ಆಕಾಶಭಿತ್ತಿ ಮೇಲೆ

ಆಕಾಶ ತುಂಬೆಲ್ಲ ನಕ್ಷತ್ರಗಳಾ ಬೀಜ
ಬಿತ್ತಿದವರಾರೆ ಗೆಳತಿ-
ನೋಡ ನೋಡ ಬೆಳೆ ಹೊಳೆಹೊಳೆವ ಮಣಿಗಳಾ
ಸುತ್ತೋಣ ಬಾರೆ ಗೆಳತಿ

ದಿಕ್ಕು ದಿಕ್ಕಿಗೂ ಕತ್ತೆತ್ತಿ ನೋಡಿದರ
ನಗತಾವ ನೋಡ ಗೆಳತಿ-
ಫಳಫಳಿಸುವಾ ವಜ್ರಗಳಾ ನೋಡು ನೋಡುತಿರೆ
ಕಿವಿಯೋಲೆ ಸರಗಳಾದಾವು ಗೆಳತಿ

ಚಂದ್ರನೊಬ್ಬ ತಾರೆಗಳು ಸುತ್ತ
ಆಕಾಶ ಭಿತ್ತಿ ಮೇಲೆ-
ಬಿಳಿ‌ಅಂಗಿ ತೊಟ್ಟು ಬಂದಿಹನು ಆತ
ಕನ್ಯ ನೋಡಲೆಂದು

ಅವನೇನುಚಂದ ಅವರೇನು ಅಂದ
ಮನದಾಗ ಜಾಜಿ ಮಕರಂದ-
ಗತ್ತಿನಾ ಚಂದಿರ ಬೆಡಗಿನಾ ಹುಡುಗಿಯರ
ಸುತ್ತಾಟ ನೋಡ ನೋಡ ಗೆಳತಿ

ಹುಡುಹುಡು ಹುಡುಕಿದಾ ಹುಡುಗಿಯ
ಕಲಕಲ ಕಲಕಿದಾ ಹುಡುಗಿಯರ
ನೋಡು ನೋಡಲ್ಲಿ ತಾರೆಗಳ ದಿಬ್ಬಣ
ನೋಡು ನೋಡಿಲ್ಲಿ ಸಮುದ್ರಗಳಾ ಸಾಕ್ಷಿ

ಬಾ ಬಾ ಬಾರೆ ಗೆಳತಿ ಬಾನಂಗಳಕೆ ಜಿಗಿದು
ಸುತ್ತೋಣ ಬಾರೆ ಗೆಳತಿ.
ಚಂದ್ರ ಚುಕ್ಕಿಯರಿಗೆ ಪಂಚಮವ ಹಾಡಿ
ಮರಳೋಣ ಬಾರೆ ಗೆಳತಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನಸ ವೀಣ
Next post ಧಾರೆ

ಸಣ್ಣ ಕತೆ

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…