ತನ್ನ ತಾನು ಗೆದ್ದವನೇ

ತನ್ನ ತಾನು ಗೆದ್ದವನೇ ನಮ್ಮ ಚೆಲುವ ಗೆದ್ದುದೆಲ್ಲವನೊದ್ದವನೇ ನಮ್ಮ ಚೆಲುವ ಬೆಟ್ಟದೆತ್ತರ ಬೆಳೆದವನೇ ನಮ್ಮ ಚೆಲುವ ದಿಗಂಬರವನುಟ್ಟವನೇ ನಮ್ಮ ಚೆಲುವ ಸೂರ್‍ಯನಿಗೆ ಪ್ರತಿಸೂರ್‍ಯನೇ ನಮ್ಮ ಚೆಲುವ ಚಂದ್ರನಿಗೆ ಪ್ರತಿಚಂದ್ರನೇ ನಮ್ಮ ಚೆಲುವ ಕಲ್ಲರಳಿ ಹೂವಾದನೆ...

ಗುಡಿಯಾ

ಗುಡಿಯಾ ಆಟದ ಗೊಂಬೆಯಲ್ಲ ರಕ್ತ ಮಾಂಸ ತುಂಬಿದ ಜೀವಂತ ಗೊಂಬೆ ದುಃಖಕ್ಕೊಂದೇ ಹಕ್ಕು ಪಡೆದವಳು ಗುಡಿಯಾ ನೋವಿನ ಕಡಲು ಒಡಲಲಿಟ್ಟುಕೊಂಡು ನಾಪತ್ತೆಯಾದ ಪತಿ ಮರಳಿ ಬರುವ ಹಾದಿ ಕಾಯ್ದಳು ದೀರ್‍ಘ ಕಾಲದ ತನಕ ಕನಸು...

ಸುಮ್ಮನೇಕೆನ್ನನೆಲೆ ವಿಧಿಯೆ ಕಾಡಿಸುವೆ?

ಸುಮ್ಮನೇಕೆನ್ನನೆಲೆ ವಿಧಿಯೆ ಕಾಡಿಸುವೆ?- ಬೇಡಿದುದ ಕೊಡೆ, ಬೇಡದುದನಾಯ್ದು ಕೊಡುವೆ! ಆರದುದನಾಪೆನೆಂದೇಕೆ ತಡಬಡುವೆ? ಕೇಳುವೊಡನೀವೆನೆಂದೇಕ ಬೇಡಿಸುವೆ? ೪ ಆದೊಡಂ ಕೇಳೆನಗೆ ನಿನ್ನಿಂದು ಬೇಡ- ಅವಳನೆನ್ನಿಂದೊಯಿದ ಇಂದೆನಗೆ ಬೇಕೆ? ಇನ್ನವಳ ಕಾಣಿಸದ ನಾಳೆಯಕಟೇಕೆ? ಅವಳಿದ್ದ ನಿನ್ನೆ ಸಾಕೆನಗದಂ...

ನಾದ ವೇದಗಳ ಶಿವೆ

ನಾದ ವೇದಗಳ ಶಿವೆ ಭರತ ಮಾತೆಯ ಓಂಕಾರಗೀತೆಯ ಶಿರೋಮಣಿಗಳ ಮಾತೆಯೆ ನಿನಗೆ ವಂದನೆ ಶಿವೆ || ಆನಂದದನುರಾಗದ ಪದ್ಮಮುಕುಟ ಶೋಭೆಯೆ ಸುರನರಸೇವಿತೆ ಸುಂದರಿ ಮಾಧವಿ ಲಾವಣ್ಯಕಾಲವಲ್ಲಭೆ ನಿನಗೆ ವಂದನೆ ಶಿವೆ || ವನಸ್ಪತಿಯ ವೈಭವದ...

