ಏನ ಕೊಡ ಏನ ಕೊಡವಾ

ಏನ ಕೊಡ ಏನ ಕೊಡವಾ
ಹುಬ್ಬಳ್ಳಿಮಾಟ ಏನ ಚಂದುಳ್ಳ ಕೊಡವಾ ||ಪ||

ತಿಕ್ಕಿಲ್ಲ ಬೆಳಗಿಲ್ಲ ತಳತಳ ಹೊಳಿತದ
ಕಂಚಿಂದಲ್ಲ ತಾಮ್ರದ್ದಲ್ಲ ಮಿರಿ ಮಿರಿ ಮಿಂಚುತದ ||೧||

ಆರು ಮಂದಿ ಅಕ್ಕ-ತಂಗ್ಯಾರು ಲೋಲಾಡಿದ ಕೊಡ
ಮೂರಮಂದಿ ಮುತ್ತೈದಿಯಾರು ಲೋಲಾಡಿದ ಕೊಡ ||೨||

ಶಿವರಾತ್ರಿ ಜಾತ್ರೆಗೆ ಹೋಗಿ ಸಿದ್ದರಾಮನ ದರ್ಶನವಾಗಿ
ಮಳ್ಳವ್ವ ಬಾಜಾರದಲ್ಲಿ ಬಾಳಿ ಹೋತವ್ವ ಕೊಡ ||೩||

ಆರುಮಂದಿ ಅಕ್ಕ-ತಂಗ್ಯಾರು ಜತ್ತಿಲೆ ನೀರಿಗೆ ಹೋಗಿ
ಜರ್ರನೆ ಜಾರಿಬಿದ್ದು ಸಿಗದ್ಹಂಗ ಹೋತವ್ವ ಕೊಡ ||೪||

ಶಿಶುನಾಳಧೀಶನು ತಿದ್ದಿ ಮಾಡಿದ ಕೊಡ
ಬುದ್ಧಿವಂತರು ತಿಳಿದು ನೋಡಿರಿ ಕೊಡ ||೫||
****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾರೈಕೆ
Next post ಶಿವಮುಖಿ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…