ಚೆನ್ನೈಯ ಕಂಪ್ಯೂಟರ್ ಪರಿಣತೆ ಅಂಜಲಿ ಆವರಿಗೆ ಅಂಚೆಯಲ್ಲೊಂದು ಕವರ್ ಬಂತು. ಅದರೊಳಗೆ ಅಂಗೈಗಿಂತ
ಕಿರಿದಾದ ಒಂದು ಪ್ಲಾಸ್ಟಿಕ್ ಕಾರ್ಡ್. ಚೊತೆಗೆ ‘ನಿಮಗೆ ಬೇಕಾದಾಗ ಬೇಕಾದಲ್ಲಿ ಸಾಲ ಒದಗಿಸುವ ಕ್ರೆಡಿಟ್ ಕಾರ್ಡ್.
ಗೌರವಾನ್ವಿತ ಗ್ರಾಹಕರಾದ ನಿಮಗೆ ಇದು ನಮ್ಮ ವಿಶೇಷ ಕೊಡುಗೆ’ ಎಂಬ ಪತ್ರ ಸಂದೇಶ.
ಕೇಳದೆ ಬಂದ ಕ್ರಿಡಿಟ್ ಕಾರ್ಡನ್ನು ಪಕ್ಕದಲ್ಲಿರಿಸಿದರು ಅಂಜಲಿ. ಅನಂತರ ಅದನ್ನು ಮರೆತೇ ಬಿಟ್ಟರು. ಒಂದು
ವರುಷದ ಬಳಿಕ ಅವರಿಗೆ ಮನವರಿಕೆಯಾಯಿತು. ಅದು ಕೊಡುಗೆ ಯಲ್ಲ, ದುಬಾರಿ ಶುಲ್ಕದ ಸೇವೆ ಎಂದು. ಯಾಕೆಂದರೆ ಅವರಿಗೆ ತಿಳಿಸದೆ ಹಾಗೂ ಅವರ ಅನುಮತಿಯಿಲ್ಲದೆ, ಅವರ ಉಳಿತಾಯ ಖಾತೆಯಿಂದ ರೂ. 600 ವಾರ್ಷಿಕ ಕ್ರಿಡಿಟ್ ಕಾರ್ಡ್ ಶುಲ್ಕ ಮುರಿದುಕೊಳ್ಳಲಾಗಿತ್ತು!
ಅಂಜಲಿ ಹೇಳದೆ ಕೇಳದೆ ತನಗೆ ಕ್ರೆಡಿಟ್ ಕಾರ್ಡ್ ನೀಡಿದ್ಣ ಬ್ಯಾಂಕಿಗೆ ಫೋನ್ ಮಾಡಿದರು. “ಇದೇನಿದು?” ಎಂಬ ಅಂಜಲಿಯ ನೇರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಯಿಂದ ತಮ್ಮ ಕ್ರಮದ ಸಮರ್ಥನೆ. ಅಂಜಲಿ ಕ್ರೆಡಿಟ್ ಕಾರ್ಡ್
ಹಿಂದಿರುಗಿಸಿಯೂ ಇಲ್ಲ ಮತ್ತು ಅದು ಬೇಡವೆಂದು ತಿಳಿಸಿಯೂ ಇಲ್ಲ. ಹಾಗಾಗಿ ಶುಲ್ಕ ವಸೂಲಿ ಮಾಡಿದ್ದು ಸರಿ ಎಂಬ ವಾದ ಅವರದು. ಅಂಜಲಿ ಪ್ರತಿಭಟಿಸಿದರು. ತನಗೆ ಚಾಲೂ ಆಗಿರುವ ಕ್ರೆಡಿಟ್ ಕಾರ್ಡ್ ಕಳಿಸಲಾಗಿದೆ ಎಂದು ಬ್ಯಾಂಕಿನವರು ತಿಳಿಸಿಯೂ ಇಲ್ಲ ಮತ್ತು ವರುಷವಿಡೀ ಒಮ್ಮೆಯೂ ತಾನದನ್ನು ಬಳಸಿಲ್ಲ. ಆದ್ದರಿಂದ ಕ್ರೆಡಿಟ್ ಕಾರ್ಡನ್ನು ತತ್‌ಕ್ಷಣ ರದ್ದುಪಡಿಸಿ, ಅನ್ಯಾಯವಾಗಿ ವಸೂಲಿ ಮಾಡಿದ ವಾರ್ಷಿಕ ಶುಲ್ಕ ಹಿಂದಿರುಗಿಸಬೇಕೆಂದು ಕಡ್ಡಿಮುರಿದಂತೆ ತಿಳಿಸಿದರು. ಒಂದೇ ವಾರದೊಳಗೆ ಶುಲ್ಕವನ್ನು ಬ್ಯಾಂಕ್ ಅವರಿಗೆ ಮರುಪಾವತಿಸಿತು.
