ಕಾಳಕಿಚ್ಚು, ಸಮರಸುಳಿವು
ಪಡುವನಾಡನೇರಿಬಂತು.
ಶಾಂತಿಸತ್ವ ಸರಿದುನಿಂತು-
ಧಾಳಿ ಧಾರೆಗೆ ಎಡೆಯನಿತ್ತು.
ರೌದ್ರರಾಳು ರೀತಿಸಿತ್ತು
ಧರೆಯನೆರೆಯನೇರಿನಿಂತು.
ಕ್ರೂರಕರ್ಮಿ ಕೈಯಸಾಗಿ
ಪೃಥ್ವಿ, ಕಡಲ, ಹವೆಯನೇರಿ
ಸುತ್ತುಗಟ್ಟಿ, ಒಟ್ಟನೆಳೆದು
ಮಾನವೀಯ ಸೂರೆಹೋಯ್ತು
“ಅಖಿಲ ಸಕಲ ಕುಲಕವೆನಿಸಿ”
ಉಗ್ರರೂಪ ರೂಢಿದಾಗ
ಧಾಳಿಧಾರೆ ಹಾಯುವಾಗ
ಕ್ರೂರಕರ್ಮಿ ಕೈಯಸುಟ್ಟಿತೇ.
ಕಿರಣಕಾಂತಿ, ಸೊಬಗಶಾ೦ತಿ
ದೋರಿದೂರಮರೆಯಿತೇ ?
*****









