ತಾಯ್ನಾಡಿಗೆ ಮರಳಿ ಬಂದು ಈಗ 4 ವರ್ಷಗಳುರುಳಿವೆ. ಬೆಳಗಾವಿಯ ಪ್ರಶಾಂತ ‘ಭಾಗ್ಯನಗರ’ದಲ್ಲಿ ನಾವು ಕಟ್ಟಿರುವ ಬೆಚ್ಚನೆಯ ಮನೆಯಲ್ಲಿ ಕುಳಿತು ದೂರ ಪ್ರಾಚ್ಯದಲ್ಲಿರುವ ಪತಿಯನ್ನು, ಸ್ನೇಹ ಸೇತುವೆಯನ್ನು ಕಟ್ಟಿ ಕೊಟ್ಟಿದ್ದ ಸ್ನೇಹಿತರನ್ನು ನೆನೆಯುತ್ತಾ ಮುದ್ದು ಮಕ್ಕಳ ಬೆಳವಣಿಗೆಯತ್ತ ಗಮನನೀಯುವುದರಲ್ಲಿ ಹೊತ್ತು ಸರಿದದ್ದೇ ಅಷ್ಟಾಗಿ ತಿಳಿಯುವುದಿಲ್ಡ.
ನೆನಪಿನಂಗಳದಲ್ಲಿ ಮತ್ತೆ ಮತ್ತೆ ವ್ಯಕ್ತಿಗಳು, ಘಟನೆಗಳು, ದೃಶ್ಯಗಳು ಪ್ರತ್ಯಕ್ಷವಾಗಿ ಅದೃಶ್ಯವಾಗುತ್ತಲಿವೆ.
ಬೆಳಗಾಂ, ಧಾರವಾಡ, ಇಷ್ಟೇ ಗೊತ್ತಿದ್ದವಳನ್ನು ವಿವಾಹ ಬಂಧನ ಮುಂಬಯಿ ಮಹಾನಗರಕ್ಕೆ ಒಯ್ದಿತು. ‘ದೂರದ ಊರು, ತುಂಬಾ ಗದ್ದಲವಂತೆ, ಹೇಗೋ ಏನೋ’ ಎಂದು ಗಾಬರಿಯಾಗಿತ್ತು ನನಗೂ ನನ್ನ ತಂದೆ ತಾಯಿಗಳಿಗು,
ಅಲ್ಲಿ ನಾನು ಸೇರಿದ ಎರಡು ತಿಂಗಳೊಳಗೇ ‘ಇದೇಸ್ವರ್ಗ, ಇದೇ ಸುಖ, ಇಷ್ಟೇ ಸಾಕು ಬದುಕಿಗೆ’ ಎನ್ನಿಸತೊಡಗಿತ್ತು. ಇದಕ್ಕೆ ಕಾರಣ ಮುಂಬಯಿಯಲ್ಲ, ನನ್ನ ಪತಿ. ಸಹಭಾಗಿನಿಯ ಭಾವನೆಗಳಿಗೆ ಬೆಲೆಕೊಡುತ್ತ ಇದ್ಧಾಗ ಯಾವ ಹೆಣ್ಣಿಗೆ ತಾನೆ ಬೇರೆ ಸ್ವರ್ಗ ಬೇಕೆನಿಸೀತು?
ಆದರೆ ಸಾಹಸೀ ಪ್ರವೃತ್ತಿಯ ಶ್ರೀ ಗುತ್ತಿ ಅವರಿಗೂ ಈ ಅಲ್ಫ ತೃಪ್ತಿಗೂ ಬಲುದೂರ. ಏನಾದರೂ ಸಾಧಿಸಬೇಕು, ದೊಡ್ಡ ಕೆಲಸಗಳಲ್ಲಿ ಪಾಲ್ಗೊಳ್ಳಬೇಕು., ಹಣವಷ್ಟು ಚೆನ್ನಾಗಿ ದುಡಿಸಬೇಕು, ಹೊಸ ಹೊಸದನ್ನು ನೋಡಬೇಕು’ ಇಂಥ
ಹಂಬಲಗಳು ಇವರಿಗೆ. ನನಗಂತೂ ಇಂಥ ಯೋಜನೆಗಳಿಂದಲೇ ಹೆದರಿಕೆಯಾಗುತ್ತಿತ್ತು.