ಆದರೆ ಎಲ್ಲರೂ ಅಂಜಲಿಯಷ್ಟು ಅದೃಷ್ಟವಂತರಲ್ಲ. ಬೆಂಗಳೂರಿನ ಉದ್ಯೋಗಿ ಮಹಿಳೆಯೊಬ್ಬರ ಮಗನಿಗೆ ಒಂದು ಕ್ರೆಡಿಟ್ ಕಾರ್ಡನ್ನು ಬ್ಯಾಂಕ್ ಉಚಿತ ಕೊಡುಗೆಯಾಗಿ ಕಳಿಸಿಕೊಟ್ಟಿತು. ಅದಾಗಿ ಕೆಲವೇ ದಿನಗಳಲ್ಲಿ ಆತ ವಿದೇಶಕ್ಕೆ ಹೊರಟುಹೋದ. ಕಳೆದ ಎರಡು ವರುಷಗಳಿಂದ ಅವನ ತಾಯಿ “ನಿಮ್ಮ ಕ್ರೆಡಿಟ್ ಕಾರ್ಡ್ ಬೇಡ. ರದ್ದುಪಡಿಸಿ” ಎಂದು ಹಲವಾರು ಬಾರಿ ಫೋನ್ ಮಾಡಿ ವಿನಂತಿಸಿದ್ದಾರೆ. ನಾಲ್ಕು ಬಾರಿ ಮಿಂಚಂಚೆ (ಈ.ಮೈಲ್) ಕಳಿಸಿ
ಒತ್ತಾಯಿಸಿದ್ದಾರೆ. ಆದರೆ ಆ ಬ್ಯಾಂಕ್ ಇವನ್ನೆಲ್ಲ ಅಲಕ್ಷಿಸಿ, ಕಾರ್ಡನ್ನು ನವೀಕರಿಸಿ, ನವೀಕರಣ ಶುಲ್ಕ ವಸೂಲಾತಿಗಾಗಿ ನೋಟೀಸ್‌ಗಳನ್ನು ಕಳಿಸುತ್ತಲೇ ಇದೆ.
ಆರಂಭದಲ್ಲೇ ಎಚ್ಷರವಿರಲಿ
ನಿಮಗ ಹೀಗೊಂದು ‘ಉಚಿತ ಕ್ರೆಡಿಟ್ ಕಾರ್ಡ್’ ಅಂಚೆಯಲ್ಲಿ ಬರಬಹುದು ಅಥವಾ ಫೋನಿನಲ್ಲಿ ಮಾರ್ಕೆಟಿಂಗ್ ಏಜೆನ್ನಿಯಿಂದ ಇಲ್ಲವೆ ನಿಮ್ಮ, ಬ್ಯಾಂಕಿನಿಂದ ಸಂದೇಶ ಬರಬಹುದು. “ನಿಮಗೆ ನಮ್ಮ ಕ್ರೆಡಿಟ್ ಕಾರ್ಡನ್ನು ಉಚಿತವಾಗಿ ಮಂಜೂರು ಮಾಡಿದ್ದೇವೆ’. ತಕ್ಷಣವೇ ಜಾಗೃತರಾಗಿ. ಅದು ಬೇಡವೆನಿಸಿದರೆ, “ಬೇಡವೇ ಬೇಡ, ನನಗೆ ಕಳಿಸಬೇಡಿ’ ಎಂದು ಸ್ಪಷ್ಟವಾಗಿ ಹೇಳಿರಿ. ಅವರ ಕ್ರೆಡಿಟ್ ಕಾರ್ಡ್ ಬಗ್ಗೆ ಪರಿಶೀಲಿಸಬೇಕು ಎಂದೆನಿಸಿದರೆ,
ಒಂದು ವಾರದ ಬಳಿಕ ಫೋನ್ ಮಾಡಲು ಹೇಳಿರಿ. ಈ ಅವಧಿಯಲ್ಲಿ ನಿಮಗೆ ಕ್ರೆಡಿಟ್ ಕಾರ್ಡ್ ಅಗತ್ಯವೇ ಎಂದು ನಿರ್ಧರಿಸಿರಿ.
