ಪ್ರಮಾಣವಚನದ ಪಾವಿತ್ರ್ಯ

ಪ್ರಜಾ ಪ್ರತಿನಿಧಿಗಳಿಗೆ, ಉನ್ನತ ಹುದ್ದೆಯನ್ನಲಂಕರಿಸುವವರಿಗೆ ಪ್ರಮಾಣವಚನ ಬೋಧಿಸುವ ನಿಧಿ ವಿಧಾನಗಳನ್ನು ನಮ್ಮ ಸಂವಿಧಾನದಲ್ಲಿ ನಮೂದಿಸಲಾಗಿದೆ ಇತ್ತೀಚೆಗೆ ನಡೆದ ಚುನಾವಣೆಗಳ ನಂತರ ಲೋಕಸಭೆಯಲ್ಲಿ, ನಿಧಾನ ಸಭೆಗಳಲ್ಲಿ ಆಯ್ಕೆಯಾದ ಪ್ರಜಾಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಲಾಗಿದೆ. ಪ್ರಮಾಣವಚನ ಸ್ವೀಕರಿಸುವಾಗ ಕರ್ನಾಟಕದಲ್ಲಿ ಕೆಲವು ಶಾಸಕರು ವ್ಯಕ್ತಿಗಳ ಹೆಸರಿನಲ್ಲಿ (ವಾಜಪೇಯಿ), ವಿವಿಧ ದೇವರುಗಳ ಹೆಸರಿನಲ್ಲಿ ಸ್ವೀಕರಿಸಿದ್ದಾರೆ. ಇದು ಸಂವಿಧಾನದ ನೇರ ಉಲ್ಲಂಘನೆಯಾಗಿದೆ. ಅಲ್ಲದೆ ಅದು ಸಂವಿಧಾನಕ್ಕೆ ಮಾಡಿದ ಅವಮಾನವೂ ಆಗಿದೆ. ಪ್ರಮಾಣವಚನ ಬೋಧಿಸುವ ಅಧಿಕಾರ ಹೊಂದಿದವರಿಗಾದರೂ ಸಂವಿಧಾನದ  ವಿಧಿವಿಧಾನಗಳು ಗೊತ್ತಿರಬೇಕಿತ್ತು. ನಮ್ಮ ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ರೀತಿ ನೀತಿಗಳು ದಿನದಿಂದ ದಿನಕ್ಕೆ ಉತ್ತಮಗೊಳ್ಳುವ ಬದಲು ಅಧೋಗತಿಗೆ ಇಳಿಯುತ್ತಿರುವುದು ನಮ್ಮ ಅವನತಿಗೆ ದ್ಯೋತಕವಾಗಿದೆ.

ಪ್ರಮಾಣ ವಚನಕ್ಕೆ ಒಂದು ಪಾವಿತ್ರ್ಯವಿದೆ. ಮೊದಲು ಅದನ್ನು ಗೌರವಿಸಬೇಕು. ಪ್ರಮಾಣ ವಚನ ಬೋಧಿಸುವವರ ಹಾಗೂ ಸ್ವೀಕರಿಸುವವರ ಹೃನ್ಮನಗಳಲ್ಲಿ ಅದರ ಬಗ್ಗೆ ನಂಬಿಕೆ, ಪೂಜ್ಯ ಭಾವನೆ ಇರಬೇಕು. ಅದರೆ ಈ ಪ್ರಮಾಣವಚನ ಎಂಬುದು ಆ ಪಾವಿತ್ರ್ಯದಿಂದ ದೂರವುಳಿದು ಕೇವಲ ಔಪಚಾರಿಕವಾಗುತ್ತಿರುವುದು ಎಲ್ಲದುರಂತಗಳಿಗೆ, ಸ್ವೇಚ್ಚಾಚಾರಕ್ಕೆ ಕಾರಣವಾಗುತ್ತಿದೆ. ಕರ್ನಾಟಕದ ಉಚ್ಛನ್ಯಾಯಾಲಯದ ನ್ಯಾಯಾಧೀಶರುಗಳೆ ಸುಳ್ಳು ಪ್ರಮಾಣ ಪತ್ರಿಕೆಗಳನ್ನು ಸಲ್ಲಿಸಿ ನಿವೇಶನ ಪಡೆದ (ಕಬಳಿಸಿದ) ಉದಾಹರಣೆಗಳಿವೆ. ಅವರೂ ಕೂಡ ಆ ಹುದ್ದೆಗೆ ನೇಮಕವಾದಾಗ ಪ್ರಮಾಣವಚನ ಸ್ವೀಕರಿಸಿಯೇ ಆ ಪವಿತ್ರ ನ್ಯಾಯಾಸ್ಥಾನವನ್ನು ಅಲಂಕರಿಸಿದವರು.

