ಗೆಳೆತನ ಮಾಡುವರು ಬರಿ ಹೇಳಿಕೊಳ್ಳಲಿಕೆ
ಗೆಳೆತನ ಮಾಡಿಕೊಳ್ಳುವರು ತಮ್ಮ ಸ್ವಾರ್ಥಕ್ಕೆ
ಗೆಳೆತನದಲ್ಲಿ ಗೆಳೆಯನಿಗೆ ಕೇಡು ಬಯಸುವರು
ಗೆಳೆತನದಲ್ಲಿ ಹಾಡುಹಗಲಲೆ ಹಾಳು ಬಾವಿಗೆ ತಳ್ಳುವರು
ಓರ್ವಗೆಳೆಯ ಶ್ರೀಮಂತನಿದ್ದರೆ ಹತ್ತಿರದ
ಹಣವು ದುಷ್ಚಟಗಳಿಗೆ ವಿನಿಯೋಗಿಸುವರು
ಗೆಳೆಯನಿಗೆ ದುಷ್ಚಟಗಳಿಗೆ ತಳ್ಳುವರು
ಆತನಿಗೆ ಬಡವನನ್ನಾಗಿ ಮಾಡಲು ಯತ್ನಿಸುವರು.
ನನ್ನ ಗೆಳೆಯ ನನ್ನ ಗೆಳೆಯರೆಂದು ಉತ್ಸಾಹ ಪಡುವನು
ತಿಳಿಯದೆ ಮೂರ್ಖನಂತೆ ಬಲೆಯಲ್ಲಿ ಬೀಳುವನು
ಗೆಳೆತನದಲ್ಲಿಯೆ ಗೆಳೆಯರ ಸಂಪರ್ಕ ಬೆಳೆಸಿ
ಪ್ರೀತಿ-ಪ್ರೇಮವೆಂಬ ಮಹಾಬಲೆಯಲ್ಲಿ ತಾನೇ ಬೀಳುವನು.
ಪ್ರೀತಿವೆಂಬ ತುಂಬು ವಿಷದಲ್ಲಿ ಆತನನ್ನು ಬೆರೆಸುವರು
ವಿದ್ಯಾರ್ಜನೆಯ ಮಾಡುವ ಕ್ರಮ ಬಿಡಿಸಲು ಯತ್ನಿಸುವರು
ಈ ವಿಷಯವನ್ನರಿತ ಮೂರ್ಖರು ತಾ ಪ್ರೀತಿಸುವುದು
ಬಿಟ್ಟು ವಿದ್ಯಾಭ್ಯಾಸತನ್ಮಯನಾಗಿ ಹೊಸದಾರಿ ಕಂಡನು.
*****