ಅಂದಿನ ಗ್ರೀಕ ಪ್ರಮುಖ ಪಟ್ಟಣಗಳಲ್ಲಿ Agros ಕೂಡ ಒಂದು. Tantalus ನ ಉತ್ತರಾಧಿಕಾರಿಗಳಾದ Atreus ಮತ್ತು Thyestes ಸಹೋದರರು ಸಿಂಹಾಸನಕ್ಕಾಗಿ ಕಚ್ಚಾಡುತ್ತಾರೆ. Thyestes ತನ್ನ ಸಹೋದರ Atreus ಪತ್ನಿಯನ್ನು ಅಪಹರಿಸಿ ಭ್ರಷ್ಟಗೊಳಿಸಲು ಕ್ರೋಧಗೊಂಡ Atreus ಸೇಡಿಗಾಗಿ ಗೌಪ್ಯವಾಗಿ Thyestes ಮಕ್ಕಳನ್ನು ಕೊಂದು ಅವರ ದೇಹ ಮಾಂಸದಿಂದ ತಯಾರಿಸಿದ ಭಕ್ಷ್ಯವನ್ನು ತಂದೆಯಾದ Thyestes ಉಣ್ಣುವಂತೆ ಮಾಡುತ್ತಾನೆ. ಇದರಿಂದ ತನ್ನ ಮಕ್ಕಳ ಮಾಂಸವನ್ನೆ ತಿಂದು ಅಪಕೀರ್ತಿಗೆ ಒಳಗಾಗುವ Thyestes ಬಹಿಷ್ಕಾರಕ್ಕೆ ಒಳಪಡುತ್ತಾನೆ ಮತ್ತು ಅಲ್ಲಿಯೇ ಸಾಯುತ್ತಾನೆ. Thyestes ಮೂರನೇ ಮಗ Aegisthus ನನ್ನು Atreus ಗುಪ್ತವಾಗಿ ಬೆಳೆಸುತ್ತಾನೆ. ಆದರೆ ಆತ ತನ್ನ ಬೆಳೆಸಿದ ಚಿಕ್ಕಪ್ಪನನ್ನು ಕೊಲ್ಲಲು Atreus ಮಕ್ಕಳಾದ Agamemnon ಹಾಗೂ Menelaus ಮುಂದೆ ರಾಜ್ಯಭಾರವಹಿಸಿಕೊಳ್ಳುತ್ತಾರೆ. ಅವರಿಬ್ಬರೂ ಸ್ಪಾರ್ಟಾದ ರಾಜ Tyndareos ಮಕ್ಕಳನ್ನು ಮದುವೆಯಾಗುತ್ತಾರೆ. ಹಿರಿಯವನಾದ Agamemnon ನು Clytemnestra ವಿವಾಹವಾಗಿ ತನ್ನ ತಂದೆಯಿಂದ ಬಂದ ರಾಜ್ಯ Agros ರಾಜನಾದರೆ, ಆತನ ಸಹೋದರ Menelaus Clytemnestraಳ ಸಹೋದರಿ ಹೆಲನಳನ್ನು ವಿವಾಹವಾಗಿ ಸ್ಪಾರ್ಟಾದ ರಾಜ Tyndareos ಉತ್ತರಾಧಿಕಾರಿಯಾಗುತ್ತಾನೆ.
ಆದರೆ ಕಥೆ ಇಲ್ಲಿಗೆ ಸುಖಾಂತ್ಯವಾಗುವುದಿಲ್ಲ. ಕಾರಣ Atreus ಪಿತೃವಾದ Tantalus ದೇವತೆಗಳಿಗೆ ಅತಿ ಹತ್ತಿರದವನಾಗಿದ್ದು ಅವರೊಂದಿಗೆ ಭೋಜನಗೈಯುತ್ತಿದ್ದ. ಆದರೆ ಅವರ ರಹಸ್ಯವನ್ನು ಬಳಸಿ ಒಳಸಂಚು ಮಾಡಿದ್ದಕ್ಕಾಗಿ ಆತನ ಶಾಪಗ್ರಸ್ತನಾತ. ಹೀಗಾಗೆ ಆ ಬಾಕಿ ಇನ್ನೂ ಖಾಲಿಯಾಗಿಲ್ಲ. ಕಥೆ ತಿರುವಿನೊಂದಿಗೆ ಸಾಗುತ್ತದೆ.
