ವಾಗ್ದೇವಿ – ೨೬

ವಾಗ್ದೇವಿ – ೨೬

ಗರ್ಭಿಣಿಗೆ ಊಟ ಉಪಚಾರ ಮಾಡಬೇಕೆಂಬ ಅರ್ತಿಯುಳ್ಳವರೆಲ್ಲರ ಲ್ಲಿಯೂ ಔತಣಕ್ಕೆ ಸಂದರ್ಭವಾಗಲಿಲ್ಲ. ಪ್ರಸೂತಕಾಲವು ಬಂದೊದಗಿತು. ಪ್ರಥಮ ಗರ್ಭವಾದ್ದರಿಂದ ಹೆಚ್ಚು ಜಾಗ್ರತೆ ತಕ್ಕೊಳ್ಳುವ ಅವಶ್ಯವಾಯಿತು. ಹೆಸರು ಹೋದ ಸೂಲಗಿತ್ತಿ ಸುಬ್ಬು, ತಿಮ್ಮ, ಅಕ್ಕುಮುಂಡಿ ಇವರನ್ನು ಮುಂದಾಗಿ ಕರೆಸಿಕೊಂಡು, ಭಾಗೀರಧಿಯು ಲವಮಾತ್ರ ಸಾವಕಾಶವಿಲ್ಲದೆ ಬಾಣಂತಿಗೆ ಅವಶ್ಯವಾಗುವ ವಿಶಿಷ್ಟ ಔಷಧಗಳನ್ನೂ ಬೇರೆ ಸನ್ನಾಹಗಳನ್ನೂ ಒದಗಿಸಿಟ್ಟು ಕೊಂಡಳು. ಹನ್ನೆರಡು ಗಂಟೆ ತೋಪಿಗೆ ಸರಿಯಾಗಿ ಸಮಯ ವನ್ನು ತಿದ್ದಿಟ್ಟ ಗಡಿಯಾರವನ್ನು ಒಂದು ಕೈಯಲ್ಲಿ ಹಿಡಿದುಕೊಂಡು ನೋಡುತ್ತಾ, ಇನ್ನೊಂದು ಕೈಯಿಂದ ಹುರಿಗಡ್ಲೆಕಾಳು ಒಂದೊಂದೇ ಬಾಯಿ ಯೊಳಗೆ ಹಾಕಿಕೊಳ್ಳುತ್ತಾ ಆಬಾಚಾರ್ಯನು ಹೊರಗೆ ಕೂತುಕೊಂಡನು. ಶಿರೋದಯವಾಯಿತೆಂದು ಒಳಗೆ ಬಟ್ಟು ಬಡೆದ ಶಬ್ದದಿಂದ ತಿಳಿದಾಕ್ಷಣ ಅವನು ಗಡಿಯಾರದ ಸಮಯವನ್ನು ಒಂದು ಕಾಗದದ ಚೂರಿನಲ್ಲಿ ಬರೆ ದಿಟ್ಟುಕೊಂಡು, ಮರೆಯದೆ ಅದನ್ನು ತಿಪ್ಪಾಶಾಸ್ತ್ರಿಯ ಕೈಯಲ್ಲಿ ಕೊಟ್ಟನು ಕೂಸು ಗಂಡೋ ಹೆಣ್ಣೋ ಎಂದು ತಿಳಿಯುವದಕ್ಕೋಸ್ಕರ ಆಬಾಚಾ ರ್ಯನು ಸೂತಿಕಾ ಗ್ರಹದ ಬಾಗಿಲಲ್ಲಿ ನಿಂತು, ಪ್ರಧಾನ ಸೂಲಗಿತ್ತಿ ಸುಬ್ಬು ವನ್ನು ವಿಚಾರಿಸಿದನು. ಮಗುವು ಅಳುವ ಸ್ವರಪರೀಕ್ಷೆಯಿಂದ ತಿಳಿಯುವಷ್ಟು ಬುದ್ಧಿ ತಮಗಿಲ್ಲವೇನೆಂದು ಅಡ್ಡ ಪ್ರಶ್ನೆಮಾಡಿದಾಗ ಅಚಾರ್ಯಗೆ ಸ್ವಲ್ಪ ನಾಚಿಗೆಯಾಗಿ ಅದೆಲ್ಲ ನಾನು ಚೆನ್ನಾಗಿ ಬಲ್ಲೆ ಎಂದು ಸುಮ್ಮಗೆ ಹೊರಗೆ ಹೋದನು. ಎರಡು ಮೂರು ದಿನಗಳಮೇಲೆ ಮಗುವಿಗೆ ಮಾಸುವ ಸಮ ಯದಲ್ಲಿ ಗಂಡು ಕೂಸನ್ನು ನೋಡಿ ಹೆಣ್ಣು ಹುಟ್ಟಿರಬೇಕೆಂದು ತಾನು ಮೊದಲು ಭಾವಿಸಿದ್ದು ತಪ್ಪೆಂದು ಅವನಿಗೆ ಗೊತ್ತಾಯಿತು.

