಿಯಂತೆ ಗೆಜ್ಜೆ ಧ್ವನಿಗಳೂ ಅಸ್ಪಷ್ಟ ಹಾವ ಭಾವಗಳು ಮಾತ್ರ...

ನವ್ಯ

ಅದೇ ನೆಲ ಅದೇ ಜಲ ಎದೆ ಸೀಳಿ ಹೊರಬಂದ ಚಿಗುರುಗಳ ಮತ್ತದೇ ಹಳೆಯ ಬೀಜದ ಫಲ ಅಲ್ಲಿ…. ಇಲ್ಲಿ…. ಗಾಳಿಗುಂಟ ತೇಲಿಬಂದ ಹೊಸತನದ ವಾಸನೆ ಕುಡಿದು ಅಮಲಿನಲ್ಲಿ ತಲೆಕುಣಿಸಿ ತೊನೆದಾಡುವ ಶೈಲಿ- ಹಳೆಯದನ್ನೆ ಹೊಸದಾಗಿ...

ಯುದ್ಧ

ನಾನು ನನ್ನ ದೇಶದ ಗಡಿಯನ್ನು ಕೊಳೆಯದ ಹೆಣಕ್ಕೆ ಹೋಲಿಸುತ್ತೇನೆ. ನಿತ್ಯ ಕಾವಲು ಕಾಯುವ ನೂರು ಕಣ್ಣುಗಳಿಗಾಗಿ ದುಃಖಿಸುತ್ತೇನೆ. ಹಸಿರು ಉಸಿರಾಡದ ಮರಗಳಿಗಾಗಿ ಗೂಡು ಕಟ್ಟದ ಹಕ್ಕಿಗಳಿಗಾಗಿ ಬೇವನ್ನೆ ನೆಚ್ಚಿ ಸಾಯುವ ಕೋಗಿಲೆಗಳಿಗಾಗಿ ದುಃಖಿಸುತ್ತೇನೆ. ನೀರವತೆಯಲ್ಲಿ...

ಕುದುರೆ ಮತ್ತು ಮುತ್ತುಗಳು

ಮುತ್ತಿನಂತಹ ಅಕ್ಕಂದಿರಿಬ್ಬರನ್ನು ಕುದುರೆಯೊಂದು ಕೆಡವಿ ಕಂಗೆಡಿಸಿದ ಸುದ್ದಿ ನಿಮಗೂ ತಲುಪಿರಬಹುದು ಅಕ್ಕಂದಿರೇ ಹುಚ್ಚುತನದಿಂದ ಕುದುರೆಯನ್ನು ಕೆಣಕಿ ಕಂಗೆಟ್ಟರೆಂದು ಹಬ್ಬಿಸಿದ ಸುದ್ದಿಯನ್ನು ನೀವು ನಂಬಿರಲೂಬಹುದು. ಬಯಲೊಳಗೆ ಬಯಲಾದರಂತೆ ಅಕ್ಕಂದಿರು ಧೂಳೊಳಗೆ ಮೈ ಮುಚ್ಚಿಕೊಂಡವರನ್ನು ಮೆರವಣಿಗೆಯಲ್ಲಿ ಕುಣಿಸಿದರಂತೆ...

ಪ್ರಾರ್ಥನೆ

ನೀವು ನಗೆ ದೀವಟಿಗೆಗಳನ್ನು ಖರೀದಿಸುತ್ತೀರಾ? ನೀವು ಚಿಗಿತ ಆಸೆಗಳನ್ನು ಖರೀದಿಸುತ್ತೀರಾ? ನೀವು ಕುಪ್ಪಳಿಸುವ ಕನಸುಗಳನ್ನು ಖರೀದಿಸುತ್ತೀರಾ? ಹಾಗದರೆ ನಮ್ಮಲ್ಲಿಗೆ ಬನ್ನಿ. ನಮ್ಮಲ್ಲಿ ಲಾಟರಿ ಟಿಕೇಟು ಮಾರುವ ಪುಟ್ಟ ಹುಡುಗರಿದ್ದಾರೆ. ಕಣ್ಣಲ್ಲೆ ಕಟ್ಟಿ ಹಾಕುತ್ತಾರೆ. ಪ್ರೀತಿಯಿಂದ...

