Home / Deshpande MG

Browsing Tag: Deshpande MG

ಜೀವನದ ಗುರಿ ಸಾಫಲ್ಯವಾಗಲಿ ಜೀವನಕ್ಕೊಂದು ಶುಚಿತ್ವ ಇರಲಿ ಮಲಿನತೆ ಸ್ವಾರ್‍ಥ ವಿಷ ಜಂತು ಯಾವ ಭಾಗದಿಂದಲೂ ಬೇಡ ಇನಿತು ಮನದ ವಿಕಾರತೆ ತ್ಯಾಗಿಸು ದೇವರ ಸಾಕ್ಷಾತ್ಕಾರದತ್ತ ಸಾಗಿಸು ಹೃದಯವು ವಿರಾಗ ಭಾವದಿ ಹೊಳೆಯಲಿ ಮನವು ತ್ಯಾಗ ಭಾವದಿ ತೊಳೆಯಲಿ ಸು...

ಮನವೆ ನಿನಗೆಷ್ಟು ನಾ ಕೋರಿಕೊಳ್ಳಲಿ ಆದರೂ ನಿನ್ನ ಅವಗುಣ ಬಿಡಲಾರೆ ಪರಮಾತ್ಮನತ್ತ ನಿನ್ನ ಧ್ಯಾನಿಸದಾಗಲೆಲ್ಲ ಧ್ಯಾನದಲ್ಲೂ ನೀನು ಚಿತ್ತ ಇಡಲಾರೆ ನನಗಿರುವವನು ನೀನೊಬ್ಬನೆ ಅಲ್ಲವೆ! ನೀನೇ ನನ್ನನ್ನು ಮೋಸಗೊಳಿಸಿದರೆ ಯಾರ ಮುಂದೆ ನಾ ಹೇಳಿಕೊಳ್ಳಬಲ್ಲ...

ಪ್ರತಿಯೊಬ್ಬರು ಬಾಳಿನಲ್ಲಿ ಸುಖವಾಗಿ ಬಾಳಬೇಕೆನ್ನುತ್ತಾರೆ. ಇದು ಮಾನವನ ಸಹಜ ಪ್ರವೃತ್ತಿ. ‘ಸುಖ’ ಎನ್ನುವ ಪದವೇ ಸದಾ ನಮಗೆ ಜೀವನದ ಹೊಯ್ದಾಟಗಳಿಗೆ ಕಾರಣವಾಗುತ್ತದೆ. ಈಗ ಪ್ರತಿಯೊಬ್ಬರಿಗೂ ಕೇಳಿದರೂ ಸುಖದ ಅರ್ಥ ಬೇರೆ ಬೇರೆಯಾಗಿ ಅರ...

ಬದುಕಿನ ಯಾವುದೇ ಕ್ಷಣಗಳಿರಲಿ ಮನವುನೊಂದು ಘಾಸಿಗೊಂಡಿರಲಿ ಆದರೆ ಮನವನ್ನು ಓಲೈಸಲು ನಿ ಕೆಟ್ಟದಕ್ಕಾಗಿ ಪದರು ಹಾಸದಿರಲಿ ಮನದಲಿ ನಿರ್‍ಧಾರವೇ ಅಚಲವಾಗಿರಲಿ ಏಕೆಂದರೆ ಮನವು ನಿನ್ನದಲ್ಲವೇ ನೀ ನಾಡಿದ ಮಾತು ಪಾಲಿಸಬೇಕೆಂದು ಮನಕ್ಕೆ ಆಜ್ಞೆಯ ನೀಡುವುದಿ...

ಆಧುನಿಕ ಕಾಲದಲ್ಲಿ ಸಾಹಿತ್ಯದ ಎಲ್ಲ ಪ್ರಕಾರಗಳು ಜನ ಮೆಚ್ಚಿಕೊಂಡಂತೆ ಅದರಲ್ಲಿ ವಚನ ಸಾಹಿತ್ಯವು ಅಷ್ಟೇ ಪ್ರಭಾವಿಯಾಗಿ, ಮುಕ್ತವಾಗಿ ಜನರ ಮನಸ್ಸಿನ ಮೇಲೆ ಬೀರಿದೆ ಎಂದರೆ ಅತಿಶಯೋಕಿತಯೇನಲ್ಲ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಗಣಕಯಂತ್ರಗಳು, ಅಂತರಜಾಲ...