ಸ್ಪಾರ್ಟಾದ ರಾಜ Menelaus ಪತ್ನಿ Helen ಅಪೂರ್ವ ಸುಂದರಿ ಹಾಗಾಗೇ ಆಕೆಯನ್ನು ವರಿಸಲು ವರಗಳು ಸಾಲುಗಟ್ಟಿದ್ದರೂ ಆಕೆ Menelaus ನನ್ನೆ ವರಿಸುತ್ತಾಳೆ. ಆದರೆ ಮುಂದೆ Troyನ ರಾಜ Priam ತನ್ನ ಮಗ ಪ್ಯಾರಿಸ್ ನನ್ನು ಸ್ಪಾರ್ಟಾಗೆ ಪ್ರತಿನಿಧಿಯಾಗಿ ಕಳಿಸುತ್ತಲೂ ಹೆಲನ್‌ಳ ಸೌಂದರ್ಯಕ್ಕೆ ಮರುಳಾಗಿ ಆತ ಆಕೆಯನ್ನು ಅಪಹರಿಸಿಕೊಂಡು ಹೋಗುತ್ತಾನೆ. ಅಪ್ರತಿಮ ಸೌಂದರ್ಯವತಿಯಾದ ಆಕೆಯನ್ನು ಪುನಃ ಕರೆತರಲು ಗ್ರೀಕ ಸೈನ್ಯ ನಗರಕ್ಕೆ ಧಾಳಿ ಮಾಡುತ್ತದೆ ಆದರೆ ಜಯ ಸಂಪಾದಿಸಲು ದೇವತೆಯಾದ Artemis ಖುಷಿಪಡಿಸಲು ಕನ್ಯೆಯೋರ್ವಳನ್ನು ಬಲಿಕೊಡುವಂತೆ ನೀಡಿದ ಪ್ರವಾದಿ Calchas ಸಲಹೆಯಂತೆ ತನ್ನ ಮಗಳಾದ Iphigeniಳನ್ನು ಬಲಿನೀಡುತ್ತಾನೆ. ಆ ಮೂಲಕ ಗ್ರೀಕ ಸೈನಿಕರು ಮರದ ಕುದುರೆಯ ಕುತಂತ್ರ ಪ್ರಯೋಗಿಸಿ ನಗರವನ್ನು ವಶಪಡಿಸಿಕೊಂಡು ವಿಜಯದ ಸಂಭ್ರಮ ಹೊತ್ತು ಬರುತ್ತಾರೆ. ಆದರೆ ಪತಿ ಪುತ್ರಿಯನ್ನು ಬಲಿಕೊಟ್ಟು ತಾಯ್ತನವನ್ನು ನಾಶ ಮಾಡಿದ್ದಾನೆ. ಹೀಗಾಗಿ ಸೇಡಿನಿಂದ ಕುದಿಯುವ Clytemnestra ಆತನ ವಿರುದ್ಧ ಕ್ರೋಧಗೊಳ್ಳುತ್ತಾಳೆ. ನಾಟಕೀಯವಾಗಿ ವರ್ತಿಸಿ ಪತಿಯನ್ನು ಮೋಸದಿಂದ ತನ್ನ ಪ್ರೇಮಿ Agamemnon ನ ದಾಯಾದಿ ಸಹೋದರ Aegisthus ಜೊತೆಗೂಡಿ ಆತನ ಕೊಲೆಗೈಯುತ್ತಾಳೆ. ಎಲ್ಲವೂ ಸರಿಯಾಗಿಯೇ ನಡೆದಿದೆಯೆಂದು ಹೊರಬರುತ್ತಲೇ ಮಗ Orestes ತನ್ನ ತಂದೆಯ ಕೊಲೆಗೆ ಪ್ರತಿಕಾರವಾಗಿ ಇವರಿಬ್ಬರನ್ನೂ ಕೊಲ್ಲುತ್ತಾನೆ. ಹೀಗೆ ಸಾಲು ಸಾಲು ಕೊಲೆಗಳಿಂದಲೇ ಕಥೆ ಕೂಡಿಕೊಂಡಿದ್ದು.
