ನಮ್ಮ ಪುಟ್ಟ ಶಾಲೆಗೆ ಹೊರಟ
ಪಾಠಿಚೀಲ ಹೆಗಲಿಗಿಟ್ಟ
ಅಮ್ಮನಿಗೆ ಹೇಳಿ ಟಾಟ
ಮನೆಯ ಗೇಟು ತೆರೆದುಬಿಟ್ಟ
ದಾರಿಯಲ್ಲಿ ಗೆಳೆಯರು
ಜೊತೆಗೆ ಬಂದು ಸೇರುವರು
ಕರಿಯ ಕೆಂಚ ಜಾನಿ ಹುಸೇನರೆಲ್ಲರು
ಒಂದುಗೂಡಿ ನಡೆವರು
ರಾತ್ರಿ ಬರೆದ ಮನೆಗೆಲಸ
ಅಪ್ಪ ಅಮ್ಮ ಕೊಟ್ಟ ಕೆಲಸ
ಟಿ.ವಿ.ತೋರಿದ ಚಿತ್ರ ವಿಚಿತ್ರ
ಎಲ್ಲ ಬಯಲಾಗುವುದು ಮಿತ್ರನ್ಹತ್ರ
ಗುರುವಿಗೊಂದು ನಮನ
ಅಳುವ ಗೆಳೆಯನಿಗೆ ಸಾಂತ್ವನ
ಇದ್ದ ಬಳಪ ಎರಡು ಚೂರು
ಒಂದು ಇವಗೆ ಇನ್ನೊಂದು ಅವಗೆ
ಮಗ್ಗಿ ಕಲಿ ಹಿಗ್ಗಿ ನಲಿ
ಒಳ್ಳೆ ಮಾತು ನೀತಿ ಕಲಿ
ಎಂದರಿವರ ಮಿಸ್ಸು
ಅದೆಲ್ಲ ಇವಗೆ ಎಸ್ಸು
ಕಲಿಕೆಯಲ್ಲಿ ಮನ
ಗೆಳೆಯರಿಗೂ ಕಲಿಸುವ ಜಾಣತನ
ಶಾಲೆಗಿವನ ಹಿರೇಮಣಿ
ತಂದೆ ತಾಯಿಗೆ ಕಣ್ಮಣಿ.
*****