ನೋಡಿಕೋ ಮುಖವ ಕನ್ನಡಿಯಲ್ಲಿ

ನೋಡಿಕೋ ಮುಖವ ಕನ್ನಡಿಯಲ್ಲಿ, ಇಂಥದನೆ ಇನ್ನೊಂದ ಕೊಡು ಎಂದು ಕೇಳಿಕೋ. ನೀ ನಿನ್ನ ಮತ್ತೆ ಸೃಷ್ಟಿಸಿಕೊಳದೆ ಬಿಟ್ಟಲ್ಲಿ ಲೋಕವನೆ ವಂಚಿಸುವೆ, ಜೊತೆಗೆ ಹೆಣ್ಣೊಂದಕ್ಕೆ ತಾಯ್ತನವ. ನಿನ್ನ ಪೌರುಷದ ಬಿತ್ತನೆಗೆ ಒಪ್ಪದ ಕನ್ನೆ ಇರುವಳೇ ?...

ನಲವತ್ತು ಚಳಿಗಾಲಗಳ ಸತತ ದಾಳಿಗೆ ಹೂಡಿ

ನಲವತ್ತು ಚಳಿಗಾಲಗಳ ಸತತ ದಾಳಿಗೆ ಹೂಡಿ ನಿನ್ನ ಚೆಲುಮೈಯ ಬಯಲಲ್ಲಿ ಕುಳಿಗಳು ತೆರೆದು, ಜನ ಮೆಚ್ಚಿ ದಿಟ್ಟಿಸುವ ಹರೆಯದೀ ಸಿರಿತೊಡಿಗೆ ಏನೇನೂ ಬೆಲೆಯಿರದ ಹರಕು ಜೂಲಾಗುವುದು. ನಿನ್ನ ಹಿಂದಿನ ಚೆಲುವದೆಲ್ಲಿ, ಜ್ವಲಿಸುವ ಹರೆಯ ತಂದ...

ಚೆಲುವಿನ ಗುಲಾಬಿ ಎಂದೂ ತೀರದಿರಲೆಂದೆ

ಚೆಲುವಿನ ಗುಲಾಬಿ ಎಂದೂ ತೀರದಿರಲೆಂದೆ ಸುಂದರ ತಳಿಗಳೆಲ್ಲ ವೃದ್ದಿಸಲಿ ಎನ್ನುವುದು, ಹಣ್ಣಾದದ್ದೆಲ್ಲವೂ ಮಣ್ಣಿಗುರುಳುವ ಮುಂಚೆ ನೆನಪನುಳಿಸಲು ತನ್ನ ಕುಡಿಯನ್ನು ಪಡೆಯುವುದು. ನೀನೊ ನಿನ್ನದೆ ಕಣ್ಣಕಾಂತಿಯಲಿ ಬಂಧಿತ, ನಿನ್ನ ಚೆಲುವಿನ ಉರಿಗೆ ಆತ್ಮತೈಲವ ಎರೆವೆ, ಸಮೃದ್ಧಿ...

ಕಡಲು ಬೆಟ್ಟಕ್ಕೆ ಹೇಳಿತು

ಕಡಲು ಬೆಟ್ಟಕ್ಕೆ ಹೇಳಿತು: "ನನ್ನ ತಳ ಮಂದರ, ನಿನ್ನ ಮುಡಿ ತಾರ, ನಡುವಿನ ಸ್ವರಸಹಿತ ನಾನೂ ನೀನೂ ಕೂಡಿ ಭೂಮಿ ಏನು ಗಾನಮನೋಹರ!" ಬೆಟ್ಟ ಕಡಲಿಗೆ ಹೇಳಿತು : "ಅದಕ್ಕೆಂದೇ ಆಗಸ ಪ್ರತಿ ರಾತ್ರಿ...

ನೆರೆಯವರು ನಕ್ಕರು

ನೆರೆಯವರು ನಕ್ಕರು: "ಇವನಿಗೆ ಹುಚ್ಚು ಕಚ್ಚಿದೆ ಮುಖದಲ್ಲಿ ದಿಗಿಲು ಬಿಚ್ಚಿದೆ ಹುಲಿಕಣ್ಣೆಲ್ಲೋ ದಿಟ್ಟಿಸಿ ನೋಡಿದೆ ಮೊಸರನ್ನದ ಬಲಿಕೊಟ್ಟರೆ ಹೊಸದನಿ ಮಾಯುತ್ತದೆ. ಇವನು ಹೊಸಿಲು ದಾಟದಂತೆ ಕಾಯುತ್ತದೆ." ಅವರಿಗೇನು ಗೊತ್ತು ಪ್ರತಿ ರಾತ್ರಿ ಅಧೋಲೋಕಗಳ ಕದ...

