Home / ಲೇಖನ / ಇತರೆ / ೫೧ ಎರಿಡನಿ ಬಿ ಗ್ರಹ

೫೧ ಎರಿಡನಿ ಬಿ ಗ್ರಹ

ಮೊನ್ನೆ ಆಗಸ್ಟ್ ೨೦೧೫ ರ ಸೈನ್ಸ್ ಪತ್ರಿಕೆಯನ್ನು ಬಹಳ ಕುತೂಹಲದಿಂದ ಓದುತ್ತಿದ್ದೆ. ನನಗೆ ಚಿಕ್ಕಂದಿನಿಂದಲೂ ಸೈನ್ಸ್ ಬಗ್ಗೆನೂ ತೀವ್ರ ಆಸಕ್ತಿ.

ಭವ್ಯ ಭಾರತದ ಮೂಲ ಇಬ್ಬರು ಮಹಾ ವಿಜ್ಞಾನಿಗಳಿದ್ದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ತಂಡವೊಂದು ಲಾಸ್ ಎಂಜಲಿಸ್‌ನಲ್ಲಿ ಭೂಮಿಯಿಂದ ೧೦೦ ಜ್ಯೋರ್ತಿವರ್ಷ ಸೆಕೆಂಡ್‌ಗೆ ೩.೮೬ ಲಕ್ಷ ಕಿಲೋಮೀಟರ್ ವೇಗದಲ್ಲಿ ಒಂದು ವರ್ಷ ಸವೆಸುವ ದೂರದೂರ ಬಹುದೂರದಲ್ಲಿ ಮಿಥೇನ್ ಭರಿತ ಗ್ರಹವೊಂದನ್ನು ಪತ್ತೆ ಮಾಡಿರುವರು.

ಓದುತ್ತಾ ಓದುತ್ತಾ ಅಬ್ಬಾ! ಎಂದೆ. ವಿಜ್ಞಾನಿಗಳೆ ಹೀಗೆ ಯಾರೂ ಪತ್ತೆ ಹಚ್ಚದ್ದನ್ನು ಪತ್ತೆ ಹಚ್ಚಿ ಸಂಭ್ರಮಿಸುವರು.

ಈ ಗ್ರಹ ಸಂಪೂರ್ಣವಾಗಿ ಮಿಥೇನ್‌ನಿಂದ ಕೂಡಿದೆ. ಇದನ್ನು “೫೧ ಎರಿಡನಿ ಬಿ ಗ್ರಹ” ಎಂದು (ಕೂಸು) ಕರೆದಿರುವರು. ಇದು ಗುರು ಗ್ರಹದಂತಿರುವುದರಿಂದ ಇದನ್ನು ಗುರು ಗ್ರಹದ “ತಮ್ಮ” ಎಂದಿರುವರು.

ಭಲೇ ಭಲೇ ವಿಜ್ಞಾನಿಗಳೂ ಕೂಡಾ ಒತ್ತಡವನ್ನು ನಿವಾರಿಸಿಕೊಳ್ಳಲು ಏನೆಲ್ಲ ಪರಿಭಾಷೆಯಲ್ಲಿ ಕರೆದು ನಗುವರಲ್ಲದೆ, ಈ ಗ್ರಹದಲ್ಲಿ ನೀರಿರುವ ಬಗ್ಗೆ ಸಂಶಯ ವ್ಯಕ್ತ ಪಡಿಸಿರುವರು.

ಈ ಗ್ರಹ ಸುಮಾರು ೨ ಕೋಟಿ ವರ್ಷಗಳಷ್ಟು ಹಳೆಯದೆಂದು ಅಭಿಪ್ರಾಯ ಪಟ್ಟಿರುವರು.