ಪ್ರೀತಿ

‘ಪ್ರೀತಿ’ ಅದೇನು? ಎಂದು ಯಾಕೆ ಕೇಳುತ್ತೀರಿ? ಕಡಲನ್ನು ನೋಡಿದ್ದೀರಾ? ಹಾಗಾದರೆ ಸುಮ್ಮನಿರಿ. ‘ಪ್ರೀತಿ’ ಪರಿಚಯಿಸಿ ಅಂದಿರಾ? ತುಂಬಾ ಸುಲಭ. ಒಮ್ಮೆ ಆಗಸವನ್ನು ಕಣ್ಮುಂದೆ ಕರೆಯಿರಿ. ‘ಪ್ರೀತಿ’ ಪ್ರಿಯವಾಗುತ್ತದೆ. ಯಾಕೆಂದರೆ ಅದಕ್ಕೆ ಬಣ್ಣವಿದೆ, ರುಚಿಯಿದೆ, ವಾಸನೆಯಿದೆ....

೧೬ ನೋಡಬೇಡ ತಿರುಗಿ

(ಪೂರ್ವಾರ್ಧ) ಯಾರಲ್ಲಿ? ಯಾರಿದ್ದೀರಿ? ಬಂದಿದ್ದೇನೆ. ಬಾಗಿಲು ತೆಗೆಯಿರಿ. ಈತನಕ ಇದ್ದಳು, ಈಗಿಲ್ಲ ಎಂದರೆ ಹೇಗೆ ನಂಬಲಿ? ಕಿಟಕಿಗಳ ತೆರೆದುಕೊಳ್ಳಿ ಬಾಗಿಲುಗಳ ತೆರೆದುಕೊಳ್ಳಿ ಬಂದಿದ್ದೇನೆ, ಕರೆದುಕೊಳ್ಳಿ. ಹೌದು, ಇಲ್ಲೆ ಈ ಕಿಟಕಿಯ ಬಳಿ ಕುಳಿತು ತಾರೆಯರನ್ನು...

ಈ ಒಂದು ಕ್ಷಣದ ಹಿಂದೆ….

ಈ ಒಂದು ಕ್ಷಣದ ಹಿಂದೆ…. ನಿನ್ನ ಬಾದಾಮಿ ಕಣ್ಣುಗಳ ಪರಿಚಯ ನನಗಿರಲಿಲ್ಲ. ನಿನ್ನ ಬೆವರಿನ ಪರಿಮಳಕ್ಕೆ ನನ್ನ ಮೂಗು ಅರಳುತ್ತದೆಯೆಂದು ನನಗೆ ಗೊತ್ತಿರಲಿಲ್ಲ. ಈ ಒಂದು ಕ್ಷಣದ ಹಿಂದೆ…. ನಿನ್ನ ಬೆಚ್ಚನೆಯ ಎದೆಯಲ್ಲಿ ಮರೆತ...

ಬಿಕ್ಕಳಿಸಿ ಅಳದಿರಲಿ…. ಪ್ರೀತಿ

ಕನಸು, ಕಾಮನಬಿಲ್ಲಿನಲ್ಲಿ, ಜೂಗಳಿಸುವ ಗಿಡಮರ ಬಳ್ಳಿ ಹೂವಿನಲ್ಲಿ, ಚುಕ್ಕಿ ಚಂದ್ರಮರ ನಗೆ ಬೆಳದಿಂಗಳಿನಲ್ಲಿ, ಹೊರಳುವ ಅಲೆಯ ಏರಿಳಿತ ಲಯಬದ್ಧ ಸಂಗೀತದಲ್ಲಿ, ಮಗ್ಗುಲಾದ ಮುಂಜಾವಿನ ಅರಳು ನೋಟದ ಬೆಳಕಿನಲ್ಲಿ, ಚಿಲಿಪಿಲಿ ಸಂಗೀತದಲ್ಲಿ ಮುಕ್ಕಳಿಸಿ ನಗಲಿ ನಮ್ಮಿಬ್ಬರ...