ವೃದ್ಧಿ ಸೂತಕ ನಿವಾರಣೆಯಾಗಿ, ಹನ್ನೆರಡನೇ ದಿನ ಶಿಶುವಿಗೆ ಕಿವಿ ಚುಚ್ಚಿ ತೊಟ್ಟಲಲ್ಲಿ ಹಾಕಿ ಜಾತಕ ಕರ್ಮವನ್ನು ತೀರಿಸಿದರು. ಭಾನುವಾರ ಹುಟ್ಟಿದ ಹುಡುಗನಾದ ಕಾರಣ ಸೂರ್ಯನಾರಾಯಣನೆಂಬ ಹೆಸರಿಟ್ಟರು. ಮಗುವಿನ ಸೌಂದರ್ಯ ನೋಡಿದವರೆಲ್ಲರೂ ಉಲ್ಲಾಸಪಟ್ಟರು. ವಾಗ್ದೇ ವಿಗೂ ಭಾಗೀರಥಿಗೂ ತಮ್ಮಣ್ಣ ಭಟ್ಟಗೂ ಆ ಕೂಸು ಅಂಗೈ ಮೇಲಿನ ಲಿಂಗ ವೆಂಬಂತಾಯಿತು. ಅರೆ ಗಳಿಗೆಯಾದರೂ ಅದನ್ನು ಕೆಳಗೆ ಇಳಿಸಿದವರಿಲ್ಲ. ಆಬಾಚಾರ್ಯನು ಅದನ್ನು ಮರೆಯದೆ ಪ್ರತಿ ನಿತ್ಯವೂ ಸ್ವಲ್ಪ ಹೊತ್ತು ಆಡಿಸುವದಿತ್ತು. ಆ ಮನಮೋಹನ ಪಿಂಡವನ್ನು ನೋಡಿ ಚಂಚಲನೇತ್ರರ ಹೃದಯದಲ್ಲಿ ಪ್ರೇಮರಸ ಉತ್ಪನ್ನವಾಯಿತು. ದೇವರಿಂದ ಆಯುಷ್ಯ ಪಡೆದು ಜನ್ಮಕ್ಕೆ ಬಂದ ಹುಡುಗನಾದರೆ ಅವನು ತನ್ನ ಉತ್ತರಾಧಿಕಾರಿಯಾಗಲಿಕ್ಕೆ ಯೋಗ್ಯನೇ ಎಂದು ಅವರು ಬಾಯಿಬಿಟ್ಟು ವಾಗ್ದೇವಿಗೆ ಹೇಳಿದರು. ಮಗು ವಿನ ಪರಾಂಬರಿಕೆಯನ್ನು ವಾಗ್ದೇವಿಯು ಜತನದಿಂದ ತಕ್ಕೊಂಡದ್ದರಿಂದ ಆದು ಬೇಗನೆ ದೇಹಪುಷ್ಟಿಹೊಂದಿ ಪೂರ್ಣಮಿ ಚಂದ್ರನಂತೆ ವಿರಾಜಿಸಿತು. ಅದಕ್ಕೆ ಆ ಪಾದ ಮಸ್ತಕ ಪರಿಯಂತರ ಚಿನ್ನಾಭರಣಗಳಿಂದ ತುಂಬಿದರು. ದೃಷ್ಟಿ ತಾಗದ ಹಾಗೆ ಅದರ ಎರಡು ಗಲ್ಲಗಳಿಗೂ ಹಣೆಗೂ ಕಜ್ಜಲದ ಬೊಟ್ಟು ಗಳನ್ನು ಇಟ್ಟರೆ ಅದರ ಸೌಂದರ್ಯವು ಮತ್ತಷ್ಟು ಅರಳುವದು. ಬಾಲಲೀಲೆ ಯಿಂದ ಸರ್ವರಿಗೂ ಅದು ಮಂಜುಲವಾಯಿತು. ಅದನ್ನು ಎತ್ತಿಕೊಂಡು ತಿರುಗಲಿಕ್ಕೆ ಒಬ್ಬನಾದರೂ ಹೇಸನು. ಅದರ ಸರ್ವಾಂಗಗಳು ಅಷ್ಟು ನಿರ್ಮ ಲವಾಗಿದ್ದುವು!