ನಿಮಗೆ ಆದು ಆಗತ್ಯ ಎನಿಸಿದರೆ, ಆವರು ಪುನಃ ಫೋನ್ ಮಾಡಿದಾಗ ಕ್ರೆಡಿಟ್ ಕಾರ್ಡಿನ ಷರತ್ತು ಹಾಗೂ ನಿಯಮಗಳನ್ನು ಕಳುಹಿಸಿಕೊಡಲು ವಿನಂತಿಸಿರಿ. ಅದನ್ನು ಪಡೆದಾಗ ಓದಿ ಆರ್ಥ ಮಾಡಿಕೊಳ್ಳಿರಿ. ಅನಂತರವೂ ಬೇಕನಿಸಿದರೆ ಮಾತ್ರ ಪಡೆದುಕೊಳ್ಳಿರಿ.
ಕ್ರೆಡಿಟ್ ಕಾರ್ಡ್ ಪಡೆದ ಬಳಿಕ ಆದನ್ನು ಸಿಕ್ಕಸಿಕ್ಕಂತೆ ಬಳಸಬೇಡಿ. ನಿಮ್ಮ ಸಾಲ ಮರುಪಾವತಿ ಸಾಮಥ್ಯ ಲೆಕ್ಕಾಚಾರ ಮಾಡಿ. ಅದನ್ನು ಲಕ್ಷ್ಯಣರೇಖೆಯಾಗಿ ಪಾಲಿಸಿರಿ. (ಬಾಕ್ಸ್ ಓದಿರಿ) ಒಂದು ವೇಳೆ ನೀವು ಬೇಡವೆಂದಾಗಲೂ ನಿಮಗೆ ಕ್ರೆಡಿಟ್ ಕಾರ್ಡ್ ಕಳಿಸಿಕೊಟ್ಟರೆ, ಪಡೆದ ದಿನವೇ ಅದನ್ನು ಎರಡು ತುಂಡಾಗಿ ಮುರಿದು ವಾಪಸು ಕಳಿಸಿರಿ ಅಥವಾ ಕ್ರೆಡಿಟ್ ಕಾರ್ಡ್ ಇರುವ ಅಂಚೆ / ಕೊರಿಯರ್ ಕವರನ್ನು ನಿರಾಕರಿಸಿ ವಾಪಾಸು ಕಳಿಸಿರಿ.
ಬಡ್ಡಿ ಲೆಕ್ಕ ತಿಳಿದಿಲ್ಲ
ಕ್ರಿಡಿಟ್ ಕಾರ್ಡ್ ದಾರರಲ್ಲಿ ಶೇ. 67 ಜನರಿಗೆ ಆದರ ಸಾಲದ ಬಡ್ಡಿ ಲೆಕ್ಕಾಚಾರ ಹೇಗೆಂಬುದೇ ತಿಳಿದಿಲ್ಲ. ಇದು ಬೆಂಗಳೂರಿನ ಬಳಕೆದಾರರ ಸಂಘಟನೆ `ಗ್ರಾಹಕ ಶಕ್ತಿ’ 2003ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದ ವಿಷಯ.
