ಒಬ್ಬ ವ್ಯಕ್ತಿ ತನ್ನ ಊರು ಬಿಟ್ಟು ಬೇರೆ ಊರಿಗೆ ಹೋಗಿ ಒಂದಷ್ಟು ದಿನಗಳು ಆ ಪ್ರದೇಶದಲ್ಲಿ ಇದ್ದು ಸುತ್ತಾಡಿಕೊಂಡು ಬರುವುದೇ ಪ್ರವಾಸ ಎನಿಸಿಕೊಳ್ಳುತ್ತದೆ. ಹಾಗಾದರೆ ಈ ‘ಪ್ರವಾಸ’ ಎನ್ನುವ ಶಬ್ದ ಹುಟ್ಟಿಕೊಂಡಿದ್ದೆಲ್ಲಿ ಎಂಬ ಪ್ರಶ್ನೆ ನಮಗೆ ಮೊದಲು ಎದುರಾಗುತ್ತದೆ.
19ನೆಯ ಶತಮಾನದ ಮೊದಲಿಗೆ ಇಂಗ್ಲೀಷ್ ‘Tourist’ ಪದವು ಪ್ರವಾಸ ಅಥವಾ ಪ್ರವಾಸ ಮಾಡುವವನು, ಮೇಲಾಗಿ ಇದನ್ನು ಮನರಂಜನೆಗಾಗಿ ಮಾಡುವವನು ಅಥವಾ ಆನಂದಕ್ನಾಗಿ, ಕುತೂಹಲಕ್ಕಾಗಿ, ಸುಂದರ ದೃಶ್ಯಗಳಿಗಾಗಿ ಸಂಚರಿಸುವವನು ಎಂಬ ಅರ್ಥದಲ್ಲಿ ಬಳಕೆಗೊಂಡಿತು. ಆದರೆ ಈ ‘ Tourist’ ಎಂಬ ಮೂಲಪದ ಕ್ರಿಶ. 1292ದಷ್ಟು ಹಳೆಯದು. ಅದು ‘Tour’ ಎಂಬ ಪದದಿಂದ ಬಂದಿದೆ. ‘Tour’ ಪದವು ಲ್ಯಾಟಿನ್‌ನ ‘Tournus’ ಎಂಬುದರಿಂದ ಬಂದಿದೆ. ಇದರ ಅರ್ಥ ವೃತ್ತವೊಂದನ್ನು ವಿಮಿಸುವ ಸಾಮಗ್ರಿ ಅಥವಾ ಸುತ್ತುವವನ ಚಕ್ರ ಎಂದು. 17ನೆಯ ಶತಮಾನದ ಪೂರ್ವಾರ್ಥದಲ್ಲಿ ಈ ಪದವು ಮೊದಲಿಗೆ ಸ್ಥಳದಿಂದ ಸ್ಥಳಕ್ಕೆ ಸಂಚರಿಸುವುದು. ಒಂದು ಸಂಚಾರ, ಒಂದು ವಿಹಾರಯಾತ್ರೆ, ಒಂದು ದೇಶದ ಅಥವಾ ಪ್ರಾಂತ್ಯದ ಪ್ರಮುಖ ಭಾಗಗಳನ್ನು ಮುಟ್ಟುವ ಒಂದು ಬಳಸಾದ ಪ್ರಯಾಣ ಎಂದು ಬಳಸಲ್ಪಟ್ಟಿತು. ’19th Century Dictioary’ಯ Tourist ಪದಕ್ಕೆ ಕುತೂಹಲದಿಂದ ಪ್ರೇರಿತನಾದ ವ್ಯಕ್ತಿಯೋರ್ವನು ತನಗೆ ಮಾಡಲು ಬೇರೆ ಯಾವುದೂ ಕೆಲಸವಿಲ್ಲದ್ದರಿಂದ ಸುತ್ತಾಟದಿಂದ ಖುಷಿ ಹೊಂದಲು ಪ್ರವಾಸ ಕೈಗೊಂಡವನು’ ಎಂಬ ಅರ್ಥಮಾಡಿದೆ. ಒಟ್ಟಾರೆ ಶತಶತಮಾನಗಳ ಹಿಂದಿನಿಂದಲೂ ಮಾನವ ಜನಾಂಗ ಅಲೆಮಾರಿಗಳಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿಯೇ ಈ ಪದ ಹುಟ್ಟಿಕೊಂಡಿದೆಯೆಂದಾಯಿತು. ಪ್ರಾಚೀನ ಕಾಲದಿಂದಲೂ ಮನುಷ್ಯ ತನ್ನ ಹೊಟ್ಟೆಪಾಡಿಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸಿದ್ದು ಅನೇಕ ಮೂಲಗಳಿಂದ ತಿಳಿದು ಬರುತ್ತದೆ. ಅದೆಲ್ಲ ಪಯಣವೇ ಹೊರತು ಪ್ರವಾಸವಲ್ಲ. ಹಾಗೆಯೇ ಮುಂದುವರೆದಂತೆ ನಾಗರಿಕತೆ ಬೆಳೆದಂತೆ ಬುದ್ಧಿ ಬೆಳೆಯತೊಡಗಿದಂತೆ ಧಾರ್ಮಿಕದಲ್ಲಿ ನಂಬಿಕೆ ಇಟ್ಟವರು ತೀರ್ಥಯಾತ್ರಾರ್ಥಿಗಳಾಗತೊಡಗಿದರು. ಅರ್ಥಿಕದಲ್ಲಿ ನಂಬಿಕೆ ಇಟ್ಟವರು ಉದ್ಯಮಿಗಳಾಗ- ತೊಡಗಿದರು. ಬುದ್ಧಿ ಜೀವಿಗಳು ಜ್ಞಾನಾರ್ಜನೆಗಾಗಿ ಸಂಚರಿಸತೊಡಗಿದರೆ ಉತ್ಸಾಹಿ ಯುವಕರು ಹೊಸ ಹೊಸ ಸ್ಥಳಗಳ ಅನ್ವೇಷಣಾರ್ಥಿಗಳಾಗಿ ದೇಶವಿದೇಶಗಳ ತುಂಬೆಲ್ಲ ಸಂಚರಿಸತೊಡಗಿದರು.
ಸುಮಾರು ಆರು ಸಾವಿರ ವರ್ಷಗಳಷ್ಟು ಹಿಂದೆಯೇ ಸುಮೇರಿಯನ್ನರು ಬೆಬಿಲೋನಿಯನ್ನರು ವಾಣಿಜ್ಯ ವ್ಯವಹಾರದ ಮಹತ್ವವನ್ನು ಕಂಡುಕೊಂಡಿದ್ದರು. ವಾಣಿಜ್ಯ ವ್ಯವಹಾರಕ್ಕಾಗಿ ಸಾರಿಗೆಯ ವ್ಯವಸ್ಥೆಯನ್ನು ಮಾಡಿಕೊಂಡರು. ಹೀಗೆ
ಅಂದು ಆರಂಭವಾದ ವಾಣಿಜ್ಯ ಪ್ರವಾಸ ಮುಂದುವರೆದಂತೆ ಗುಂಪು ಗುಂಪುಗಳಾಗಿ ಗಡಿಗಳನ್ನು ದಾಟುತ್ತ ಸುತ್ತಾಡತೊಡಗಿದರು. ಸಮುದ್ರದ ಏರುಬ್ದರಗಳಿಗೂ ಹೆದರದ ತೆಪ್ಪಗಳ ಮುಖಾಂತರ ಸಾಹಸಮಾಡುತ್ತ ದೂರದೂರಕ್ಕೆ ಹೋಗುತ್ತ ಅಲ್ಲಲ್ಲಿಯ ದಂಡೆಗಳನ್ನು ತಲುಪುತ್ತಿದ್ದರು.
