Home / ಕವನ / ಕವಿತೆ / ಜಯ೦ತಿ

ಜಯ೦ತಿ

ಭೂಮಿಯೊಡನೆ ಕಾಲ ಕೂಡ
ತಿರುಗಿ ಮರುಳಿ ಬರುತಿದೆ.
ನಿನ್ನ ಧರ್ಮ ನಿನ್ನ ಮರ್ಮ
ತಿಳಿಯುವುದೇ ಮರೆತಿದೆ.

ಪರಸ್ಪರರ ತಪ್ಪು ಕಂಡು
ಒಪ್ಪ ಹಾರಿ ಹೋಗಿದೆ.
ಬಾ ಜಯಂತಿ, ಹೋ ಜಯಂತಿ
ಹಳೆಯ ಲೆಕ್ಕ ಸಾಗಿದೆ.

ಪಕ್ಷ ಭೇದ ನೀತಿಯಿಂದ
ಜನ ಅತಂತ್ರವಾಗಿದೆ.
ಆದರ್ಶದ ವಾದವೆಲ್ಲ
ಗಾಳಿ ಮಂತ್ರವಾಗಿದೆ.

ನಿನ್ನ ತೂಕ ನಿನ್ನ ತಾಳ್ಮೆ
ನಿನ್ನೆಚ್ಚರ ಯಾರಿಗೆ ?
ಗುತಿಕೆಯಿಂದ ಎಳೆಯುತಿಹರು
ಹೊಸ ಹೊಸ ಹೊಸ ದಾರಿಗೆ.

ಸತ್ಯವನ್ನು ಎಲ್ಲೊ ಬಿಟ್ಟು
ಆಗ್ರಹವನೆ ಹಿಡಿದಿದೆ.
ಎಡವಿದಲ್ಲೆ ಮತ್ತೆಡಹುತ
ಪ್ರಗತಿ ಎತ್ತೊ ನಡೆದಿದೆ.

ಸತ್ಯ-ಕರ್ಮ-ಚಂದ್ರ-ಗಂಧ
ತ೦ದೆ ನೀನು ಜಗದಲಿ.
ಪ್ರೇಮದ ನವಪುತ್ತಳಿಯನೆ
ನೀ ತಾಯೀ ಯುಗದಲಿ.

ಭಾರತೀಯ ಕಂದ ನೀನು
ಪಾರತಂತ್ರ್ಯದುರಿಯಲಿ.
ಉದಯವಾದೆ ಸದ್ದಿಲ್ಲದೆ
ಆ ಸುದಾಮ ಪುರಿಯಲಿ.

ರಾಣಿ ರಾಜ್ಯ ಮನೋ ರಾಜ್ಯ
ಮಟಾಮಾಯವಾಗಿರೆ.
ಸ್ವಾತಂತ್ರ್ಯದ ಘೋಷದಲ್ಲಿ
ದಿಗ್ ಬಂಧನ ಸಾಗಿರೆ.

ಖಂಡ ಖಂಡಗಳಲಿ ಬಲಿಯೆ
ಪುಂಡತನವ ನಡೆಸಿದೆ.
ಖಂಡಿತದಲಿ ಕಂಡ ಸತ್ಯ
ನಿನ್ನ ಹುಚ್ಚ ಬಿಡಿಸಿದೆ.

ಅಬಲರನ್ನೆ ಪ್ರಬಲರೆದುರ-
-ಹಿಂಸೆಯಿಂದ ನಿಲಿಸಿದೆ.
ಮತ್ತೆ ಮತ್ತೆ ಸತ್ಯ ನುಡಿದು
ಮತ್ತರ ಮನ ಒಲಿಸಿದೆ.

ಭ್ರಾಂತರಲ್ಲಿ ಶ್ರಾಂತರಲ್ಲಿ
ಕ್ರಾಂತಿ ತಂದೆ ಮೋಹನಾ.
ಸೇವೆಗೊಂದು ಕಾಂತಿ ತಂದೆ
ಅದಕೆ ಆದೆ ವಾಹನಾ.

ನಡೆಯ ನುಡಿಯ ಮಾಟದಿಂದ
ಚರಿತೆಗೆ ಅಚ್ಚಿರಿಸಿದೆ.
ಶರಣರಿಗೋ ಮರಣವಿಲ್ಲ
ಜನರನು ಎಚ್ಚರಿಸಿದೆ.

ಪ್ರತಿ ಜಯಂತಿ ವೈಜಯಂತಿ
ನವಮಾನವನುದಯಕೆ
ಆಹ್ವಾನವು ದಾನವಿಸಿದೆ
ಮಾನವ ಸದುಹೃದಯಕೆ.
*****

Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...