ಸ್ವರ್ಣ ಕಾಲ

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ
ಅಟ್ಟೂರ ಗ್ರಾಮ ಪಾಟೀಲ ಕುಟುಂಬದ
ಸಿರಿವಂತ ಮನೆತನದಲ್ಲಿ ಜನಿಸಿದಿ
ಜನರ ಸೇವೆಗೈಯುತಾ ನೀ ನಡದಿ

ಪ್ರಜಾಪ್ರಭುತ್ವ ಅರ್ಥ ತಿಳಕೊಂಡಿದಿ
ಹಗಲಿರುಳು ಎನ್ನದೆ ದುಡಿದು
ಜನತೆಯ ಮನಮನೆಯುದ್ದಕ್ಕೂ ಮನಸೆಳೆದು
ನೆಲೆ ನಿಂತಿದಿ ಉನ್ನತ ಸಚಿವ ಸ್ಥಾನ ಗಿಟ್ಟಿಸಿಕೊಂಡಿದಿ.

ಜಿಲ್ಲೆಯ ಜನಪ್ರಿಯ ಶಾಸಕನಾಗಿದಿ
ಜಿಲ್ಲೆಯ ನಿಷ್ಠಾವಂತ ದಂಡನಾಯಕನಾಗಿದಿ
ಜನತೆಯ ತೊಂದರೆ ನಿವಾರಣೆಯ ನಾಯಕನಾದಿ
ವೀರಾದಿ ವೀರ ರಾಜಕಾರಣಿಯಾದಿ.

ತನುಮನಧನದಿ ಕಾರ್ಯ ಮಾಡಿದಿ
ಪಕ್ಷಭೇದ ಮರೆತು ಸಾರ್ವಜನಿಕವಾದಿ
ಸಭೆ ಸಮಾರಂಭಕ್ಕೆ ಭಾಗಿಯಾಗಿ ಸನ್ಮಾನಿತನಾದಿ
ಜನರ ಪ್ರೀತಿಗೆ ಮಾದರಿಯ ಪಾತ್ರನಾದಿ.

ಹೆಗಡೆ ಮಂತ್ರಿ ಮಂತಿಯಾಗಿ ದುಡಿದಿದಿ
ಒಳ್ಳೆಯ ಸಾಧನೆ ಸಾಧಿಸುವಲ್ಲಿ ಸಫಲನಾದಿ
ಪುನಃ ರಾಜ್ಯದ ಜನತೆಯ ಸೇವೆಗಾಗಿ ನಿಂತಿದಿ
ಧೈರ್ಯ ಸ್ಥೈರ್ಯದಿ ಎದೆತಟ್ಟಿನಿಂತಿದಿ.

ಹಿಂದಿನ ಪಟೇಲ ಮಂತ್ರಿಮಂಡಲದ
ಹಿರಿಯ ಮಂತ್ರಿಯಾಗಿ ಅಧಿಕಾರ ಸ್ವೀಕಾರ
ಬೀದರ ಜಿಲ್ಲೆಯುದ್ದಕ್ಕೂ ಹರ್ಷೋದ್ಘಾರ
ಸುವರ್ಣಕಾಲ ಹೊಸ ಸಾಮರ್ಥ್ಯ ಪ್ರದರ್ಶಿಸುವಲ್ಲಿ ಅಟ್ಟೂರ
*****
೧೯೯೬

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸ ದೇವರ ಬರವಿಗಾಗಿ
Next post ಆರೋಪ – ೮

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…