ಸೆರಗು

ಅದೇ ಮೊದಲನೆಯ ಸಲ
ಸೀರೆ ಉಟ್ಟು ಮಾಂಗಲ್ಯಕಟ್ಟಿಸಿಕೊಂಡ
ಹುಡುಗಿ-
ಮದುವೆ ಮುಗಿಸಿ ಬಿಟ್ಟುಹೊರಡುವ
ತಂದೆತಾಯಿಯರ ಅಗಲಿಕೆಯ ನೋವಿಗೆ
ಅರಿಯದೇ ಕಣ್ಣೀರು ತುಂಬಿದ್ದು
ಬಿಕ್ಕುತ್ತ ಸೆರಗಂಚಿನಿಂದ
ಕಣ್ಣೊರಸಿಕೊಳ್ಳುವ ಮದುವಣಗಿತ್ತಿ-

ಕಂಪ್ಯೂಟರ್ ಮೇಲೆ ಕೈಚಳಕವಾಡಿಸಿ
ಹಾಯ್ ಸುಜಿ, ಬಾಯ್ ಕೃಷ್ಣಕಾಂತ್
ಹೇಳಿ-ಟೈಟ್‌ಪ್ಯಾಂಟ್ ಪಾಕೇಟಿನಿಂದ
ಕಾರ್ ಕೀ ತೆಗೆದು ಓಡಿಸಿ ನಗುವ
ಹುಡುಗಿ-
ಮಸಾಲೆ ಈರುಳ್ಳಿ ಕಣ್ಣಿಗೆ ಹೋಗಿದ್ದಕ್ಕೆ
ಪಾತ್ರೆತಿಕ್ಕಿ ಬಚ್ಚಲು ತೊಳೆದದ್ದಕ್ಕೆ
ಮಿಕ್ಸರ್ ಸುರುಮಾಡಿ
ತವರು ಮನೆ ನೆನೆದು ಬಿಕ್ಕುತ್ತ
ಸೆರಗಂಚಿನಿಂದ ಕಣ್ಣೊರಸಿಕೊಳ್ಳುವ ಗೃಹಿಣಿ ಪಾತ್ರ-

ಬೆಡ್‌ರೂಂ ಸ್ಟಡೀ ಟೆಬಲ್ ತುಂಬೆಲ್ಲ
ಶಾರೂಕ್ ಹೃತಿಕರ ಪೋಸ್ಟರಹಚ್ಚಿ
ದುಪಟ್ಟಹಾರಿಸಿ ಕಣ್ಣುಹೊಡೆದು ಮುತ್ತಿಸುವ
ಪರೀಕ್ಷೆ ತಪ್ಪಿಸಿ ಅಯಸ್ಕ್ರೀಮ್ ತಿನ್ನುವ
ಹುಡುಗಿ-

ಮಗುವಿನ ತಾಯಿಯಾಗಿ
ಮನೆ ತುಂಬ ಫೋಟೋ ಹಚ್ಚಿಕೊಂಡದ್ದು
ವಾಶಿಂಗ್ ಮಶೀನ್‌ಗೆ ಬಟ್ಟೆತುಂಬುತ
ಏಪ್ರನ್ ಹಾಕಿಕೊಂಡು ಪಾತ್ರೆತೊಳೆಯುತ
ಅಳುವ ಮಗುವಿಗೆ ಸೆರಗಂಚಿನಿಂದ
ಕಣ್ಣೀರು ಸುಂಬಳ ಮುಸುರೆಬಾಯಿ ಒರೆಸುವ ಅಮ್ಮ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವೇನು ಮಾಡೋಕಾಗತ್ತೆ
Next post ನಿನ್ನ ನೀ ನಂಬು

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…