ತಾತನೊಂದಿಗೆ ಆಡುವುದೆಂದರೆ
ಮೈಮನ ಕುಣಿಯುವುದು
ಅಪ್ಪ ಅಮ್ಮಂದಿರ ಮರೆತುಬಿಡುವೆನು
ಬಿಟ್ಟೋಡುವೆನು ಓದು
ನನ್ನನು ನೋಡಿ ಬಿಡುವನು ತಾತ
ಸಂತಸದಲಿ ಬಾಯಿ
ಹೆಡಕಿನ ಮೇಲೆ ಹೊತ್ತ ಆತನು
ಆಗುವ ನನಗೆ ತಾಯಿ
ಕುರಿಮರಿ ಮಾಡಿದ ತಾತನು ಹಿಗ್ಗುತ
ಪೇಟೆಗೆ ಕರೆದೊಯ್ಯುವನು
ಆಟದ ಬೊಂಬೆ ಮಿಠಾಯಿಯನ್ನೂ
ಕೊಡಿಸಿ ಕರೆದು ತರುವನು
ಊಟಕೆ ಕರೆಯುತ ತಾತನು ತಾನು
ನನಗೆ ಉಣಬಡಿಸುವನು
ರಾತ್ರಿಯ ಹೊತ್ತು ಮಲಗುವ ಮೊದಲು
ಕಥೆಗಳನ್ನು ಹೇಳುವನು
ಜಳಕವ ಮಾಡಿಸಿ ಹಾಡನು ಹೇಳುತ
ಪೂಜೆಯ ಮಾಡುವನು
ನಿತ್ಯವೂ ಹೀಗೆ ತಾ ಮಗುವಾಗಿ
ನನ್ನನು ಸಾಕುವನು
*****


















