Home / ಕಥೆ / ಕಿರು ಕಥೆ / ಅಲೆ ಆಟ

ಅಲೆ ಆಟ

ಬಾಳಿನಲ್ಲಿ ಅನೇಕ ಅಡಚಣೆಗಳು ಬಂದು ಬೇಸತ್ತ ಓರ್ವ ಯುವಕ ಸಮುದ್ರ ದಡಕ್ಕೆ ಬಂದು ಕುಳಿತ. ಮನದಲ್ಲಿ ಬಹಳಷ್ಟು ಬೇಸರ, ದುಃಖ, ನೋವು ಇತ್ತು. ಹಾಗೇ ಅಲೆಗಳನ್ನು ನೋಡುತ್ತ ಇದ್ದ. ಮನಸ್ಸು ಹೇಳಿತು-

‘ಸಮುದ್ರ ಸ್ನಾನ ಮಾಡು ನಿನ್ನಲ್ಲಿರುವ ಜಡತ್ವವನ್ನು ತೊರೆ ಹೊಸ ಉತ್ಸಾಹ ಪಡೆ’ ಎಂದು.

ಯುವಕ ಹೇಳಿದ- “ಮನವೇ! ನನ್ನ ಸಮುದ್ರಕ್ಕೆ ನೂಕಬೇಡ, ಈಗಲೇ ನಾನು ಚಿಂತೆಯಲ್ಲಿ ಮುಳಗಿ ಹೋಗಿದ್ದೇನೆ. ಅಲೆಗಳು ಮೇಲೆ ಏಳುವುದು ನಿಲ್ಲಲಿ ನಂತರ ಸಮುದ್ರ ಸ್ನಾನ ಮಾಡುವೆ,” ಅಲೆ ಏಳುತ್ತಿತ್ತು, ಬೀಳುತಿತ್ತು ಅನವರತ. ಯುವಕ ಅಲೆಗಳನ್ನು ಎಣಿಸುತ್ತಲೇ ಇದ್ದ. ಮನವು ಮತ್ತೆ ಹೇಳಿತು

“ಅಲೆ ಎಂದಾದರೂ ನಿಲ್ಲುವುದೇ? ಜೀವನದಲ್ಲಿ ಜಂಝಟಿಗಳು ಹಾಗೇ ಬರತ್ತಲೇ ಇರುತ್ತವೆ. ಸಮುದ್ರದಲ್ಲಿ ಮುಳಗಿದಾಗ ಅಲೆ ತಲೆಯ ಮೇಲಿಂದ ಹಾದುಹೋಗುತ್ತದೆ. ಸಾಧಕನಾದವನು ಅಲೆಯ ಮೇಲೆ ಏರಿದರು ಅದು ದಡಕ್ಕೆ ತಂದು ಹಾಕುತ್ತದೆ. ಅಲೆಯೊಡನೆ ಅಸ್ವೀಕಾರಬೇಡ. ಸಮಸ್ಯೆಯ ಅಲೆ ನಿಲ್ಲಲಾರದು. ಅಲೆಯ ಬೆಲೆ ಸಾಧಕನಿಗೆ ಗೊತ್ತು. ಅಲೆಯ ನೆಲೆ ಜೀವನದ ಗುಟ್ಟು, ಅಲೆಯ ಜಯಿಸುವುದೇ ಜೀವನ ಕಲೆ” ಎಂಬ ಮನದ ಮಂಥನ ಯುವಕನನ್ನು ಎಚ್ಚರಿಸಿತು.
*****

Tagged:

Leave a Reply

Your email address will not be published. Required fields are marked *

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...