ಬ್ರೆಡ್ ತಿಂದು ತಿಂದು ಬೋರಾದರೆ ಏನು ಮಾಡುವುದು? “ಟೋಸ್ಟರಿನಲ್ಲಿ ಬ್ರೆಡ್ ಹಾಕಿ ಗರಂಗರಂ ಟೋಸ್ಟ್ ಮಾಡಿ
ತಿಂದರಾಯಿತು” ಎನ್ನುವಿರಾದರೆ ಜೋಪಾನ.
ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಬ್ರೆಡ್ಡನ್ನು ಟೋಸ್ಟ್ ಮಾಡುವ ಟೋಸ್ಟರ್ ಗಳನ್ನು ಎಂದಾದರೂ ಪರಿಶೀಲಿಸಿದ್ದೀರಾ? ಟೋಸ್ಟರಿನ 10 ಬ್ರಾಂಡ್‌ಗಳನ್ನು ಅಹ್ಮದಾಬಾದಿನ ಕನ್ಸೂಮರ್ ಎಜುಕೇರ್ಷನ್ ಆಂಡ್ ರೀಸರ್ಚ್ ಸೊಸೈಟಿ ಪರೀಕ್ಷಿಸಿದಾಗ ದೊರಕಿದ ಫಲಿತಾಂಶ ಆಘಾತಕಾರಿ. ಅವುಗಳಲ್ಲಿ ಯಾವುದೇ ಟೋಸ್ಟರ್
ಸುರಕ್ಷಿತವಾಗಿಲ್ಲ!
ಟೋಸ್ಟ್ ಗಳನ್ನು ಎತ್ತಿಕೊಡುವ (ಪಾಪ್ ಆಪ್) ಟೋಸ್ಟರ್‌ಗಳು 1981ರ ಗುಣಮಟ್ಟ ನಿಯಂತ್ರಣ ಆದೇಶಕ್ಕೆ ಒಳಪಟ್ಟಿವೆ. ಹಾಗಾಗಿ ಆವು ಬ್ಯೂರೋ ಆಫ್ ಇಂಡಿಯನ್ ಸ್ಸಾಂಡರ್‌ಡ್ಸ್ ನಿಗದಿಪಡಿಸಿದ ಗುಣಮಟ್ಟ ಹೊಂದಿರಬೇಕು.
ಸಿಇಆರ್ ಸೊಸೈಟಿ ಈ ಸ್ಟಾಂಡರ್ಡ್‌ಗಳ ಪ್ರಕಾರ ಟೋಸ್ಟರ್ಗಳನ್ನು ಪರೀಕ್ಷಿಸಿತು. ಸುರಕ್ಷಿತತೆಗಾಗಿ ಐಎಸ್ 302-2-9 (1993) ಮತ್ತು ಐಎಸ್ 302-1(1979),ಕಾರ್ಯಕ್ಷಮತೆಗಾಗಿ ಐಎಸ್ 1287 ಹಾಗೂ ವಿದ್ಯುತ್ ಬಳಕೆಗಾಗಿ ಐಇಸಿ 60442. ಬಜಾಜ್, ಬಿರ್ಲಾ, ಬ್ಲಾಕ್ ಆಂಡ್ ಡೆಕರ್, ಇನಾಲ್ಸಾ, ಕೆನ್‌ಸ್ಟಾರ್, ಮೊರ್ಫೀ ರಿಚರ್‌ಡ್ಸ್, ಒರ್‌ಪಾಟ್, ಫೀಲಿಪ್ಸ್, ಸ್ಟಿಯರ್ ಹಾಟ್ ಮತ್ತು ಉಪಾ ಲೆಕ್ಸಸ್ ಇವು ಪರೀಕ್ಷೆಗೊಳಪಟ್ಟ 10 ಬ್ರಾಂಡ್ಗಳು.