ವಾಗ್ದೇವಿಗೆ ಪುತ್ರೋತ್ಸತ್ತಿಯಾದ ಒಸಗೆ ವೇದವ್ಯಾಸ ಉಪಾಧ್ಯಗೆ ಸಿಕ್ಕಿತು. ಚಂಚಲನೇತ್ರರನ್ನು ಪೀಡಿಸಲಿಕ್ಕೆ ಇನ್ನು ಹೆಚ್ಚು ಪ್ರಯಾಸವಿರ ದೆಂದು ಅವನಿಗೆ ಕೂಂಚ ಧೈರ್ಯಬಂತು. ಬಾಲಮುಕುಂದಾಚಾರ್ಯನು ಜನನದ ಸುವಾರ್ತೆಯನ್ನು ಕೇಳಿ, ಪುಳಕಿತನಾಗಿ ಭೀಮಾಚಾರ್ಯನ ಒಟ್ಟಿ ನಲ್ಲಿ ಕುಮುದಪುರಕ್ಕೆ ಹೋಗಿ ವಾಗ್ದೇವಿ ಪುತ್ರನ ದರ್ಶನ ಮಾಡಿ ಮಗುವಿಗೆ ಅಮೂಲ್ಯವಾದ ಪದಕ ಉಳ್ಳ ಸರವನ್ನು ಕೊಟ್ಟನು ಭೀಮಾಚಾರ್ಯನು ವಾಗ್ದೇವಿಯನ್ನು ನೋಡಿ ತುಂಬಾ ಸಂತೋಷಪಟ್ಟು ನಕ್ಕನು. “ಸುಪುತ್ರ ನೊಬ್ಬನೇ ಸಾಕು.” “ಏಕೋನಪಿ ಗುಣವಾನ್‌ ಪುತ್ರೋ ನಿರ್ಗುಣೇನ ಶತೈ ರಪಿ ಏಕಚಂದ್ರ ಜಗಜ್ಜ್ಯೋತಿ ನಕ್ಷತ್ರಂ ಕಿಂ ಪ್ರಯೋಜನಂ.” ಈ ವಚನ ವನ್ನು ಕೇಳರಿಯೆಯಾ? ಎಂದು ವಾಗ್ದೇವಿಗೆ ಕೇಳೋಣ ತಮ್ಮ ಆಶೀರ್ವಾದ ಕಟಾಕ್ಷದಿಂದ ಹಸುಳೆ ಪೂರ್ಣಾಯುವಾಗಲೆಂದಳು. ಅನುಮಾನ ಪಡಬೇಡ ಶ್ರೀಪಾದಂಗಳವರ ಪ್ರಭಾವದಿಂದ ಈ ಹುಡುಗನು ಪ್ರತಾಪಿ ಪುರುಷನಾಗು ವನು. ಅವನ ಪರಾಂಬರಿಕೆಯನ್ನು ಚೆನ್ನಾಗಿ ಮಾಡೆಂದು ಬುದ್ಧಿ ಹೇಳಿ ಭೀಮಾಚಾರ್ಯನು ವಾಗ್ದೇವಿಯ ಮುಖವನ್ನೇ ನೋಡಲು ಅವಳು ಗಹ ಗಹಿಸಿ ನಕ್ಕಳು. ಅಷ್ಟರಲ್ಲಿ ಸಾಲಗಾರರ ತಗಾದೆ ಜೋರಾಗಿಯದೆ ಎಂದು ಮಗ ನಾಗನಾಥನ ಕಾಗದಗಳು ಟಾಕೋಟಾಕ್‌ ಬಂದು ತಲ್ಲಿದ್ದರಿಂದ ಹೆಚ್ಚು ದಿವಸ ತಾಮಸ ಮಾಡಲಿಕ್ಕಾಗದೆ ಆಚಾರ್ಯನು ಊರಿಗೆ ಮರಳ ದನು. ಹೋಗುವ ಸಮಯ ಅವನು ಚಂಚಲನೇತ್ರರನ್ನು ಕಂಡನು. ಅವರು ಸಂತೋಷಪಟ್ಟು ಸ್ವಲ್ಪ ಹಣವನ್ನು ದಕ್ಷಿಣೆರೂಪವಾಗಿ ಕೊಟ್ಟು ಮನ್ನಣೆ ಮಾಡಿದರು. ಏವಂಚ ವಾಗ್ದೇವಿಯ ಬಾಲನನ್ನು ನೋಡಲಿಕ್ಕೆ ಬಂದುದರಿಂದ ಭೀಮಾಚಾರ್ಯಗೆ ಕೊಂಚ ಲಾಭವೇ ಸಿಕ್ಕಿತು. ಹುಡುಗನು ಲಕ್ಷ್ಮಣವಂತನೆಂದು ಅವನ ಮನಸ್ಸಿಗೆ ಹೋಯಿತು.

