Home / ಲೇಖನ / ಇತರೆ / ಸಂಭವ-ಅಸಂಭವ

ಸಂಭವ-ಅಸಂಭವ

“ಜಗತ್ತಿನಲ್ಲಿ ಯಾವದೂ ಅಸಂಭವವಿಲ್ಲ” ಎಂದು ನೆಪೋಲಿಯನ್ನನು ಹೇಳಿದ್ದರಿಂದಲೂ ೨ನೇ ದುಂಡು ಮೇಜಿನ ಪರಿಷತ್ತಿನಲ್ಲಿ ಮ. ಗಾಂಧಿಯವರು ತಮ್ಮ ಶಬ್ದಕೋಶದಲ್ಲಿ “ಅಪಜಯ” ಎಂಬ ಶಬ್ದವು ಇಲ್ಲೆಂದು ಉದ್ಧಾರ ತೆಗೆದದ್ದರಿಂದಲೂ ಜನರ ಆಕಾಂಕ್ಷೆಗೆ ಮಿತಿ ಇಲ್ಲದಂತೆ ಆಗಿದೆ. ನೆಲುವಿಗೆ ಹಾರದ ಬೆಕ್ಕು ಸ್ವರ್ಗಕ್ಕೆ ಹಾರಲೆತ್ನಿಸುತ್ತಿದೆ. ಚೇಳಿನ ಮಂತ್ರವನ್ನು ಅರಿಯದವರು ಹಾವಿನ ಗುದ್ದಿನಲ್ಲಿ ಕೈ ಹಾಕಹತ್ತಿರುವರು. ಹೊಂಡದಲ್ಲಿ ಈಸದವರು ಹೊಳೆಯಲ್ಲಿ ಧುಮುಕ ಹೋಗುತ್ತಿರುವರು.
  * * * *
ಒಂದೇ ಸವನೆ ಈಸುವದರಲ್ಲಿ, ಓಡುವದರಲ್ಲಿ ಕುಣಿಯುವದರಲ್ಲಿ, ನಗುವದರಲ್ಲಿ ಮಾತಾಡುವವರಲ್ಲಿ ಆಡುವವರಲ್ಲಿ ಊಟ ಮಾಡುವದರಲ್ಲಿ ಮೋಟಾರ ನಡಿಸುವದರಲ್ಲಿ ವಿಮಾನ ಹಾರಿಸುವದರಲ್ಲಿ ಎಲ್ಲದರಲ್ಲಿ ಮೇಲಾಟ; ಎಲ್ಲದರಲ್ಲಿ ವಿಕ್ರಮ, ರಿಕಾರ್ಡ್ ಮುರಿಯುವ ಭರಭರಾಟೆ ನಡೆದಿದೆ. ನಮ್ಮ ದೃಷ್ಟಿಯಲ್ಲಿ ಒಂದೇ ಮೇಲಾಟ ಉಳಿದಿದೆ. ಅದೆಂದರೆ ಸುಮ್ಮನೆ ಕೂಡುವದರಲ್ಲಿ ಮೇಲಾಟ !
  * * * *
ಮಾತನಾಡದೆ ಮಿಸುಗದೆ ಸುಮ್ಮನೆ ಕೂಡ್ರಬೇಕಾದರೆ ಮನಸ್ಸಿನ ಸಂಯಮನ ಬೇಕಾಗುತ್ತದೆ. ಮನಬಂದಂತೆ ಮಾಡುವದು, ಮಾತನಾಡುವದು ಮಾನವಜಾತಿಯ ಹುಟ್ಟುಗುಣ. ಸುಮ್ಮನೆ ಕೂಡ್ರುವದು ಮನಸ್ಸಿನ ಮನಸ್ಸಿಗೆ ಬರುವದಿಲ್ಲ  ಪುರಂದರ ದಾಸರು ಹೇಳಿಲ್ಲವೆ !  “ಮನವೆಂಬ ಮರ್ಕಟವ ತಡೆಯಲಾರೆನು ದೇವಾ!”
  * * * *
