ಕರೆ

ಚೆಲುವ ಬಣ್ಣಿಸಬಹುದು
ಒಲವ ಬಣ್ಣಿಸಬಹುದೆ?
ಹೇಗೆ ಬಣ್ಣಿಸಲದನು ನಲುಗದಂತೆ…

ಬಣ್ಣನೆಗೆ ಮೀರಿದುದು
ಹೀಗೆಂದು ತೋರುವುದು
ಚಂದಿರನ-ನೈದಿಲೆಯ ಸ್ನೇಹದಂತೆ

ನದಿಯ ಬಣ್ಣಿಸಬಹುದು
ಒಳಗುದಿಯ ಬಣ್ಣಿಸಬಹುದೆ
ಹೇಗೆ ಬಣ್ಣಿಸಲಿ ಕುದಿಯ ಕಲಕದಂತೆ…

ಬಣ್ಣನೆಗೆ ಮೀರಿದುದು
ಹೀಗೆಂದು ತೋರುವುದು
ಕಡಲಿನಲಿ ತುಯ್ಯುತಿಹ ನಾವೆಯಂತೆ

ಗಿರಿಯ ಬಣ್ಣಿಸಬಹುದು
ವಿರಹದುರಿಯ ಬಣ್ಣಿಸಬಹುದೆ
ಹೇಗೆ ಬಣ್ಣಿಸಲಿ ಉರಿಯು ಆರದಂತೆ…

ಬಣ್ಣನೆಗೆ ಮೀರಿದದು
ಹೀಗೆಂದು ತೋರುವುದು
ಕೃಷ್ಣನಾ ಕೊಳಲಿನ ಕರೆಯಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೈಸಿಕಲ್ಲು
Next post ಅರಮನೆ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…