ಹೃದಯ ಮಂದಿರದಲೊಂದು
ಮೂರ್ತಿಯನು ಕಲ್ಪಿಸಿ |
ಭಕ್ತಿ ರಸ ಕುಸುಮದಿಂದ
ನಿನ್ನ ಪೂಜಿಪೆ ತಂದೆ ||೧||
ನನಗಿಲ್ಲ ಧನ ಧಾನ್ಯ
ನಾನಲ್ಲ ಜಗ ಮಾನ್ಯ |
ಪುಣ್ಯ ಕ್ಷೇತ್ರಕ್ಕೆ ಹೋಗಿ
ನಿನ್ನ ಸೇವೆಯ ಮಾಡಿ |
ಸುಖ ಗಳಿಸುವಾ ಭಾಗ್ಯ
ಎಸಗಿಲ್ಲ ತಂದೆ ||೨||
ಜನ ಸೇವೆ ಮಾಡುತಲಿ
ಕಾರ್ಯ ನಿರ್ವಹಿಸುತಲಿ|
ಈ ಜಗವ ಸಲಹೆಂದು
ನಿನ್ನ ಬೇಡುತ ನಿಂದು|
ಇಲ್ಲಿಂದಲೇ ನಿನ್ನ
ಧ್ಯಾನಿಸುವೆ ತಂದೆ ||೩||
*****
೧೮-೦೫-೧೯೭೭