ತ್ರಿವಳಿ ನಾಟಕಗಳಿಂದ ಕೂಡಿದ Oresteia ವಂಶಪಾರಂಪರ್ಯದಿಂದ ಬಂದ ತಪ್ಪಿಗೆ ಹೇಗೆ ಮೂರು ತಲೆಮಾರುಗಳು ಪರಿತಪಿಸುತ್ತವೆ ಎಂಬ ಪರಿಪೂರ್ಣ ವಿಷಯವಸ್ತುವನ್ನು ತೆರೆದಿಡುತ್ತದೆ. ಮೊದಲ ನಾಟಕ Agamemnon ದುಃಖ ದುರಂತಗಳ ಎತ್ತಿ ತೋರಿಸುವ ದೃಷ್ಟಾಂತ ರೂಪಕ ಕಥೆಯಾಗಿದೆ. ಇಲ್ಲಿ Troy ನಗರದ ಅವನತಿ ಹಾಗೂ ರಾಜ Agamemnon ಜಯಶೀಲನಾಗಿ ಹಿಂತಿರುಗಿ ಬರುವ ಸನ್ನಿವೇಶದೊಂದಿಗೆ ಪ್ರಾರಂಭವಾಗುತ್ತದೆ. ವಿಜಯಿಯಾದ ಆತ ಒಬ್ಬನೇ ಬಂದಿಲ್ಲ ಬದಲಿಗೆ ರಾಜ ಮಗಳಾದ ಪ್ರವಾದಿನಿ Cassandra ತನ್ನೊಂದಿಗೆ ಕರೆತಂದಿದ್ದಾನೆ. ಇಲ್ಲಿಯೇ ಸಂಗತ ಅಸಂಗತಗಳ ಸಂದಿಗ್ಧ ಬದುಕು ಬಿಚ್ಚಿಕೊಳ್ಳುತ್ತದೆ. ಸಹೋದರನ ಪತ್ನಿಯನ್ನು ಮರಳಿ ಪಡೆಯಲು ಪ್ರತಿಷ್ಟೆಯನ್ನು ಸಂಪಾದಿಸಲು ಹೆತ್ತ ಮಗಳನ್ನು ಬಲಿಕೊಡುವ ಸ್ವಾರ್ಥ ಮುಖದ ಪುರುಷ ದಬ್ಬಾಳಿಕೆಗೆ Clytemnestraಳ ಮಾತೃಹೃದಯ ಸಹಜವಾಗೇ ಕೆರಳುತ್ತದೆ. ಕಾರುಣ್ಯ ರಹಿತಳಾಗಿ ಬಲೆಯನ್ನು ಮುಚ್ಚಿ ಪತಿಯನ್ನು ಹತ್ಯೆಗೈಯುವ ದುಷ್ಟಳಾಗಿ ಕಂಡುಬರುತ್ತಾಳೆ. Aegisthus ಕೂಡ ತನ್ನ ತಂದೆಯ ಕೊಲೆಗೆ ಸೇಡು ತೀರಿಸಿಕೊಳ್ಳುತ್ತಾನೆ. ಆದರೆ ತೆರವಾದ ಸಾಮ್ರಾಜ್ಯದ ಗದ್ದುಗೆಯ ತನ್ನ ಪ್ರೇಮಿ Aegisthus ನೊಂದಿಗೆ ಏರುವ ಆಕೆಯ ಕನಸು ನನಸಾಗುವುದಿಲ್ಲ. ನಾಟಕದ ಉದ್ದಕ್ಕೂ ಅಪರಾಧಗಳು ಒಂದರ ನಂತರ ಮತ್ತೊಂದು ಸರಣಿ ಸಾಲುಗಳಂತೆ ಬಲೆಗಟ್ಟಿ ನಿಲ್ಲುತ್ತವೆ. ಉದ್ದಕ್ಕೂ ನಾಯಕಿ ಪಾತ್ರವೇ ಸುತ್ತುವರೆದಿದೆ.