ಡಾ|| ಎಚ್.ಎಲ್. ನಾಗೇಗೌಡರ ‘ಪ್ರವಾಸಿ ಕಂಡ ಇಂಡಿಯಾ’ ಸಂಪುಟಗಳಲ್ಲಿ, 11, 12ನೆಯ ಶತಮಾನದವರೆಗೆ ಭಾರತಕ್ಕೆ ಬಂದ ಪ್ರವಾಸಿಗಳ ಸಾಂಸ್ಕೃತಿಕ ಕಥನ ಮಾಲೆಯಲ್ಲಿ ಗ್ರೀಕ್ ಮತ್ತು ಚೀನಾ ದೇಶದ ಯಾತ್ರಿಕರಿಂದ
ಕಥನ ಆರಂಭವಾಗುತ್ತದೆ. ಮೊದಲಿಗೆ ಹಿರೊಡೊಟಸ್ ಬರುತ್ತಾನೆ. 13ನೆಯ ಶತಮಾನದ ಕೊನೆಯ ದಶಕದಲ್ಲಿ ಚೈನಾಕ್ಕೆ ಹೋಗಿ ಹಿಂದಿರುಗುವ ಮಾರ್ಗದಲ್ಲಿ ಭಾರತಕ್ಕೆ ಭೇಟಿ ನೀಡಿದ ಯುರೋಪ ಪ್ರವಾಸಿ ಜಾನ್ ಅಫ್ ಮಾಂಟೆ ಕೊರ್ರಿನೋ ಹೆಸರು ಸಿಗುತ್ತದೆ. 14ನೆಯ ಶತಮಾನದಿಂದ 16ನೆಯೆ ಶತಮಾನದವರೆಗೆ ಮಾರ್ಕೊ ಪೋಲೋ. ಅಬ್ದುಲ್ ರಜಾಕ್, ಬಾರ್ಬೊಸಾ, ಸೀಜರ್, ಫ್ರೆಡರಿಕ್ ಮುಂತಾದವರು ಭಾರತಕ್ಕೆ ಬಂದು ದೇಶದ ಉದ್ದಗಲಕ್ಕೂ ಅಡ್ಡಾಡಿ, ಭೇಟಿಯಾದ ಆಯಾ ಪ್ರದೇಶಗಳ ಮಾಹಿತಿಗಳನ್ನು ಬರೆದಿಟ್ಟರುವುದಾಗಿ ತಿಳಿಯುತ್ತದೆ. ದಂಡಯಾತ್ರಿಯಾದ
ಅಲೆಕ್ಸಾಂಡರ್‌ನನ್ನು ಭಾರತ ಆಕರ್ಷಿಸಿದೆ. ಕ್ರಿಸ್ಠೋಫರ್ ಕೊಲಂಬಸ್‌ನಂತಹ ಸಾಹಸಿಗನು ಭಾರತಕ್ಕೆ ಹೊಸ ಮಾರ್ಗ ಕಂಡು ಹಿಡಿಯಲು ಹೊರಟವನು ಬೇರೊಂದು ಹೊಸ ಪ್ರಪಂಚವನ್ನು ಕಂಡು ಹಿಡಿದ. ಅದೇ ಈಗಿನ ವೆಸ್ಟ್
ಇಂಡೀಸ್. (ಸಂಪದ್ಭರಿತ ಭಾರತದ ಆಕರ್ಷಣೆಗೆ ಒಳಪಟ್ಟು ಪೋರ್ಚುಗೀಸರು ಚಿನ್ನ ಬೆಳ್ಳಿ ಮುತ್ತು ರತ್ನಗಳನ್ನು ದೋಚುತ್ತಿದ್ದರು. ಇದನ್ನು ಕಂಡು ಸ್ಪೇನಿನವರು ತಾವೂ ಭಾರತದಿಂದ ಸಂಪತ್ತು ತುಂಬಿಕೊಂಡು ಬರಬೇಕೆಂದು ಯೋಚಿಸಿ ಕ್ರಿಸ್ಟೋಫರ್ ಕೊಲಂಬಸ್‌ನನ್ನು ಕ್ರಿಶ. 1492ರಲ್ಲಿ ಕಳಿಸಿದ್ದರು. ಆ ವೇಳೇಗಾಗಲೇ ದಿಕ್ಸೂಚಿಯೆನ್ನು ಕಂಡು. ಹಿಡಿದಿದ್ದರೂ ಮೂರು ನಾಲ್ಕು ತಿಂಗಳು ಸಮುದ್ರಯಾನ ಮಾಡಿ ಸಾಕಷ್ಟು ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತ ಭಾರತ ತಲುಪಬೇಕಾದದನು ಎಲ್ಲಿಯೋ ತಲುಪಿದನು).
ಹೀಗೆ ಹೊಸ ಸ್ಥಳಗಳ ಅನ್ವೇಷಣೆಯಲ್ಲಿ, ಅಲ್ಲಿಯ ಸಂಪತ್ತು ವ್ಯಾಪಾರಗಳ ವಹಿವಾಟಿನ ಹಂಬಲದಲ್ಲಿ ಸಾಹಸಿ ಜನರು ತಂಡೋಪತಂಡವಾಗಿ ನೌಕೆಯನ್ನು ಹತ್ತಿಬಿಡುತ್ತಿದ್ದರು. ಇದೇ ಶತಮಾನದಲ್ಲಿ ಭಾರತಕ್ಕೆ ಬಂದ ಇತರ ಪ್ರವಾಸಿಗಳೆಂದರೆ ಫಾದರ್ ಥಾಮಸ್ ಸ್ಟಿವೆನ್ಸ್, ಆಂತೋನಿ, ನಿಕೋಲೆಸ್ ಮುಂತಾದವರು ಭಾರತದ ಬಗೆಗೆ ವಿವರವಾದ ಕಧನಗಳನ್ನು ಬರೆದಿದ್ದಾರೆ. ಹಾಗೆಯೇ ಹೆಸರಾಂತ ಪ್ರವಾಸಿಗಳಾದ ಹೊಡೊವಿಕೊ. ಸೆಬಾಸ್ಟಿನ್ ಮುಂತಾದರೂ ಭಾರತದ ಸಾಂಸ್ಕೃತಿಕ ಹಿನ್ನೆಲೆಯ ಪರಿಚಯವನ್ನು ಕೊಟ್ಟಿದ್ದಾರೆ.
17ನೆಯ ಶತಮಾನದ ಔರಂಗಜೇಬನ ಅಳ್ವಿಕೆಯಲ್ಲಿ ಬಂದಿದ್ದ ಇಟಲಿ ದೇಶದ ಪ್ರವಾಸಿಗ ‘ಮನೂಚಿ ‘ ಅಂದಿನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿ ವಿವರಗಳನ್ನು ತನ್ನ ಪ್ರವಾಸ ಕಥನದಲ್ಲಿ ಪರಿಚಯಿಸಿದ್ಧಾನೆ. 18ನೆಯ ಶತಮಾನದ ಅಂದರೆ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಬಾರತಕ್ಕೆ ಬಂದ ರಾಬರ್ಟ್‌ಕೂಕರ್, ಹೆನ್ರಿಲಾರ್ಡ್ ಜಾನ್ ಓವಿಂಗ್‌ಟನ್ ಮುಂತಾದ ಹತ್ತು ಪ್ರವಾಸಿಗರು ತಾವು ಕಂಡ ಇಂಡಿಯಾ ಬಗೆಗೆ ಬರೆದ ಪ್ರವಾಸ ಕಥನ ಬಂದಿದೆ. ಇನ್ನಷ್ಟು ವಿವರಗಳಿಗೆ ನಾಗೇಗೌಡರ ಪ್ರವಾಸಿ ಕಂಡ ಇಂಡಿಯಾ ಓದಬಹುದು.
ವ್ಯಾಪಾರದ ಅನ್ವೇಷಣೆ, ಹೊಸ ಸ್ಥಳಗಳ ಅನ್ವೇಷಣೆಗೆ ಸುತ್ತಾಡುತ್ತಿದ್ದ ಪ್ರವಾಸಿಗರ ಯೋಜನೆ ಒಂದು ಕಡೆಗಾದರೆ ಧರ್ಮದ ನೆಪದಲ್ಲಿ ತೀರ್ಥಕ್ಷೇತ್ರಗಳಿಗೆ ಪುಣ್ಯ ಕ್ಷೇತ್ರಗಳಿಗೆ ಪ್ರವಾಸಕ್ಕೆ ಹೋಗಿರುವವರ ಸಂಖ್ಯೆ ಇನ್ನೂ ಅಧಿಕವಾಗಿದೆ.
ಮಧ್ಯಕಾಲದ ಅಂತ್ಯದಲ್ಲಿ ಬಹುದೊಡ್ಡ ಪ್ರಮಾಣದ ಯಾತ್ರಾರ್ಥಿಗಳು ಯುರೋಪಿನ ಪ್ರಮುಖ ಚರ್ಚುಗಳಿಗೆ ಪ್ರವಾಸ ಕೈಕೊಂಡಿದ್ದರು. ಕ್ರಿಶ್ಚಿಯನ್ ಮತದ ಪ್ರಚಾರ ಹಾಗೂ ಅದಕ್ಕೆ ಮತಾಂತರಗೊಂಡವರಿಂದಾಗಿ ಧಾರ್ಮಿಕ ಪ್ರವಾಸ ರಂಗು ಪಡೆಯಿತು. ಧರ್ಮದ ಬಗೆಗೆ ಜನರಲ್ಲಿ ಗಾಢವಾದ ನಂಬುಗೆ ಇರುವುದರಿಂದಾಗಿ ಶತಶತಮಾನಗಳಿಂದಲೂ ಧಾರ್ಮಿಕ ಪ್ರವಾಸ ಸಾಗಿ ಬಂದಿದೆ. ಜನರನ್ನು ಒಂದುಗೂಡಿಸುವ ಪ್ರಬಲ ಶಕ್ತಿ ಧರ್ಮಕ್ಕಿದೆ. ಧಾರ್ಮಿಕ ಪ್ರಚಾರವು ಜನರಲ್ಲಿ ಧರ್ಮದ ಬಗೆಗೆ ಇರುವ ನಂಬಿಕೆಯನ್ನು ಇನ್ನಷ್ಟು ಬಲಗೊಳಿಸುತ್ತದೆ; ಕ್ರೈಸ್ತ ಧರ್ಮವು ಮೊದಲಿಗೆ ಯುರೋಪಿನಲ್ಲಿ ನಂತರ ಅಮೆರಿಕಾದಲ್ಲಿ, ಬೌದ್ಧ ಧರ್ಮ, ಇಸ್ಲಾಂ ಧರ್ಮ, ಹಿಂದೂ ಧರ್ಮಗಳು ರಷ್ಯಾದಲ್ಲಿ ಅವಕಾಶ ಪಡೆದು ಭಾಷೆ ಸಾಹಿತ್ಯ, ಸಂಗೀತ. ಕಲೆ, ವಾಸ್ತುಶಿಲ್ಪ ವೇದಾಂತ ಇವುಗಳನ್ನು ಅಭಿವೇದ್ಧಿ ಪಡಿಸುವ ಚಿರಸ್ಮರಣೀಯ ಕಾರ್ಯವನ್ನು ಮಾಡಿದವು. ಹೀಗೆ ಧರ್ಮವು ವಿಶ್ವದ ಜನತೆಯ ಬದುಕಿನಲ್ಲಿ ಮಹತ್ವದ ಪಾತ್ರವಮ್ನ ನಿರ್ವಹಿಸುತ್ತಿದ್ದು ಅದು ಪ್ರವಾಸದಲ್ಲಿಯೂ ನಿರ್ಣಾಯಕ ಪಾತ್ರವನ್ನು ಹೊರದಿದೆ ಎನ್ನುತ್ತಾರೆ ಎಸ್. ವಿದ್ಯಾಶಂಕರ.
