ಗೊಲ್ಲರ ಹಟ್ಟಿಯಾಚೆಗಿನ ಕಾಡಿನಲ್ಲಿ ಬೀಡು ಬಿಟ್ಟಿವೆ ಗೊಲ್ಲತಿಯರ ಕುಟೀರ ಶಿಲುಬೆಗೇರುವ ಯಾತನಾ ಶಿಬಿರ ತಿಂಗಳಿಗೊಂದಾವರ್ತಿ ಊರ ಹೊರಗೆ ನಲುಗುವ ಗೊಲ್ಲತಿಯರ ಹೆಣ್ಣು ಸಂವೇದನೆಗಳು ಊರೊಳಗಿದ್ದರೆ ಬಾಣಂತಿ, ಮುಟ್ಟಾದ ಹೆಣ್ಣು ಮನೆಯಲ್ಲಿ ಹಾವು ಚೇಳು ಬರುವವಂತೆ. ಗೊಲ್ಲರ ಹಟ್ಟಿಯಲಿ ಸೂತಕದ ಮನೆ ನಾಗರೀಕ ಲೋಕದ ನಿರ...

  ಕಾಶಿ: “ನಾನು ಈಜನ್ಮದಲ್ಲಿ ಇಲಿಯಾಗಿ ಹುಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸುತ್ತಿದೆ ಈ ನನ್ನ ಸಂಸಾರ ನೆನೆಸಿಕೊಂಡರೆ” ಮಲ್ಲು: “ಅದ್ಯಾಕಯ್ಯ, ಹಾಗೆ ಹೇಳ್ತೀಯಾ? ಇಲಿಯಾಗಿ ಏಕೆ ಹುಟ್ಟಬೇಕಾಗಿತ್ತು?” ಕ...

ಪಾರಿವಾಳದ ಆಟ ಛಂದಾ ಅದು ಹಾರುತ ಬಂದರೆ ಮನಸಿಗಾನಂದ ||ಪ|| ಹಿಂದಿನ ರೆಕ್ಕೆಯ ಕಿತ್ತು ಮುಂದೆ ಬರುವಂಥ ಪುಚ್ಚದ ಗರಿಗಳ್ಯಾವತ್ತು ಸಂದಿ ಸಂದಿಗೆ ಶುಭವಿತ್ತು ಆದು ಕಂದಿ ಕುಂದದಾಂಗ ಸಲುಹಲು ಗೊತ್ತು ||೧|| ಮ್ಯಾಲಕ್ಕ ಹೊಡಿ ಮೂರು ಲಾಗಾ ಸಾಲು ತೇಲುವ ...

ಪಾತ್ರವರ್ಗ *   ಕರಿಮುಖ (ಆನೆ) *   ನರಿ *   ಬಾಸೂರಕ (ಸಿಂಹ) *   ಕರಡಿ *   ಸೀಳುನಾಯಿ *   ಎರಡು ಜಿಂಕೆಗಳು *   ಎರಡು ಮೊಲಗಳು *   ಗಿಳಿ *   ಎಂಟು ಇತರ ಪ್ರಾಣಿಗಳು , ಪಕ್ಷಿಗಳು. ದೃಶ್ಯ -೧ (ರಂಗದ ಎರಡೂ ಬದಿಯಿಂದ, ಹಾಡಿನ ಲಯಕ್ಕನುಗುಣವಾ...

ಸ್ವಾತಂತ್ರ್ಯದ ಹಿಂದಿನ ದಿನಗಳು. ಲಾರ್ಡ್ ಕರ್ಜನ್ ರವರು ಉತ್ತಮ ಭಾಷಣಕಾರರೆಂದು ಪ್ರಸಿದ್ಧಿ. ಒಮ್ಮೆ ಅವರು ಭಾಷಣ ಮಾಡುತ್ತಿದ್ದಾಗ ಸಭಿಕನನೋರ್ವ ಒಂದು ಚೀಟಿಯನ್ನು ಏನೋ ಬರೆದು ಇವರತ್ತ ಕಳುಹಿಸಿದ. ಅದರಲ್ಲಿ `ಕತ್ತೆ’ ಎಂದು ದೊಡ್ಡದಾಗಿ ಬರೆ...

ಕೋಳಿಯೇ ನೀನು ಕೋಳಿಯೇ ಹೀಂಗ ಹಾಳುಮಾಡುದು ಕಂಡು ತಾಳಲಾರದು ಮನ  |ಪ| ಅಚ್ಚ ಹಸರು ಕೆಂಪುಪುಚ್ಚದ ಕೋಳಿ ಅಚ್ಯುತಗೆಚ್ಚರ ಕೊಟ್ಟಂಥ ಕೋಳಿ ಹೆಚ್ಚಿನ ಬ್ರಹ್ಮನು ಮೆಚ್ಚಿದ ಕೋಳಿ ಹುಚ್ಚೆದ್ದು ರುದ್ರನ ಕಚ್ಚಿದ ಕೋಳಿ              |೧| ಬಲ್ಲಿದ ಯಜ್ಞಕ್...

