
ಮೋಡಿಕಾರ ಮುತ್ತಯ್ಯನ ಚೀಲದಿ ಅಯ್ದೆಂದರೆ ಅಯ್ದೇ ಒಡವೆಗಳು ಹುಲ್ಲು ಕಡ್ಡಿಗಳ ಕಟ್ಟೊಂದಿಹುದು ಇನಿತರಿಂದಲೆ ಬೆರಗಿನಾಟವನು ಹೂಡಿಹನು ವಿಧ ವಿಧದ ರೀತಿಯಲಿ ಅಯ್ದೊಡವೆಗಳ ಬೆರಸಿ ಚಿನ್ನವನು ಮಾಡಿಹನು ಮಣ್ಣುಗಳ ಮಾಡಿಹನು ರತ್ನ ವಜ್ರಾದಿಗಳ ತಾಮ್ರ ತವರಿದ...
ಅಂಬಾರ್ದಲಾವಿಗೆ ಶಾಂಭವಿ ||ಪ|| ಶುಂಭ-ನಿಶುಂಭರ ಸಂಹಾರ ಮಾಡಿದ ತುಂಬಿದ ಶಾರ ಮದೀನದೊಳಗ ||ಅ.ಪ.|| ಕಾತೂನ ರೂಢಿಯೊಳು ಬೆಳೆದಳು ಪ್ರೀತಿಲಿಂದ ಭೂತಲಕೆ ಇಳಿದು ಜಗನ್ಮಾತೆ ಮೋರುಮ ಹಬ್ಬದೊಳಗೆ ||೧|| ಆಸುರ...
ಒಂದೂರಿನಲ್ಲಿ ಒಬ್ಬ ಗೃಹಿಣಿಯಿದ್ದಳು. ಆಕೆಗೆ ಒಂದು ಕಥೆ ಗೊತ್ತಿತ್ತು. ಒಂದು ಹಾಡು ಬರುತ್ತಿತ್ತು. ಆದರೆ ಅವಳು ತನಗೆ ಗೊತ್ತಿದ್ದ ಕಥೆಯನ್ನು ಯಾರಮುಂದೆಯೂ ಹೇಳಿದವಳಲ್ಲ. ತಾನು ಕಲಿತ ಹಾಡನ್ನು ಯಾರಮುಂದೆಯೂ ಹಾಡಿದವಳಲ್ಲ. ಆಕೆಯ ಮನಸ್ಸಿನಲ್ಲಿ ಸೆ...
ಹನಿಗವನಕ್ಕೆ ಹತ್ತಾವತಾರ ಭಾವ ಭೂಮಿಕೆಗೆ ಇಬ್ಬನಿಯ ಹಾರ ಮನೋ ನಿಹಾರಿಕೆಗೆ ಹನಿಗವನ ತೇರ ಮುಟ್ಟಿದೆ ಭಾವತೀರ ಕವಿ ಲೇಖನಿಯ ಸಾರ ***** ...
ಆತನೊಬ್ಬ ಜಟ್ಟಿ. ಹಿಂದಿನ ರಾತ್ರಿ ಬೇಯಿಸಿದ ೯೯ ಕೋಳಿಮೊಟ್ಟೆ ತಿಂದು ಬಂದಿದ್ದ. ತನ್ನ ಮಿತ್ರನ ಕೈಲಿ ಜಂಬ ಕೊಚ್ಚಿಕೊಂಡ. ಗೆಳೆಯ ಕೇಳಿದು “ಇನ್ನೋದು ತಿಂದು ಸೆಂಚುರಿ ಬಾರಿಸಬಹುದಿತ್ತು. ಅಲ್ಲವಾ? “ಜಟ್ಟಿ” – ನೀನು ಹೇ...