ಕ್ಲಪ್ತನಿರುವ ಕಾಲಾಂತರದಲ್ಲಿ ಮಗುವಿಗೆ ಅನ್ನಪ್ರಾಶನ ಪ್ರಸ್ತವನ್ನು ಮಾಡಿದರು. ಶಾನೆ ಮಂದಿಗೆ ಚಲೋ ಭೋಜನ ದೊರಕಿತು. ಚಂಚಲನೇ ತ್ರರ ಭಂಡಾರದಲ್ಲಿ ಏನು ಕಡಿಮೆ? ಸಾವಿರಾರು ಜನರಿಗೆ ಅನ್ನಶಾಂತಿಯಾ ಗುತ್ತಲೇ ವಾಗ್ದೇವಿಯ ಪುತ್ರನು ದೀರ್ಫಾಯು ಆಗಲೆಂದು ಮನಃಪೂರ್ತಿ ಯಾಗಿ ಆಶೀರ್ವಾದ ಮಾಡಿ ಬ್ರಾಹ್ಮಣರು ಅವನ ಗುಣಗಳನ್ನು ವರ್ಣಿಸುತ್ತಾ ತಮ್ಮ ಮನೆಗಳಿಗೆ ತೆರಳಿದರು. ವಾಗ್ದೇವಿಯು ಭಾಗೀರಧಿಯೂ ಮಾಡಿದ ಪರಾಮರ್ಶದಿಂದ ಸೂರ್ಯನಾರಾಯಣನು ಬೇಗ ಬೆಳೆದನು. ಸರಿಯಾದ ಪ್ರಾಯದಲ್ಲಿ ಕೇಶ ಛೇದನ ವಿಧಿಯು ಆಯಿತು. ಆ ಕಾಲದಲ್ಲಿ ಇಷ್ಟಮಿತ್ರ ಭಾಂಧವರು ಬೇಕಾದ ಉಡುಗೊರೆಗಳನ್ನು ಹುಡುಗಗೆ ಕಳುಹಿಸಿ ಕೊಟ್ಟಿರು- ತರುವಾಯ ವಿದ್ಯಾಭ್ಯಾಸಕ್ಕೆ ಮುಹೂರ್ತ ಮಾಡಿತು. ವಿದ್ಯೆಯು ಅವನಿಗೆ ಬಹು ಬೇಗ ಹತ್ತುವದಾಯಿತು. ಆಲಸ್ಯವಿಲ್ಲದೆ ಶಾಲೆಗೆ ಹೋಗುವದೂ ತನ್ನ ಪಾಠಗಳನ್ನು ಚೆನ್ನಾಗಿ ಕಲಿಯುವದೂ ಉಪಾಧ್ಯಾಯರಿಗೂ ಹೆತ್ತವರಿಗೂ ವಿಧೇಯನಾಗಿ ನಡಕೊಳ್ಳುವದೂ ಅವನ ಪ್ರಮುಖ ಲಕ್ಷ್ಮಣಗಳಾಗಿದ್ದುವು. ಸತ್ಯತೀಲನೂ ಧೈರ್ಯಶಾಲಿಯೂ ಸ್ನೇಹಾಭಿಮಾನಿಯೂ ಆಗಿರುವ ದೆಸೆ ಯಿಂದ ಅವನನ್ನು ಮೆಚ್ಚದವರು ಬಹು ಕಡಿಮೆ. ಅವನ ಸದ್ಗುಣಗಳೆಲ್ಲ ಅನುದಿನ ವೃದ್ಧಿಯಾಗಿ ಪೂರ್ಣತ್ವ ಹೊಂದಿ ಪುರಜನರ ಮನಸ್ಸನ್ನು ಅವನ ಕಡೆಗೆ ಆಕರ್ಷಣಮಾಡಿಕೊಂಡವು. ಇವನೇ ದ್ವಿತೀಯ ಸೂರ್ಯನೆಂದು ಹಲವರು ಅವನಿಗೆ ಹೊಗಳುವರು. ಒಂಬತ್ತನೇ ವರುಷದಲ್ಲಿ ಅವನಿಗೆ ಬ್ರಹ್ಮ ಪ್ರತಿಷ್ಠೆಗೆ ಮುಹೂರ್ತ ನೋಡಿತು. ಆಬಾಚಾರ್ಯನು ಈ ಶುಭಕಾರ್ಯಕ್ಕೆ ಅಭಿಮಂತ್ರಣ ಪತ್ರಗಳನ್ನು ಬರೆದು ಊರೂರಿಗೆ ಕಳುಹಿಸಿದನು. ಒಂದು ಪತ್ರಿಕೆ ವೇದವ್ಯಾಸ ಉಪಾಧ್ಯಗೂ ಇತ್ತು.