ಒಂದು ರಾಜಿ ಸಂದರ್ಭದಲ್ಲಿ ಶಾಸಕರೋರ್ವರು ಹೇಳಿದ ಮಾತು ಆಶ್ಚರ್ಯ ತರುತ್ತದೆ. ಅದು ಅವರು ಸ್ವೀಕರಿಸಿರುವ ಪ್ರಮಾಣ ವಚನದ ಪಾವಿತ್ರ್ಯತೆಗೆ ಹಿಡಿದಕನ್ನಡಿಯಾಗಿದೆ. ಒಂದು ಹಳ್ಳಿಯ ಎರಡು ಗುಂಪಿನವರನ್ನು ರಾಜಿಮಾಡಿಸಿ ಆ ಊರಿನ ಗ್ರಾಮದೇವತೆ ‘ಬೆಂಕಿಯಮ್ಮ’ಳಿಗೆ ಮಂಗಳಾರತಿ ಮಾಡಿಸಿದರು. ರಾಜಿ ಆದವರಿಗೆ ಆ ದೇವತೆ ಹೆಸರಿನಲ್ಲಿ ಪ್ರಮಾಣ ಮಾಡಿ ಎಂದು ಹೇಳುತ್ತಾ ಆ ಶಾಸಕರು ‘ಹೇಳಿಕೇಳಿ ಬೆಂಕಿಯಮ್ಮ; ನಿಜವಾಗಿ ಪ್ರಮಾಣ ಮಾಡಿ. ನಾವು ವಿಧಾನ ಸೌಧದಲ್ಲಿ ಸುಮ್ ಸುಮ್ನೆ ಮಾಡ್ತಿವಲ್ಲ ಹಂಗಲ್ಲ’ ಎಂದರು. ಈ ಮಾತು ಏನನ್ನು ಹೇಳುತ್ತದೆ? ಅದು ಹೇಳುವುದು ಅವರ ಭಗ್ನಗೊಂಡ ಹೃದಯವನ್ನ, ಆತ್ಮವಂಚಕ ಸಂಸ್ಕೃತಿಯನ್ನ. ಇತ್ತೀಚಿನ ಈ ಪ್ರಮಾಣವಚನ ಎಂಬ ಪ್ರಹಸನ ನಂಬಿಕೆಗೆ ದೂರವಾದದ್ದು, ನಾಟಕೀಯವಾದದ್ದು.

ಈ ಪ್ರಮಾಣವಚನ ಎಂಬುದು ಮನುಷ್ಯನನ್ನು ನಿಜದ ನೆಲೆಯಲ್ಲಿ ನಿಲ್ಲಿಸಿ ಅವನಿಂದ ಸತ್ಯ ನುಡಿಸಲು, ಅವನ ಕ್ರಿಯೆಗಳು ಸತ್ಯದ ನೆಲೆಯಲ್ಲಿ ನಿಲ್ಲುವಂತೆ ಕಾಪಾಡಿಕೊಳ್ಳಲು ಮಾಡಿಕೊಂಡು ಬಂದಿರುವ ಪ್ರಯತ್ನಗಳಲ್ಲಿ ಒಂದು. ಅದಕ್ಕಾಗಿ ಮನುಷ್ಯ ಸ್ವರ್ಗನರಕಗಳನ್ನು ಸೃಷ್ಟಿಸಿದ್ದಾನೆ. ಸತ್ಯ ನುಡಿದರೆ ಸ್ವರ್ಗ ಸುಳ್ಳಾಡಿದರೆ ನರಕ ಎಂದು ಸ್ವರ್ಗದಲ್ಲಿ ಸುಖದ ಕಲ್ಪನೆ, ನರಕದಲ್ಲಿ ಕ್ರೂರ ಶಿಕ್ಷೆಯನ್ನು ಹುಟ್ಟು ಹಾಕಿದ್ದಾನೆ. ಆಯಾಯ ದೇಶ ಜನಾಂಗಗಳ ಬುದ್ದಿಗೆ ಹೊಳೆದಂತೆ ಕಟ್ಟು ಕಥೆಗಳನ್ನು ಹೆಣೆಯಲಾಗಿದೆ.