ಒಂದು ಕಾಲಕ್ಕೆ ನಮ್ಮ ಪೂರ್ವಜರ ಪ್ರವಾಸದ ಕಾರಣಗಳು ಕೆಲವೇ ಕೆಲವು ಇದ್ದವು. ಪುಣ್ಯ ಕ್ಷೇತ್ರಗಳ ದರ್ಶನ ಅತೀ ಪ್ರಾಮುಖ್ಯತೆಯನ್ನು ಹೊಂದಿತ್ತು. ಪುಣ್ಯ ಪ್ರಾಪ್ತಿ ಹೊಂದುವುದೇ ಮುಖ್ಯ ಉದ್ದೇಶವಾಗಿತ್ತು. ನಂತರ ಧರ್ಮ ಪ್ರಚಾರಕ್ಕಾಗಿ, ರಾಜರುಗಳ ಆಡಳಿತ ಕಾಲದಲ್ಲಿ ದಿಗ್ವಿಜಯಕ್ಕಾಗಿ ಹೀಗೆ. ಆದರೆ 20ನೆಯ ಶತಮಾನದ ಪ್ರವಾಸ ಉದ್ದೇಶಗಳ ಪಟ್ಟಿ ಮಾಡುತ್ತ ಹೋದರೆ ಬೆಚ್ಚಿ ಬೀಳುವಂತಾಗುತ್ತದೆ. ಕೆಲವರು ಗೊತ್ತು ಗುರಿಯಿಲ್ಲಿದ ಅಲೆಮಾರಿ ಪ್ರವಾಸಿಗರನ್ನು ಕಾಣುತ್ತೇವೆ. ಇದೂ ಒಂದು ಅಮರ ವಿಚಿತ್ರ ಅನುಭವವೆಂದು ಹೇಳಬೇಕಾಗುತ್ತದೆ. (ಇದು ಶ್ರೀಮಂತ ವರ್ಗ, ಪಾಶ್ಚಾತ ದೇಶಗಳಲ್ಲಿಯ ವಿಚಿತ್ರ ಮನೋವೃತ್ತಿಯವರ ಹವ್ಯಾಸ ಎಂದು ಹೇಳಬೇಕಾಗುತ್ತದೆ.
ಹಿಂದೆ ಯಾರಾದರೂ ಕಾಶೀಯಾತ್ರೆಗೆ ಹೊರಡುತ್ತಾರೆ ಎಂದರೆ ಅವರು ವಯಸ್ಸಾದವರು ಜೀವನದ ಕೊನೆಯಪ ರ್ವದಲ್ಲಿ ಇದ್ದವರು ಎಂದು ಅರ್ಥವಾಗುತ್ತಿತ್ತು. ಅಂಥವರು ಯಾತ್ರೆಗೆ ಹೊರಟರೆ ಮನೆಯವರ ಸಂಬಂಧಿಕರ ಮನಸ್ಸುಗಳೆಲ್ಲಾ ತಳಮಳಗೊಳ್ಳುತ್ತಿದ್ದವು. ಒಳಗೊಳಗೇ ಕಣ್ಣೀರು ಹಾಕುತ್ತ ಅವರನ್ನು ಬೀಳ್ಕೊಡುತ್ತಿದ್ದರು. ಕಾರಣ ಆ ವ್ಯಕ್ತಿ ಸುರಕ್ಷಿತವಾಗಿ ಹಿಂತಿರುಗಿ ಬರುತ್ತಾನೆ ಎನ್ನುವ ಭರವಸೆ ಇರುತ್ತಿರಲಿಲ್ಲ. ಅಂದಿನ ರಸ್ತೆಗಳು, ಸಾರಿಗೆ ವ್ಯವಸ್ಥೆಗಳು, ಊಟ, ಉಳಿದುಕೊಳ್ಳುವ ಇತರ ಸೌಲಭ್ಯಗಳು, ತೊಂದರೆಗಳು ಚಿಂತೆಗೆ ಎಡೆ ಮಾಡಿಕೊಡುತ್ತಿದ್ದವು. ಇಷ್ಟಕ್ಕೂ ತೀರ್ಥಯಯಾತ್ರೆಗಳಿಗೆ ವೃದ್ಧರೇ ಹೋಗಬೇಕೆನ್ನುವ ಕಲ್ಪನೆ ಇತ್ತು. ಇಂದು ಆ ಎಲ್ಲ ಆತಂಕಗಳನ್ನು ದೂರ ಮಾಡಲು ಯಾವ ವಯಸ್ಸಿನವರೂ ಎಲ್ಲಿ ಬೇಕೆಂದಲ್ಲಿಗೆ ಅಡ್ಡಾಡಬಹುದಾಗಿದೆ. ಅದಕ್ಕೆ ಕಾರಣ ಅರಾಮವಾಗಿ ಹೋಗಿಬರಲು ಬನ್ಪು, ಕಾರು, ರೈಲು, ಹಡಗು, ವಿಮಾನ ಮುಂತಾದ ಆಧುನಿಕ ವಾಹನಗಳ ಸೌಕರ್ಯ. ಈ ಸೌಕರ್ಯಗಳಿಂದ ಇಂದು ಕೆಲವೇಗಂಟೆಗಳಲ್ಲಿ ಜಗತ್ತಿನ ಮೂಲೆ ಮೂಲೆ ತಲುಪುವಂತಾಗಿದೆ. ಜಗತ್ತು ಕಿರಿದಾಗಿ ಕಾಣಿಸುತ್ತಿದೆ.
ಇಂದು ಜಗತ್ತಿನಾದ್ಯಂತ ಪ್ರವಾಸಿಗರು ದೇಶ ವಿದೇಶಗಳನ್ನು. ನೋಡಲು ಕುತೂಹಲ ಬೆಳೆಸಿಕೊಳ್ಳುತ್ತಿದ್ದಾರೆ. ಇದರೊಳಗೆ ಅನೇಕ ಕಾರಣಗಳನ್ನು ಎದುರಿಗಿಟ್ಟುಕೊಂಡು ತಮ್ಮ ದೈಹಿಕ, ಅರ್ಥಿಕ, ಮಾನಸಿಕಗಳ ಹಿನ್ನೆಲೆಯಲ್ಲಿ
ಸುತ್ತಾಡುತ್ತಿದ್ಧಾರೆ. ಉದಾಹದಣೆಗೆ ವಿದ್ಯಾರ್ಥಿಗಳಾದರೆ ವಿದ್ಯಾಭ್ಯಾಸಕ್ಕೆ, ಉದ್ಯೋಗಿಗಳಾದರೆ ಉದ್ಯೋಗಕ್ಕೆ, ಸಂಬಂಧಿಗಳಿದ್ದರೆ ದೂರದೇಶದಲ್ಲಿರುವ ಮಗಳೋ ಸೋಸೆಯರದೋ ಹೆರಿಗೆಯ ಸಂದರ್ಭಕ್ಕೆ, ರೋಗಿಗಳಿದ್ದರೆ
ವಿಶ್ರಾಂತಿಗೆಂದು ವಿಹಾರಧಾಮಗಳಿಗೆ. ಹಣವಂತರಿದ್ದರೆ ಮನರಂಜನೆಗಾಗಿ, ಹೀಗೆ ಮುಂತಾದವುಗಳಿಗಾಗಿ ಎಂದು ಹೇಳಬಹುದು. ಪ್ರವಾಸದ ಅನೇಕ ಕಾರಣಗಳನ್ನು ನಾವು ಗುರುತಿಸುತ್ತಿದ್ದಂತೆಯೇ ಈಗ ರಾಷ್ಟ್ರ ಅಂತಾರಾಷ್ಟ್ರ ಮಟ್ಟದಲ್ಲಿ ಅದೊಂದು ದೊಡ್ಡ ಪ್ರವಾಸಿ ಜಾಲವೇ ಬೆಳೆಸಿ ಅದರಿಂದ ಕೋಟ್ಯಾಂತರ ಹಣಗಳಿಸುವ ಉದ್ಧಿಮೆದಾರರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆನ್ನುವುದು ಆಶ್ಚರ್ಯಪಡುವ ಸಂಗತಿಯೇ ಆಗಿದೆ.