ಉಷ್ಟತೆಯ ಏರಿಕೆ
ಟೋಸ್ಟರಿನ ವಿನ್ನಾಸ ಸರಿಯಾಗಿಲ್ಲದಿದ್ದರೆ ಅದು ಜಾಸ್ತಿ ಬಿಸಿಯಾಗುತ್ತದೆ. ಹಿಡಿಕೆ, ತಿರುಗಣೆ, ವಿದ್ಯುತ್ ವಯರ್ ಇತ್ಯಾದಿ ಭಾಗಗಳು ಸ್ಟಾಂಡರ್ಡಿನಲ್ಲಿ ನಮೂದಿಸಿದ್ದಕ್ಕಿಂತ ಜಾಸ್ತಿ ಬಿಸಿ ಆಗಬಾರದು ಎಂದು ನಿಗದಿಪಡಿಸಲಾಗಿದೆ. ಟೋಸ್ಟರಿನ ಸ್ವಿಚ್ ಹಾಕಿದ ಬಳಿಕ ಲೋಹದ ಹಿಡಿಕೆ ಮತ್ತು ಹೊರ ಕವಚದ ಉಷ್ಣತೆಯ ಏರಿಕೆ 20 ಡಿಗ್ರಿ ಸೆಂಟಿಗ್ರೇಡ್ ಮೀರಬಾರದು. ಸ್ಟಿಯರ್ ಹಾಟ್ ಟೋಸ್ಟರ್ ಈ ಪರೀಕ್ಷೆಯಲ್ಲಿ ಪಾಸಾಗಲಿಲ್ಲ. ಬಿಸಿ ಮಾಡಿದಾಗ ಅದರ ಹಿಡಿಕೆ ಮತ್ತು ಹೊರ ಕವಚದ ಉಷ್ಟತೆಯ ಏರಿಕೆ 70 ಡಿಗ್ರಿ ಸೆಂಟಿಗ್ರೇಡ್. ಇಷ್ಟು ಬಿಸಿಯಾದ ಟೋಸ್ಟರಿನ ಹಿಡಿಕೆ ಮುಟ್ಟಿದರೆ ಕೈಗಳಲ್ಲಿ ಬೊಬ್ಬೆಗಳು ಎದ್ದಾವು. ಇತರ ಬ್ರಾಂಡ್ ಗಳಲ್ಲಿ ಉಷ್ಟತೆಯ ಏರಿಕೆ 27.2 ಡಿಗ್ರಿ ಸೆಂಟಿಗ್ರೇಡ್ ದಾಟಲಿಲ್ಲ. ಇವು ಪರೀಕ್ಷೆಯಲ್ಲಿ ಪಾಸಾದವು. ಏಕೆಂದರೆ ಇವು ಮೌಲ್ಡ್ ಆದ ಹಿಡಿಕೆ ಮತ್ತು ಹೊರಕವಚ ಹೊಂದಿದ್ದು, ಇವಕ್ಕೆ
ಅನ್ವಯವಾಗುವ ಉಷ್ಟತೆಯ ಏರಿಕೆಯ ಮಿತಿ 45 ಡಿಗ್ರಿ ಸೆಂಟಿಗ್ರೇಡ್.
ಅಸಾಧಾರಣ ಪರೀಕ್ಷೆ
ಯಾವುದೇ ಕಾರಣದಿಂದ ಟೋಸ್ಟರಿನ ಇಜೆಕ್ಟರ್ (ಟೋಸ್ಟ್ ಗಳನ್ನು ಮೇಲಕ್ಕೆ ತಳ್ಳುವ ಭಾಗ) ಕೆಲಸ ಮಾಡದಿದ್ದರೆ ಮತ್ತು ಟೋಸ್ಟರ್ ಬಿಸಿಯಾಗುತ್ತಲೇ ಇದ್ದರೆ ಬೆಂಕಿ ಹತ್ತಿಕೊಂಡು ಟೋಸ್ಟರ್ ಸೊಟ್ಟಗಾದೀತು. ಇದನ್ನು ತಡೆಗಟ್ಟ- ಲಿಕ್ಕಾಗಿ ಫ್ಯೂಸ್, ಥರ್ಮಲ್ ಕಟ್ಔಟ್, ನಾನ್-ಸೆಲ್ಫ್ ರಿಸೆಟ್ಟಿಂಗ್ ಥರ್ಮಲ್ ಕಟ್ಔಟ್ (ತಾನಾಗಿಯೇ ಸ್ವಿಚ್ ಆಫ್ ಮಾಡುವ ಉಷ್ಣಾಧಾರಿತ ವಿದ್ಯುತ್ ಪ್ರತಿಬಂಧಕ) ಇಂತಹ ಸುರಕ್ಷತಾ ಭಾಗಗಳನ್ನು ಟೋಸ್ಟರಿನಲ್ಲಿ ಆಳವಡಿಸಬೇಕು.
