ಅವನು ಹಾಗೆಯೆ ಮಾತಿನಿಂದ ಮೈಥುನದವರೆಗೆ ಎಲ್ಲವೂ ಹಿತಮಿತ ತೂಕದ ವ್ಯವಹಾರ ಅರವತ್ತರ ಇಳಿವಯಸ್ಸಿನಲ್ಲೂ ಕಪ್ಪನೆಯ ಒತ್ತಾದ ಕೂದಲು ಉಬ್ಬರಿಸದ ಹೊಟ್ಟೆ ಸಂಯಮ ಫಲ ಇವನದು ಆತಿಯೆ ಆಡಂಬರ ಮೋಸ ದಗಾ ವಂಚನೆಯಲಿ ಹೆಚ್ಚು ಗೊಂದಲವಿಲ್ಲ...
ಸಮಯವೆಲ್ಲ ನನ್ದೇ ಅನ್ನಿಸಿದಾಗ, ಊಟಕ್ಕೋ ಟೀಗೋ ಯಾರೂ ಕರೆಯಲು ಬಾರದಿದ್ದಾಗ, ಮೋಡ ಸಡಿಲವಾಗುತ್ತ, ಹರಡುತ್ತ, ಬಣ್ಣ ಕಳೆದುಕೊಳ್ಳುವುದನ್ನು ನೋಡಬಹುದು. ಮನೆಯ ಮುಂದಿನ ಗೋಡೆಯ ಮೇಲೆ ಬೆಕ್ಕು ಸಾವಧಾನವಾಗಿ ಗಂಭೀರವಾಗಿ ನಡೆಯುತ್ತಿರುವುದನ್ನು ನೋಡಬಹುದು. ಈಗ ಪ್ರತಿ...
ಹೌದು, ನನಗವನು ಗೊತ್ತಿದ್ದ. ವರ್ಷಗಟ್ಟಲೆ ಅವನೊಡನೆ ಇದ್ದೆ. ಚಿನ್ನದಂಥ ಮನುಷ್ಯ, ಕಲ್ಲಿನಷ್ಟು ಗಟ್ಟಿ. ಸುಸ್ತಾಗಿದ್ದ. ಪೆರುಗ್ವೇಯಲ್ಲಿ ಅಪ್ಪ ಅಮ್ಮನನ್ನು ಬಿಟ್ಟು ಮಕ್ಕಳನ್ನು ಬಿಟ್ಟು, ಮಾವ ಚಿಕ್ಚಪ್ಪಂದಿರನ್ನು ಬಿಟ್ಟು ಹೊಸದಾಗಿ ಭಾವನಂಟರಾದವರನ್ನು ಬಿಟ್ಟು, ಮನೆ ಬಿಟ್ಟು,...
ಪ್ರತಿಯೊಂದು ಯುದ್ಧಮುಗಿದ ಮೇಲೂ ಯಾರಾದರೂ ಮತ್ತೆ ಎಲ್ಲವನ್ನೂ ಅಣಿಗೊಳಿಸಬೇಕು. ಹಾಳಾದದ್ದೆಲ್ಲ ಮತ್ತೆ ತನಷ್ಟಕ್ಕೇ ಸರಿಯಾಗುವುದಿಲ್ಲ ತಾನೇ? ಯಾರಾದರೂ ಬಂದು ರಸ್ತೆ ಮೇಲೆ ಬಿದ್ದ ಕಲ್ಲು ಮಣ್ಣು ಪಕ್ಕಕ್ಕೆ ತಳ್ಳಿ ಹೆಣ ಹೂತ್ತೆಗಾಡಿಗಳು ಸಾಗುವುದಕ್ಕೆ ದಾರಿ...
ನರಕದ ತಳಾತಳದಲ್ಲಿರುವ ಸೀಮೆ. ಎಲ್ಲರೂ ಅಂದುಕೊಂಡಂತೆ ಅಲ್ಲಿ ನಿರಂಕುಶಾಧಿಕಾರಿಗಳಿಲ್ಲ. ಮಾತೃಹಂತಕರು, ಮಾತೃಗಾಮಿಗಳು, ಹೆಣಗಳನ್ನು ದರದರ ಎಳೆದಾಡಿದವರು, ದೇಶದ್ರೋಹಿಗಳು ಯಾರೂ ಇಲ್ಲ. ನರಕದ ತಳಾತಳ ಕಾಲವಿದರ ಆಶ್ರಯತಾಣ, ಎಲ್ಲೆಲ್ಲೂ ಕನ್ನಡಿಗಳು, ಸಂಗೀತ ವಾದ್ಯಗಳು, ವರ್ಣಚಿತ್ರಗಳು. ಸುಮ್ಮನೆ...