‘ದೇಶ ನೋಡು, ಕೋಶ ಓದು’ ಎಂಬ ಗಾದೆ ಮಾತು ನಮ್ಮಲ್ಲಿ ಪ್ರಸಿದ್ಧವಾಗಿದೆ. ಹಾಗೆಯೇ ಹಕ್ಕಿಯಂತೆ ಹಾರಾಡಿ ಹುಲ್ಲೆಯಂತೆ ನಡೆದಾಡಿ, ಮೀನಿನಂತೆ ತೇಲಾಡಿ ಹೊರನೋಟ ಹೊರ ಜಗತ್ತನ್ನು ಕಾಣು, ಅನುಭವಿಸು, ಅನಂದಿಸು. ವಿಚಾರಿಸು, ವಿಮರ್ಶಿಸು. ತರ್ಕಿಸು ಎಂದೂ ಹೇಳಬಹುದು. ನಮ್ಮ ಪ್ರಾಚೀನ ಬಾರತೀಯ ಪಂಡಿತರಿಗೆ ಕೋಶ ಓದುವ ಬರೆಯುವ ಪ್ರೀತಿಯೇ ಹೆಚ್ಚಾಗಿತ್ತು. ಪ್ರವಾಸಿಸುವ ಅದನ್ನು ಬರೆಯುವ ಪ್ರವೃತ್ತಿ ಅವರಲ್ಲಿ ಅಷ್ಟಾಗಿ ಕಾಣಿಸಿಲ್ಲಿವಾದರೂ ಅಲ್ಲಿಲ್ಲಿ ರಾಜರ ಜೊತೆಗೆ ದಂಡಯಾತ್ರೆಗಳಿಗೆ ಹೋದಾಗಿನ ಕೆಲವು ನಿಸರ್ಗ ಅನುಭವಗಳನ್ನು ಕಾವ್ಯದಲ್ಲಿ ಹೇಳಿದ್ಧಾರೆ ಅಷ್ಟೆ.
ಕನ್ನಡದ ಆದಿಕವಿ ಪಂಪ ತನಗೆ ಆಶ್ರಯ ನೀಡಿದ ದೊರೆ ಅರಿಕೇಸರಿಯ ಜೊತೆಗೆ ಅನೇಕ ಕಡೆಗೆ ದಂಡಯಾತ್ರೆಗೆ ಹೋಗುತ್ತಿದ್ದ. ಅದು ಅಲ್ಲಲ್ಲಿ ಯುದ್ಧಯಾತ್ರೆ, ತೀರ್ಥಯಾತ್ರೆಯೂ ಅಗಿರುತ್ತಿತ್ತು. ಹೀಗೆಲ್ಲ ಸುತ್ತಾಡಿದಾಗ ಅದ ಕೆಲವು ಅನುಭಗಳನ್ನು ಕಾವ್ಯವಗಳಲ್ಲಿ ದಾಖಲಿಸಿದ್ದಾನೆ. (ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ) ಉದಾಹರಣೆಗೆ ಪಂಪ ಭಾರತದಲ್ಲಿ ಬಂದಿರುವ ಬನವಾಸಿಯ ವರ್ಣನೆ ಕನ್ನಡದಲ್ಲಿ ಪ್ರವಾಸ ಸಾಹಿತ್ಯಿದ ಮೊತ್ತಮೊದಲ ದಾಖಲೆ ಎನಿಸುತ್ತದೆ. ಪಂಪ ಬನವಾಸಿಯವನಲ್ಲ, ಅವನು ಉತ್ತರ ಕರ್ನಾಟಕದಲ್ಲಿ ಹುಟ್ಟಿದವನು, ಆಂಧ್ರಪ್ರದೇಶದಲ್ಲಿ ಇದ್ದವನು. ಅದರೆ ಅವನು ಯವವಾಗಲೋ ಒಮ್ಮೆ ಬನವಾಸಿ ಪ್ರಾಂತ್ಯಕ್ಕೆ ಹೋಗಿ ಅಲ್ಲಿಯ ಸೌಂದರ್ಯಕ್ಕೆ ಮನಸೋತು ಆ ಪದ್ಯಗಳನ್ನು ಬರೆದಿದ್ದಾನೆ. ಆಗ ವ್ಯಕ್ತಿ ನಿಷ್ಠವಾದಂಥ ಭಾವಗೀತೆ ಪ್ರಕಾರ ಇರಲಿಲ್ಲ
ತನ್ನ ಅನುಭವಗಳೇನಿದ್ದರೂ ಅವನ್ನು ವಸ್ತು ನಿಷ್ಠವಾದ ಮಹಾಕಾವ್ಯದಲ್ಲಿ ಮಾತ್ರ ಪ್ರಕಟ ಮಾಡುವುದು ಅವನಿಗೆ ಸಾಧ್ಯವಾಗಿತ್ತು ಅದ್ದರಿಂದ ಆ ಪದ್ಯಗಳನ್ನು ತನ್ನ ಭಾರತದಲ್ಲಿ ಸೇರಿಸಿದ್ದಾನೆ ಎನ್ನುತ್ತಾರೆ ಸಿ.ಪಿ.ಕೆ ಆದರೆ ಆ ಪ್ರವಾಸ ವಿವರಣೆ ಅಂದು ಒಂದು ಪ್ರಕಾರವಾಗಿ ದಾಖಲೆಯಾಗದ ಕಾರಣ ಅದನ್ನು ಪ್ರವಾಸ ಸಾಹಿತ್ಯದ ಗುಂಪಿಗೆ ಸೇರಿಸಿಕೊಳ್ಳುವಾಗ ಇನ್ನೂ ಯೋಚನೆ ಮಾಡಬೇಕಾಗಿದೆ. ಕಾರಣ ಪ್ರವಾಸ ಸಾಹಿತ್ಯವೆನ್ನುವುದು ಇತ್ತೀಚೆಗೆ ಗುರುತಿಸಿಕೊಂಡ ಅದರ ಗುಣ ಲಕ್ಷಣ; ಸ್ಥರೂಪ ವೈವಿಧ್ಯತೆಗಳನ್ನೊಳಗೂಡಿದ ಒಂದು ಪ್ರಕಾರವೆಂದು ತಿಳಿದುಕೊಂಡಿದ್ದೇವೆ.
‘ದೇಶ ನೋಡು’ ಅನ್ನುವ ಗಾದೆ ಮಾತು ಸುಮಾರು 18, 19, 20ನೆಯ ಶತಮಾನದ ಪ್ರವಾಸಿಗರಿಗೆ ಸರಿಹೊಂದುತ್ತದೆ. ಅಗಲೇ ದೇಶದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಅಷ್ಟೇ ಅಲ್ಲಿದೆ ದೇಶ ವಿದೇಶಗಳಿಗೆ ಹೋಗಿ ಬರುವ ಅನುಕೂಲತೆಗಳು ಹೆಚ್ಚಾಗತೊಡಗಿದ್ದವು. ತಾವು ಕಂಡದ್ದನ್ನು ತಮಗನಿಸಿದಂತೆ
ದಾಖಲಿಸುವ ಪ್ರವೃತ್ತಿಯೂ ಬೆಳೆಯತೊಡಗಿತು. ಪ್ರವಾಸ ಸಾಹಿತ್ಯ ರಚಿಸುವ ಪ್ರೇರಣೆ ಪಾಶ್ಚಾತ್ಯರಿಂದ ಬಂದುದು. ಪಾಶ್ಚಾತ್ಯ ಸಾಹಿತ್ಯದಲ್ಲಿರುವಷ್ಟು ಪ್ರವಾಸ ಸಾಹಿತ್ಯ ನಮ್ಮ ಕನ್ನಡದಲ್ಲಿ ಇಲ್ಲ ಎನ್ನುವ ಮಾತು ಹತ್ತು ಹದಿನೈದು ವರ್ಷಗಳ ಹಿಂದಷ್ಟೇ ಇತ್ತು. ಅದರೆ ಇಂದು ಅದೆಷ್ಟು ಹುಲುಸಾಗಿ ಬೆಳೆದಿದೆ ಎಂದರೆ ನಂಬಲಸಾಧ್ಯವಾಗಿದೆ. ಕನ್ನಡ ಪ್ರವಾಸ ಸಾಹಿತ್ಯವನ್ನು ಅದ್ಯಯನದ ಉದ್ದೇಶದಿಂದ ಪರಿಚಯ ಮಾಡಿಕೊಳ್ಳುವಾಗ ನಮಗೆ ಮೊದಲು ಸಿಗುವುದು 1890ರಲ್ಲಿ ಕರ್ಕಿ ವೆಂಕಟರಮಣ ಶಾಸ್ತ್ರಿಯವರು ರಚಿಸಿದ “ದಕ್ಷಿಣ ಭಾರತ ಯಾತ್ರೆ” ಎಂಬ ಪ್ರವಾಸ ಪಸ್ತಕ * ಇದನ್ನು ನಾವು ಗಮನದಲ್ಲಿ ಇಟ್ಟುಕೊಂಡು ನೋಡಿದರೆ ಪ್ರವಾಸ ಸಾಹಿತ್ಯೆಕ್ಕೆ ಈಗ ನೂರಇಪ್ಪತ್ತು ವರ್ಷಗಳಾಯಿತೆಂದು ಸಂತೋಷ ಸಂಭ್ರಮಪಡುವಂತಾಗುತ್ತದೆ.
