Home / ಕವನ / ಕವಿತೆ / ವಾಹಿನಿಗೆ-*

ವಾಹಿನಿಗೆ-*

ಏಸುದಿನ ಮರೆಯಾಗಿ ಎತ್ತ ಸುಳಿದಿದ್ದೆ ವಾಹಿನಿ?
ತೊರೆಯಲಾರದೆ ನಿನ್ನ ಮರುಗುತ್ತಿದ್ದೆನು ನಾನು!
ನೀ! ಎನ್ನ ಜೀವಸ್ಫೂರ್ತಿ! ಒಡನಾಡಿನಾ- ನಿನ್ನ ಕಳೆದುಕೊಂಡೆ!
ವಂಚಿಸಿದೆ ವಾಹಿನಿ! ಪೂರ್ಣಚಂಚಲೆ ನೀನು!
ಮನದೊಳಗೆ ಎಣಿಸಿದ್ದೆ, ನಿನ್ನ ನಾ ಕುರಿತು;
ಸಿರಿಗೂಡಿ ತರುತ್ತಿದ್ದ ನಿನ್ನ ವಾಹಿನಿ ಘನತೆ.
ಭಾವನೆಗೆ ಮೊದಲಲ್ಲಿ ನಡೆವವಳು ನೀ ಎಲ್ಲಿ?
ಮರೆಯಾಗಿ ಸುಳಿದು ಕಾಂತಿಮಾಸಲಿಸಿ.
ಗಾಯಕನ ವಾದನದ ಎಳೆಯೊಂದು ಹರಿದು
ದಿವ್ಯಗಾನಕೆ ತೊಡರ ಅಡಕ ನಿರ್ಮಿಸಿದಂತೆ
ಮನದನುಡಿ ಇಳಿದಿದೆ! ನಿನ್ನ ಬೆಂಬಲವಿರದೆ.
ಉದಿಸಿ ಬಾ! ಒಡನಾಡಿ ಮನದೊಳಗೆ ಸುಳಿದು.
ಗೆಲವುನೊಡನಾಟದಲಿ ಬೆರೆಸಿದ್ದೆ ನೀ-ಎನ್ನ ಕೂಡಿ,
ಕಾವ್ಯಮಯ ಜಗದಲ್ಲಿ ನಲಿದಿದ್ದೆ ನಾ- ನಿನ್ನ ಗೆಳೆತನದಿ;
ಮರಳಿಮೊದಲಾಗಿ ಮನದೊಳಗೆ ನಲಿದು,
ಉದಿಸಿ ಬಾ! ಒಡನಾಡಿ ಮತ್ತೊಮ್ಮೆ ಸುಳಿದು.
ಕಾವ್ಯವಾಹಿನಿ ನೀನು! ಅನುರಕ್ತ ನಾ-ಮಾತ್ರ
ನಿನ್ನ ತೊರೆಯಲುಬಹುದೆ? ವಾಹಿನಿ!
ಉದಿಸಿ ಬಾ! ಒಡನಾಡಿ ಮನದೊಳಗೆ ಸುಳಿದು.
ನೀ! ಎನ್ನ ಜೀವಸ್ಫೂರ್ತಿ! ಅಮೃತಚೇತನವಿತ್ತು
ಸುಳಿದು ಅಲೆಯಾಗಿ ವಲಿಸಿ ಹುಮ್ಮಸತೋರಿ
ಉದಿಸಿ ಬಾ! ಒಡನಾಡಿ ಮತ್ತೊಮ್ಮೆ ಸುಳಿದು.
*****
* ಕವಿತಾಸ್ಪೂರ್ತಿ

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...