ಹೊಸ ಅವಕಾಶಗಳನ್ನು ಅನ್ವೇಷಿಸಿ ಹೊರಡುವ ಇವರ ಪ್ರವೃತ್ತಿ ಮಧ್ಯಪ್ರಾಚ್ಯಕ್ಕೆ ನಮ್ಮನ್ನು ಕರದೊಯ್ದಿತು. ಹೊರದೇಶಕ್ಕೆ ಹೋಗುತ್ತೇನೆನ್ನುವ ಖುಷಿ ಗಿಂತ ಭಯವೇ ಹೆಚ್ಚಾಗಿತ್ತು ನನ್ನಲ್ಲಿ. ಅದಕ್ಕೆ ಕಾರಣ ನಾವು ಹೋಗುತ್ತಿರುವುದು ಇಂಗ್ಲೇಂಡು ಅಮೇರಿಕಾದಂಥ ಅಚ್ಚುಕಟ್ಬಾದ ನಗರಗಳಿಗಲ್ಲ, ಅರಬ್ಬರ ಬೀಡಿಗೆ ಎಂಬ
ಸಂಗತಿ. ಅದರಲ್ಲೂ ಒಂದು ವರುಷ ಅವರೊಬ್ಬರೇ ಅಲ್ಲಿರಬೇಕು, ಬಳಿಕ ನಾನು ಹೋಗಬೇಕು ಎಂಬುದಂತೂ ನನ್ನ ಭಯ, ನೋವನ್ನು ಇನ್ನಷ್ಟು ಹೆಚ್ಚಿಸಿತ್ತು.
ಅರಬರು ಕ್ರೂರಿಗಳು, ಅಲ್ಲಿ ಹೋದವರಿಗೆ ಸ್ವಾತಂತ್ರವಿರುವುದಿಲ್ಲ, ಅಲ್ಲಿ ಮರುಳುಗಾಡಿನ ಬಿರುಬಿಸಿಲಿನ ಹೊರತು ತಂಪಾದ ಹಸಿರು ನೋಡಲೂ ಸಿಕ್ಕುವುದಿಲ್ಲ, ನೀರಿಗೆ ಬರಗಾಲ, ದಿನಕಳೆಯುವುದೇ ಕಷ್ಟ ಇತ್ಯಾದಿ ಎಲ್ಲ ಅಂದುಕೊಂಡಿದ್ದ ನಾನು ಅದೇ ಆತಂಕ ಹೊತ್ತೇ ವಿಮಾನವೇರಿದ್ದೆ. ಅಲ್ಲಿ ಇಳಿದ. ಹತ್ತು ವರ್ಷ ಕಳೆದು ಮರಳಿ ಬಂದೆ.