ನಕ್ಷತ್ರಗಳ ಸುತ್ತ ದೈತ್ಯ ಅನಿಲ ಗ್ರಹಗಳು ರೂಪುಗೊಳ್ಳುವ ಪ್ರಕ್ರಿಯೆಯನ್ನು ಈ ಗ್ರಹದ ಸ್ಥಿತಿಯನ್ನು ಆಧರಿಸಿ ಅರಿಯಬಹುದೆಂದು ಹತ್ತಿರದ ನಕ್ಷತ್ರಗಳನ್ನು ಸುತ್ತುತ್ತಿರುವ ಗ್ರಹಗಳನ್ನು ಪತ್ತೆ ಮಾಡುವ ಘನ ಉದ್ದೇಶದಿಂದ ರೂಪಿಸಿರುವ “ಜೆಮಿನಿ ಪ್ಲಾನೆಟ್ ಇಮೇಜರ್” ನಿಂದ ಪತ್ತೆ ಮಾಡಿರುವ ಮೊತ್ತ ಮೊದಲ ಗ್ರಹವಿದೆಂದು ವಿಜ್ಞಾನಿಗಳ ತಂಡ ತಮ್ಮ ಸಂಶೋಧನೆಯ ವಿವರಗಳನ್ನು ಹಂಚಿಕೊಂಡಿದೆ.

ಜೆಪಿ‌ಐನಲ್ಲಿರುವ ಅತ್ಯಾಧುನಿಕ ಸ್ಪೆಕ್ಟ್ರೊ ಮೀಟರ್‌ನ ಸಹಾಯದಿಂದ ಈ ಗ್ರಹದಲ್ಲಿ ಮಿಥೇನ್ ಅಂಶವಿರುವುದನ್ನು ಪತ್ತೆ ಮಾಡಲಾಗಿದೆಯೆಂದು ವಿಜ್ಞಾನಿಗಳ ತಂಡ ಹೇಳಿದೆಯಲ್ಲದೆ, ಈತನಕ ನಮ್ಮ ಹಾಲು ಹಾದಿಯ ಹೊರಗಿನ ಆಕಾಶ ಗಂಗೆಯಲ್ಲಿ ಪತ್ತೆಯಾಗಿರುವ ಅತ್ಯಂತ ಹೆಚ್ಚಿನ ಮಿಥೇನ್ ಸಾಂದ್ರತೆಯಿರುವ ಗ್ರಹವಾಗಿದೆ ಎಂದಿರುವರು!

ಈ ಗ್ರಹದಲ್ಲಿ ನೀರಿದೆ ಮಿಥೇನ್ ಇದೆ. ಹೀಗಾಗಿ ಇತರೆ ನಮ್ಮ ಸೌರವ್ಯೂಹದ ಗ್ರಹಗಳಲ್ಲಿರುವಂತೆ ತಂಪಿದೆ. ಇಲ್ಲಿ ೪೨೭ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಇತರೆ ಗ್ರಹಗಳಲ್ಲಿ ೫೩೭ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆಯೆಂದು ಭವ್ಯ ಭಾರತದ ಮೂಲ ವಿಜ್ಞಾನಿಗಳಾದ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ರಾಹುಲ್ ಪಟೇಲ್ ಬಾಲ್ಟಿಮೋರ್‌ನ ಸ್ಪೇಸ್ ಟೆಲಿಸ್ಕೋಪ್ ಸೈನ್ಸಸ್ ಇನ್ಸ್‌ಟಿಟ್ಯೂಟ್‌ನ ಅಭಿಜಿತ್‌ ರಾಜನ್‌ ಅವರೆಲ್ಲ ಸೇರಿ ಈ ಸಂಶೋಧನೆ ಕೈಗೊಂಡು ಸಫಲರಾಗಿರುವರು.

ಈ ತಂಡದಲ್ಲಿ ಭವ್ಯ ಭಾರತದ ವಿಜ್ಞಾನಿಗಳಿದ್ದಾರೆಂಬುದೇ ಹೆಮ್ಮೆಯ ಸಂಗತಿಯಲ್ಲವೇ?

ಈಗೀಗ ಭಾರತ ದೇಶ ಯಾವುದರಲ್ಲಿ ಕಮ್ಮಿಯಿಲ್ಲ ಅಲ್ಲವೇ??
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...