ಅಂದಿನಿಂದ ಇಲ್ಲಿಯವರೆಗೆ ಪ್ರವಾಸ ಸಾಹಿತ್ಯದ ಪ್ರಯಾಣದಲ್ಲಿ ಕನ್ನಡದ ನಮ್ಮೆಲ್ಲ ಪ್ರವಾಸ ಸಾಹಿತಿಗಳು ನಮ್ಮ ದೇಶದ ಒಳನೋಟಗಳಿಂದ ಹಿಡಿದು ವಿಶ್ವದ ವೈವಿಧ್ಯತೆಗಳನ್ನೆಲ್ಲಾ ಕೃತಿಗಳಲ್ಲಿ ಸೆರೆ ಹಿಡಿದಿದ್ಧಾರೆ. ಈ ವರೆಗೆ ಭಾರತ ದೇಶ ಮತ್ತು ವಿದೇಶಗಳನ್ನೊಳಗೊಂಡಂತೆ 400ಕ್ಕೂ ಪ್ರವಾಸ ಕೃತಿಗಳು ಬಂದಿವೆ.
ಮೊದ ಮೊದಲು ಪ್ರವಾಸ ಎನ್ನುವುದು ನಮ್ಮಲ್ಲಿ “ಯಾತ್ರೆ” ಎನ್ನುವ ಅರ್ಥಕ್ಕೆ ಮಾತ್ರ ಸೀಮಿತವಾಗಿತ್ತು. ಅದೂ ತೀರ್ಥಯಾತ್ರೆಯೆಂದು ಪುಣ್ಯ ಕ್ಷೇತ್ರಗಳಿಗೆ ಹೋಗಿ ದೇವರ ದರ್ಷನ ಮಾಡಿಕೊಂಡು ಬಂದು ಬಿಟ್ಟರೆ ಪುಣ್ಯ ಬರುತ್ತದೆ
ಎಂಬ ನಂಬಿಕೆಗೆ ಮಹತ್ವ ಕೊಡುತ್ತ ಅಷ್ಟಕ್ಕೆ ಧನ್ಯತಾ ಭಾವನೆಯನ್ನು ಪಟ್ಟುಕೊಳ್ಳುತ್ತಿದ್ದರು. ಇದನ್ನು ಮೀರಿ ಆನಂದ, ಸುಖ, ಸಂತೋಷ ಪಡಲೆಂದು ಬೇರೆಡಗೆ ಹೋಗಬೇಕೆನ್ನುವ ಮನೋಭಾವನೆಯೇ ಇರಲಿಲ್ಲ. ಇನ್ನು ಭಾರತ
ದೇಶದಾಚೆಗೆ ಹೋಗಬೇಕೆನ್ನುವ ಕಲ್ಪನೆಯಂತೂ ದೂರವೇ ಉಳಿಯಿತು. ಆದರೂ ಇಂತಹ ಕೆಲವು ಸಂದರ್ಭಗಳಲ್ಲಿ ಸ್ವಲ್ಪ ಜ್ಞಾನ ಇದ್ದವರು ಸಮುದ್ರ ದಾಟಿ ಬೇರೆ ನೆಲೆಗೆ ಹೋಗಿ ಅಲ್ಲಿಯರೊಂದಿಗೆ ಬೆರೆತುಕೊಂಡಿದ್ಧಾರೆಂದರೆ ಅಥವಾ ಅಲ್ಲಿಯ ಭಾಷೆ. ಊಟ ತಿಂಡಿ ತಿನಿಸು. ಬಟ್ಟೆ ಬರೆ ಮುಂತಾದ ಸಂಸ್ಕೃತಿಗಳೊಂದಿಗೆ ಸಂಪರ್ಕಿಸಿದ್ದೇ ಆದರೆ ಅವರು ಅಪವಿತ್ರರಾಗಿ ಬಿಡುತ್ತಾರೆ ಎನ್ನುವ ಕಲ್ಪನೆಯೂ ಇತ್ತು. ಹೀಗಾಗಿ ವಿದೇಶಕ್ಕೆ ಹೋಗುವುದೇ ಅಪರಾಧವೆಂದಾಗುತ್ತಿತ್ತು. ಇಷ್ಟೆಲ್ಲ ಗೊತ್ತಿದ್ದೂ ವಿದೇಶಕ್ಕೆ ಯಾರಾದರೂ ಹೋಗಿ ಬಂದಿದ್ದಾರೆ ಎಂದಾದರೆ ಇಲ್ಲಿ ಅವರನ್ನು ಮನೆ ಒಳಗಡೆ ಸೇರಿಸುತ್ತಿರಲಿಲ್ಲ. ಆತ ಸಮುದ್ರ ದಾಟಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಬೇಕಾಗುತ್ತಿತ್ತು. ಅವನನ್ನು ಮತ್ತೆ ಶುದ್ದೀಕರಿಸಲು ಪೂಜೆ ಪುನಸ್ಕಾರ ಮಂತ್ರ ತಂತ್ರಗಳಿಗೆಲ್ಲ ಒಡ್ಡುತ್ತಿದ್ದರು.
ಸುಮಾರು 60-70ರ ದಶಕದ ನಂತರ ಎಲ್ಲ ಜನಸಾಮಾನ್ಯರ ಚಟುವಟಿಕೆಗಳಲ್ಲಿ ಒಂದಲ್ಲ ಒಂದು ರೀತಿಯಿಂದ ಸಾಕಷ್ಟು ಪರಿವರ್ತನೆಗಳಾಗ – ತೊಡಗಿದವೆಂದೇ ಹೇಳಬಹುದು. ಬೌದ್ಧಿಕ ವಿಕಾಸವೇ ಅವರವರ ಪ್ರಶ್ನೆ ಉತ್ತರಗಳ
ಹುಡುಕಾಟದ ಸ್ವರೂಪದಲ್ಲಿ ತೊಡಗಿಕೊಂಡಿತು. ಇಂತಹ ಅನೇಕ ಸಂದೇಶದಲ್ಲಿ ಕೆಲವು ಜನರಾದರೂ ಪ್ರವಾಸ ಮಾಡಬೇಕೆನ್ನುವ. ಅದರಿಂದ ಸಿಗುವ ಅನಂದ ಅನುಭವಗಳನ್ನು ಪಡೆಯಬೇಕೆನ್ನುವ ವಿಶಾಲ ಮನೋಧರ್ಮವನ್ನು
ಬೆಳೆಸಿಕೊಂಡರು. 90ರ ದಶಕದಲ್ಲಿಯಂತೂ ವಿದೇಶಗಳಿಗೆ ಪ್ರವಾಸಾರ್ಥಿಗಳಾಗಿ ಹೋಗಲು ಸಾವಿರಾರು ರೂಪಾಯಿಗಳು ಖರ್ಚುಮಾಡಿ ಅನುಮತಿ ಪತ್ರಕ್ಕಾಗಿ (ವೀಸಾ) ಆಯಾ ದೇಶಗಳ ರಾಯಭಾರಿ ಕಚೇರಿಗಳ ಮುಂದೆ ಉದ್ದನೆಯ ಸಾಲಿನಲ್ಲಿ ನಿಂತವರನ್ನು ಕಂಡೆವು. ಇದರಿಂದ ವಿದೇಶಗಳಿಗೆ ಹೋಗುವ ಕಲ್ಪನೆ ಅಂದಿನಕ್ಕಿಂತಲೂ ಇಂದು ಎಷ್ಟು ಬದಲಾವಣೆಯಾಗಿದೆ, ಎಷ್ಟು ಪರಿವರ್ತನೆಯಾಗುತ್ತಿದೆ ಎಂದು ಸ್ಪಷ್ಟವಾಗಿ ಕಂಡು ಬರುತ್ತದೆ. ಅಂದಿನ
ಸಂಪ್ರದಾಯಗಳನ್ನು ದಾಟಿ ಈಗ ವಿದೇಶಗಳಲ್ಲಿ ಅಧ್ಯಯನಕ್ಕೆಂದೋ, ಪ್ರವಾಸಕ್ಕೆಂದೋ ಸುತ್ತಾಡತೊಡಗಿದ್ದಾರೆ. ಕೆಲವೇ ಕೆಲವರು, ಸಾಹಿತ್ಯ ಪ್ರಿಯರು ಲೇಖಕರು ತಮಗಾದ ಅನೇಕ ಅನುಭವಗಳನ್ನು ಪ್ರಯೋಜನೆಗಳನ್ನು ಕೃತಿಗಳಲ್ಲಿ ದಾಖಲಿಸತೊಡಗಿದರು. ಸುತ್ತ ಮುತ್ತಲಿನ ಜಗತ್ತನ್ನು ಪರಿಚಯಿಸಿಕೊಡುತ್ತ ನಮ್ಮನ್ನು ಬೆರಗಾಗಿಸಿದರು.