ನಮ್ಮ ಹಿರಿಯ ವಕೀಲರಾದ ಎಸ್. ಸಿ. ನರಸಿಂಹಮೂರ್ತಿ ಕೆಲವು ದಾವಾಗಳ ಸ್ವಾರಸ್ಯಕರ ವಿದ್ಯಮಾನಗಳನ್ನು ಹೇಳುತ್ತಿರುತ್ತಾರೆ. ಒಂದೆರಡು ಉದಾಹರಣೆ ಹೇಳುತ್ತೇನೆ.

ಪ್ರೋನೋಟ್ ಹಣ ಬಂದಿದ್ದರೂ ಒಂದು ಸಣ್ಯ ವ್ಯಾಜ್ಯದಿಂದಾಗಿ ಬುದ್ದಿಕಲಿಸುತ್ತೇನೆಂದು ಒಬ್ಬ ಮುಸ್ಲಿಂ ಮಹಿಳೆ ಹಣ ಬರಬೇಕೆಂದು ದಾವಾಹಾಕಿದ್ದಳು. ಹಣಕೊಟ್ಟವನು ನ್ಯಾಯಾಧೀಶರ ಮುಂದೆ “ಹಣ ಕೊಟ್ಟಿಲ್ಲ ಎಂದು ಆಕೆ ಮಸೀದಿಯಲ್ಲಿ ಪ್ರಮಾಣ ಮಾಡಲಿ. ನಾನು ಕೊಡುತ್ತೇನೆ ಎಂದ. ಆಕೆ ಮಾಡ್ತೀನಿ ಎಂದು ಕೊರ್ಟ್‌ ಕಮೀಷನರ್ ಜೊತೆ ಹೊರಟಳು. ಮಸೀದಿ ‘ಹತ್ತಿರ ಹತ್ತಿರ ಬರುತ್ತಿದ್ದಂತೆ ಆಕೆ ತನ್ನ ವಕೀಲರಿಗೆ ಹೇಳಿದಳು. “ನಾನು ಪ್ರಮಾಣ ಮಾಡಲ್ಲ ಸ್ವಾಮಿ, ಅವನು ದುಡ್ಡು ಕೊಟ್ಟಿದ್ದಾನೆ’ ಎಂದಳು. ದಾವಾ ವಜಾ ಆಯ್ತು.

ಹೆಂಡತಿಯನ್ನು ಕಳೆದುಕೊಂಡಿದ್ದ ಒಬ್ಬ ಕ್ರಿಶ್ಚಿಯನ್ ಮತ್ತೊಬ್ಬ ಮಹಿಳೆಯನ್ನು ಇಟ್ಟುಕೊಂಡಿದ್ದ. ಅತ ತನ್ನ ತೋಟದಲ್ಲಿ “ನಾಯಿಯನ್ನು ಹಿಡಿದುಕೊಂಡು ಹೋಗುತ್ತಿದ್ದಾಗ ‘ನಾಯಿಗೆ ಒಂದು ನಾಯಿ’ ಎಂದು ಬೈದ ವ್ಯಕ್ತಿಯ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ. ನ್ಯಾಯಾಲಯದಲ್ಲಿ ಎದುರು ವಕೀಲರು ಹಾಕಿದ ಪ್ರಶ್ನೆಗೆ ಸುಳ್ಳು ಹೇಳದೆ “ಹೌದು ನಾನು ಮಹಿಳೆಯನ್ನು ಇಟ್ಟುಕೊಂಡಿದ್ದೇನೆ. ಆಕೆಗೆ ಇಂಥ ಆಸ್ತಿ ಬರೆದಿದ್ದೇನೆ’ ಎಂದು ನಿಜ ಹೇಳಿದ. ಅಮೇರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ ಲೆವೆನೆಸ್ಕಿ ಕೇಸಿನಲ್ಲಿ ಸುಳ್ಳು ಹೇಳದೆ ಒಪ್ಪಿಕೊಂಡದ್ದು ಆತ ನಿಜವಾದ ಕ್ರಿಶ್ಚಿಯನ್ ಎಂಬುದನ್ನು ಸಾಬೀತು ಪಡಿಸಿದೆ.