ಓಡೋಡುತ್ತಿವೆ ನಿನ್ನ ಇಂದ್ರಿಯಗಳು ಸುಖದ ಸುಪ್ಪತಿಗೆ ಅರೆಸುತ್ತ ಜನುಮ ಜನುಮದಲಿ ಅನುಭವಿಸಿದ ವಿಷಯಗಳ ಸ್ಮರೆಸುತ್ತ ನಿನ್ನ ಮೂಲ ಯಾವುದು ಆತ್ಮ ಹೊಲಸುನಾರುವ ದೇಹಾನಂದವೆ ನಿನ್ನ ತಾಣ ಯಾವುದು ರೂಹವೆ ಹೆಣ್ಣು ಹೊನ್ನಿನ ಪರಮಾನಂದವೆ ಬದುಕು ಇದು ನಶ್ವರ...

ಎತ್ತ ಸಾಗಿದೆ ಈ ಬದುಕು ಇದಕ್ಕಿಲ್ಲ ಕಿಂಚಿತ್ತು ದೈವ ಬೆಳಕು ಹಗಲು ರಾತ್ರಿಗಳ ಚಂಚಲ ಮನದತ್ತ ಸಾಗಿ ತನ್ನ ಮರೆತು ಕೆದುರುತ್ತಿದೆ ಹುಳಕು ತನು ಇದು ದೈವ ಮಂದಿರ ಇದನು ಗುಡಿಸಿ ಪವಿತ್ರ ಗೊಳಿಸು ಬಹಿರ್‍ಮುಖ ಮನವ ಎಳೆದು ತಂದು ಆತ್ಮ ಜತೆಗೂಡಿ ಶಿವನ ಪ್...

ಧ್ಯಾನ ಧ್ಯಾನ ನಿನ್ನ ದಿವ್ಯಧ್ಯಾನ ನಿನ್ನೊಂದೆ ಸ್ಮರಣಿ ನನ್ನ ಜ್ಞಾನ ಬಣ್ಣ ಬಣ್ಣದ ನೋಟ ಎನಿತೆನಿತು ಬೆಂಕಿ ಕಿಡಿಗಳಾಗಿ ಬಾಳಿನ ಅಜ್ಞಾನ ಹುಡುಕಾಟ ಹುಡುಕಾಟ ನಿತ್ಯವು ಯಾವುದನ್ನು ಪಡೆಯಲೊ ಕಾತರ ಅನೇಕ ಜನುಮಗಳ ಸ್ವಾನುಭವ ಮನಕ್ಕೆ ಅಂತಲೆ ಚಂಚಲ ಅತೀ ...

ಮಹಾತ್ಮ ಗೌತಮ ಬುದ್ಧರ ಆದರ್ಶಗಳನ್ನು ಅನುಪಾಲಿಸಿಕೊಂಡು ಬದುಕುತ್ತಿರುವ ಶ್ರೀ ಎಸ್. ಎಂ. ಜನವಾಡಕರ್‌ ಹೆಸರು ಬೀದರ ಜಿಲ್ಲೆಯ ಸಾಹಿತ್ಯ ಲೋಕದಲ್ಲಿ ಈಗಾಗಲೆ ಚಿರಪರಿಚಿತ ಹೆಸರಾಗಿದೆ. ದಿನಾಂಕ: ೩-೧-೧೯೫೦ ರಂದು ಹಾಲಹಳ್ಳಿ ಗ್ರಾಮದಲ್ಲಿ ಜನಿಸಿದ ಇವರು...

ದೇವಾ ನಿನಗೊಂದು ಕೋರಿಕೆ ಮಾಡದಿರು ನನ್ನ ಬದುಕು ತೋರಿಕೆ ಹೃದಯದಲಿ ಅರಳಲಿ ಜ್ಞಾನ ಆ ಜ್ಞಾನದಲ್ಲಿ ಬೆಳಗಲಿ ದಿವ್ಯ ಧ್ಯಾನ ಈ ವಿಶಾಲ ಲೋಕದಲ್ಲೂ ನಾ ನಿನ್ನ ಕೃಪೆಯಿಲ್ಲದೆ ತಬ್ಬಲಿ ನನ್ನವರೆಂಬುವವರೆಲ್ಲ ಇಲ್ಲಿ ಹುಟ್ಟು ಸಾವಿನ ಮಾತ್ರ ಮಧ್ಯದಲಿ ಓ ಪ್ರ...

1...89101112...23

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...