ಆದಕ್ಕಾಗಿ ಟೋಸ್ಟರ್ ಗಳನ್ನು ಹೀಗೆ ಪರೀಕ್ಷಿಸಲಾಯಿತು : ಎರಡು ಬ್ರೆಡ್ ತುಂಡು (ಸ್ಲೈಸ್) ಗಳನ್ನು ಒಳಗಿರಿಸಿ, ನಿಗದಿತ ವಿದ್ಯುತ್ ಹಾಯಿಸಿ, ಆದನ್ನು ಇಜೆಕ್ಟರ್ ಮೇಲಕ್ಕೆ ತಳ್ಳದಂತೆ ಪ್ರತಿಬಂಧಿಸ ಲಾಯಿತು. (ಇದರಿಂದಾಗಿ ಟೋಸ್ಟರ್ ಹೆಚ್ಚೆಚ್ಚು ಬಿಸಿಯಾಗುತ್ತಲೇ ಇತ್ತು.) ಈ ಆಸಾಧಾರಣ ಪರೀಕ್ಷೆಯ ಕೊನೆಯಲ್ಲಿ ಏನಾಯಿತು? ಬಜಾಜ್ ಹಾಗೂ ಫೀಲಿನ್ಸ್ ಟೋಸ್ಟರಿನ ಇಜೆಕ್ಟರ್ ಕೆಲಸ ಮಾಡಲೇ ಇಲ್ಲ ಮತ್ತು ಬಜಾಜ್ ಟೋಸ್ಟರ್ ಸೊಟ್ಟಗಾಯಿತು. ಫೀಲಿಪ್ಸ್ ಟೋಸ್ಟರಿನ ಕ್ರಾಂಬ್ ಟ್ರೇ (ಬ್ರೆಡ್ಡಿನ ಉದುರಿ ಬಿದ್ದ ಚೂರುಗಳು ಸಂಗ್ರಹವಾಗುವ ಟ್ರೇ) ಸಿಕ್ಕಿಹಾಕಿ- ಕೊಂಡಿತ್ತು ಮತ್ತು ಅದನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಇನಾಲ್ಸ ಟೋಸ್ಟರಿನ ಹೊರಕವಚ ತುಸು ಆಕಾರಗೆಟ್ಟಿತು.
ಹೀಗಾಗಲು ಕಾರಣವೇನೆಂದರೆ ಯಾವುದೇ ಟೋಸ್ಟರಿನಲ್ಲಿ ನಾನ್-ಸೆಲ್ಫ್ ರಿಸೆಟ್ಟಂಗ್ ಥರ್ಮಲ್ ಕಟ್ – ಔಟ್ ಇರಲಿಲ್ಲ, ಆದರೆ ಟೋಸ್ಟರ್‌ಗಳಿಗೆ ಇದನ್ನು ಆಳವಡಿಸುವುದು ಕಡ್ಡಾಯ ಎಂದು ಸಿಇಆರ್ ಸೊಸೈಟಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್‌ಡ್ಸ್ ಪತ್ರ ಬರೆದು ತಿಳಿಸಿದೆ.
ಸಂರಚನೆ
ಟೋಸ್ಟರಿನಲ್ಲಿ ವಿದ್ಯುತ್ ಪ್ರವಹಿಸುವ ಭಾಗಗಳು ಮತ್ತು ಇತರ ಲೋಹದ ಭಾಗಗಳಿಗೆ ತುಕ್ಕು ಹಿಡಿಯಬಾರದು. ಏಕೆಂದರೆ ತುಕ್ಕು ಹಿಡಿಯುವುದು ಆಪಾಯಕ್ಕೆ ಆಹ್ವಾನ. ಸ್ಟಿಯರ್ ಹಾಟ್ ಟೋಸ್ಟರಿನಲ್ಲಿ ವಿದ್ಯುತ್ ವಯರ್ ಜೊಃಡಣೆಯಾಗುವ ಟರ್ಮಿನಲ್ ಗಳಿಗೆ ತುಕ್ಕು ಹಿಡಿದಿತ್ತು. ಇದರಿಂದ ಕಿಡಿ ಹಾರಿ ಬೆಂಕಿ ಹತ್ತಬಹುದು. ಆದಲ್ಲದೆ ವಿದ್ಯುತ್ ಸರಿಯಾಗಿ ಹರಿಯದೆ ಟೋಸ್ಟರಿನ ಕೆಲಸ ಕೆಟ್ಟೀತು. ಇತರ ಬ್ರಾಂಡ್ ಗಳ ಟೋಸ್ಟರ್ ಗಳು ಈ ಪರೀಕ್ಷೆಯಲ್ಲಿ ಪಾಸಾದವು
ಸುರಕ್ಷಾ ಪರೀಕ್ಷೆಗಳು
1. ಒಳಗಿನ ವಯರಿಂಗ್ : ಟೋಸ್ಟರಿನ ಒಳಗಿನ ವಯರಿಂಗ್ ಮತ್ತು ವಿವಿಧ ಭಾಗಗಳ ನಡುವಣ ವಿದ್ಯುತ್ ಸಂಪರ್ಕಗಳು ಸುರಕ್ಷಿತವಾಗಿರಬೇಕು. ಇಲ್ಲವಾದರೆ ಬಳಸುವವರಿಗೆ ವಿದ್ಯುತ್ ಷಾಕ್ ಬಡಿದು ಮಾರಣಾಂತಿಕವಾದೀತು. ಏಳು ಬ್ರಾಂಡ್‌ಗಳಲ್ಲಿ ವಿವಿಧ ಭಾಗಗಳ ನಡುವಣ ವಿದ್ಯುತ್ ಸಂಪರ್ಕಗಳು ಸುರಕ್ಷಿತವಾಗಿರಲಿಲ್ಲ. ಆದ್ದರಿಂದ ಆ ಟೋಸ್ಟರ್‌ಗಳು ಕೆಟ್ಟು ಹೋದರೆ ಅವುಗಳ ಹೊರಕವಚವನ್ನು ಯಾವತ್ತೂ ಬಿಚ್ಚಬಾರದು. ಬ್ಲಾಕ್ ಆಂಡ್ ಡೆಕರ್, ಇನಾಲ್ಸಾ ಮತ್ತು ಉಷಾ ಲೆಕ್ಸಸ್ ಟೋಸ್ಟರ್ಗಳು ಈ ನಿಟ್ಟನಲ್ಲಿ ಸುರಕ್ಷಿತ.
2. ಪ್ಲಗ್‌ಗಳು : ಉತ್ತಮ ಉಷ್ಣನಿರೋಧಕ ವಸ್ತುವಿನಿಂದ ಪ್ಲಗ್ ರಚಿಸಿರಬೇಕು. ಇಲ್ಲವಾದರೆ ಅದು ಮೆದುವಾಗಿ ಒಡೆದು ಹೋಗಿ ಆಪಾಯವಾದೀತು. ಫೀಲಿಪ್ಸ್ ಮತ್ತು ಸ್ಸಿಯರ್ ಹಾಟ್ ಟೋಸ್ಟರ್ಗಳ ಪ್ಲಗ್ ಗಳು ಮಾತ್ರ ಸರಿಯಾಗಿದ್ದವು.
3. ವಿದ್ಯುತ್ ವಯರ್ : ಸ್ಟಾಂಡರ್ಡಿನ ಪ್ರಕಾರ ಟೋಸ್ಟರ್ ಗಳಿಗೆ ವಿದ್ಯುತ್ ಒದಗಿಸುವ ವಯರ್ ಕನಿಷ್ಠ ಪಕ್ಷ 2 ಮೀ. ಉದ್ದ ಇರಬೇಕು. ಬಜಾಜ್ ಮತ್ತು ಮೊರ್ಫೀ ರಿಚರ್‌ಡ್ಸ್ ಹಾಗೂ ಸ್ಸಿಯರ್ ಹಾಟ್‌ನ ವಯರ್‌ಗಳು ಮಾತ್ರ ಇಷ್ಟು ಉದ್ದವಿದ್ದವು. ಉಳಿದ ಬ್ರಾಂಡ್‌ಗಳ ಟೋಸ್ಟರ್‌ಗಳ ವಯರ್ ಗಿಡ್ಡವಾಗಿದ್ದವು. ಉಷಾ ಲೆಕ್ಸಸ್‌ನ ವಯರ್ ಅತಿ ಕಡಿಮೆ 0.9 ಮೀ. ಉದ್ದವಿತ್ತು. ಆದ್ದರಿಂದ ಖರೀದಿಸುವ ಮುನ್ನ ವಯರಿನ ಉದ್ದ ಆಳತೆ ಮಾಡಿರಿ.