ಹಿಂದೂ ಒಬ್ಬ ಹಣಬರಬೇಕೆಂದು ದಾವಾಹಾಕಿಕೊಂಡಿದ್ದ. ಎದುರು ಕಕ್ಷಿದಾರ ನ್ಯಾಯಾಲಯದಲ್ಲಿ ನಾನು ಹಣ ಕೊಡಬೇಕಾಗಿಲ್ಲ ಎಂದ. ಹಾಗಂತ ಸಿದ್ದೇಶ್ವರ ದೇವಸ್ಥಾನದಲ್ಲಿ ಪ್ರಮಾಣ ಮಾಡಲಿ ಬಿಟ್ಟು ಬಿಡುತ್ತೇನೆ ಎಂದ ವಾದಿ. ನಾಳೆ ಪ್ರಮಾಣ ಮಾಡುತ್ತೇನೆ ಎಂದ ಕಕ್ಷಿದಾರ. ಮಾರನೆ ದಿನ ಕೋರ್ಟ್ ಕಮಿಷನರ್ ಜೊತೆ ಹೂಡಿದ ಕಕ್ಷಿದಾರ ನಾನು ಹಣ ಕೊಡಬೇಕಾಗಿಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಿದ. ಆತನ ವಕೀಲರು ಪ್ರತ್ಯೇಕವಾಗಿ ಕರೆದು ನೀನು ಇದನ್ನು ನಿನ್ನೆಯೇ ಮಾಡಬಹುದಿತ್ತು, ಏಕೆ ಇವತ್ತಿಗೆ ಹಾಕಿಸಿಕೊಂಡೆ ಎಂದರು. ಅದಕ್ಕೆ ಕಕ್ಷಿದಾರ ಹೇಳಿದ, “ಇಲ್ಲಾ ಸ್ವಾಮಿ, ನಿನ್ನೆ ಸಂಜೆ ಬಂದು ಈ ದೇವರಿಗೆ ಹರಿಕೆ ಕಟ್ಟಿಕೊಂಡಿದ್ದೀನಿ. ನಾಳೆ ಸುಳ್ಳೇಳಿ ಅರಕೆ ತೀರುಸ್ತೀನಿ ಅಂತ ” ಎಂದ.

ಇವು ನಿಜವಾದ ಧಾರ್ಮಿಕ ವ್ಯಕ್ತಿಗೂ, ಸ್ವಾರ್ಥಕ್ಕಾಗಿ ಧರ್ಮವನ್ನು ಬಳಸಿಕೊಳ್ಳುವವನಿಗೂ ಇರುವ ವ್ಯತ್ಯಾಸವನ್ನ, ಆಂತರಿಕ ನೆಲೆಗಟ್ಟನ್ನ ತಿಳಿಯ ಪಡಿಸುತ್ತವೆ.

ಈ ಪ್ರಮಾಣವಚನ ಎಂಬುದು ಪ್ರಮಾಣ ಮತ್ತು ವಚನ ಎಂಬ ಎರಡು ಪದಗಳಿಂದ ಕೂಡಿದೆ. ಪ್ರಮಾಣ ಒಂದರ ಆಧಾರದ ಮೇಲೆ ಕೊಡುವಂಥದ್ದು; ವಚನ-ಕೊಡುವ ವ್ಯಕ್ತಿಯ ಅಂತಃ ಸಾಕ್ಷಿಗೆ ಸಂಬಂಧ ಪಟ್ಟುದ್ದು. ಆ ಕಾರಣದಿಂದಲೆ “ದೇವರ ಮೇಲೆ ಪ್ರಮಾಣ ಮಾಡಿ ವಚನ ಕೊಡುವುದು ರೂಢಿಯಲ್ಲಿ ಬಂದಿದೆ. ಈ ಪ್ರಮಾಣವಚನವನ್ನ ಮೊದಲು ವೈದ್ಯರಿಗೆ ಬೋಧಿಸಿದವನು ಗ್ರೀಸ್‌ದೇಶದ ಹಿಪ್ಪೋಕ್ರೇಟ್ಸ್‌ (ಕಿ) ವೂ. ೪೬೦- ೯೩೭) ಎಂಬ ಮಹಾಶಯ.

ವಚನ ಇಂದಿನದಲ್ಲ, ಮನುಷ್ಯನ ಚಿಂತನ ಶಕ್ತಿ ಪ್ರಾರಂಭವಾಗಿ ಅವನ ಅಂತಃಸಾಕ್ಷಿ ಜಾಗೃತವಾದಾಗಿನಿಂದ ಅದು ನಡೆದು ಬಂದಿದೆ. ಇದು ಎಲ್ಲ ದೇಶಕಾಲಗಳಲ್ಲಿ ಆಗಿರುವಂಥದ್ದು ಅದಕ್ಕೆ ಜಗತ್ತಿನ ಪುರಾಣ ಕಾವ್ಯಗಳೇ ಸಾಕ್ಷಿಯಾಗಿವೆ.

