ಅಮ್ಮನು ಮಾಡಿದ ತಿಂಡಿ
ತಿನ್ನಲ್ಲ ಅವಳು ಚಂಡಿ
ದಿನವೂ ಅವಳಿಗೆ ಬೇಕು
ಬೇಕರಿ ಬ್ರೆಡ್ಡು ಕೇಕು
ಉಂಡೆ ಚಕ್ಕುಲಿ ಎಲ್ಲ
ಕಣ್ಣೆತ್ತಿ ನೋಡೋದಿಲ್ಲ.
ಸೊಪ್ಪು ತರಕಾರಿ ಎಲ್ಲ
ತಟ್ಟೆ ಕೆಳಗ್ಹೋಯ್ತಲ್ಲ
ಬಿಡ್ತಾಳೆ ಲೋಟದಲ್ಲಿ ಹಾಲ
ಕುಡಿತಾಳೆ ಕೊಕ್ಕೊಕ್ಕೋಲ
ಸಂಜೆಗೆ ಬೇಕು ಪಪ್ಸು
ಬ್ಯಾಗಲ್ಲಿರಬೇಕು ಚಿಪ್ಸು
ಕುರ್‌ಕುರೆ ತಿನ್ಬೇಕಂತಾಳೆ
ಕರ್ಕರೆಯನ್ನೇ ಮಾಡ್ತಾಳೆ
ಕಡ್ಡಿಯಂತೆ ಕಾಡ್ತಾಳೆ
ಉಫ್ ಅಂದ್ರೆ ಹಾರೋಕ್ತಾಳೆ.
*****