ಅಳಲು

ಮೊಬೈಲು ಎಸ್ಸೆಮ್ಮೆಸ್ಸು ಬಂದು
ಭಾವಿಸುವರು ರದ್ದಿ ಕಾಗದದಂತೆ
ಕೋರಿಯರ್ ಆನ್‌ಲೈನು ಬಂದು
ಕೈಗೆ ಕೋಲು ಬಂದಂತೆ ಭಾವಿಸಿ

ಸಾಲದು ಎಂಬುದಕೆ
ಕಾಯಿನ್ ಬೂತು ವಕ್ಕರಿಸಿದ್ದು
ಬಿಟಿ ಬದನೆ ಬಂದಂತೆ
ಎನ್ನ ಕುಲಕ್ಕೆ ಆಯಿತು ಸಂಚಕಾರ

ಈ ಜಗತ್ತೇ ಹಾಗೆ-
ಹೊಟ್ಟೆ ತುಂಬಿಸುವವರಿಲ್ಲ
ಅರೆ ಹೊಟ್ಟೆಯಲಿ ಕಾದು ಕುಳಿತಿಹೆನು
ಚಾತಕ ಪಕ್ಷಿಯಂತೆ

ಎನ್ನ ಹೊಟ್ಟೆ ತುಂಬಿಸಿ
ನನ್ನ ನಂಬಿದವರ ಹಸಿವ ನೀಗಿಸಿ
ಸದಾ ಸಿದ್ಧ ನಿಮ್ಮ ಸೇವೆಗೆಂದು
ಊಹಿಸಿ ನನ್ನ ಸ್ಥಿತಿ-

ಬಳಿದಿಹರು ಎನ್ನ ಮೈಗೆ ಬಣ್ಣ ಕೆಂಪು
ಚಿಕ್ಕವರಿಂದ ದೊಡ್ಡವರವರೆಗೆ
ಮುಟ್ಟುವರು ಪ್ರೀತಿಯಲಿ
ಪಡುವರು ಸಂತಸ ಮೈ ಸವರುತಲಿ

ಕೋರ್‍ಟು ಕಛೇರಿ ಬಸ್ಟ್ಯಾಂಡಿನಲಿ
ಶಾಲಾ ಕಾಲೇಜು ಪೇಟೆ ಬಜಾರಿನಲಿ
ನನ್ನಯ ಠಾವು ಆದರೂ!
ಮುಖ ಹಾಕುವವರಿಲ್ಲ ನನ್ನ ಕಡೆಗೆ

ಜೋಕುಮಾರನ ಬಾಯಿಗೆ
ಮೆತ್ತಿದ ಬೆಣ್ಣೆಯಂತೆ
ಹೊಟ್ಟೆ ತುಂಬಿ ಬಿರಿದು ತುಳುಕುತಿದ್ದರೂ
ತುರುಕುತಿದ್ದರು ಎನ್ನ ಬಾಯಿಗೆ

ಆದರೀಗ!
ಕಳಾಹೀನ ಸವಕಲು ಮಸುಕು ಡಬ್ಬಿ
ಯಾರಿಗೂ ಬೇಕಿಲ್ಲ ನಾನು
ಯಾರಿಗೂ ಬೇಕಿಲ್ಲ ನಾನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಂಪ್ಯೂಟರ್‍
Next post ಹೀಗೊಂದು ನಾಯೀಕತೆ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…