ಇನ್ನು Agamemnon ಗೆದ್ದು ತಂದ Troyನ ರಾಜ Priam ಮಗಳಾದ Cassandra ಪ್ರವಾದಿನಿಯಾಗಿದ್ದು ರಾಜ ಹಾಗೂ ತನ್ನ ಸ್ವಂತ ಸಾವಿನ ದೃಶ್ಯವನ್ನು ಕಂಡು ಹೌಹಾರುತ್ತಾಳೆ. ಅದರೆ ಯಾರೊಬ್ಬರೂ ಅಕೆಯನ್ನು ಪುಷ್ಟಿಕರಿಸುವುದಿಲ್ಲ.
ಎರಡನೆ ನಾಟಕ The Libation Bearers ದಲ್ಲಿ ನೈತಿಕ ಯುದ್ಧದ ಗತಿಯನ್ನು ಕಾಣುತ್ತೇವೆ. Agamemnon ಮತ್ತು Clytemnestraಳ ಒಬ್ಬನೆ ಮಗನಾದ Orestes ಅಪೊಲೊ ದೇವತೆಯ ಆಜ್ಞೆಯಂತೆ ತನ್ನ ತಂದೆಯ ಸಾವಿಗೆ ಕಾರಣರಾದ ತನ್ನ ತಾಯಿ ಹಾಗೂ ಆಕೆಯ ಪ್ರಿಯಕರನ ಕೊಂದು ಮಗನ ಕರ್ತವ್ಯವನ್ನು ಪೂರೈಸುತ್ತಾನೆ. ಆದರೆ ಹೆತ್ತ ತಾಯಿಯನ್ನು ಹತ್ಯೆಗೈದ ಕಾರಣ ಫ್ಯೂರಿಗಳ ಅವಕೃಪೆಗೆ ಒಳಗಾಗಿ ಆತ ಹುಚ್ಚನಾಗುತ್ತಾನೆ.
ಆದಾಗ್ಯೂ ಕೊನೆಯ ನಾಟಕ Eumenides ದಲ್ಲಿ Orestes ನ ರಕ್ತದಿಂದ ಮಲಿನವಾದ ಕೈಗಳು ದೇವರಿಂದ ಮಾತ್ರ ಪವಿತ್ರಗೊಳಿಸಲು ಸಾಧ್ಯ. ಹಾಗಾಗೆ ಆತ ಢೆಲ್ಫಿಯ ಅಪೋಲೊ ದೇಗುಲಕ್ಕೆ ಬರುತ್ತನೆ. Eumenides ಆತನನ್ನು ಹಿಂಬಾಲಿಸುತ್ತವೆ. ಅಲ್ಲಿಂದ ಆತ ಅಥೆನ್ಸಗೆ ನ್ಯಾಯ ನಿರ್ಣಯಕ್ಕಾಗಿ ಬರುತ್ತಲೂ ಆತನ ಎಲ್ಲ ಅಪರಾಧಗಳು ನಾಶವಾಗಿ ಆತ ತನ್ನ ತಂದೆಯ ಸಾಮ್ರಾಜ್ಯದ ವಾರಸುದಾರನಾಗುತ್ತಾನೆ. ಸೇಡಿನ ಕಾಯಿದೆಯ ದೇವತೆಗಳಾದ ಫ್ಯೂರಿಗಳನ್ನು ಅಥೆನಾ ಮನವೊಲಿಸಲು ಅವು ಕರುಣಾ ಪೂರಿತ Eumenidesಗಳಾಗಿ ಪರಿವರ್ತನೆಗೊಳ್ಳುತ್ತವೆ.