ಅಚ್ಚರಿ ಕಚ್ಚಿದ ಬದುಕು

ಅಚ್ಚರಿ ಕಚ್ಚಿದ ಬದುಕಿನ ಆಸೆ ಮುಗಿಯದು. ನುಡಿಯಲು ಭಾಷೆ ಸಾಲದು. ಬೆದೆ ಕುದಿವ ಗೂಳಿಯ ಕುರುಡು ಆವೇಶಕ್ಕೂ ಬರಡು ಹಸು ಬಸಿರು ತಾಳದು ಪಹರೆ ದನಿಗಳೆಲ್ಲ ಮುಜುರೆಮಾಡಿ ಸರಿದವು. ಈಗ ನನ್ನದೆ ಕೊರಳು, ತಪ್ಪಿ...

ಈ ಕೊರಗು

ಈ ಕೊರಗು ಹಣ್ಣೆಲೆ ಮಣ್ಣಿಗೆ ಉರುಳಲು ಹೆದರಿದ ದನಿಯಲ್ಲ, ಗೇಯದ ಪ್ರಾಯದ ಮಾಯುವ ಹುಸಿ ಕಂಗಾಲಲ್ಲ, ಗಾಯಕರೆದ ಮದ್ದಲ್ಲ ಡೊಳ್ಳಿನ ಸದ್ದೇ ಅಲ್ಲ. ಹಸಿದ ಕರಣ ಭರ್ತಿ ಉಂಡು ಮರಣದೊಳಿದ್ದಾಗ ನನ್ನ ಹರಣ ಕಂಡ...

ನೀನೊಲಿದ ಗಳಿಗೆ

ಹೊಕ್ಕುಳಲ್ಲಿ ಹೂಗುಟ್ಟಿ ಬಾಯಿಗೆ ಬರದವನೆ, ಮಕ್ಕಳ ಕಣ್ಣುಗಳಲ್ಲಿ ಬಾಗಿಲು ತೆರೆದವನೆ. ಬುದ್ಧಿ ಸೋತು ಬಿಕ್ಕುವಾಗ, ಹಮ್ಮು ಹಠಾತ್ತನೆ ಕರಗಿ ಬದುಕು ಕಾದು ಉಕ್ಕುವಾಗ ಜಲನಭಗಳ ತೆಕ್ಕೆಯಲ್ಲಿ ದೂರ ಹೊಳೆವ ಚಿಕ್ಕೆಯಲ್ಲಿ ನಕ್ಕು ಸುಳಿಯುವೆ. ಆಗ...

ನಿನ್ನ ಧಿಕ್ಕರಿಸಿದ ತರ್ಕ

ನಿನ್ನ ಧಿಕ್ಕರಿಸಿದ ತರ್ಕಕ್ಕೆ ಮೊನ್ನೆ ಕಾಲು ಮುರಿಯಿತು ಬಗ್ಗಿ ಕೈ ಮುಗಿದು ಹೇಳಿತು "ನಾ ತುಳಿಯದ ನೆಲವಿದೆ, ಕುಡಿಯದ ಗಾಳಿ ನೀರು, ಅರಿಯದ ನೆಲೆ ಇವೆ. ಅವಕ್ಕೆ ಬಗೆ ಬಗೆ ಬೆಲೆ, ಬೇರು. ಅಲ್ಲೆಲ್ಲ...

ಬೆಟ್ಟದ ನೆತ್ತಿಗೆ

ಬೆಟ್ಟದ ನೆತ್ತಿಗೆ ಕಿರೀಟವಿಟ್ಟ ಬಿಸಿಲು ಕಪ್ಪಗೆ ದೂರದಲ್ಲಿ ನೆಲಕ್ಕೆ ಜಾರಿದ ಮುಗಿಲು ಮತ್ತೆ ಮತ್ತೆ ಮೇಲೆ ಚಿಗಿವ ಆಲದ ಬಿಳಲು ಹೊಳೆಸುತ್ತವೆ ಹಠಾತ್ತನೆ ನಿನ್ನ ಮುಖ ಕೈಕಾಲು ಹೊಳೆದ ಗಳಿಗೆ ಮೈಯುದ್ದ ಬೆಳೆದು ನೀ...