ಪ್ರವಾಸ ಸಾಹಿತ್ಯದಿಂದ ಬೇರೆ ಬೇರೆ ದೇಶ ವಿದೇಶಗಳ ಸಂಸ್ಕೃತಿ ಪರಿಚಯ ಮಾಡಿಕೊಳ್ಳುವಾಗ ನಮಗೆ ಅಲ್ಲಿಯ ಇತಿಹಾಸ ಭೂಗೋಳಗಳ ಹಿನ್ನೆಲೆಗಳು ಅತೀ ಮಹತ್ಪದ್ದಾಗಿ ಇವುಗಳನ್ನು ತಿಳಿದುಕೊಳ್ಳುವಾಗ ಅಲ್ಲಿಯ ಜನರ
ಸಾಮಾಜಿಕ, ರಾಜಕೀಯ ಧಾರ್ಮಿಕ, ಆರ್ಥಿಕ, ಮುಂತಾದವುಗಳ ಸಂಸ್ಕೃತಿ ಸ್ಪಷ್ಟವಾಗಿ ಕಾಣುತ್ತವೆ. ಅವೆಲ್ಲಿದರ ಅಭ್ಯಾಸದಿಂದ ಇವುಗಳೊಳಗಿನ ಮಾನವ ಸ್ವಛಾವಗಳು, ಚಲನವಲನಗಳು, ಅವರ ನೂರಾರು ಸಂಸ್ಕೃತಿಗಳನ್ನು ತಿಳಿದುಕೊಳ್ಳುತ್ತೇವೆ. ಉದಾ: ದೇಶದ ಸ್ಥಿತಿಗತಿಗಳು, ಗ್ರಾಮ ಪಟ್ಟಣಗಳು, ಯುದ್ಧ ದಾಳಿಗಳು. ಮಹಾನ್ ವ್ಯಕ್ತಿಗಳು. ರಾಷ್ಟ್ರದ ಘನತೆ ಗಾಂಭೀರ್ಯ, ಸಾಹಿತ್ಯ, ಸಾಹಿತಿಗಳು, ಭಾಷೆ. ಸಂಗೀತ, ನೃತ್ಯ ಚಿತ್ರ ಕರಕುಶಲ ಕಲೆಗಳು, ಚಲನಚಿತ್ರ. ರಂಗಮಂದಿರ, ಕಲಾಕಾರರು, ವಾಸ್ತುಶಿಲ್ಪ, ವಸ್ತು ಸಂಗ್ರಹಾಲಯ, ಉದ್ದಿಮೆಗಳು, ಕಾರ್ಖಾನೆಗಳು, ಮಾರುಕಟ್ಟೆ, ಯೋಜನೆಗಳು ನ್ಯಾಯಾಂಗ. ಕಾನೂನು, ವಿಜ್ಞಾನ, ತಂತ್ರಜ್ಞಾನ ಮುಂತಾದವುಗಳನ್ನು ಗುರುತಿಸಿಕೊಳ್ಳುತ್ತೇವೆ. ಈ ಎಲ್ಲಿ ವಿಷಯಗಳನ್ನು ಓದಲು, ಪರಿಚಯಿಸಿಕೊಳ್ಳಲು, ನಮ್ಮ ಸಂಸ್ಕೃತಿಗಳೊಂದಿಗೆ ಸಮಕಾಲೀನದಲ್ಲಿ ಚರ್ಚಿಸಿಕೊಳ್ಳಲು ಸಹಾಯವಾಗುತ್ತವೆ. ಈ ಎಲ್ಲ ಅನುಭವಗಳಿಂದ ಪ್ರವಾಸ ಸಾಹಿತಿಗಳ ಮತ್ತು ಓದುಗರ ಜ್ಞಾನ ಪ್ರಪಂಚ ಶ್ರೀಮಂತವಾಗುತ್ತದೆ.
ಪ್ರವಾಸ ಸಾಹಿತ್ಯ ಓದುಗರನ್ನು ಜ್ಞಾನ ಪ್ರಪಂಚಕ್ಕೆ ಕರೆದೊಯ್ಯ ಬೇಕಾದರೆ ಮೊದಲು, ಪ್ರವಾಸ ಸಾಹಿತಿ ತನ್ನ ಸುತ್ತೆಲ್ಲದರ ವಾತಾವರಣಕ್ಕೆ ಸೂಕ್ಷ್ಮಯವಾಗಿ ಪ್ರಜ್ಞಾಪೂರ್ವಕವಾಗಿ ಹೊಂದಿಕೊಳ್ಳುತ್ತ ಹೋಗಬೇಕಾಗುತ್ತದೆ. ಆಯಾ ಪ್ರದೇಶದ ಎಲ್ಲ ವಿಷಯಗಳ ಬಗೆಗೆ ಮೊದಲೇ ಅಚ್ಚುಕಟ್ಬಾಗಿ ಓದಿ ತಿಳಿದುಕೊಂಡಿದ್ದರಂತೂ ಇನ್ನೂ ಒಳ್ಳೆಯದು. ಸಮಕ್ಷಮದ ಸಂದರ್ಭದಲ್ಲಿ ಅದನ್ನು ಗ್ರಹಿಸಿಕೊಂಡು ತನ್ನ ಮಾತುಗಳ ಮುಖಾಂತರ ಅಭಿವ್ಯಕ್ತಪಡಿಸುತ್ತ ಹೋಗಬಹುದು.
ಪ್ರವಾಸಕ್ಕೆ ಮನಸ್ಸು ಮಾಡಿದ ಮೇಲೆ ಇಂದು ನಾಳೆ ಎಂದು ಮುಹೋರ್ತವನ್ನು ಮುಂದೂಡುವುದು ಸರಿಯಲ್ಲವೆಂದು ಒಂದೆಡೆ ಪ್ರೊ. ತಿ.ನಂ.ಶ್ರೀ ಅವರು ಹೇಳಿದ್ದಾರೆ. ಪ್ರವಾಸಿಯಾಗಬೇಕೆನ್ನುವವನಿಗೆ ದೇಹಾರೋಗ್ಯಬೇಕು, ಉತ್ಸಾಹಬೇಕು ಇದೆಲ್ಲಿ ತಾರುಣ್ಯದಲ್ಲಿ ತುಂಬಿ ಕೊಂಡಿರುತ್ತದೆ. ವಯಸ್ಸು ಹೆಚ್ಚಿದ ಬಳಿಕ ಎರಡು ಮೈಲಿ ನಡೆಯುವಷ್ಟರಲ್ಲಿ ನಾಲ್ಕು ಕಡೆ ಕುಳಿತುಕೊಳ್ಳಬೇಕೆನಿಸುತ್ತದೆ. ಅದಕ್ಕೆ ಪ್ರವಾಸಕ್ಕೆ ಯೌವನದ ದಿನಗಳೇ
ಯೋಗ್ಯವೆನ್ನುತ್ತಾರೆ.