ಕ್ರೆಡಿಟ್ ಕಾರ್ಡ್ ಬಳಸಿ ನೀವು ನಿರ್ಧಿಷ್ಟ ಮಿತಿಗೊಳಪಟ್ಟು ನಗದು ಸಾಲ ಪಡೆಯಬಹುದು ಅಥವಾ ಕ್ರೆಡಿಟ್ ಕಾರ್ಡನ್ನು ತೋರಿಸಿ, ಸಾಲದಲ್ಲಿ ವಸ್ತುಗಳ ಖರೀದಿ ಮಾಡಬಹುದು. ಇವೆರಡರ ಬಾಬ್ತು ಹಣವನ್ನು ಗರಿಷ್ಠ ಒಂದು ತಿಂಗಳೊಳಗೆ ಬ್ಯಾಂಕಿಗೆ ಮರುಪಾವತಿಸಬೇಕು. ಇಲ್ಲವಾದರೆ ಅದನ್ನು ಸಾಲದ ಬಾಕಿ ಎಂದು ಪರಿಗಣಿಸಿ, ತಿಂಗಳಿಗೆ ಶೇಕಡಾ 3ರಷ್ಟು (ಅಂದರೆ ವರುಷಕ್ಕೆ ಶೇ.36ರಷ್ಟು) ಬಡ್ಡಿ ವಿಧಿಸಲಾಗುತ್ತದೆ. ಈ ಬಡ್ಡಿ ಕಟ್ಟದಿದ್ದರೆ ಚಕ್ರಬಡ್ಡಿ ವಸೂಲಿ ಮಾಡುತ್ತಾರೆ. ಹೀಗೆ ಕ್ರೆಡಿಟ್ ಕಾರ್ಡ್ ದಾರರು ಸಾಲದ ಸುಳಿಯಲ್ಲಿ ಸಿಕ್ಕಿ ಬೀಳುತ್ತಾರೆ. ಇದರಿಂದಾಗಿ ಕೆಲವರು ತಾವು ಬಾಕಿ ಮಾಡಿದ ಹಣದ ಇಮ್ಮಡಿ ಮರುಪಾವತಿದ್ದೂ ಇದೆ!
ಕ್ರೆಡಿಟ್ ಕಾರ್ಡಿನ ಸಾಲವನ್ನು ಮೂರರಿಂದ ಆರು ತಿಂಗಳುಗಳಿಗಿಂತ ಜಾಸ್ತಿ ಅವಧಿಗೆ ಬಾಕಿ ಮಾಡಿಕೊಂಡರೆ, ಸಾಲ ವಸೂಲಿಗೆ ಬ್ಯಾಂಕ್ ಕಠಿಣ ಕ್ರಮಗಳನ್ನು ಕ್ಕೆಗೆತ್ತಿಕೊಳ್ಳುತ್ತದೆ. ಇದರಿಂದಾಗಿ ಅನೇಕ ಕ್ರೆಡಿಟ್ ಕಾರ್ಡ್ ದಾರರು ಅಹಿತ ಸನ್ನಿವೇಶಗಳನ್ನು ಎದುರಿಸಿದ್ದಾರೆ.
ರಿವಾಲ್ವಿಂಗ್ ಕ್ರೆಡಿಟ್ ಆಥವಾ ಪುನಃಪುನಃ ಸಾಲದ ಸವಲತ್ತು ನಿಮ್ಮಲ್ಲಿ ಆಸೆ ಹುಟ್ಟಿಸಬಹುದು..ಇದು ಕಳೆದ ತಿಂಗಳ ಸಾಲವನ್ನು ಭಾಗಶಃ ಮರುಪಾವತಿಸಿ, ಉಳಿದದ್ದನ್ನು ಸಾಲವಾಗಿ ಮುಂದುವರಿಸುವ ‘ಸವಲತ್ತು’. ಇದನ್ನು ಸವಲತ್ತು ಅಂದುಕೊಳ್ತೀರಾ? ಯಾಕೆಂದರೆ ಬಾಕಿಯ ಮೇಲೆ ತಿಂಗಳಿಗೆ ಶೇ. 3 ಬಡ್ಡಿ ಮಾತ್ರವಲ್ಲದೆ ಸೇವಾ ಶುಲ್ಕವನ್ನೂ ಬ್ಯಾಂಕ್ ವಿಧಿಸುವುದರಿಂದ ಕ್ಯಾನ್ಸರಿನಂತೆ ಸಾಲ ಬೆಳೆಯುತ್ತದೆ.