ಟೋಸ್ಟರಿನ ಸ್ವಿಚ್ ಹಾಕಿ ಅತ್ತಿತ್ತ ಹೋಗುವುದು ಸುರಕ್ಷಿತವಲ್ಲವೆಂಬ ಎಚ್ಚರಿಕೆಯನ್ನು ಟೋಸ್ಟರಿನಲ್ಲಿ ಮುದ್ರಸಿರಬೇಕು. “ಟೋಸ್ಟರಿನಲ್ಲಿಟ್ಟ ಬ್ರೆಡ್ಡಿಗೆ ಬೆಂಕಿ ತಗಲಬಹುದು. ಆದ್ದರಿಂದ ಪರದೆಗಳ ಕೆಳಗಡೆ ಆಥವಾ ಇತರ ಬೆಂಕಿ ತಗಲುವ ವಸ್ತುಗಳ ಸಮೀಪ ಟೋಸ್ಟರ್ ಬಳಸಬಾರದು. ಟೋಸ್ಟರ್ ಗಳನ್ನು ಗಮನಿಸುತ್ತಿರಬೇಕು” ಎಂಬ ಎಚ್ಚರಿಕೆಯನ್ನು ಒಂಭತ್ತು ಬ್ರಾಂಡ್ಗಳ ಟೋಸ್ಟರಿನಲ್ಲಿ (ಸ್ಸಿಯರ್ ಹಾಟ್‌ನ ಹೊರತಾಗಿ) ಮುದ್ರಸಿದ್ದು ಸಮಾಧಾನಕರ.
ಸ್ಟಾಂಡರ್ಡಿನ ಪ್ರಕಾರ ಟೋಸ್ಟರಿನ ಮಾರ್ಕಿಂಗ್ ಆಥವಾ ಮಾರ್ಕಿಂಗ್ ಪ್ಲೇಟ್ ಸುಲಭದಲ್ಲಿ ಕಿತ್ತು ಬರಬಾರದು. ಸ್ಟಿಯರ್ ಹಾಟ್‌ನ ಮಾರ್ಕಿಂಗ್ ಮಾತ್ರ ಸರಿಯಾಗಿತ್ತು. ಇತರ ಟೋಸ್ಟರ್‌ಗಳಿಗೆ ಮಾರ್ಕಿಂಗ್ ಮುದ್ರಿಸಿದ ಕಾಗದ ಆಂಟಿಸಲಾಗಿತ್ತು. ಆದು ಸುಲಭದಲ್ಲಿ ಕಿತ್ತು ಬರುತ್ತಿತ್ತು.
ವಿದ್ಯುತ್ ಬಳಕೆ
ಪಾಪ್ ಅಪ್ ಟೋಸ್ಟರ್‌ಗಳ ವಿದ್ಯುತ್ ಬಳಕೆ ಬಗ್ಗೆ ಭಾರತೀಯ ಮಾನಕ ಸಂಸ್ಥೆ ಯಾವುದೇ ಸ್ಯಾಂಡರ್ಡನ್ನು ನಿಗದಿಪಡಿಸಿಲ್ಲ. ಆದರೆ ಆಂತಾರಾಷ್ಟ್ರೀಯ ಮಾನಕ ಸಂಸ್ಥೆಗಳು ವಿದ್ಯುತ್ ಬಳಕೆಯ ಪರೀಕ್ಷಾ ವಿಧಾನಗಳನ್ನು ನಿಗದಿಪಡಿಸಿವೆ. ಆ ಪ್ರಕಾರ ಹತ್ತು ಬ್ರಾಂಡ್ಗಳ ಟೋಸ್ಟರ್‌ಗಳನ್ನು ತಲಾ ಐದು ಬಾರಿ ಪರೀಕ್ಷಿಸಿ, ಸರಾಸರಿ ವಿದ್ಯುತ್
ಬಳಕೆ ಲೆಕ್ಕ ಹಾಕಲಾಯಿತು. ಸ್ಟಿಯರ್ ಹಾಟ್‌ನ ವಿದ್ಯುತ್ ಬಳಕೆ ಗಂಟೆಗೆ 28.99 ವ್ಯಾಟ್ ಆತ್ಯಧಿಕ ಮತ್ತು ಬ್ಲಾಕ್ ಆಂಡ್ ಡೆಕರ್ ನದು ಗಂಟೆಗೆ 17.34 ವ್ಯಾಟ್ ಆತ್ಯಂತ ಕಡಿಮೆ.
ಬೆಲೆ ಮತ್ತು ಆಯ್ಕೆ
ರೂ. 1699ರ ಬಜಾಜ್ ಟೋಸ್ಟರ್ ಅತಿ ದುಬಾರಿಯಾದರೆ ರೂ. 695ರ ಒರ್‌ಪಾಟ್ ಅತಿ ಕಡಿಮೆ ಬೆಲೆಯ ಟೋಸ್ಟರ್.