ಹೊಸ ವರ್ಷ ಬಂದಂತೆ ಯಾರು ಬಂದಾರು ಗಿಡಮರಕೆ ಹೊಸವಸ್ತ್ರ ಯಾರು ತಂದಾರು ಹಾಡೆಂದು ಕೋಗಿಲೆಯ ಕೂಗಿ ಕರೆದಾರು ಮಾವಿನಾ ಚಿಗುರನ್ನು ತಿನಲು ಕೊಟ್ಟಾರು. ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ ಬಂದನೊ ವಸಂತ ಬಂದಿಗಳೆ ಎಲ್ಲ ಹ...
ಹನಮಂತ ಹಾರಿದಾ ಲಂಕಾ ಸುಟ್ಟುಬಿಟ್ಟಾನೋ ಬಿಡು ನಿನ ಬಿಂಕಾ ||ಪ|| ರಾಮ ರಘುಪತಿ ಭಕ್ತಾ ಒಂದು ನಿಮಿಷದೂಳಗ ತಂದುಕೊಟ್ಟನೋ ಸೀತಾ ಹೌದೌದು ರಾಮರವದೂತಾ ||೧|| ರಾಮ-ಲಕ್ಷ್ಮರ ಮಾತು ಮಾರುತಿಗೆ ಹೇಳಿದ್ದು ಗೊತ್ತಿಲ್ಲದಾಯ್ತು ಉಂಗುರ ಕೊಟ್ಟಿದ್ದು ಗೊತ್ತು...
ಮರದ ಕೊಂಬೆಗೆ ಒಂದು ತೊಟ್ಟಿಲವ ಕಟ್ಟಿಹುದು ತೊಟ್ಟಿಲಲಿ ಆಡುತಿದೆ ಕೈಕಾಲುಗಳ ಬಿಚ್ಚಿ ಈಗ ಕಣ್ದೆರೆದಿರುವ ಹೊಚ್ಚ ಹೊಸ ಎಳೆಯ ಕೂಸು || ಮರದ ಮೇಲ್ಬದಿಯಲ್ಲಿ ಮರಜೇನು ಹುಟ್ಟಿಹುದು ದೇವರಾಯನ ಕರುಣೆ ಯಿಂದ ಹುಟ್ಟಿಗೆ ಸಣ್ಣ ಹುಗಿಲು ಕೊರೆದಿಹುದಲ್ಲಿ ಹನ...
ಬೋಲ್ತೆ ಅಲಾವಾ ಖೇಲೈ ಚಲೋ ಜಾ ಐಸುರ ಅಲಾವಾ ಖೇಲೈ ಚಲೋ ಜಾ ||ಪ|| ಲೋ ಕಾತೂನಾ ಚ ಬಾಲಕ ಮೊಹರಮ್ ಅಲಾವಾ ಖೇಲೈ ಚಲೋ ಜಾ ||ಅ.ಪ.|| ಎಪ್ಪಡತೆ ಮಪ್ಪಡ ವುಲ್ ಉಂಟಾಲೆಮೆ ಶಪ್ಪಿಸೆಸೆ ಸೋಮಯಾಶೆ ಮದೀನಪುರದಿ ಬೊಲ್ತ...
ಮನೋಜ್ ಇಂಡಿಯಾದಿಂದ ಬಂದಿದ್ದಾನೆ ಅಂತಾ ಗೊತ್ತಾದ ಕೂಡಲೆ ಅವನನ್ನು ನೋಡಲು ಆತುರದಿಂದ ಹೊರಟ ಸಾವಂತ, ಮನೋಜ್ ಇಂಡಿಯಾಕ್ಕೆ ಹೋಗಿ ತಿಂಗಳಾಗಿತ್ತು. ಗೆಳಯನಿಲ್ಲದೆ ಆ ಒಂದು ತಿಂಗಳು ಹೇಗೆ ಕಳೆದನೋ ತನ್ನೊಬ್ಬನನ್ನೇ ಬಿಟ್ಟು ತನ್ನವರನ್ನು ನೋಡಲು ಹೋಗಿದ್...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....