ಈ ತ್ರಿವಳಿ ನಾಟಕಗಳು ಹೊಸ ಬದುಕಿನ ಉದಯ ಹಾಗೂ ಮನುಷ್ಯನ ಆತ್ಮಬಲದ ಗೆಲುವನ್ನು ಪ್ರಸ್ತುತ ಪಡಿಸುತ್ತದೆ. ಇವೆಲ್ಲವೂ ಇಂದಿಗೂ ಹಾಗೆ ಸ್ಥಿರವಾಗೇ ಇರುವ ಮಾನವ ಸಂವೇದನೆಗಳು. ಅಪರಾಧ ಮತು ಶಿಕ್ಷೆಗಳ ಮೇಲಾಟವನ್ನು ಅದ್ಭುತವಾಗೇ ಪರದೆ ಮುಂದೆ ಇಳಿಬಿಟ್ಟದ್ದ. ಅಪರಾಧ ಶಿಕ್ಷಗೆ ಗುರಿಯಾಗುವುದು, ಪುನಃ ಶಿಕ್ಷೆ ಅಪರಾಧಕ್ಕೆ ಪ್ರೇರಣೆಯಾಗುವುದು ಇಲ್ಲಿಯ ಸ್ವಾರಸ್ಯ. ಜೀವನದ ಪಾತ್ರಗಳು ಸಾತ್ವೀಕ ಚಹರೆಹೊಂದಿಲ್ಲದೇ ಇರುವುದು, ಚರಿತ್ರೆಯ ಪುಟಗಳು ರಕ್ತದಿಂದ ಲೇಪಿತವಾಗಿರುವುದು-ಸಂಕಷ್ಟಗಳ ದಾರಿ ಹೇಗೆ ಮನುಷ್ಯನನ್ನು ಜ್ಞಾನಿಯಾಗಿಸುತ್ತದೆ ಎಂಬುದೆಲ್ಲ ಶ್ರೇಷ್ಟ ಸಂಗತಿಗಳಾಗಿವೆ.
ಗ್ರೀಸನ ಪ್ರಮುಖ ೩ ದುರಂತ ನಾಟಕಕಾರರಲ್ಲಿ ಮೊದಲನೆಯವನು Aeschylus. ಆತ ಬರೆದ ಸುಮಾರು ೯೦ ಪುಸ್ತಕಗಳಲ್ಲಿ ಇಂದಿಗೆ ಲಭ್ಯವಿರುವುದು ಬರಿಯ ೭ ಮಾತ್ರ. ಪಾತ್ರಗಳ ಹೆಣೆಯುವಿಕೆಯಲ್ಲಿ ಬಹಳ ಪ್ರಬುಧ್ಧ. ಅಂತಹ ಒಂದು ಪಾತ್ರ ಸೃಷ್ಟಿ Clytemnestra. ಜಗತ್ತಿನ ನಾಟಕ ಸಾಹಿತ್ಯದಲ್ಲಿ ಲೇಡಿ ಮ್ಯಾಕಬೆತ್‌ಳಂತೆ ಈ ಪಾತ್ರವೂ ಕೂಡ ಅದ್ಭುತ ಪಾತ್ರ. ಆತ ಹೋಮರನ ಶೈಲಿಯಿಂದ ಬಹಳಷ್ಟು ಪ್ರಭಾವಿತನಾಗಿದ್ದ ಅಥೆನ್ಸನ ಗೌರವಾನ್ವಿತ ಹುಟ್ಟಿದ ಕ್ರಿ.ಸ್ತ ಪೂರ್ವ ೫೨೫ರಿಂದ ೪೫೬ರವರೆಗೆ ಬದುಕಿದ್ದ Aeschylus ಗ್ರೀಕ ಟ್ರಾಜಡಿಯ ಪಿತಾಮಹನೆಂದೆ ಪ್ರಸಿದ್ಧನಾಗಿದ.
*****