ಬಜಾಜ್ ಮೊರ್ಫೀ ರಿಚರ್‌ಡ್ಸ್ ಮತ್ತು ಫೀಲಿಫ್ಸ್ ಟೋಸ್ಟರ್ ಗಳಿಗೆ 2 ವರ್ಷಗಳ ಗ್ಯಾರಂಟಿ ಇದೆ. ಸ್ಸಿಯರ್ ಹಾಟ್ ಮತ್ತು ಉಪಾ ಲೆಕ್ಸಸ್‌ಗೆ ಒಂದು ವರುಷದ ಗ್ಯಾರಂಟಿ. ಉಳಿದ 5ಬ್ರಾಂಡ್ಗಳಿಗೆ ಒಂದು ಆಥವಾ ಎರಡು ವರುರ್ಷಗಳ ವಾರಂಟಿ ಲಭ್ಯ.
ಈ ವಿವಿಧ ಪರೀಕ್ಷೆಗಳ ಆಂಕಗಳು ಮತ್ತು ಬೆಲೆಯ ಆಧಾರದಿಂದ ಒರ್‌ಪಾಟ್ ಟೋಸ್ಟರ್ ಅತ್ಯುತ್ತಮ ಆಯ್ಕೆ ಎಂದು ಸಿಇಆರ್ ಸೊಸೈಟಿ ಘೋಷಿಸಿದೆ. ಈ ಎಲ್ಲ ಪರೀಕ್ಷೆಗಳ ಫಲಿತಾಂಶಗಳನ್ನು ಸಿಇಆರ್‌ಯು ಸೋಸೈಟಿ ಗುಜರಾತಿನ ವಿದ್ಯುತ್ ಕಮಿಷನರಿಗೆ ತಿಳಿಸಿ, ಸೂಕ್ತ ಕ್ರಮ ಕ್ಕೆಗೊಳ್ಳಬೇಕಂದು ಆಗ್ರಹಿಸಿದೆ. ಆದಲ್ಲದೆ ವಿದ್ಯುತ್ ಬಳಕೆಯ ಮಾನದಂಡವನ್ನು ಟೋಸ್ಟರ್‌ಗಳ ಸ್ಟಾಂಡರ್‌ಡಿನಲ್ಲಿ ಸೇರಿಸಬೇಕೆಂದು ಭಾರತೀಯ ಮಾನಕ ಸಂಸ್ಥೆಯನ್ನು ವಿನಂತಿಸಿದೆ.
ಉತ್ಯಾದಕ್ಘರ ಪ್ರತಿಕ್ರಿಯೆ
ಟೋಸ್ಟರ್‌ಗಳ ಪರೀಕ್ಷಾ ಫಲಿತಾಂಶಗಳನ್ನು ಆಯಾ ಉತ್ಪಾದಕರಿಗೆ ಸಿಇಆರ್ ಸೊಸೈಟಿ ಕಳಿಸಿಕೊಟ್ಟಿತು. ಬಹುಪಾಲು ಉತ್ಯಾದಕರು ತಮ್ಮ ವಿವರಣೆ ನೀಡಿದರು. ಕೆಲವು ಉತ್ಪಾದಕರು ನ್ಯೂನತೆಗಳನ್ನು ಸರಿಪಡಿಸಲು ತಾವು ಕೈಗೊಂಡ ಕ್ರಮಗಳನ್ನು ತಿಳಿಸಿದ್ದು ಶುಭ ಸೂಚನೆ. ಆದರೆ ಕೆಲವು ಉತ್ಪಾದಕರು ಸಿಇಆರ್ ಸೊಸೈಟಿಯ ಪತ್ರಕ್ಕೆ ಉತ್ತರಿಸಲೇ ಇಲ್ಲ. ಹೆಚ್ಚೆಚ್ಚು ಬಛಕೆದಾರರು ಜಾಗೃತರಾದರೆ ಮಾತ್ರ ಇಂತಹ ಉತ್ಪಾದಕರು ಬಳಕೆದಾರರ
ಸುರಕ್ಷೆ ಬಗ್ಗೆ ಹೊಣೆಗಾರಿಕೆ ತೋರಬಹುದು.
ಉದಯವಾಣಿ 2.9.2೦೦4