ಈ ಹದಿನೈದು ವರ್ಷಗಳು ನನಗೆ ಮರುಭೂಮಿಯ ವರ್ಷಗಳಾಲೇ ಇಲ್ಲ. ನಿತ್ಯ ಹರಿದ್ವರ್ಣದ ನಂದನವಾಗಿ ಬಿಟ್ಟಿತು. ಆಗ ಎಷ್ಟೊಂದು ಬಾಲಿಶವಾಗಿ ಯೋಚನೆ ಮಾಡುತ್ತಿದ್ದೆ ಎಂಬುದು ಅನಂತರದಲ್ಲಿ ನನಗೆ ಅರಿವಾಯಿತು. ಬದುಕು ಎಂದರೆ ಹೀಗೆಯೇ ಅನಿಸುತ್ತದೆ ಈಗ. ವಾಸ್ತವವಾಗಿ ಸಮಸ್ಯೆ ಅಲ್ಲದದ್ದನ್ನು ಅಥವಾ ಸಣ್ಣ ಸಮಸ್ತೆಯನ್ನು ದೊಡ್ಡ ಸಮಸ್ಯೆಯಾಗಿ ಕಲ್ಪಿಸಿಕೊಳ್ಳುತ್ತೇವೆ. ಅದರ ಭೂತಾಕೃತಿಗಳು ಮನದೆದುರು ತರದುಕೊಳ್ಳುತ್ತಾ ಭಯಗೊಳ್ಳುತ್ತೇವೆ. ಆ ದಿನಗಳನ್ನು ದಾಟುವುದೇ ಎಂದು ಅಂದುಕೊಳ್ಳುತ್ತೇವೆ. ಇದರಿಂದ ದಿಗಿಲು ಹೆಚ್ಚುತ್ತದೆ. ಮನಃಸ್ಥೈರ್ಯದಿಂದ
ಸುಲಭ ಪರಿಹಾರ ದೊರೆಯಬಹುದಾದದ್ಧಕ್ಕೂ ಈ ಆತಂಕದಿಂದ ಪರಿಹಾರ ಲಭ್ಯವಾಗುತ್ತದೆ. ಜನ ಮತಿಗೆಟ್ಟು ಮನೆ ಬಿಟ್ಟು ಓಡಿಹೋಗುವ ಅಥವಾ ಅತ್ಮಹತ್ಯೆ ಮಾಡಿಕೊಳ್ಳುವುದರ ಹಿಂದೆ ಇಂಥ ಆತಂಕವೇ ಕೆಲಸ ಮಾಡುತ್ತಧೆ. ‘ಬಂದದ್ದೆಲ್ಲಾ ಬರಲಿ. ಗೋದಿಂದನ ದಯೆಯಿರಲಿ’ ಎಂಬ ನಿರಾಳ ಮನದವನಿಗೆ ಈ ಆತಂಕ ಇರುವುದಿಲ್ಲ’. ಈ ತತ್ವ ನನ್ನ ಅನುಭವಕ್ಕೆ ಬಂದದ್ದು ಸೌದಿಯಲ್ಲಿಯೇ.
ಸೌದಿಯಲ್ಲಿನ ನನ್ನ ಬದುಕಿನ ವರ್ಷಗಳು ನನ್ನ ಪ್ರಪಂಚವನ್ನು ಸಂಪರ್ಕವನ್ನು ಬಹಳಷ್ಟು ವಿಸ್ತರಿಸಿದವು. ಬ್ರಿಟನ್, ಜರ್ಮನಿ, ಅಮೇರಿಕ್, ಪಾಕಿಸ್ತಾನ ಇತ್ಯಾದಿ ಹಲವು ದೇಶಗಳ ಜನರ ಪರಿಚಯ ನನಗಾಯಿತು. ಈ ನಡುವೆ ಯುರೋಪಿನ ಬಹಳಷ್ಟು ದೇಶಗಳನ್ನು ನನ್ನವರೊಡನೆ ಸುತ್ತಾಡಿದೆ. ಮಳೆಗಾಲದಲ್ಲಿ ನನ್ನೂರಿನ ಕೆರೆ ತುಂಬಿದ್ದನ್ನು ಕಂಡು ಅಲ್ಲಿ ಕಾಲಿಡಲೂ ಹೆದರುತ್ತಿದ್ಧವಳು ಕೆಂಪು ಸಮುದ್ರದಲ್ಲಿ ಮುಳುಗಿ ತಕ್ಕಮಟ್ಟಗೆ ಈಜಾಡಿದೆ. ನೆಲದ ಮೇಲಿನ ಹಾಗೂ ನೀರೊಳಗಿನ ಎರಡೂ ಜಗತ್ತುಗಳನ್ನು ತಕ್ಕಮಟ್ಟಗೆ ಕಂಡೆ. ಈ ಜೀವಿ ಪ್ರಕೃತಿ ವೈವಿಧ್ಯ ನನ್ನನ್ನು ಬೆರಗಾಗಿಸಿದೆ. ಪ್ರಾಕೃತಿಕ ಭಿನ್ನತೆಗಳಷ್ಟೊಂದು, ಇಲ್ಲಿನ ಜೀವನ ಶೈಲಿಗಳೆಷ್ಟೊಂದು! ನಾರ್ವೆ ಸ್ವಿರ್ಸ್ಜಲ್ಯಾಂಡ್‌ಗಳ ಮನೋರಮಣೀಯತೆ ಎಲ್ಲಿ, ಅರೇಬಿಯಾದ ಸಾಗರ ಸಮಾನವಾದ ಮರುಭೂಮಿಯ ಶುಷ್ಕತೆ ಎಲ್ಲಿ! ಎತ್ತಣಿಂದೆತ್ತಣ ಸಂಬಂಧ? ಆದರೂ ಬದುಕು ಇದಕ್ಕೆಲ್ಲ ಸಂಬಂಧ ಕಲ್ಪಿಸಿಯೇ ಬಿಡುತ್ತದೆ.