ವೇದವ್ಯಾಸ ಉಪಾಧ್ಯನ. ಅಭಿಮಂತ್ರಣ ಪತ್ರಿಕೆಯನ್ನು ಹಿಡಕೊಂಡು ಒಬ್ಬರ ಕೂಡೆಯೂ ಆಲೋಚನೆ ಕೇಳದೆ ರಾಜನ ದರ್ಬಾರಿಗೆ ಹೋಗಿ ಮತ್ತೊಂದು ಮನವಿಯನ್ನುಕೊಟ್ಟಿನು ಅದನ್ನು ಕಿರೀದಿವಾನರು ನೋಡಿ ಮತಾಧಿಪತಿಗಳಿಂದ ನಿವೃತ್ತಿ ಪಡಕೂಳ್ಳಬೇಕೆಂದು ತಿರುಗಿ ಕೊಟ್ಟರು. ಅದನ್ನು ಹಿಡಕೊಂಡು ಪ್ರಥಮತಃ ತಾನು ನಡಕೊಂಡ ರೀತಿಯಲ್ಲಿ ನೃಸಿಂಹ ಪುರ ಮೊದಲುಗೊಂಡು ಶಾಂತಿಪುರ ಮಠದ ಪರಿಯಂತರ ನಡೆದಾಡಿ ಆಯಾ ಸನ್ಯಾಸಿಗಳಿಗೆ ತೋರಿಸಿದನು. ಅವರು ಅದನ್ನು ಮನ್ನಿಸಲಿಲ್ಲ. ಇಂಥ ಹಟವನ್ನು ಸಾಧಿಸುವದರಿಂದ ಕ್ಷೇಮ ಸಿಕ್ಕದು ಸುಮ್ಮನಿರೆಂದು ಬಾಲಮುಕುಂದಾಚಾ ರ್ಯನು ಬಹುತರದಲ್ಲಿ ಬೋಧಿಸಿದನು. ವೇದವ್ಯಾಸ ಉಪಾಧ್ಯನು ಕೇಳದೆ ಹೋದನು. “ಪ್ರಾಣತ್ಕಾಗವಾವರೂ ಮಾಡುವೆನು; ಛಲ ಪೂರೈಸದಿರಲಾರೆನು” ಎಂದು ಖಂಡಿತವಾಗಿ ಪ್ರತಿವಚನ ಕೊಟ್ಟ ಸಂಬಂಧ ಬಾಲಮುಕುಂದಾಚಾ ರ್ಯಗೆ ರೇಗಿತು. ಒಡನೆ ಅವನು ಹರಿಪದಾಂಬುಜತೀರ್ಥರಿಗೆ ಈ ವಿದ್ಯ ಮಾನವನ್ನು ತಿಳಿಸಿದನು. ಅವರಿಗೂ ಸಿಟ್ಟು ಬಂದು ಇನ್ನೊಮ್ಮೆ ಅವನನ್ನು ಎಚ್ಚರಿಸುವದಕ್ಕೆ ಪಾರುಪತ್ಯಗಾರಗೆ ಅಪ್ಪಣೆ ಮಾಡಿದರು. ಹಾಗೆ ಅವನು ಎರಡುಸಲ ವೇದವ್ಯಾಸಗೆ ಸ್ವಾಮಿಗಳ ಆಜ್ಞೆಯ ತಾತ್ಪರ್ಯವನ್ನು ತಿಳಿಸಿದನು. ಆದರೂ ವೇದವ್ಯಾಸನ ಮನಸ್ಸಿಗೆ ಸ್ವಾಮಿಗಳ ಅಪ್ಪಣೆಯು ಹತ್ತಲಿಲ. ಅವರು ಆ ಮೂರ್ಖನನ್ನು ಕ್ಷಣ ತಾಮಸ ಮಾಡದೆ ಉದ್ಯೋಗದಿಂದ ತಪ್ಪಿಸಿ ಮಠದಿಂದ ಹೊರಗೆ ಮಾಡುವುದಕ್ಕೆ ಬಾಲಮುಕುಂದಾಚಾರ್ಯಗೆ ನಿರೂಪಿ ಸಿದರು. ಅವನು ಹಾಗೆಯೇ ಪ್ರವರ್ತಿಸಬೇಕಾಯಿತು. ವೇದವ್ಯಾಸನ ಅನ್ನ ಸ್ಥಿತಿಯು ಅವನ ಸ್ವಬುದ್ಧಿಯಿಂದಲೇ ತಪ್ಪಿಹೋಯಿತು. ಅದರಿಂದ ಅವನಿಗೆ ಸಿಟ್ಟೇರಿತು. ಹಣ ಕೊಟ್ಟು ವಕೀಲರನ್ನು ಕಟ್ಟಿಕೊಳ್ಳುವದಕ್ಕೆ ಕೈಯಲ್ಲ ಕಾಸಿಲ್ಲ. ಯಾರಿಂದಾದರೂ. ಹೇಳಿಸಿ ಧರ್ಮಕ್ಕೆ ನಕಾಲು ತೆಗೆದುಕೊಳ್ಳು ವಂತೆ ಮಾಡಲಿಕ್ಕೆ ಭೀಮಾಚಾರ್ಯನ ಹಾಗಿನ ಸಹಾಯಕನು ಆವನಿಗೆ ದೊರಕದೆ ಅವನ ಗತಿಯು ಬಹು ತುಚ್ಚವಾಯಿತು. ಆದರೂ ಅವನು ಕಂಗೆಡಲಿಲ್ಲ. ಹೆಂಡತಿಯ ಮನೋಭಾನ ತಿಳಿಯಲಿಕ್ಕೆ ಪ್ರಸ್ತಾಪಿಸಿದಾಗ ಗಂಡನ ಹಟವು ಅವಳ ಮನಸ್ಸಿಗೂ ಒಪ್ಪದೆ- “ಈ ಹಾಳು ವ್ಯಾಪಾರ ತಮಗೇಕೆ? ಸ್ವದೇಶಕ್ಕೆ ಹೋಗಿ ಯಾಚಕ ವೃತ್ತಿಯಿಂದ ಜೀವನ ನಡಿಸುವದು ಉತ್ತಮ? ಎಂದಳು. ಅವಳ ಮಾತು ಅವನಿಗೆ ಹಿತವಾಗಲಿಲ್ಲ.