“ನೆರೆ ಕೆನ್ನೆಗೆ, ತೆರೆ ಗಲ್ಲಕೆ ಬಂದಡಸದ ಮುನ್ನ
ಕೀಳುಣಿಸಿನ ಏದುಸುರಿನ, ಚಳಿ ಸೆಕೆಗಳ ಚಿಂತೆ
ಮನವನಲ್ಲಾಡಿಸದ ಮುನ್ನ,
ತಗುಣಿ ಸೊಳ್ಳೆ ಗುಂಪು ಗದ್ದಲಗಳ ಭೀತಿ
ರಕ್ತವನಾರಿಸದ ಮುನ್ನ,
ಮೈಯ ಕೆಚ್ಚು, ಕಾಲ ಕಸವು, ಬಗೆಯ ಹುಮ್ಮಸು
ಬಪ್ಪವಳಿಯದ ಮುನ್ನ,
ಮುಪ್ಪಿನ ಭಾರ ಹೆಗಲೇರದ ಮುನ್ನ,
ಕಿವಿಗೊಡು ಓ ಪ್ರೇಕ್ಷಕ ರಸಿಕನೆ, ಪ್ರವಾಸದ ಕರೆಗೆ’
(ತೀ.ನಂ.ಶ್ರೀ ‘ನಂಟರು’ ಪ್ರಬಂದ ಸಂಕಲನದಲ್ಲಿ)
ಈವರೆಗೂ ಬಂದಂತಹ (1890-2009) ಪ್ರವಾಸ ಕೃತಿಗಳನ್ನು ಓದುತ್ತ ಹೋದರೆ ಅನೇಕ ಬಗೆಯ ವಿಂಗಡನೆಗಳು ಮಾಡಬಹುದೆಂದು ಕಂಡು ಬರುತ್ತವೆ. ಎಲ್ಲ ಪ್ರವಾಸ ಕೃತಿಗಳು ಗದ್ಯರೂಪದಲ್ಲಿದ್ದು ಕಥೆಯಂತೆ, ಕಾದಂಬರಿಯಂತೆ, ಅತ್ಮ ಕಥನದಂತೆ, ಪ್ರಬಂಧಗಳಂತೆ ಕಂಡು ಬರುತ್ತವೆ. ಕೆಲವು ದಿನಚರಿ ಲೇಖನಗಳಂತೆ, ಪತ್ರಗಳ ಮುಖಾಂತರ ತಮ್ಮವರಿಗೆ ತಮ್ಮ ಅನುಭವ ಹೇಳುವಂತೆ ಪ್ರವಾಸ ಪುಸ್ತಕಗಳು ಇವೆ. ಇಂತಹ ಅನೇಕ ಪ್ರಕಾರಗಳ ಪ್ರವಾಸ ಸಾಹಿತ್ಯವನ್ನು ದೇಶ, ವಿದೇಶಗಳ ಹಿನ್ನೆಲೆಯಲ್ಲಿ ಅಭ್ಯಾಸದ ಅನುಕೂಲಕ್ಕೆ ವಿದ್ಯಾಶಂಕರ ಅವರು-
1. ವಿಶ್ವ ಪರ್ಯಟನ ಸಾಹಿತ್ಯ
2. ಬಿಡಿ ಬಿಡಿ ದೇಶಗಳ ಪ್ರವಾಸ ಸಾಹಿತ್ಯ
3. ಭರತ ಖಂಡ ಪ್ರವಾಸ ಸಾಹಿತ್ಯ
4. ತೀರ್ಥಯಾತ್ರಾ ಸಾಹಿತ್ಯ
5. ಕರ್ನಾಟಕ ಪ್ರವಾಸ ಸಾಹಿತ್ಯ
6, ಅನುವಾದ ಪ್ರವಾಸ ಸಾಹಿತ್ಯ
ಎರಡು ಆರು ಬಗೆಗಳಲ್ಲಿ ವಿಂಗಡಿಸಿಕೊಳ್ಳುತ್ತಾರೆ. ವೈವಿಧ್ಯಮಯವಾದ ಬರವಣಿಗೆ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಬಂದಾಗಿನ ಅನುಭವಗಳು, ಆಸಕ್ತಿ, ಒಲವು, ನಿರೀಕ್ಷೆ ತಿಳಿವಳಿಕೆ ಇವುಗಳನ್ನು ಅನುಸರಿಸಿ ಅನುಭವ ವೈವಿಧ್ಯವಾಗುವುದರ ಬಗೆಗೆ ಅಧ್ಯಯನ ಮಾಡಲು ಸಾದ್ಯವಾಗುತ್ತದೆ ಎನ್ನುತ್ತಾರೆ.
20ನೆಯ ಶತಮಾನವ ಕೊನೆಯ ಎರಡು ದಶಕಗಳಲ್ಲಿ ನಾನಾ ಕಾರಣಗಳಿಂದ ಜನ ಸಾಮಾನ್ಯರು, ಸಾಹಿತಿಗಳು, ಕಲಾವಿದರು, ಶೈಕ್ಷಣಿಕ ಸಾಂಸ್ಕೃತಿ ಅಧ್ಯಯನಕಾರರು. ಅಂತಾರಾಷ್ಟ್ರೀಯಮಟ್ಟದಲ್ಲಿ ಅಹ್ವಾನಗಳನ್ನು ಕೊಟ್ಟು ಕರೆಸಿಕೊಳ್ಳುವ ಸಂಘ ಸಂಸ್ಥೆಗಳು, ಸಾಫ್ಟ್‌ವೇರ್ ಕಂಪನಿಗಳಿಂದ ವಿದೇಶಗಳಿಗೆ ಹೋಗಿ ಬರುವ ತರುಣ ಇಂಜಿನೀಯರುಗಳು, ಉನ್ನತ ಅಧ್ಯಯನಕ್ಕೆ ಹೋಗಿ ಬರುವ ವಿಧ್ಯಾಥಿಗಳು, ವೈದ್ಯಕೀಯ ಸಂಶೋಧನೆಗೆ ಹೋಗಿ ಅತ್ಯುನ್ನತ ಸಾಧನೆ ಮಾಡಿದ ಡಾಕ್ಟರುಗಳು, ಅಂತರಿಕ್ಷದಲ್ಲಿ ಹಾರಾಡಿದ ವಿಜ್ಞಾನಿಗಳು, ಹೀಗೆ ಬೇರೆ ಬೇರೆ ವೃತ್ತಿಯವರ ಉದ್ದನೆಯ ಪಟ್ಟಿ ಬೆಳೆಸುತ್ತ ಹೋದಂತೆ ಅವರಿಂದ ಅವರ ಅನುಭವಗಳ ಪ್ರವಾಸ ಲೇಖನಗಳು ಪ್ರವಾಸ ಕಥನಗಳು ಬಂದಿರುವುದು ಕಂಡು ಬರುತ್ತದೆ. ಇಂದಿನ ಜಾಗತೀಕದಣದ ಹಿನ್ನೆಲೆಯಲ್ಲಿ ಬರೆದ ಇತ್ತೀಚಿನ ಪ್ರವಾಸ ಕಥನಗಳನ್ನು ಓದುತ್ತಾ ತಿಳಿದುಕೊಳ್ಳುತ್ತಾ ಹೋದರೆ ಇನ್ನೊಂದು ಪಟ್ಟಿ ಮಾಡಬಹುದಾಗಿದೆ. ಒಂದೊಂದು ಪ್ರವಾಸ ಕಥನಗಳು ವಿಶಿಷ್ಟವಾಗಿವೆ. ಹೀಗಾದಾಗ ಇನ್ನಷ್ಟು ಭೇದಗಳಾಗುವುದು ಸಹಜ. ಹೀಗಾಗಿ ಇನೊಂದಿಷ್ಟು ರಕಾರಗಳನ್ನು ಇಲ್ಲಿ ಸೇರಿಸಿಕೊಳ್ಳಲಾಗಿದೆ.
1. ತೀರ್ಥಯಾತ್ರಾ ಪ್ರವಾಸ ಸಾಹಿತ್ಯ
2. ಸಾಂಸ್ಕೃತಿಕ ಪ್ರವಾಸ ಸಾಹಿತ್ಯ
3. ಶೈಕ್ಷಣಿಕ ಪ್ರವಾಸ ಸಾಹಿತ್ಯ
4. ವ್ಯಾವಹಾರಿಕ ಸಾಹಿತ
5. ಅಲೆಮಾರಿ ಪ್ರವಾಸ ಸಾಹಿತ್ಯ
6. ಆಹ್ವಾನಿತ ಪ್ರವಾಸ ಸಾಹಿತ್ಯ
7. ಅನುವಾದಿತ ಪ್ರವಾಸ ಸಾಹಿತ್ಯ
8. ಸಾಹಸಯುಕ್ತ ಪ್ರವಾಸ ಸಾಹಿತ್ಯ
9. ಬ್ರಾಮಕ ಪ್ರವಾಸ ಸಾಹಿತ್ಯ
10. ಸಂಗ್ರಹ ಪ್ರವಾಸ ಸಾಹಿತ್ಯ *
* ಹತ್ತಾರು ಪ್ರವಾಸ ಪುಸ್ತಕಗಳನ್ನು ಓದಿ ಲೇಖಕನೊಬ್ದ ತಾನೇ ಹೋಗಿ ಬಂದಂತೆ ಬರೆದಿರುವುದು.
ಹೀಗೆ ಇಪ್ಪತ್ತನೆಯ ಶತಮಾನದ ಪ್ರವಾಸ ಸಾಹಿತ್ಯದ ಉದ್ದಗಲ, ಆಳ, ಎತ್ತರ ಸಾಕಷ್ಟು ಪ್ರತಿಯೊಬ್ಬ ಲೇಖಕರ ವೈವಿದ್ಯಮಯ ಅನುಭವಗಳ ದಾಖಲೆಗಳು ರಾಶಿ ರಾಶಿಯವಗಿ ಸಿಗುತ್ತವೆ. ಇತ್ತೀಚಿಗಂತೂ ಕೆಲವರು ಪುಸ್ತಕ ಪ್ರಕಟ ಮಾಡುವ ಗೋಜಿಗೆ ಹೋಗದೆ ಕಂಪ್ಯೂಟರ್‌ನಲ್ಲಿ ತಮ್ಮ ಅನುಭವಗಳನ್ನೆಲ್ದಾ ತುಂಬಿಸಿ ಯಾರು ಬೇಕಾದರೂ ಓದಲು ಅನುಕೂಲವಾಗುವಂತೆ ಫ್ಲಾಪಿ (ಡಿಸ್ಕ್)ಗಳಲ್ಲಿ ಇಟ್ಟುಬಿಡುತ್ತಾರೆ. ಇದು ಒಂದು ತರಹದ ಹೊಸ ಅನುಭವದ ಓದು.