ಬದುಕು-ಕಂಡು ಕೇಳದ ಜನಗಳ ನಡುವೆಯೂ ಕೊಂಡಿ ಬೆಸೆಯುತ್ತದೆ. ಎಂಥೆಂಥಾ ಮನುಷ್ಯ ಸ್ವಭಾವಗಳು! ತನ್ನ ಪ್ರತಿ ಸಂತೋಷವನ್ನೂ ಅದ್ದೂರಿಯಾಗಿ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದ ಪಂಜಾಬದ ಭೂಪಿಂದರ್ ಕೌರ, ವಿದೇಶದಲ್ಲಿದ್ದೂ ತಾವು ಕಲಿತ ಭರತನಾಟ್ಯವನ್ನು ಮರೆಯದೆ ಇತರರಿಗೂ ಕಲಿಸುತ್ತಾ ಭಾರತೀಯ ಕಾರ್ಯಕ್ರಮಗಳನ್ನು ಸಂಯೋಜಿಸುವ ಮದ್ರಾಸಿನ ಶ್ರೀಮತಿ ನಿರ್ಮಲಾ ವೆಂಕಟೇಶ್, ಸ್ನೇಹಿಶೀಲೆಯಾಗಿದ್ದ ಬಂಗಾಲಿ ಇಂದ್ರಾಣಿ ಮುಖರ್ಜಿ, ಸರಳ ಸ್ವಭಾವದ ಜರ್ಮನಿಯ ಉರ್ಸಾಲಾ, ನಮ್ಮೊಂದಿಗೆ ತುಂಬ ಆತ್ಮೀಯವಾಗಿದ್ದು ಆಕಸ್ಮಿಕವಾಗಿ ಸಾವು ಕಂಡ ಮೈಕಲ್, ಅವರ ಪತ್ನಿ-ನನ್ನ ಮೆಚ್ಚಿನ ಗೆಳತಿ ಜ್ಯೂಲಿಯೆಟ್, ಈ ಎಲ್ಲ ಗೆಳತಿಯರನ್ನು
ಮತ್ತೆ ಕಾಣುವುದಾದರೂ ಎಂದು, ಎಲ್ಲಿ?
ನೆನದಾಗ ಒಮ್ಮೊಮ್ಮೆ ಕಣ್ಣಾಲಿಗಳು ತುಂಬಿದಂತಾಗುತ್ತವೆ. ಬದುಕಿನಲ್ಲಿ ಕೊಂಡಿಗಳು ಎಷ್ಟೊಂದು ಅನೈಚ್ಚಿಕವಾಗಿ ಹಾಗೂ ಸಹಜವಾಗಿ ಮೂಡುತ್ತವೆ ಹಾಗೂ ಕಳಚಿಕೊಳ್ಳುತ್ತವೆ ಎಂಬುದನ್ನು ನೆನೆದು ಆಗಾಗ ವಿಸ್ಮಿತಳಾಗುತ್ತೇನೆ.
