ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಜೀವಂತವಿದ್ದಾಗಲೇ ದಂತ ಕತೆಯಾದವರು.
ಇವರು ೨೦೦೨ರಲ್ಲಿ ಭವ್ಯ ಭಾರತದ ೧೧ನೆಯ ರಾಷ್ಟ್ರಪತಿಗಳಾಗಿ ಅಧಿಕಾರ ಸ್ವೀಕರಿಸಿದ ಹೊಸತರಲ್ಲಿ ದಿನಾಂಕ ೧೪-೦೮-೨೦೦೨ರಲ್ಲಿ ಬೆಳ್ಳಂಬೆಳಗ್ಗೆ ಬಹುದೊಡ್ಡ ಅಧಿಕಾರಿ ಬಹುಶಃ ಸ್ವಜಾತಿಯೆಂಬ ಸಲುಗೆಯಿಂದಲೋ ಏನೋ ಇವರನ್ನು ಕಾಣಲು ಬಂದಿದ್ದರು.
“ಸಾರ್ ನಿಮ್ಮ ಕಚೇರಿಗೆ ಮೇಲಿಂದ ಮೇಲೆ ಬರುತ್ತಿರುವ ಆ ಅಧಿಕಾರಿ ಬಗೆಗೆ ನಿಮಗೆ ತಿಳಿಯದೆಂದು ಅನಿಸುವುದು! ಆತ…?’ ಎಂದು ಇನ್ನು ಏನೇನೋ ಹೇಳಲು ಉತ್ಸಾಹಕನಾಗಿದ್ದನು.
‘ಕಲಾಂಜೀಯವರು ಮಧ್ಯದಲ್ಲೇ ಆ ವ್ಯಕ್ತಿ ನಿನಗೆ ಪರಿಚಿತರೇ?’ ಎಂದು ಬಂದಿದ್ದ ಅಧಿಕಾರಿಯನ್ನು ಕೇಳಿದರು.
‘ಇಲ್ಲ! ನನಗೆ ಪರಿಚಿತರಲ್ಲ. ನಾನು ಬೇರೊಬ್ಬ ಅಧಿಕಾರಿಯಿಂದ ವಿಷಯ ಸಂಗ್ರಹಿಸಿದ್ದೇನೆ. ಅದನ್ನು ನಿಮಗೆ ಹೇಳಿದರೆ ಸುರಕ್ಷಿತವೆಂದು ಭಾವಿಸಿ ಬಂದಿದ್ದೇನೆ’ ಎಂದ.
‘ನಿಮಗೆ ಅವರು ಗೊತ್ತಿಲ್ಲ. ಇನ್ನೊಬ್ಬರ ಮಾತು ಕಟ್ಟಿಕೊಂಡು ನನ್ನಲ್ಲಿಗೆ ಬಂದಿರುವೆ. ಅದು ಸತ್ಯವೆಂದು ನಿನಗೆ ಖಾತರಿ ಇದೆಯೇ?’ ಎಂದು ಕಲಾಂಜೀಯವರು ಮತ್ತೇ ಬಂದಿದ್ದವರನ್ನು ಪ್ರಶ್ನಿಸಿದರು.
‘ನನಗೆ ಹೇಳಿದವರೂ ನಮ್ಮ ಜಾತಿಯವರು. ಬಹಳ ದೊಡ್ಡ ಅಧಿಕಾರಿಯವರು, ಅವರು ಸುಳ್ಳು ಹೇಳಲಾರನೆಂದು ನಂಬಿಕೆ ನನ್ನದು ಅದನ್ನು ನಿಮಗೆ ಹೇಳಿದರೆ ನಿಮ್ಮ ಪದವಿಗೆ ಒಳ್ಳೆಯದೆಂದು ಬಂದಿರುವೆ’ ಎಂದ.
‘ಅವರಿಗೂ ಇವರಿಗೂ ವೃತ್ತಿ ಮತ್ಸರವಿರಬೇಕು. ಜಾತಿ, ಮತ, ಕುಲ, ಧರ್‍ಮ, ವೈಷಮ್ಯವಿರಬೇಕು. ಇದರಿಂದ ನನಗೇನು ಧಕ್ಕೆಯಾಗದು. ನನಗೇ ನನ್ನದೇ ಆದ ಬಹಳಷ್ಟು ಕೆಲಸಗಳಿವೆ. ಇನ್ನೊಬ್ಬರ ಗೊಡವೆ, ವೈಯಕ್ತಿಕ ವಿವರಗಳು, ನನಗೆ ಬೇಕಿಲ್ಲ! ಇದರಿಂದ ದೇಶಕ್ಕೆ, ವಿಶ್ವಕ್ಕೆ ಏನಾದರೂ ಪ್ರಯೋಜನವಿದೆಯೇ? ಹೇಳಿ ನಾನು ಕಾಲವನ್ನು ಮೀಸಲಿಡುತ್ತೇನೆ…’ ಎಂದು ಕಲಾಂಜೀಯವರು ಬಂದಿದ್ದ ಅಧಿಕಾರಿಗೆ ನೇರವಾಗಿ ಅಂದರು.
ಬಂದಿದ್ದ ಅಧಿಕಾರಿಯ ಟೈ-ಕೋಟು-ಕ್ರಾಪು ಎತ್ತತ್ತಲೋ ಹಾರಿತು! ಅದನ್ನು ಸರಿ ಮಾಡಿಕೊಳ್ಳುತ್ತಾ ಅಲ್ಲಿಂದ ಒಂದೇ ಉಸಿರಿಗೆ ಓಟ ಕಿತ್ತವರು ಇನ್ನೆಂದೂ ಅವರ ಎದುರಿಗೆ ಓಡಾಡಲಿಲ್ಲ.
ಪ್ರತಿ ಮನೆ, ಸಂಘ, ಸಂಸ್ಥೆ, ನಿಗಮ, ಇಲಾಖೆ, ಗುಂಪು… ಕಚೇರಿಯಲ್ಲಿ ಇಂಥವರು ಇರುವವರಲ್ಲವೇ?
*****