ಸೊಳ್ಳೆ ಒಂದಾದರೂ ಅದರ ಅಡ್ಡ ಪರಿಣಾಮ ಹತ್ತಾರು. ಹೀಗಾದರೆ ಹೇಗೆಂದು ದೇಶ ವಿದೇಶದ ಜನ ತಲೆಗೆ ಕೈಹೊತ್ತು ಕುಳಿತು ಬಿಟ್ಟಿದ್ದಾರೆ.
ಸೊಳ್ಳೆಯಲ್ಲಿ ಹಲವು ಬಗೆ, ಕೆಲವು ವಿಷಕಾರಿ ಸೊಳ್ಳೆಗಳಿವೆಯೆಂದು ಸೊಳ್ಳೆ ಕಡಿತದಿಂದ ಚಿಕೂನ್ ಗುನ್ಯಾ ಡೆಂಗೆಯಂತ ತೀವ್ರತರದ ಜ್ವರ, ನೆಗಡಿ, ಕೆಮ್ಮು ಇತ್ಯಾದಿ ಕಾಣಿಸಿಕೊಳ್ಳವುದರಿಂದ ಅದನ್ನು ಕೇವಲ ನಿರ್ಲಕ್ಷಿಸುವಂತಿಲ್ಲ ಎಂದು ಲಂಡನ್ ವೈದ್ಯರು ಈಗಾಗಲೇ ದೃಢಪಡಿಸಿರುವರು.
ಸೊಳ್ಳೆ ಕಡಿತದಿಂದ ಕಣ್ಣಿನ ದೃಷ್ಟಿಯೂ ಕಳೆದು ಕೊಳ್ಳುವ ಅಪಾಯವಿದೆಯೊಂದು ಲಂಡನ್‌ಲ್ಲೊಂದು ಇಂತಹ ಪ್ರಕರಣವೊಂದು ಈಗಾಗಲೇ ವರದಿಯಾಗಿ ಇಡೀ ವಿಶ್ವವನ್ನೇ ಗಢಗಢ ನಡುಗಿಸಿರುವುದು.
ಹೌದು! ೬೯ ವರ್ಷದ ಲಂಡನ್ ಮಹಿಳೆಯೊಬ್ಬರು ರಜೆಯ ಪ್ರವಾಸದಲ್ಲಿ ಕೆರಿಬಿಯನ್ ರಾಷ್ಟ್ರಕ್ಕೆ ತೆರಳಿದ್ದಳು. ಅಲ್ಲಿ ಸೊಳ್ಳೆ ಕಡಿತದಿಂದ ಚಿಕೂನ್‌ಗುನ್ಯಾಗೆ ತುತ್ತಾಗಿ ಕಣ್ಣನ್ನೇ ಕಳೆದುಕೊಂಡಿದ್ದಾಳೆ!
೨೦೧೪ರಲ್ಲಿ ಕೆರಿಬಿಯನ್ ದ್ವೀಪ ಗ್ರೆನಡಾಗೆ ತೆರಳಿದ್ದ ಮಹಿಳೆಗೆ ಸೊಳ್ಳೆ ಕಡಿದಿವೆ. ಬಳಿಕ ಆಕೆಗೆ ಜ್ವರ, ಮಂಡಿ, ಮಣೆಕಟ್ಟುಗಳ ನೋವು, ಸುಸ್ತು ಕಾಡಲಾರಂಭಿಸಿದೆ. ಇದಾದ ಸ್ವಲ್ಪ ದಿನಗಳ ಬಳಿಕ ಬಲಗಣ್ಣಿನಲ್ಲಿ ದೃಷ್ಟಿದೋಷ ಕಾಣಿಸಿಕೊಂಡಿದೆ.
ಆಗಸ್ಟ್ ೨೦೧೫ ರಲ್ಲಿ ಸ್ವದೇಶಕ್ಕೆ ಹಿಂದಿರುಗಿದ ನಂತರ ಅವರ ಕಣ್ಣಿಗೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು! ವೈದ್ಯರ ಬಳಿಗೆ ಹೋದಾಗ ಇದು ಚಿಕೂನ್ ಗೂನ್ಯಾಗೆ ಜ್ವರದಿಂದ ಈ ದೋಷ ಕಾಣಿಸಿಕೊಂಡಿದೆಯೆಂದು ದೃಢಪಟ್ಟಿದೆ. ಚಿಕೂನ್‌ಗುನ್ಯಾಗ್ ತುತ್ತಾದವರು ಜೀವನ ಪರ್ಯಂತ ಕೆಲ ಸಮಸ್ಯೆಗಳಿಗೆ ಖಂಡಿತ ತುತ್ತಾಗುವುದುಂಟು. ಇದರಲ್ಲಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯೂ ದಟ್ಟವಾಗಿದೆಯೆಂದು ವೈದ್ಯರು ದೃಢಪಡಿಸಿರುವರು.
ಅಬ್ಬಾ! ಸೊಳ್ಳೆಗಳೆ… ಇನ್ನು ಬರುಬರುತ್ತಾ ಏನೆಲ್ಲಾ ಅನಾಹುತ ಮಾಡಬಲ್ಲವೆಂಬುದನ್ನು ಈಗಲೇ ಊಹಿಸುವುದು ಕಷ್ಟ ಸಾಧ್ಯವಾದರೂ ಸೊಳ್ಳೆಗಳಿಂದ ಬಲು ಎಚ್ಚರಿಕೆ ವಹಿಸುವುದೂ ಸಣ್ಣಪುಟ್ಟ ಮಕ್ಕಳನ್ನು ರಕ್ಷಿಸುವುದೂ ನಮ್ಮೆಲ್ಲರ ಕರ್ತವ್ಯಗಳಲ್ಲಿ ಒಂದು ಅಲ್ಲವೇ??
*****