ಪದಕ ಸಿಗಲಿಲ್ಲ

ನಮ್ಮ ಕ್ರೀಡಾಪಟುಗಳು ಜಿಂಕೆಯಿಂದ ಓಟದ ಪಾಠ ಕಲಿತುಕೊಳ್ಳಲಿಲ್ಲ. ಮರಿಮೀನುಗಳನ್ನು ಗುರುವೆಂದು ಒಪ್ಪಿಕೊಳ್ಳಲಿಲ್ಲ ಆನಿಯಿಂದ ಭಾರ ಎತ್ತುವ ಕಲೆ ಕರಗತಗೊಳಿಸಿಕೊಳ್ಳಲಿಲ್ಲ. ಹಾಗಾಗಿ ಸಿಯೋಲ್‌ನಲ್ಲಿ ಒಂದೂ ಪದಕ ಸಿಗಲಿಲ್ಲ. ಸ್ಯೂಲ್ ಪದ್ಯಗಳು - ೧೯೮೮ರಲ್ಲಿ ಸ್ಯೋಲ್‌ನಲ್ಲಿ ನಡೆದ...

ವಿಮರ್ಶೆ

ನೀನು ನಿಂತ ನೆಲವನ್ನು ನಂದನವನವೆಂದೂ ಕೂತ ಬಂಡೆಯನ್ನು ಐರಾವತವೆಂದೂ ನಡೆದಾಡಿದ ಭಂಗಿ ನಟರಾಜನದೆಂದೂ ಒಪ್ಪಿಕೊಳ್ಳಲು ನನ್ನಿಂದ ಆಗೊಲ್ಲ. ನೀನು ಮೋಜಿಗಾಗಿ ನದಿಯನ್ನು ಈಜಿದ್ದನ್ನು ಸಮುದ್ರ ದಾಟಿದಷ್ಟು ಸೋಜಿಗದಿಂದ ನೋಡಲು ನನ್ನಿಂದ ಆಗೊಲ್ಲ. ನೀನು ಮೂಸಿದ್ದು...

ಮಳೆ ಬರಲಿ

ಮಳೆ ಬರಲಿ.... ಆದರೆ ಹಸಿರು ಹೊಲಗದ್ದೆಗಳನ್ನೂ ರೈತರ ಸುಖ ನಿದ್ದೆಗಳನ್ನೂ ಕಸಿದುಕೊಳ್ಳದಿರಲಿ. ಮಳೆ ಬರಲಿ.... ಆದರೆ ಹುಲ್ಲಿನ ಛಾವಣಿಗಳನ್ನೂ ಮಣ್ಣಿನ ಗೋಡೆಗಳನ್ನೂ ಕೆಡವಿ ಹಾಕದಿರಲಿ. ಮಳೆ ಬರಲಿ.... ಇರಲೊಂದು ಪುಟ್ಟ ಮನೆ ಹೊದೆಯಲು ಬೆಚ್ಚನೆಯ...

ಧಿಕ್ಕರಿಸುತ್ತೇನೆ

ನಿನ್ನ ಸಿಟ್ಟು ಸೆಡವುಗಳನ್ನು ದಿಕ್ಕರಿಸುತ್ತೇನೆ. ನಿನ್ನ ಪಂಜಿನಂತಹ ಕೈಗಳು ಸುಕೋಮಲ ಹೂಗಳನ್ನು ಹೊಸಕಿ ಹಾಕುವುದನ್ನೂ ನಿನ್ನ ಕೆಂಡದಂತಹ ಕಣ್ಣುಗಳು ಕೋಗಿಲೆಯ ಹಾಡುಗಳನ್ನು ನಿಷ್ಕರುಣೆಯಿಂದ ಸುಡುವುದನ್ನೂ ಧಿಕ್ಕರಿಸುತ್ತೇನೆ. ನೀನು ಮೈಯೆಲ್ಲಾ ಕಿಡಿಯಾಗಿರುವ ತನಕ ಈ ಚೈತನ್ಯಮಯವಾದ...