ಮುಂದೆ ಅನುಸರಿಸಬೇಕಾದ ಕ್ರಮವನ್ನು ಯೋಚಿಸುವದಕ್ಯೋಸ್ಟರ ತನ್ನ ಊರಲ್ಲಿರುವ ಸ್ನೇಹಿತರನ್ನು ಕೇಳಿ ನೋಡುವ ಆಸೆಯಿಂದ ಅವನು ಪತ್ನಿಯ ಸಹಿತ ಕುಮುದಪುರಕ್ಕೆ ಬಂದು ಅಲ್ಲಿ ಇರುವ ಪಿತ್ರಾರ್ಜಿತ ಮನೆ. ಯಲ್ಲಿ ಉಳಕೊಂಡನು. ಜೀವನಕ್ಕೆ ವೃತ್ತಿ ಯಾವದೂ ಇಲ್ಲದೆ ನಿತ್ಯ ನೈವೇ ದ್ಯಕ್ಕೆ ತತ್ವಾರ ಉಂಟಾಗದ ಹಾಗೆ ವೈನಮಾಡುವ ಅಗತ್ಯಬಿತ್ತು. ಎಲ್ಲೆಲ್ಲಿ ತಿರುಗಿದರೂ ಅವನ ಪ್ರಯತ್ನವು ಸಫಲವಾಗಲಿಲ್ಲ. ಗೀರ್ವಾಣದಲ್ಲಿ ಚೆನ್ನಾಗಿ ಪರಿಚಿತಿ ಇದ್ದವನೊಬ್ಬಗೆ ಅನೃಸ್ಥಿತಿದೊರಕುವದಿಲ್ಲವೆಂಬ ಪಶ್ಟಾತ್ತಾಪವು ಬಹಳ ದೊಡ್ಡದೇ ಸರಿ, ಒಂದಾನೊಂದು ದಿನ ಸ್ನೇಹಿತರ ಕೂಟದಲ್ಲಿ ತನ್ನ ಸಂಕಷ್ಟಗಳನ್ನು ಅವನು ವಿವರಿಸಿ ಹೇಳಿದಾಗ ಅವರೆಲ್ಲರೂ ಅನುತಾಪ ಪಟ್ಟು ತಮ್ಮಿಂದಾಗುವ ಸಹಾಯವನ್ನು ಅವನಿಗೆ ಮಾಡಬೇಕೆಂಬ ಶುದ್ಧ ಮನಸ್ಸಿ ನಿಂದ ಕುಮುದಪುರದ ಪ್ರಮುಖ ಬ್ರಾಹ್ಮಣರ ಒಂದು ಸಣ್ಣ ಸಭೆಯನ್ನು ಮಾಡಿ ಈ ವಿಷಯದಲ್ಲಿ ಚರ್ಚೆ ನಡೆಸಿದರು. ಅವರೆಲ್ಲರೂ ಐಕಮತ್ಯವಾಗಿ ಒಂದು ಸಂಸ್ಥತಶಾಲೆಯನ್ನು ಕೂಡಲೇ ಸ್ಥಾಪಿಸಿ ಅದರಲ್ಲಿ ವೇದವ್ಯಾಸ ಉಪಾಧ್ಯನನ್ನು ಪ್ರಧಾನ ಉಪಾಧ್ಯಾಯನಾಗಿ ನೇಮಿಸುವದಕ್ಕೆ ನಿರ್ಣಯ ಮಾಡಿದರು. ಆ ನಿರ್ಣಯವು ನೆರವೇರುವದಕ್ಕೆ ತಾಮಸವಾಗಲಿಲ್ಲ. ಸುದಿನ ದಲ್ಲಿ ಶಾಲೆಯು ಸ್ಥಾಪಿಸಿ ಸಾಕಷ್ಟು ವಿದ್ಯಾರ್ಥಿಗಳನ್ನು ಒಟ್ಟಿ ಗೂಡಿಸಿ ವೇದ ವ್ಯಾಸನ ದಾರಿದ್ರ್ಯ ನಿವಾರಣೆಯ ಉಪಾಯ ವರ್ತಿಸೋಣಾಯಿತು. ವೇದ ವ್ಯಾಸ ಉಪಾಧ್ಯನ ಹಿರೇ ಮಗ ವೇಣುಗೋಪಾಲ ಉಪಾಧ್ಯನು ತಂದೆ ಯಷ್ಟೇ ಅಭಿಜ್ಞತೆಯುಳ್ಳ ಪಂಡಿತನು. ವೇದವ್ಯಾಸನ ಪರೋಕ್ಷದಲ್ಲಿ ಅವ ನಿಂದ ಶಾಲೆಯ ಉದ್ಯೋಗವನ್ನು ನಡಿಸುವದಕ್ಕೆ ಅನುಕೂಲವಾಯಿತು. ಚಂಚಲನೇತ್ರರನ್ನು ಸೋಲಿಸಿ ಕೀರ್ತಿ ಹೊಂದಬೇಕೆಂಬ ದೊಡ್ಡ ಆತುರವು ಳ್ಳ ಈ ಹಟವಾದಿ ಭೂಸುರನು ಶಾಲೆಯ ವಹಿವಾಟು ಮಗನಿಗೆ ವಹಿಸಿ ಕೊಟ್ಟು ಭೀಮಾಚಾರ್ಯನಷ್ಟೆ ಯುಕ್ತಿವಂತನಾದ ಒಬ್ಬ ಸ್ಟೇಹಿತನು ದೊರ ಕುವುದಿಲ್ಲವೆಂಬ ವ್ಯಥೆಯಲ್ಲಿರುವ ಕಾಲದಲ್ಲಿ ನಿರುದ್ಯೋಗಿಯಾಗಿ ತಿರುಗಾಡಿ ಕೊಂಡು ಸಮಯ ಕಳೆಯುವ ಪೋಕರಿಗಳ ಗರುವಾಗಲಿಕ್ಕೆ ಯೋಗ್ಯನಾದ ಅಪರಾಜಿತ ಸೆಟ್ಟಿ ಎಂಬ ಜೈನನು ಅವನಿಗೆ ಗಂಟುಬಿದ್ದನು.

ಸೆಟ್ಟಿಯ ಡೊಳ್ಳು ಮಾತಿಗೆ ಹಾರುವನು ಮರುಳಾಗಿ ತನ್ನ ಈ ನವ ಸ್ನೇಹಿತನಿಂದ ಅಗಾಧಕಾರ್ಯಗಳನ್ನು ಚಮತ್ಯಾರದಿಂದ ಮಾಡಿಸಿಕೊಂಡು ಬಿಡಲಿಕ್ಕೆ ದೇವರು ಪೂರ್ಣ ದಯವಿಟ್ಟರೆಂದು ಹೆಚ್ಚಳಪಟ್ಟನು. ತನ್ನ ವಾದದ ಸ್ವಭಾವವನ್ನು ವೇದವ್ಯಾಸನು ಆದ್ಯಂತ ವಿವರಿಸಿದನು. ಅಪರಾಜಿತ ಸೆಟ್ಟಿ ಆದನ್ನು ಲಾಲಿಸಿ ಕೇಳೆ ಕಣ್ಣಾಲಿಗಳನ್ನು ತಿರುಗಿಸುತ್ತ ತುಟಿಗಳನ್ನು ಮುದುರಿಸಿಕೊಂಡು ತರ್ಜನಿ ಬೆರಳನ್ನು ಬಾಣಾಕಾರವಾಗಿ ಮೂಗಿನ ಮೇಲೆ ಸಲ್ಲಿಸಿ ಊರ್ಧ್ವದ್ದಷ್ಟಿಯಿಂದ ಕೊಂಚ ಸಮಯಾಲೋಚನೆ ಗೈಯ್ಯುವಂತೆ ಕಾಣಿಸಿಕೊಂಡು ತಟ್ಟನೆ-“ಉಪಾಧ್ಯರೇ! ಪ್ರಥಮದಲ್ಲಿಯೇ ತಾವು ಮಾರ್ಗ ತಪ್ಪಿದ್ದೀರಷ್ಟೇ. ನನ್ನ ಪರಿಚರ್ಯ ತಮಗೆ ಆದಿಯಲ್ಲಯೇ ಉಂಟಾಗುತ್ತಿದ್ದರೆ ನಾನು ನಡಿಸತಕ್ಕ ವೈನವೇ ಬೇರೆ ಇತ್ತು. ಈಗ ಏನು ಮಾಡಲಿ” ಎಂದು ನಿಟ್ಟುಸಿರುಬಿಟ್ಟನು ಅಹಾ! ಇಂಧಾ ವೀರನ ಭೇಟಿಯು ತನಗೆ ಪೂರ್ವ ದಲ್ಲಿಯೇ ಸಿಕ್ಕುತ್ತಿದ್ದರೆ ಆಶಾಭಂಗವಾಗುತ್ತಿದ್ದಿಲ್ಲ. ತನ್ನ ದುರದೃಷ್ಟ ದಿಂದಲೇ ಜಯಸ್ತ್ರೀಯು ತೊಲಗಿದ್ದಾಳೆಂದು