ವ೦ಚನೆಗಳು
ನಕಲಿ ಕ್ರೆಡಿಟ್ ಕಾರ್ಡಿನಿಂದಾಗುವ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರಿನಲ್ಲಿ ಮೊದಲ ಪ್ರಕರಣ ದಾಖಲಾದದ್ದು 1996ರಲ್ಲಿ. ಅನಂತರ 2001ರಲ್ಲಿ ಅಲಸೂರಿನಲ್ಲಿ ಬೆಂಗಳೂರು ಪೊಲೀಸರಿಂದ 22 ನಕಲಿ ಕ್ರೆಡಿಟ್ ಕಾರ್ಡ್‌ಗಳ ಪತ್ತೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜರಗುತ್ತಿರುವ ಹೈಟೆಕ್ ಕ್ರೆಡಿಟ್ ಕಾರ್ಡ್ ವಂಚನೆ ಆಗಸ್ಟ್
2004ರಲ್ಲಿ ಬೆಂಗಳೂರಿನಿಂದಲೂ ವರದಿಯಾಗಿದೆ. ಇದರಲ್ಲಿ ಆಂತಾರಾಷ್ಟ್ರೀಯ ವಂಚಕ ತಂಡದ ಸದಸ್ಯನಾದ ಮಹಮ್ಮದ್ ಯಾಕೂಬ್‌ನನ್ನು ಕಬ್ಬನ್ ಪಾರ್ಕ್ ಫೋಲೀಸರು ಬಂಧಿಸಿದರು. ಆತ ಮಹಾತ್ಮಾಗಾಂಧಿ ರಸ್ತೆಯ ನವರತ್ನ ಜ್ಯುವೆಲ್ಲರ್ಸನಲ್ಲಿ ನಕಲಿ ಕ್ರೆಡಿಟ್ ಕಾರ್ಡ್ ಬಳಸಿ ವಂಚನೆ ಮಾಡುತ್ತಿದ್ದಾಗಲೇ ಸೆರೆ ಹಿಡಿದರು. ಅದಕ್ಕಿಂತ ಒಂದು ವಾರ ಮುಂಚೆ ಕೊಯಂಬತ್ತೂರಿನ ವ್ಕಕ್ತಿಯೊಬ್ಬ ಬಿಗ್ರೇಡ್ ರಸ್ತೆಯ ಅಂಗಡಿಯಿಂದ ನಕಲಿ ಕಾರ್ಡ್ ಬಳಸಿ ಖರೀದಿಸಿದ ವಸ್ತುಗಳನ್ನು ಕೊಯಂಬತ್ತೂರಿನಲ್ಲಿ ಪೋಲೀಸರು ವಶಪಡಿಸಿಕೊಂಡಿದ್ದರು.
ಇವರಿಬ್ಬರೂ ಆಂಗೈಯಗಲದ ಸ್ಕಿಮ್ಮರ್ ಎಂಬ ಇಲೆಕ್ಟ್ರಾನಿಕ್ ಉಪಕರಣ ಉಪಯೋಗಿಸಿ ನಕಲಿ ಕಾರ್ಡ್ ಗಳನ್ನು ಸೃಷ್ಟಿಸಿದ್ದರು. ಇದರಲ್ಲಿ ಕ್ರೆಡಿಟ್ ಕಾರ್ಡ್ ಇರಿಸಿದಾಗ ಇದು ಆಯಸ್ಕಾಂತ ಪಟ್ಟಿಯಲ್ಲಿರುವ ಮಾಹಿತಿಯನ್ನೆಲ್ಲ ಸಂಗ್ರಹಿಸುತ್ತದೆ. ಇದರ ಆಧಾರದಿಂದ ನಕಲಿ ಕ್ರೆಡಿಟ್ ಕಾರ್ಡ್ ತಯಾರಿಸಬಹುದು.
