ಎಂಭತ್ತು ವರ್ಷದ ಗೌರಜ್ಜಿಗೆ ಅಂದು ಬಹಳ ಪಶ್ಚಾತಾಪ. ಹಣ್ಣು ಹಣ್ಣು ಮುದುಕಿಯ ಮುದಿ ಮನವನ್ನು ಕಾಡುತ್ತಿದ್ದುದು ಬಾಳಿನಲ್ಲಿ ಎಳ್ಳನ್ನು ತಿನ್ನಲಿಲ್ಲವೆಂದು! ಎಳ್ಳಿನ ಹೊಟ್ಟೆಯೊಳಗಣ ಎಣ್ಣೆಯ ರುಚಿ ಸವಿಯಲಿಲ್ಲೆಂದು.
“ಅಜ್ಜಿ! ಎಳ್ಳು ಎಣ್ಣೆಯ ದೀಪ ಹಚ್ಚಿರುವೆ ನೋಡು” ಎಂದ ಮೊಮ್ಮಗ. ಅದರ ಬೆಳಕಿನಲ್ಲಿ ನಾನು ಗ್ರಂಥ ಪಠನ ಮಾಡುತ್ತಿರುವೆ. ಜ್ಞಾನ ಪಡೆಯುತ್ತಿರುವೆ”- ಎಂದ.
ದೀಪವನ್ನು ದಿಟ್ಟಿಸಿದಾಗ ಮುದುಕಿಗೆ ಜ್ಞಾನೋದಯವಾಯಿತು. ತಾನು ತಿನ್ನದ ಎಳ್ಳಿನ ರುಚಿಯ ಬದಲು ಅದರ ಎಣ್ಣೆಯಲ್ಲಿ ಉರಿಯುತ್ತಿರುವ ಹಣತೆ ದಿಟ್ಟಿಸಿದಾಗ ಮುದುಕಿಯ ಒಳಕಣ್ಣು ತೆರೆಯಿತು.
*****