ಮನುಸ್ಮೃತಿಯ ಕಾಲದಲ್ಲಿ ಜಾತಿಗಳ ಆಧಾರದ ಮೇಲೆ ಪ್ರಮಾಣವಚನ, ಆಣೆ, ಶಪಥ ಮಾಡಿಸುತ್ತಿದ್ದುದು ಕಂಡು ಬರುತ್ತದೆ. ಬಹುಸಂಖ್ಯಾತ ಶೂದ್ರರಿಗೆ (ಸ್ವೀಯರನ್ನೂ ‘ಶೂದ್ರ’ ಎಂದು ಪರಿಗಣಿಸಲಾಗಿದೆ) ‘ಪಾಪವನ್ನೇ ಆತ್ಮವಾಗಿಸಿದ ಕ್ರೂರತೆ ಇಲ್ಲಿ ಕಂಡು ಬರುತ್ತದೆ. ಆದರೆ ಆರಾಧಿಸುವ ದೇವರುಗಳೆಲ್ಲ ಶೂದ್ರ ವರ್ಗದಿಂದ ಬಂದವರು! ಈ ನಿಪರ್ಯಾಸವೇ ಭಾರತದ ಮತೀಯ ಹಾಗೂ ಜಾತೀಯ ಘರ್ಷಣೆಗೆ ಕಾರಣವಾಗಿದೆ. ಆದ್ದರಿಂದ ಯಾವ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರೂ, ಮಾಡಿಸಿದರೂ ಆಂತರಂಗದಲ್ಲಿ ಅಸಮಾನತೆ ತುಂಬಿರುವ ಕಾರಣ ಅದು ಹೆಚ್ಚು ಪ್ರಯೋಜನಕಾರಿಯಾಗಿಲ್ಲ.

ದಿ ಇಂಡಿಯನ್ ಓತ್ ಆಕ್ಟ್ ೧೮೭೩, ಬ್ರಿಟಿಷರ ಕಾಲದಲ್ಲಿ ಬಂದದ್ದು. ಅದನ್ನು ಸ್ವತಂತ್ರ ಭಾರತ ನಿರಸನಗೊಳಿಸಿ ೧೯೬೯ ರಲ್ಲಿ “ದಿ ಇಂಡಿಯನ್ ಓತ್ ಆಕ್ಟ್ ‘ ಅನ್ನು ಜಾರಿಗೆ ತಂದಿದೆ. ಸದರಿ ಕಾಯ್ದೆಯಲ್ಲಿ ಪ್ರಮಾಣ ವಚನದ ಬಗ್ಗೆ ಮಾಹಿತಿ ಇದ್ದು ಸಾಕ್ಷಿಯಾದವನು, ನ್ಯಾಯಾಧೀಶ, ಪ್ರಮಾಣ ಪತ್ರಿಕೆ ಹಾಜರ್ಪಡಿಸುವವನು, ದುಬಾಷಿ ಇವರುಗಳು ಯಾವ ಯಾವ ರೀತಿ ಪ್ರಮಾಣ ವಚನ ಸ್ವೀಕರಿಸಬೇಕು ಎಂಬುದನ್ನು ಆಯಾಯ ರಾಜ್ಯಗಳ ಉಚ್ಚನ್ಯಾಯಾಲಯಗಳಿಗೆ
ನಿಗಧಿಪಡಿಸಲಾಗಿದೆ.

ಅಂತಹ ಪಯಣದಲ್ಲಿ ನಮಗೆ ಸರ್ವತಂತ್ರ ಸ್ವತಂತ್ರವಾದ ಸಂವಿಧಾನ ದಕ್ಕಿದೆ. ಅದು ನಮ್ಮೆಲ್ಲರನ್ನು ಒಂದಾಗಿಸುವ ಶಕ್ತಿವುಳ್ಳದ್ದು. ಅದನ್ನು ಎಲ್ಲರೂ ಗೌರವಿಸೋಣ. ಅದರ ಉಲ್ಲಂಘನೆ ಬಂದರೆ ನಾವು ನಮಗೇ ಮಾಡಿಕೊಳ್ಳುವ ಅವಮಾನವಾಗುತ್ತದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಮೇಚ್ಛೆ
Next post ನಾನತ್ತ ನೀನಿತ್ತ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…