ಇಂತಹ ವಂಚನೆಗಳಿಂದ ಬಲಿಯಾಗದಂತಿರಲು ನೀವು ವಹಿಸಬೇಕಾದ ಮುನ್ನೆಚ್ಚರಿಕೆಗಳು:
* ಅಂಗಡಿಯಲ್ಲಿ ಖರೀದಿ ಮಾಡಿದಾಗ ನಿಮ್ಮ ಕ್ರೆಡಿಟ್ ಕಾರ್ಡಿನ ಚಾರ್ಚ್ ಸ್ಲಿಪ್ಪನ್ನು ನಿಮ್ಮ ಕಣ್ಣೆದುರಿನಲ್ಲೇ ಮಾಡಿಸಿಕೊಳ್ಳಿರಿ. ನಿಮ್ಮ ಕ್ರೆಡಿಟ್ ಕಾರ್ಡನ್ನು ಬೇರೆ ಕಡೆ ಒಯ್ಯಲು ಅವಕಾಶ ಕೊಡಬೇಡಿ. ಚಾರ್ಚ್ ಸ್ಲಿಪ್ ಸಾಧಾನಕ್ಕೆ ಸಿಲುಕಿ ಸರಿಯಾಗಿ ಮುದ್ರತವಾಗದಿದ್ದರೆ ಅದನ್ನು ಸಹಿ ಮಾಡಲೇ ಬಾರದು. ಮಾತ್ರವಲ್ಲ, ಅದನ್ನು ಸಾಧನದಿಂದ ಕಿತ್ತು ತೆಗೆದು ಚೂರುಚೂರಾಗಿ ಹರಿದು ಹಾಕಿರಿ.
* ಅಲ್ಲಿ ನಿಮ್ಮ ಚಾರ್ಚ್ ಸ್ಲಿಪ್ಪಿನಲ್ಲಿ ಮಾತ್ರ ಸಹಿ ಮಾಡಿರಿ. ಬೇರೆ ಯಾವುದೇ ಫಾರ್ಮಿಗೆ ಸಹಿಮಾಡಬೇಡಿ.
* ಅಪರಿಚಿತರು ನಿಮಗೆ ಫೋನ್ ಮಾಡಿ ನಿಮ್ಮ, ಕ್ರೆಡಿಟ್ ಕಾರ್ಡಿನ ವಿವರಗಳು ಆಥವಾ ಆದರ ಸಂಖ್ಯೆ ಕೇಳಿದರೆ ತಿಳಿಸಬೇಡಿ. ಮಾತ್ರವಲ್ಲ, ಹಾಗೊಂದು ಫೋನ್ ಕರೆ ನಿಮಗೆ ಬಂತೆಂದು ಕ್ರೆಡಿಟ್ ಕಾರ್ಡ್ ನೀಡಿದ ಬ್ಯಾಂಕಿನಲ್ಲಿ ದೂರು ದಾಖಲಿಸಿರಿ.
* ಕ್ರೆಡಿಟ್ ಕಾರ್ಡ್ ಕಳೆದು ಹೋದರೆ ಆಥವಾ ನಿಮ್ಮ ಕಾರ್ಡಿನ ಪಿನ್ ಸಂಖ್ಯೆ ಬೇರೆಯವರು ತಿಳಿದುಕೊಂಡಿದ್ದಾರೆಂದು ಅನುಮಾನ ಬಂದರೆ ತಕ್ಷಣ ಬ್ಯಾಂಕಿಗೆ ದೂರು ನೀಡಿರಿ.
* ಕ್ರೆಡಿಟ್ ಕಾರ್ಡ್ ಕಳವಾದಾಗ, ಹತ್ತಿರದ ಪೋಲೀಸ್ ರಾಣೆಗೆ ದೂರು ನೀಡಿ ರಶೀದಿ ಪಡೆಯಿರಿ.ನಿಮ್ಮ ಕ್ರೆಡಿಟ್ ಕಾರ್ಡ್ ಕದ್ದವರು ಆದನ್ನು ದುರುಪಯೋಗಪಡಿಸಿದಾಗ, ನೀವು ನಿರಪರಾಧಿಯೆಂದು ಸಾಬೀತುಪಡಿಸಲು ಈ ದಾಖಲೆ ಆಗತ್ಯ.
* ನಿಮ್ಮ ಕ್ರೆಡಿಟ್ ಕಾರ್ಡಿನ ಚಾರ್ಚ್ ಸ್ಲಿಪ್ ಮತ್ತು ಬಿಲ್ ಗಳು ಇತರರ ಕೈಗೆ ಸಿಗದಂತೆ ತೆಗೆದಿರಿಸಿರಿ.