ರತ್ನನ ಪದಗಳ ಕವಿ ತನ್ನ ಒಂದು ಪದದಲ್ಲಿ ಹೇಳುತ್ತಾನೆ. ‘ಈಗಗಲೋದ್ಮುಂದ್ ಸೇರೋಕಲ್ವ ನಂಜಿ’ ಎಂದು ಸೇರುವಿಕೆಯ ಕೊನೆಯಲ್ಲಿ ಅಗಲಿಕೆ ಇರುತ್ತದೆ ನಿಜ. ಅದರೆ ಎಲ್ಲ ಅಗಲಿಕೆಗಳೂ ಪುನರ್ಮಿಲನದಲ್ಲಿ ಮತ್ತೆ ಕೊನೆಗೊಳ್ಳಲಾರವು.
ಅರಬನಾಡಿನಲ್ಲಿನ ನನ್ನೀ ಅನುಭವ ಕಥನ ಒಂದೆರಡು ಕಾರಣಗಳಿಗಾಗಿ ಪೂರ್ಣವಲ್ಲ, ಮೊದಲನೆಯದಾಗಿ ಸಾಮಾನ್ಯ ಅರಬ ಜನಗಳೊರಿದಿಗೆ ನನಗೆ ಅಷ್ಟಾಗಿ ಸಂಪರ್ಕ ಬರಲೇ ಇಲ್ಲ. ಅವರ ಮನೆಗಳಿಗೆ ಹೋಗಿ ಬರುವ ಅವಕಾಶವಾದದ್ದೂ ತುಂಬಾ ಕ್ವಚಿತ್ತಾಗಿ. ಹಾಗಾಗಿ ಸ್ಥಳೀಯ ಅರಬ್ಬರ ಬದುಕಿನ ಒಳವಿವರಗಳನ್ನು ಅಷ್ಟಾಗಿ
ಇಲ್ಲಿ ಕಾಣಿಸಲಾಗಿಲ್ಡ. ನನ್ನ ಸಂಪರ್ಕಕ್ಕೆ ಬಂದ ಅರಬರೇನಿದ್ದರೂ ಅಂಗಡಿ ಪೇಟೆ, ಬೀಚುಗಳಲ್ಲಿ ಕಂಡವರು, ಅಲ್ಲಲ್ಲಿ ತುಸು ಪರಚಿತರಾಗಿ ಮಾತಾಡಿದವರಷ್ಟೇ. ಹೀಗಾಗಿ ಇಲ್ಲಿ ಅವರ ಒಳಗಿನ ಬದುಕು, ಸಂಪ್ರದಾಯ – ಇತ್ಯಾದಿಗಳನ್ನು ಕುರಿತ ವಿವರಗಳನ್ನು ಹೆಚ್ಚಾಗಿ ಕೊಡಲಾಗಿಲ್ಲ. ಎರಡನೆಯದಾಗಿ – ದೀರ್ಘ ಅವಧಿಯಲ್ಲಿ ತುಸುತುಸುವಾಗೇ ರೂಪುಗೊಂಡ ಈ ಅನುಭವ ಕಥನದಲ್ಲಿ ಕೆಲವು ಅಂಶಗಳು ಜಾರಿ ಹೋಗಿರ ಬಹುದು. ಇಷ್ಟಾಗಿಯೂ, ಅಲ್ಲಿ ನಾನು ಕಂಡದ್ದು-ಉಂಡದ್ದು ಅನ್ಯರಿಗೂ ಉಪಯುಕ್ತವಾದೀತು ಎಂಬ ಆಶಯ ಈ ಬರವಣಿಗೆಯನ್ನು ಸಾಧ್ಯವಾಗಿಸಿದೆ.