  ಪ್ರಧಾನಿ ಚರ್ಚಿಲ್‍ರವರ ಭಾವಚಿತ್ರವನ್ನು ಒಬ್ಬ ತೆಗೆದ. ಆಗ ಆವರ ವಯಷ್ಟು ೯೦ ವರ್ಷ. “ಸರ್ ನಿಮ್ಮ ನೂರು ವರ್ಷದ ಪೋಟೋ ತೆಗೆಯಬೇಕೆಂಬ ಆಸೆಯಾಗಿದೆ” ಎಂದ. ಅವನನ್ನು ಚರ್ಚಿಲ್‍ರವರು ಮೇಲೂ ಕೆಳಗೂ ನೋಡಿ, “ಹೂ, ನೀನೇನೋ ನ...

ಬಿಸಿಲುರಿಯ ಸೂರ್ಯನಿಗೆ ಬೆಳ್ಳನೆಯ ಬೆಳಕಿಗೆ ನೀನು ‘ಗುಡ್-ನೈಟ್’ ಎಂದಿದ್ದು ನನಗೆ ಕೇಳಿರಲಿಲ್ಲ ಪ್ರತಿ ಹಗಲಿಗೊಂದು ಇರುಳು ನಂತರ ನರಳಿ ಮರಳುವ ಹಗಲು ಹೀಗೊಂದು ಕತೆ ಉಂಟೆಂದು ನನಗೆ ತಿಳಿದಿರಲಿಲ್ಲ ಆಕಾಶದಿಂದ ಇಳೆಗೆ ಆಗಿ೦ದ ಈಗ ಬೀಜದಿಂದ ಬೆಳೆಗೆ ಬ...

ಟಿಪಿ ಕೈಲಾಸಂ ರವರಿಗೆ ಟೌನ್‍ ಹಾಲ್‍ ನಲ್ಲಿ ಸನ್ಮಾನ ಏರ್ಪಾಡು ಆಗಿತ್ತು.  ಒಂದು ಸಾವಿರ ಬೆಳ್ಳಿನಾಣ್ಯಗಳನ್ನು ಗೌರವ ಧನವಾಗಿ ನೀಡಿದರು. ಸನ್ಮಾನಕ್ಕೆ ಉತ್ತರ ಕೊಡಲು ಎದ್ದುನಿಂತ ಕೈಲಾಸಂ ಹಣದ ಚೀಲ ಹಿಡಿದು ಈ ಕೈಯಿಂದ ಆ ಕೈಗೆ ಬದಲಾಯಿಸುತ್ತ ಅದರ ತ...

ಕೂ ಕೂ ಎನುತಿದೆ ಬೆಳವಾ ಬಂದು ಹೊಕ್ಕಿತು ಭವವೆಂಬ ದುಃಖದ ಹಳವಾ    ||ಪ|| ಪುರುಷನ ಬುಟ್ಟಿಯೊಳಿಟ್ಟು ಬಹು- ಹರುಷದಿ ಹಳ್ಳದೋಳ್ ತೇಲಾಕ ಬಿಟ್ಟು            ||೧|| ತನುವೆಂಬ ಗೂಡಿನೋಳಿಟ್ಟು ತನ್ನ ದೇಹವೆಂಬೋ ಮರದೊಳೂ ಹಾರಾಕ ಬಿಟ್ಟು        ||೨|...

ಪ್ರತಿ ನಿರ್ದಿಷ್ಟ ದೂರಕ್ಕೆ ಬೃಹದ್ಗಾತ್ರದ ಕಂಬಗಳು. ಒಂದು ವಿಶೇಷವೆಂದರೆ ಸುಮಾರು ಮೂವತ್ತು ಫೂಟು ಅಂತರದವರೆಗೆ ಕಂಬಗಳೇ ಇಲ್ಲ. ಆಶ್ಚರ್ಯ. ಈ ನಾಲ್ಕು ಕಂಬಗಳ ಕಮಾನು ವಿಜ್ಞಾನದ ವಿಸ್ಮಯ. ಈ ಕಮಾನಿನ ಎತ್ತರ ಸೇತುವೆಯ ಮೇಲಿಂದ ಏನಿಲ್ಲ ಎಂದರೂ ೨೫’-೩...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....