ಉಪದೇಶ

ಯೆಣ್ ನಾಯ್ ಇಂದಿನ್ ಗಂಡ್ ನಾಯ್ ಅಂಗೆ
ಸುತ್ಬಾರ್‍ದ್ ಸಂದಿ ಸಂದಿ!
ಬೀದೀಲ್ ಓಗೋ ಯೆಣ್ಣೆಂಗಿಸ್ಗೆ
ಕಣ್ ಆಕೋನು ಅಂದಿ! ೧

ಕುಡಕನ್ ಕೈಲಿ ಯೆಂಡ್ ಇದ್ದಂಗೆ
ನಿನಗೌಳ್ ಒಬ್ಳು ಯೆಡ್ತಿ!
ಇದ್ದಿದ್ ಬುಟ್ಟಿ ಇಲ್ದಿದ್ ಬೇಡಿ
ಸಿಕ್ದೌಳ್ ಇಂದ್ ಯಾಕ್ ಓಡ್ತಿ? ೨

ಬೇರೆಯೋಳ್ಗೆ ನೋಡ್ದೋರ್‍ಗ್ ಇರೊ
ನರಕ ತಿನ್ಲಿ ಠಕ್ಕರ್!
ಇಲ್ದೋಳ್ ಅಲೆಯೋ ಸಂಬ್ರಂದಲ್ಲಿ
ಇರೋಳ್ ಕೊಟ್ಟಾಳ್ ಚಕ್ಕರ್! ೩
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೊಡ್ಡವರು
Next post ನಿರಂತರ ಸ್ತ್ರೀ ದೌರ್ಜನ್ಯವೂ-ಕಣ್ಣೊರೆಸುವ ದೈವತ್ವದ ಪರಿಕಲ್ಪನೆಯೂ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…