ಮನುಷ್ಯನೆಂದರೆ ಮಂಗನ ವಿಕಸಿತ ರೂಪವೆಂದು ಡಾರ್ವಿನ ಸಾಹೇಬರು ಹೇಳಿಲ್ಲವೆ? ಮಂಗತನ ಮತ್ತು ಮೌನ ವ್ರತಗಳ ನಡುವೆ ಭೂಮ್ಯಾಕಾಶದಷ್ಟು ಅಂತರವಿದೆ. ಪೂರ್ವಕಾಲದಲ್ಲಿ ಋಷಿಗಳು ಮೌನವ್ರತವನ್ನು ಧರಿಸುತ್ತಿದ್ದರಂತೆ. ಅಂದರೆ ಅಸಂಭವವಾದ ಕೆಲಸಗಳನ್ನು ಮಾಡಲೆತ್ನಿಸುವ ಪರಿಪಾಠವು ಪುರಾತನಕಾಲದಿಂದ ಇರುವದೆಂದು ಹೇಳಲಿಕ್ಕೆ ಅಡ್ಡಿ ಇಲ್ಲ !
****
ಅರೆಗೊಡದ ಸಪ್ಪಳ ಬಹಳ. ತುಂಬಿದ ಕೊಡವು ತುಳುಕುವದಿಲ್ಲ. ವಿದ್ಯಾ ಪರಿಪೂರ್ಣನಿಗಿಂತ ಅರ್ಧಕಲಿತ ಪಂಡಿತನ ಗೊಂದಲ ಬಹಳ. ಇದರ ಮೇಲಿಂದ ದೀಡಪಂಡಿತ ಮತ್ತು ಮುಕ್ಕಾಲುಪಂಡಿತರ ಗೊಂದಲವು ಎಷ್ಟು ಇರುತ್ತದೆಂಬದನು ತ್ರೈರಾಶಿ ಹಾಕಿ ಗಣಿತಜ್ಞಾನವಿದ್ದವರು ಹುಡುಕಿ ತೆಗೆಯಬಹುದು. ಆದರೆ ಗಣಿತ ಶಾಸ್ತ್ರದ ಪರಿಪೂರ್ಣ ಜ್ಞಾನವಿದ್ದವರು ಮಾತ್ರ ಇದನ್ನು ಹುಡಿಕಿ ತೆಗೆಯಬೇಕೆಂದು ನಮ್ಮ ವಿನಂತಿಯು. ಇಲ್ಲವಾದರೆ ಗಣಿತಶಾಸ್ತ್ರದ ಅರ್ಧ ಮುಕ್ಕಾಲು ಅಥವಾ ದೀಡಪಂಡಿತರು ಸದಾ ರಾಶಿಕದ ಪಂಚರಾಶಿಯನ್ನಾಗಲಿ ಸಪ್ತರಾಶಿಯನ್ನಾಗಿ ಮಾಡಿ, ಇದ್ದ ಹನ್ನೆರಡು ರಾಶಿಗಳಿಲ್ಲಿಯ ನಾಲ್ಕೆಂಟು ರಾಶಿಗಳನ್ನು ಕಳೆದು ಕೂಡ್ರಬಹುದು!
  * * * *
ಆಸ್ಟ್ರೇಲಿಯಾ ದೇಶದಲ್ಲಿ ಒಬ್ಬ ದೊಡ್ಡ ವ್ಯಾಪಾರಿಯು ಇದ್ದನು. ಅವನಿಗೆ ವ್ಯವಹಾರಜ್ಞಾನಶೂನ್ಯ ಮಗನೊಬ್ಬನಿದ್ದನು. ತಂದೆ ಮಕ್ಕಳಿಬ್ಬರೂ ಪ್ರವಾಸಕ್ಕೆ ಹೊರಟರು. ಒಂದು ಊರಿಗೆ ಬಂದರು. ತಂದೆಯು ಪ್ರಸಿದ್ದ ವ್ಯಾಪಾರಸ್ಥನು. ಆದ್ದರಿಂದ ಆ ಊರಲ್ಲಿ ಅವನ ಸನ್ಮಾನಾರ್ಥವಾಗಿ ಅನೇಕ ತಾಂಬೂಲ ಭೋಜನ ಸಮಾರಂಭಗಳಾದವು. ಒಂದು ಭೋಜನ ಸಮಾರಂಭಕ್ಕೆ ಮಗನೂ ಬರುವೆನೆಂದು ಹಟ ತೊಟ್ಟನು. “ನೀನು ಏನಾದರೂ ಮೂರ್ಖತನದ ಮಾತನಾಡಿಬಿಡುವಿ ಬೇಡ” ಎಂದು ತಂದೆಯು ಹೇಳಿದನು. ಕಡೆಗೆ ಮಾತನಾಡದೆ ಸುಮ್ಮನೆ ಕೂಡಬೇಕೆಂಬ ಕರಾರಿನ ಮೇಲೆ ಮಗನು ತಂದೆಯ ಸಂಗಡ ಬಹಳ ಆಗ್ರಹ ಮಾಡಿ ಹೊರಟನು. ಕರಾರಿನಂತೆ ಸುಮ್ಮನೆ ಒಂದು ಮೂಲೆಯಲ್ಲಿ ಮಗನು ಕುಳಿತನು. ಉಳಿದವರು ಹೇಗೆ ಬಿಡುವರು ? ಮುಖ್ಯ ಅತಿಥಿಯ ಮಗನನ್ನು ಮಾತನಾಡಿಸದಿದ್ದರೆ ಹೇಗೆ ? “ನೀನು ಏನು ಕಲಿಯುತ್ತೀಯಪ್ಪಾ?” ಎಂದು ಒಬ್ಬನು ಕೇಳಿದನು. ” ನೀನು ಯಾವ ಉದ್ಯೋಗ ಮಾಡುತ್ತೀ ?” ಎಂದು ಮತ್ತೊಬ್ಬನು ಕೇಳಿದನು. “ನಿನ್ನ ವಯಸ್ಸು ಎಷ್ಟು ?” ಎಂದು ಬೇರೊಬ್ಬನು ಕೇಳಿದನು. ಆತ ಒಬ್ಬನಿಗೂ ಉತ್ತರ ಕೊಡಲಿಲ್ಲ. ಕರಾರಿನಂತೆ ಮಗನು ಸುಮ್ಮನೆ ಕುಳಿತಿದ್ದನು! ಕಡೆಗೊಬ್ಬನು “ನಿನ್ನ ಪ್ರಕೃತಿಯು ನೆಟ್ಟಗಿಲ್ಲವೇನು?” ಎಂದು ಕೇಳಿದನು. ಮತ್ತೆ ಉತ್ತರವಿಲ್ಲ. ಆಗ ಒಬ್ಬನು: ಆ ಮೂರ್ಖನಿಗೇನು ಕೇಳುವಿರಿ? ಹೋಗಲಿ ಬಿಡಿರಿ ! ” ಎಂದು ಅಂದನು. ಆಗ ಮಗನು ಸಂತಾಪಪಟ್ಟು ಕುಳಿತ ಮೂಲೆಯಿಂದಲೆ ಓದರಿ ತಂದೆಗೆ, “ಅಪ್ಪಾ, ನಾನು ಸುಮ್ಮನೆ ಕುಳಿತಿದ್ದರೂ ನಾನು ಮೂರ್ಖನಿದ್ದೇನೆಂದು ಈ ಜನರು ಕಂಡು ಹಿಡಿದರು” ಎಂದು ಹೇಳಿದನು!!
*****
Tagged:

Leave a Reply

Your email address will not be published. Required fields are marked *

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...