Home / ಕವನ / ಕವಿತೆ / ಮನಸು ಮತ್ತು ಮಾತು

ಮನಸು ಮತ್ತು ಮಾತು

ಮನಸು ಮಾತುಗಳೆರಡು ಒಂದೆ ಲೋಕದ ವಸ್ತು
ಮನವನರಳಿಸುವ ಕಲೆ ಮಾತಿಗುಂಟು
ಮನಸೋತು ಬಿದ್ದಾಗ ಗದ್ದರಿಸಿ ಎಬ್ಬಿಸುವ
ಘನ ಬಲವು ಮಾತಿನೊಳು ಅಡಗಿ ಉಂಟು

ಮಾತು ಬಲ್ಲುದು ಎಲ್ಲ ಮೌನ ಮನಸಿನ ಸೊಲ್ಲ
ಕೂತಿರುವುದದಕಾಗಿ ಜನುಮ ತೆತ್ತು
ಮಾತು ಮಾತಿಗು ಮನವ ಕುಣಿಸಿ ಮಣಿಸುವ ಜಾಣು
ಮಾತಿಗಲ್ಲದೆ ಮತ್ತೆ ಏತಕುಂಟು

ಮನಸುಗಳು ಎಷ್ಟುಂಟೊ ಅಷ್ಟು ಮಾತುಗಳುಂಟು
ಮನಸು ಮಾತಿಗು ಹೀಗೆ ಬಿಡದ ಗಂಟು
ಮನಸು ಮೇಣದ ಬತ್ತಿ ಮಾತು ಜ್ಯೋತಿಯು ಹೊತ್ತಿ
ಮನೆಯ ಬೆಳಗುವದಿಂತು ಸ್ನೇಹ ತಾನಂಟಿ

ಒಳಗಿದ್ದ ಮನಸದುವೆ ಹೊರಬರಲು ಮಾತಾಯ್ತು
ಮಾತಿಗೆಲ್ಲಿಗೆ ಬಂತು ಬೇರೆ ಅಸ್ತಿತ್ವ
ಕತ್ತಲೆಯ ಗುಹೆಯಲ್ಲಿ ತನ್ನದೇ ಮನೆಯಲ್ಲಿ
ಮನಮಥಿಸೆ ಹೊರಬಂತು ಶಬ್ದ ತತ್ತ್ವ

ಕೈಸನ್ನೆ ಕಣ್ಸನ್ನೆ ಮನದ ಸಂಕೇತಕ್ಕೆ
ಮೈಸನ್ನೆ ಎಲ್ಲವೂ ಸಾಲದಾಗಿ
ಕಾತರದಿ ಮನನೊಂದು ಬಳಲುತಿರೆ ಖತಿಗೊಂಡು
ಮಾತು ಬ೦ದಿತು ಮನದ ರೂಪವಾಗಿ

ಜನುಮ ಜನುಮಾಂತರದಿ ಮೌನ ಬೆನ್ನಟ್ಟಿ ಬರೆ
ಅರಳದೆಯೆ ಉಳಿದಿತ್ತು ಮನದ ಮೊಗ್ಗು
ಮನವೆ ಮನುಜನ ಜನ್ಮ ತಾಳಿ ತಾ ಕಣ್ಣು ತೆರೆ
ಮನ ಮಾತ ಸೃಷ್ಟಿಸಿತು. ಜೀವನಕೆ ಹಿಗ್ಗು!

ತನ್ನ ಪ್ರಕೃತಿಗೆ ಒಪ್ಪಿ ಪುರುಷನಿಂದಿರೆ ಅಪ್ಪಿ
ಮನಕುಮುದೆ ನಾಚಿದಳು ಜರಿದು ಸರಿದು
ನನ್ನದೇನಿಹುದಿಲ್ಲಿ ಎಲ್ಲ ನಲ್ಲಿನದೆಂದು
ಸನ್ನಿಧಿಯ ಸೇರಿದಳು ಮೌನದಲಿ ನಡೆದು
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...