ಸ್ಕೂಲು ಮಕ್ಕಳ ನಡುವೆ

ಮೂಲ: ವಿಲಿಯಂ ಬಟ್ಲರ್ ಏಟ್ಸ್ ೧ ಶಾಲಾಕೊಠಡಿಯೊಳಗೆ ನಡೆಯುತ್ತಲಿದ್ದೇನೆ ಪ್ರಶ್ನಿಸುತ್ತ; ಉತ್ತರಿಸುತ್ತಿದ್ದಾಳೆ ಬಿಳಿಯುಡಿಗೆಯಲ್ಲಿರುವ ಕ್ರೈಸ್ತ ಸನ್ಯಾಸಿನಿ ಜೊತೆ ಬರುತ್ತ; ಕಲಿಯುತ್ತಿವೆ ಮಕ್ಕಳು ಸೊನ್ನೆ ಸುತ್ತುವುದನ್ನು ಹಾಡು ಹೇಳುವುದನ್ನು ಓದು ಹೊತ್ತಗೆ ಮತ್ತು ಚರಿತ್ರೆ ಪುಸ್ತಕಗಳ...

ಕಡೇ ಆಡು

ಬೇವಾರ್‍ಸಿ! ನಿನ್ ಎಸರು ನೆಪ್ಗೇನೆ ಬರದು- ಯೆಂಡ್ಕುಡಕ್ರು ಏನಂದ್ರು ಕೋಪ ಮಾಡಬಾರ್‍ದು! ಇಸ್ಟ್ಕೂನೆ ಕೂಗಿದ್ದಕ್ಟ್ ‘ಓ’ ಅಂತ್ ನೀನ್ ಅಂದ್ರೆ ಎಂಗಾನ ಕೂಗಿದ್ರೆ ಏನೈತೆ ನಿಂಗ್ ತೊಂದ್ರೆ? ೧ ನೀನೂನೆ ಬಾಳ್ ದಿವಸ ತಸ್ದಿ...

ಹಾಳಿ ಹಡಗ

ತೇಲಿಬಿಡುವೆನು ಹಾಳಿ ಹಡಗಗಳ, ಹುಡುಗರಾ- ಟದೊಳೆಂತು ಅಂತು, ಕಾರ್‍ಮೋಡ ಕತ್ತಲೆ ಕವಿದ ಹೊತ್ತು ಹೊರಪಾಗಿ ಬೆಳಗುವವರೆಗೆ, ಮನೆಯ ಕಸ- ವನೆ ಸರಕು ಮಾಡಿ; ಕೆರೆಕಾಲುವೆಯನೊಂದು ಗೊಳಿ- ಸುವ ಜಲಾದ್ವೈತದೀ ಕೆಂಪು ಹೊಳೆಯಲಿ, ಹಳ್ಳ- ಹಿಡಿದು...

ಶಾಂತಿ ಮಳೆ

ಬರೀ ಮಾತುಗಳು ಇವು ಕೇವಲ ಅರ್ಥಕಳಕೊಂಡ ಶಬ್ದಗಳು ಬೀಜ ನೆಲದಲ್ಲಿ ಹೂತು ಪಸೆಯೊಡೆದು ಮೊಳಕೆ ಕಟ್ಟಿ ಬೇರು ಬಿಡುವತನಕ ಇವು ಅರ್ಥವಿಲ್ಲದ ಕೇವಲ ಮಾತುಗಳು. ಬರೀ ಮಾತುಗಳು ಇವು ಉಗುಳಿನ ವಿಷಕ್ಕೆ ನಂಜೇರಿದ ಮಹಾತ್ಮನ...

ಮಹಾಕವಿ ಕುಮಾರವ್ಯಾಸನಿಗೆ

ಶ್ರೀಮದಮಲ ವಚಃಪರಿಧಿಯಾ ದೀ ಮಹಾಕೃತಿಯಿಂದೊಲವು ಮಿಗೆ ವ್ಯೋಮದಲಿ ವಿಧು ವೇಡಿಸಿದ ಪರಿವೇಷದಿಂದೆರೆವ| ಕೌಮುದಿಯೊಲೀ ಕನ್ನಡದೊಳಾ ಸೀಮಮೆನೆ ನೆಲಸಿಹುದಿದಂ ನೆಗ ಳ್ದಾ ಮಹಾಕವಿ ನಿನಗೆ ಕನಿಗಳ ಕವಿಯೆ ವಂದಿಸುವೆ ||೧|| ಮೊದಲ ಮಗನಾ ಶುಕನು ಭಾಗವ...