೮೮, ಫೆಭ್ರವರಿ ೩

ಕಾನ್ಪುರದ ಎಲ್ಲ ಬೀದಿಗಳಲ್ಲಿ ಎಲ್ಲ ಮೆನಗಳಲ್ಲಿ ಮನೆಯ ಮಾಳಿಗೆಯಲ್ಲಿ ಮೂರು ಹೆಣಗಳು ತೂಗಿದವು ನಿಶ್ಚಿಂತೆಯಲ್ಲಿ. ಗುಲಾಬಿಯಷ್ಟೇ ಮೃದು ಮನಸಿನ ಜೀವಿಗಳು ಸಾವಿನಲ್ಲೂ ನೋವಿನ ಮುಖವನ್ನೇ ಹೊತ್ತಿದ್ದವು. ಮದುವೆಯ ಮಾರುಕಟ್ಟೆಯಲ್ಲಿ ಬಿಕರಿಯಾಗದ ಜೀವಗಳು ಕುಲ, ಗೋತ್ರ,...

ಸತಿ ಹೋಗುವುದಿಲ್ಲ….

ನಿನ್ನ ಪ್ರೀತಿಯನ್ನಷ್ಟೇ ಉಟ್ಟು ಹೊರಟು ನಿಂತಿದ್ದೇನೆ- ಇಗೋ ಹೊರಟೆ- ಎಲ್ಲವ ದಾಟಿ ಹೋಗಿಯೇ ಬಿಡುತ್ತೇನೆ ನೀ ಬಿಟ್ಟು ಹೋದ ತುಂಡು ನೆಲವನ್ನು ಉತ್ತು ಬಿತ್ತಿ ಫಸಲು ತೆಗೆಯುತ್ತೇನೆ ಚಳಿ-ಗಾಳಿಯೊಡನೆ ಗುದ್ದಾಡಿ ಕಲ್ಲುಗಳ ಜತೆಗೂಡಿ ಹಾಡಿ...

ಓನಮಿ

(ಝೆನ್ ಕಥೆಯ ಆಧಾರ- ಜಾಪಾನಿ ಭಾಷೆಯಲ್ಲಿ ಮಹಾಸಾಗರದಲ್ಲಿ ಏಳುವ ಭಾರಿ ಅಲೆಗಳಿಗೆ ಓನಮಿ ಎನ್ನುತ್ತಾರೆ) ಒಂದೂರಿನಲ್ಲಿ ಓನಮಿ ಎಂಬ ಮಲ್ಲನಿದ್ದ. ಕಣಕ್ಕಿಳಿಯಲು ಆತ ಸದಾ ಸಿದ್ಧ. ಒಬ್ಬಿಬ್ಬರೆದುರಲ್ಲಿ ಎಲ್ಲರ ಒದ್ದು ಕೆಡವುತ್ತಿದ್ದ. ಒಟ್ಟಿನಲ್ಲಿ, ಗುಟ್ಟಿನಲಿ...

ಧ್ಯಾನ

ಎಷ್ಟೋ ವರ್ಷಗಳಿಂದ ಧ್ಯಾನದೊಳಗೆ ಲೀನವಾದಂತಿತ್ತು ಬೆಟ್ಟ. ನಾನು ಕುತೂಹಲದಿಂದ ಹತ್ತಿಹೋದೆ, ತುತ್ತ- ತುದಿಗೇರಿದಾಗ ಮೈ-ಮನ ಹಗುರಾದಂತೆ ಅನಿಸಿತು; ನೋವುಗಳು ತಂತಾನೆ ಕಳಚಿಕೊಂಡವು ದುಃಖ ಹೆಬ್ಬಂಡೆಯಾಗಿ ಉರುಳಿಹೋಯಿತು. ಉಲ್ಲಾಸದ ನಗೆ ನಕ್ಕು ಹೂವು-ಹುಲ್ಲು ಪೊದೆಗಳಿಗೆ ಕೂಗಿ...

ಗಾಯಗಳು

ನಿನ್ನೆಯ ದಿನ ಮೈಯೆಲ್ಲವನ್ನು ಗೀರಿಕೊಂಡಿದ್ದವು ಗಾಯಗಳು ನಿನ್ನೆಯ ದಿನ ಮನಸೆಲ್ಲವನ್ನೂ ಹೀರಿಕೊಂಡಿದ್ದವು ಗಾಯಗಳು ನಾನು ಅವುಗಳಿಗೆ ಪರಿಪರಿಯಾಗಿ ತಿಳಿಯ ಹೇಳಿದೆ ಪ್ರೀತಿಯ ಮಾತಿಂದ ಸಂತೈಸಲು ನೋಡಿದೆ ಅವು ನನ್ನನ್ನು ಧಿಕ್ಕರಿಸಿದವು ಅಹಂಕಾರದ ಗಾಯಗಳವು ಇನ್ನಷ್ಟು...