ಹಾರೈಕೆ

ಜೀವನವೆಂದರೆ ಹಾಗೀಗಲ್ಲ
ಅದೊಂದು ಸುಂದರ ಕವಿತೆ.
ದುಃಖ ದುಮ್ಮಾನ ಅರಿತೇ
ಪ್ರೀತಿ ಪ್ರೇಮ ಒಸರುವ ಒರತೆ.

ಜೀವನವೆಂದರೆ ಹಾಗೀಗಲ್ಲ
ಅದೊಂದು ದೀರ್‍ಘ ಪ್ರಯಾಣ
ಹುಟ್ಟಿನಿಂದ ಸಾವಿನವರೆಗೆ
ನಮ್ಮ ನಿಮ್ಮೊಡನೆ ಸಹಪ್ರಯಾಣ.

ಜೀವನವೆಂದರೆ ಹಾಗೀಗಲ್ಲ
ಅದೊಂದು ಹೃದಯ ಹೃದಯಗಳ ಸೇರಿಕೆ.
ಹಾಲುಜೇನು ಬೆರೆತಂತೆ
ಒಂದಕ್ಕೊಂದು ಹೊಂದುವಂತಹ ಬೆರಕೆ.

ಜೀವನವೆಂದರೆ ಹಾಗೀಗಲ್ಲ
ಅದೊಂದು ಕಾಣದ ಕೈ ಆಡುವ ಆಟ
ನಾವದರಲಿ ಸೂತ್ರಧಾರನ ದಾರಕೆ ಕಟ್ಟಿದ
ಪಾತ್ರಧಾರಿಗಳು ಮಾತ್ರ.

ಜೀವನವೆಂದರೆ ಹಾಗೀಗಲ್ಲ
ಅದೊಂದು ಉರಿಯುವ ಹಣತೆ
ನೋವುಗಳುರಿದು ಸಂತಸ ಚೆಲ್ಲುವ
ಹಣತೆ ಸಾಲಿನ ಬೆಳಕಿನ ಗಾಥೆ

ಎಲ್ಲೆಲ್ಲೂ ಮುಸುಕಿರುವ
ಕತ್ತಲೆ ಕಳಚಿ ಬೆಳಕ ಚೆಲ್ಲಲು
ಉರಿಯಲಿ ಹಣತೆಗಳು ಸದಾ
ಆರದಿರಲಿ ಬೆಳಕು, ಬೆಳಗಲಿ ಜೀವನದ ಹಾದಿ.

ಮೂಡಿಸಲಿ ಎಲ್ಲರಲಿ ಜೀವನದ ಅರಿವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಹಳಿದರೆ ಲೋಕ ಅದು ನಿನ್ನ ತಪ್ಪಲ್ಲ
Next post ಬೋನಸ್

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…