ನಿರಂತರ ಹಸಿವಿನ ಕೂಗು
ಧಾನ್ಯಗಳ ಸಂಗ್ರಹ ಜ್ಞಾನ ಕಣಜ
ಹೊಸ ಮಳೆ ಹೊಸ ಬೆಳೆ
ಹೊಸ ಹುಟ್ಟು ಪಡೆವ ಜನ್ಮ.
ಕಣ್ಣಿಗೆ ಕಾಣುವ ಆಕಾರ ವಿಕಾರ
ಜೀವ ಜಲ ಹರಿದು ಹರಿದು
ತಂಪಾದ ಪರಿವರ್ತನೆಯ ಹಾದಿ
ದೊಡ್ಡವರಾದವರೆಲ್ಲ ಗುರುಗಳು.
ಅರೆದುಕೊಂಡ ಬದುಕು ತೆರೆದ ಕಣ್ಣು
ಒಳಗೊಳಗೆ ಬರಿದಾಗಿ ತುಂಬುವ ಜಲ
ಎತ್ತರಕೆ ಹಾರಿದ ಹಕ್ಕಿಯ ತುಡಿತ
ಸೆಳೆದು ಅಪ್ಪುವ ಮೋಹ ಗುರುತ್ವ.
ಒಂದು ದಾಟು ದಾಟಲು ಬೇಕು
ಬದುಕ ನದಿಯಲಿ ತೇಲಿ ದೋಣಿ
ಆಚೆದಡ ತಲುಪಿ ನಡೆವ ಛಾತಿ
ಪಹರೆದಾಟಿ ಬಂದವರು ಅಲ್ಲಮರು.
ಮೋಹವಿಲ್ಲದ ಉಸಿರು ದಾಹವಿಲ್ಲದ ಅರಿವು
ಕಳೆದ ಬಯಲು ತುಂಬ ತಿಳಿಗಾಳಿ
ಎಲ್ಲಿಯೂ ನಿಲ್ಲದ ನಡುಗೆ ದಾರಿ
ಕಾಲದಲ್ಲಿ ಮಾತ್ರ ಹೊರಡುವ ವಿದಾಯ.
ಇದ್ದದ್ದು ಇದ್ಹಾಂಗ ಇಲ್ಲದ್ದು ಇಲ್ಲದ್ಹಾಂಗ
ಕಾರ್ಯ ಕಾರಣ ಪ್ರೀತಿ ಪರಿಚಾರಕ
ಎಷ್ಟೊಂದು ಹೂವುಗಳು ಅರಳಿದವು
ಅವನ ಪಹರೆ ಕಾಳಜಿಯ ತೋಟದಲಿ.
*****