ದೂರದಲಿ ತಾಣದಲಿ
ಪಿರಿದೊಂದು ವೃಕ್ಷದಲಿ
ಏರಿತ್ತು ಖಗವೊಂದು-
ಚಲುವು.
ಇನಿದುಸರ ಸವಿಬೆರಸಿ
ತನುಅನುವ ಅದರಿರಿಸಿ
ಕಾನನದಿ ಹಾಡಿತ್ತು-
ಹಿರಿಮೆ.
ರಾಗದಲಿ ಮೇಳದಲಿ
ಆಗಸದ ನೇಸರದಿ
ಸಾಗಿತ್ತು ಪ್ರವಹದಲಿ-
ನಡೆದು.
ಗಮ್ಯದಲಿ ನೋಡಿದೆನು
ಒಮ್ಮೆಯಲೆ ಬೆರೆತುದನು
ದುಮ್ಮಿಕ್ಕಿ ಗಾನದಲಿ-
ತನ್ನ ತಾಮರೆತು.
ಯೋಜನದ ಯೋಜನದಿ
ಭಾಜನದ ನೇಸರದಿ
ರಾಜಿಸುತ ಮಿರುದನಿಯು-
ಕೂಗಿತೆನ್ನೆಡೆಗೆ.
*****