ಪ್ರವಾಸ ಸಾಹಿತ್ಯ ಅದು ಪ್ರಬಂದ. ಲೇಖನ, ಪತ್ರ ದಿನಚರಿ ಯಾವುದೇ ರೂಪದಲ್ಲಿದ್ದರೂ ಅದರಲ್ಲಿ ಕೆಲವು ಸಾಮಾನ್ಯ ಲಕ್ಷಣಗಳಿರುವುದು ತಾರಾನಾಥರು ಗುರುತಿಸಿದ್ಧಾರೆ.
1. ಪ್ರವಾಸ ಕಥನಗಳಲ್ಲಿ ಕೃತಿಯುದ್ದಕ್ಕೂ ಪ್ರಧಾನವಾಗಿ ನಿರೂಪಣ ಶೈಲಿ ಇರುತ್ತದೆ. ಸಂಭಾಷಣಾ ಶೈಲಿಯಾಗಲಿ, ಪದ್ಯ ವಿಧಾನ ಕ್ರಮವಾಗಲಿ ಅಥವಾ ನಾಟಕಗಳಲ್ಲಿ ಕಂಡುಬರುವ ಅಂಕ ದೃಶ್ಯಗಳ ರಚನೆಯ ಚೌಕಟ್ಬಾಗಲಿ ಇಲ್ಲಿ ಕಾಣುವುದಿಲ್ಲ. ಸಂಭಾಷಣೆ ಪದ್ಯಗಳು ಕೃತಿಯ ಒಡಲಲ್ಲಿ ಅಲ್ಲೋ ಇಲ್ಲೋ ಇರಬಹುದು. ಆದರೆ ಪೂರ್ಣಕೃತಿ ಈ ಬಗೆಯಲ್ಲಿರುವುದಿಲ್ಲ. ಪ್ರವಾಸ ಕಥನಗಳಲ್ಲಿ ಒಟ್ಟಾರೆ ನಮಗೆ ಕಂಡು ಬರುವುದು ನಿರೂಪಣಾ ಕ್ರಮ.
2. ನಾನು ಎನ್ನುವ ಆತ್ಮ ವೃತ್ತಾಂತ ನಿರೂಪಣೆಯ ಕ್ರಮ ಇಲ್ಲವೇ ದ್ದನಿ. ಪ್ರವಾಸ ಕಥನದುದ್ದಕ್ಕೂ ಹರಿದಿರುತ್ತದೆ, ಪ್ರವಾಸ ಕದನದ ಉಸಿರಾಟಕ್ಕೆ ಈ ನಿರಂತರ ಶೃತಿಯೇ ಕಾರಣ. ಲೇಖಕ ತಾನು ಪ್ರವಾಸಿಯಾಗಿದ್ದನ್ನು ನೆನೆಪಿಸಿಕೊಂಡು ಸಂಗತಿಯನ್ನು ಅಥವಾ ವಿಷಯವನ್ನು ವರ್ಣಿಸಲು ಆರಂಭಿಸುತ್ತಾನೆ. ನಾನು ಹೋದೆ, ನನಗೆ ಈ ಅನುಭವವಾಯಿತು, ನಾನು ಇದನ್ನು ನೋಡಿದೆ, ನಾನು ಅಲ್ಲಿ ಓಡಾಡಿದೆ, ನನಗೆ ಹೀಗೆ ಕಂಡಿತು, ನಾನು ವೀಸಾ ಪಾಸ್‌ಪೋರ್ಟ್ ಕಳೆದುಕೊಂಡೆ, ಈ ನಾನು ನಾನು. ನಾನು ಎನ್ನುವ ದನಿ ಪ್ರವಾಸ ಸಾಹಿತ್ಯದಲ್ಲಿ ಎದ್ದು ಕಾಣುವ ಮಾತು.
3. ಒಬ್ದ ವ್ಯಕ್ತಿ ತಾನಿದ್ದ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ಹೋಗಿ ನಿಶ್ಚಿತ ಅವಧಿಯವರೆಗೂ ಅಲ್ಲಿದ್ದು ಮತ್ತೆ ತಾನಿದ್ದ ಸ್ಥಳಕ್ಕೆ ವಾಪಸ್ಸು ಬರುತ್ತಾನೆ. ವಾಪಸ್ಸು ಬರುವವರೆಗೂ ಆ ನಿಶ್ಚಿತ ಅವಧಿಯಲ್ಲಿ ಅವನಿಗಾಗುವ ಎಲ್ಲ ಬಗೆಯ ಪರಸ್ಥಳಾನುಭವಗಳಳೂ ಪ್ರವಾಸ ಕಥನದ ವಸ್ತು ದ್ರವ್ಯವಾಗುತ್ತದೆ. ಇದು ಪ್ರವಾಸ ಕಥನದ ಮುಖ್ಯ ಲಕ್ಷಣ. ಪ್ರವಾಸ ಕಥನದಲ್ಲಿ ಒಂದು ನಿರ್ದಿಷ್ಟವಾದ ಪ್ರದೇಶ ನಿರ್ದಿಷ್ಟವಾದ ಕಾಲ ಮತ್ತು ನಿರ್ದಿಷ್ಟವಾದ ವಿವರಗಳಿರುತ್ತವೆ. ಅದನ್ನು ಪ್ರವಾಸ ಕಥಾನಕನೇನೂ ಸೃಷ್ಟಿಸಬೇಕಾಗಿಲ್ಲ. ತಾನು ಕಂಡದ್ದನ್ನು ಅಕರ್ಷಕವಾಗಿ ಹೇಳಿದರೆ ಸಾಕು. ಪ್ರವಾಸ ಕಥನದಲ್ಲಿ ಎಲ್ಲಿಯೂ ಲೇಖಕನ ಕಲ್ಪನೆ ಅರಳುವುದಿಲ್ಪ. ಅದರಲ್ಲಿ ಉದ್ದಕ್ಕೂ ಆತನ ವರ್ಣನೆ ಕಲೆ-ನಿರೂಪಣಾ ವೈಖರಿ ಮಾತ್ರ ಎದ್ದು ಕಾಣುತ್ತದೆ ಎನ್ನುತ್ತಾರೆ ತಾರಾನಾಥರು.
ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಅದರ ಬಗೆಗೆ ಚರ್ಚೆಗಳು, ಅದ್ಯಯನಗಳು ನಡೆದುದು ಕಡಿಮೆ. ಬೆರಳೆಣಿಕೆಯ ಲೇಖಕರು ಅಲ್ಲಲ್ಲಿ ಒಂದಿಚ್ಚು ಚರ್ಚಿಸಿದ್ದು ಬಿಟ್ಟರೆ ಹೆಚ್ಹಿನದೇನೂ ಸಾದನೆಯಾಗಿಲ್ಲ.
ಗ್ರಂಥ ಸೂಚಿ
1. ಡಾ. ಎಸ್.ವಿದ್ಯಾಶಂಕರ : ಪ್ರವಾಸೋದ್ಯಮ ಹಾಗೂ ಕನ್ನಡದಲ್ಲಿ ಪ್ರವಾಸ
ಸಾಹಿತ್ಯ, ಸ್ನೇಹಾ ಪ್ರಕಾಶನ 1991.
2. ಎಚ್,ಎಲ್.ನಾಗೇಗೌಡ – ಪ್ರವಾಸಿ ಕಂಡ ಇಂಡಿಯಾ ಸಂಪುಟಗಳು.
3. ಸಿ.ಪಿ.ಕೆ. : ಮಲ್ಲೇಪುರಂ ವೆಂಕಟೇಶ – ಪ್ರವಾಸ ಸಾಹಿತ್ಯ
4. ಎನ್.ಎಸ್.ತಾರಾನಾಥ: ಪ್ರವಾಸ ಸಾಹಿತ್ಯ – ಶಕ್ತಿ ಪ್ರಕಾಶನ
* ಈ ಕೃತಿ ನೋಡಲು ಲಭಿಸಿಲ್ಲ, ಭಾರತೀಯ ಛಾಪಖಾನೆ, ಮುಂಬಯಿ 1890 ಎಂಬಷ್ಟು ವಿವರ ಮಾತ್ರ ಲಭಿಸಿತು ಎಂದು ಡಾ. ಕೆ.ಅನಂತರಾಮು ಹೇಳಿದ್ದಾರೆ. ಹಾಗೆಯೇ ವೆಂಕಟರಮಣ ಶಾಸ್ತ್ರಗಳು ಉಡುಪಿಯಿಂದ ಗುರುವಾಯೂರೂಗಳ ವರೆಗಿನ ಕ್ಷೇತ್ರಗಳನ್ನು ಒಂದೋ ಎರಡೋ ಪದ್ಯಗಳಲ್ಲಿ ವರ್ಣಿಸಿದ್ದಾನೆಂದು ಮೂವತ್ತೇಳು ಪದ್ಯಗಳ ಅಂಗೈಯಗಲದ ಪುಸ್ತಕವೆಂದೂ ಶ್ರೀನಿವಾಸ್ ಹಾವನೂರು ಅವರು ‘ಹೊಸಗನ್ನಡ ಅರುಣೋದಯ’ ಮೈಸೂರು ವಿಶ್ವವಿದ್ಯಾನಿಲಯ 1974ರಲ್ಲಿ ತಿಳಿಸಿದ್ದಾರೆ.