ಉತ್ತರ ಧೃವಕ್ಕೆ ಹೊಂದಿಕೊಂಡಿರುವ
ನೆದರ್‌ಲ್ಯಾಂಡಿನ ಒಳನಾಡಿನ ಹಳ್ಳಿಯೊಳಗೆ
ಹೊಕ್ಕಾಗ –
ಮನಸ್ಸು – ದೇಹ ಎಲ್ಲ ನನಗರಿಯದೇ
slow motion pictureದಂತಾಗಿ
ಹಗುರಾಗಿ ಹಕ್ಕಿಯಾಗಿ ಹಾರಾಡಿತು.
ಧರಗಿಳಿದು ಬಂದ ಸ್ವರ್ಗದೊಳಗೆ
ಅದೇ ಮಳೆಯಾಗಿ ಸಿಂಪಡಿಸಿದ
ನೀರುಗಳಿಂದೆದ್ದು ಒಂದ ಗಿಡಬಳ್ಳಿ ಹೂವುಗಳು
ನನ್ನನ್ನು ಸ್ವಾಗತಿಸಿದವು.
“ಹೊಲಗದ್ದೆಗಳಲ್ಲಿ ಹರೆಯುವ ತಿಳಿನೀರಿನ
ಕಾಲುವೆಗಳ ‘ಝುಳು – ಜುಳು ಸಂಗೀತ’
ಅಮಸ್ಟರ್ಡ್ಯಾಂದ ಕ್ಯಾಬರೆ show ಆಗಲೇ
ಅದೇ ಹಿಂದಿನ ದಿನ ನೋಡಿದ Rock & Rollದ
ಕಿರುಚಾಟವಾಗಲೀ ನನ್ನ ಮನಸ್ಸಿನಿಂದ ಕಿತ್ತೊಗೆದು
ಮೌನವಾಗಿ ಮೃದುವಾಗಿ ಆಕರ್ಶಿಸಿತ್ತು”
ಹಳದಿ ಕೆಂಪು ‘ಟ್ಟೂಲಿಪ್’ ಹೂಗಳ (Combination or contrast)
ಸಾಲಿನಲ್ಲಿ ನಡೆದಾಡುವಾಗ
ನಾ ತೊಟ್ಟ Paris T Shirtಕೂಡಾ
ತುಂಬಾ ಸಪ್ಪೆಯಾಗಿ ಕಂಡಿತು.
“Wind Mill” (ಗಾಳಿಚಕ್ರ)ದ ಚಕ್ರಗಳು
ವಿಶಾಲ ವಿಹಂಗಮ ನಿಸರ್ಗ ಸ್ವರ್ಗದೊಳಗೆ
ಕಿರೀಟ (crown) ಇಟ್ಟಂತಿದ್ದರೆ
“North Seaಗೆ” (ಉತ್ತರ ಸಮುದ್ರ) ರಾಣಿಯ
ಪೋಷಾಕಿನಂತ ಸುಂದರವಾಗಿ
ಗರಿಗರಿಯಾಗಿ – ಬಿಂಕದಂತೆ ಅಲೆಅಲೆಯಾಗಿ
ಬಂದು ನನ್ನ ತಬ್ಬಿಬ್ಬದಾಗ
ನಾನು ಈ ನಿಸರ್ಗ ಮಡಿಲಲ್ಲಿ
ತಬ್ಬಿಬ್ಬಾದೆ.
(ನೆದರ್‌ಲ್ಯಾಂಡ್ (ಹಾಲೆಂಡ್)ದ ಸುಂದರ ಪ್ರಶಾಂತ ಹಳ್ಳಿಗಳಾದ ಮುರ್ಕನ್, ಓಲೆಡ್ಯಾಂ ಸೈನ್ಸೆಗಳ ವಿಹಂಗಮ ಅನುಭವ)
*****