* ಅದೇ ರೀತಿಯಲ್ಲಿ ನಿಮ್ಮ ಎಟಿಎಂ ಕಾರ್ಡ್ ಬಳಸುವಾಗ ಮೆಶೀನಿನಿಂದ ಬರುವ ಸ್ಲಿಪ್ಪನ್ನು ಎಚ್ಚರದಿಂದ ತನ್ನಿರಿ ಮಾತ್ರವಲ್ಲ ನೀವು ಎಟಿಎಂ ಕಾರ್ಡ್ ಬಳಸುವಾಗ ಯಾರೂ ನಿಮ್ಮ ಪಿನ್ ಸಂಖ್ಯೆ ಗಮನಿಸುತ್ತಿಲ್ಲ ಎಂದು ಖಚಿತಪಡಿಸಿಕೊಳೃರಿ.
* ನಿಮ್ಮ ಕ್ರೆಡಿಟ್ ಕಾರ್ಡ್ ಆಥವಾ ಎಟಿಎಂ ಕಾರ್ಡ್ ನವೀಕರಿಸಲಿಕ್ಕಾಗಿ ತನ್ನನ್ನು ಬ್ಯಾಂಕಿನವರು ಕಳಿಸಿಕೊಟ್ಟಿದ್ದಾರೆ ಎನುತ್ತಾ ಯಾರಾದರೂ ನಿಮ್ಮ ಬಳಿ ಬಂದು ಕಾರ್ಡ್ ಕೇಳಿದರೆ ಕೊಡಬಾರದು. ಯಾಕೆಂದರೆ ಬ್ಯಾಂಕಿನವರು ಇದಕ್ಕಾಗಿ ಯಾರನ್ನೂ ಕಳಿಸಿಕೊಡುವುದಿಲ್ಲ.
***************************************************************************
ನೆನಪಿರಲಿ
ಕ್ರೆಡಿಟ್ ಕಾರ್ಡನ್ನು ಇವಕ್ಕಾಗಿ ಬಳಸಬೇಕು
* ಮನೆಗೆ ತಿಂಗಳ ದವಸಧಾನ್ಕ, ಜೀನಸು ಖರೀದಿಗೆ
* ದೀರ್ಫ ಬಾಳಿಕೆಯ ಗೃಹೋಪಯೋಗಿ ವಸ್ತುಗಳ ಖರೀದಿಗೆ
* ಆಸ್ಪತ್ರೆ ಬಿಲ್ ಪಾವತಿಯಂತಹ ತುರ್ತಿನ ಸಂದರ್ಭಗಳಲ್ಲಿ
* ಪ್ರಯಾಣದಲ್ಲಿ, ಹೊಟೇಲ್ ಬಿಲ್ ಇತ್ಯಾದಿ ಪಾವತಿಗಾಗಿ
* ರೆಸ್ಟೋರೆಂಟ್, ಥಿಯೇಟರ್, ಪೆಟ್ರೋಲ್ ಬಂಕ್ ಬಿಲ್ ಪಾವತಿಗಾಗಿ
ಕ್ರೆಡಿಟ್ ಕಾರ್ಡನ್ನು ಇವಕ್ಕಾಗಿ ಬಳಸಬಾರದು
* ಜೂಜಾಟಕ್ಕಾಗಿ
* ಅಪಾಯಕಾರಿ ಹಣ ಹೂಡಿಕೆಗಾಗಿ
* ಇಂಟರ್ನೆಟ್ ನಲ್ಲಿ ಅಪರಿಚಿತ ವೆಬ್ ಸೈಟ್ನಲ್ಲಿ ಖರೀದಿಗಾಗಿ
* ಈಗಾಗಲೇ ಬಾಕಿಯಿರುವ ಸಾಲದ ಮರುಪಾವತಿಗಾಗಿ- ಯಾಕೆಂದರೆ ಎರಡು – ಮೂರು ಕ್ರೆಡಿಟ್ ಕಾರ್ಡ್ ಗಳನ್ನು ಜೇಬಿನಲ್ಲಿ ಇರಿಸಿಕೊಂಡು, ಒಂದು ಕ್ರೆಡಿಟ್ ಕಾರ್ಡಿನ ಸಾಲ ಬಾಕಿ ತೀರಿಸಲು ಇನ್ನೊಂದು ಕ್ರೆಡಿಟ್ ಕಾರ್ಡನ್ನು ಬಳಸುವುದು ಎಂದರೆ ಸಾಲದ ಸುಳಿಯಲ್ಲಿ ಮುಳುಗುವುದು ಎಂದರ್ಥ.
***************************************************************************
ಉದಯವಾಣಿ 7-4-2005