ಕೊನೆಯದಾಗಿ ಒಂದು ಎಚ್ಚರಿಕೆಯ ಮಾತು – ಹಣ ಗಳಿಕೆಗೆಂದು ಕೊಲ್ಲಿ ರಾಷ್ಟ್ರಗಳಿಗೆ ಹೋಗುವ ಜನ ತಾವು ಯಾವ ಏಜೆನ್ಸಿಯಿಂದ, ಯಾರ ಬಳಿ ಸೇವೆಗಾಗಿ ಹೋಗುತ್ತಿದ್ದೇವೆ ಎಂಬುದಷ್ಟು ಖಚಿತವಾಗಿ ತಿಳಿದುಕೊಂಡೇ ಹೋಗುವ ನಿರ್ಧಾರ ತೆಗೆದುಕೊಳ್ಳಬೇಕು. ಸರ್ಕಾರದ ಸೇವೆಯಲ್ಲಿ, ಅಥವಾ ವಿದೇಶೀ ಸಹಭಾಗಿತ್ವದ ಕಂಪನಿಗಳ ನೌಕರರಾಗಿ ಹೋಗುವುದಾರೆ ಅದು ಸುರಕ್ಷಿತ. ಹಾಗಲ್ಲದೆ ಪೂರ್ಣ ಖಾಸಗಿಯವರ ಬಳಿ ಹೋಗಿ ಕೆಲಸಕ್ಕೆ ಸೇರುವದು ಸುರಕ್ಷಿತವಲ್ಲ. ಸರಿಯಾಗಿ ಸಂಬಳವನ್ನೂ ಕೊಡದೆ, ಪಾಸ್ಪೋರ್ಟನ್ನೂ ತೆಗೆದಿರಿಸಿಕೊಂಡು ಇವರನ್ನು ತಾಯ್ನಾಡಿಗೆ ಮರಳಲೂ ಆಗದರಂತೆ ತ್ರಿಶಂಕುವಾಗಿಸಿರುವ ಎಷ್ಟೋ ಉದಾಹರಣೆಗಳೂ ಇವೆ. ಇಂಥವರು ಸಹನೆ, ಜಾಣತನಗಳಿಂದ ಅಲ್ಲಿಂದ ಜಾರಿಕೊಂಡು ಬರಬೇಕಷ್ಟೇ. ಇಂಥ ಪರಿಸ್ಥಿತಿಯಲ್ಲಿಲ್ಲದೆ ಸುರಕ್ಷಿತ ಪಂಸರದಲ್ಲಿ ನಾನಿದ್ದದ್ದೂ ನನ್ನ ಸಂತೃಪ್ತಿಗೆ ಕಾರಣ.
ಏನೇ ಇರಲಿ-ಕೆಂಪು ಕಡಲಿನಡಿಯ ಹವಳದ ದಿನ್ನೆಗಳು, ಪಂಚರಂಗಿ ಮೀನು ಗಳು, ಮುಗಿಲೆತ್ತರದ ಮರುಳು ದಿನ್ನೆಗಳ ಮೇಲೆ ಆಟವಾಡುವ ನೆರಳು-ಬೆಳಕು, ನಗರಗಳಲ್ಲಿ ಕಾಣುವ ಅಚ್ಚುಕಟ್ಟುತನ, ತ್ಯೆಲದೇವಿಯ ಕೃಪೆಯಿಂದಾಗಿ ಕೇವಲ ಮೂರು ದಶಕಗಳಲ್ಲಿ ಬೇರೆಯದೇ ಆಗಿ ರೂಪುಗೊಂಡಿರುವ ಅರಬ್ ಜೀವನ ಶೈಲಿ, ಮಿನಿ ಪ್ರಪಂಚವೇ ಆಗಿದ್ದ ನಮ್ಮ ಕ್ಯಾಂಪ್ ಈ ಎಲ್ಲವೂ ಈ ಬದುಕಿನ, ಜಗತ್ತಿನ ಸೊಗಸನ್ನೂ ಚಲನಶೀಲತೆಯನ್ನೂ ಮತ್ತೆ ಮತ್ತೆ ನೆನಪುಮಾಡಿ ಕೊಡುತ್ತಿವೆ. ಎಲ್ಲ ಸೂಕ್ಷ್ಮತೆ, ಕ್ಲಿಷ್ಟತೆಗಳ ನಡುವೆಯೂ ಈ ಜೀವನ ಬದುಕ ಬೇಕಾದಂಥಾದ್ದೇ ಆಗಿದೆ ಎಂಬ ತಿಳಿವನ್ನು ಈ ಎಲ್ಲ ಅನುಭವಗಳು ನನಗೆ ಮನಗಾಣಿಸಿಕೊಟ್ಟಿವೆ.
***********