ಕೈಯಿಂದ ಹಣೆತಟ್ಟಿ ಕೊಂಡನು ಹಾಗಾದರೆ ಇನ್ನು ಮುಂದೆ ತನ್ನ ಸಾಧನೆಯು ನಿಷ್ಪ್ರಯೋಜಕವೆಂಬ ಭಯ ದಿಂದ ಮುಖ ಸಣ್ಣದ ಮಾಡಿಕೊಂಡ ಬ್ರಾಹ್ಮಣನನ್ನು ನೋಡಿ ಅಪರಾಜಿತ ಸೆಟ್ಟಿಯು ಮುಗುಳು ನಗೆಯಿಂದ–“ಉಪಾಧ್ಯರೇ! ಹೆದರಬೇಡಿ. ಭಗೀರಥ ಪ್ರಯತ್ನ ಮಾಡಿ ನಿಮಗೆ ಜಯ ಉಂಟಾಗುವ ಹಾಗೆ ನೋಡದೆ ಸುಮ್ಮಗಿರ ರಾರೆ”ನೆಂದು ಭಾಷೆತೊಟ್ಟುಕೊಂಡನು. ಉಪಾಧ್ಯನು ಧನ್ಯನಾದೆನೆಂದನು. “ಬರಿ ಕೈಯಿಂದ ಮೊಳಹಾಕಿದರೆ ಪುರುಷಾರ್ಥವೇನಿದೆ?” ಎಂಬ ಅಪರಾಜಿ ತನ ಪ್ರಶ್ನೆಗೆ “ಆ ಮಾತೊಂದೂ ಹೇಳಬೇಡಿ. ಒಂದು ಚಿಕ್ಕಾಸೂ ನನ್ಫ ಹತ್ತಿರ ಇಲ್ಲ. ನಿಮ್ಮ ಸಹಾಯವೂ ಬೇಡ. ಬಂದ ದಾರಿಯಿಂದಲೇ ಹೊರಟು ಬಿಡುತ್ತೇನೆ. ಪ್ರೀತಿ ಇರಲಿ” ಎಂದು ವೇದವ್ಯಾಸನು ತನ್ನ ಪ್ರಾಣಸಖನ ತಳ್ಳಿಯನ್ನು ಬಿಡಲಿಕ್ಕೆ ಸಿದ್ಧನಾದನು. ಓಹೋ! ಈ ಅಲ್ಬಮತಿಯನ್ನು ಹೋಗಬಿಟ್ಟಿರೆ ತನ್ನ ಪಾಯವೇ ತಸ್ಪಿಹೋಗುವುದೆಂಬ ಹೆದರಿಕೆಯಿಂದ ಸೆಟ್ಟಿಯು “ನಾನು ಚೇಷ್ಟೆಗೆ ಹೇಳಿದ ಮಾತು ವಿಪರೀತವಾಯಿತೇ? ಉಪಾ. ಧ್ಯರೇ, ನೀವು ಒಂದು ಕಾಸೂ ಕೊಡಬೇಡಿ. ಖರ್ಚು ಅತಿ ಅಗತ್ಯಬಿದ್ದರೆ ನನ್ನ ಕೈಯಿಂದ ಹಣ ಹಾಕುವೆನು. ನಾನೇನು ಭಿಕಾರಿಯಲ್ಲ. ನಿಮ್ಮಿಂದಲೂ ಹೆಚ್ಚು ಛಲಹಿಡಿದು ನಿಮ್ಮ ಶತ್ರುಗಳನ್ನು ಸದೆ ಬಡಿಯದೆ ಇದ್ದರೆ ನನ್ನ ಈ ಮೀಸೆಯಾಕೆ?” ಎಂದು ಕೊನೆ ಮೀಸೆಗಳನ್ನು ಎಳೆಯುತ್ತಾ ಉಪಾಧ್ಯನ ದನ್ನು ತಟ್ಟಿದನು. ವೇದವ್ಯಾಸನು ತನಗೆ ಇಂಥಾ ಹಿತಚಿಂತಕನು ಏಳೇಳು ಜನ್ಮದಲ್ಲಿಯೂ ಸಿಕ್ಕುವುದು ದುರ್ಲಭವೆಂದೆಣಿಸಿ ಕೃತಾರ್ಥನಾಗಿ ತನ್ನ ಗೆಳೆ ಯನನ್ನು ತಬ್ಬಿಕೊಂಡನು ಪರಸ್ಪರಾಲಿಂಗನದಿಂದ ಮಿತ್ರರಿಬ್ಬರೂ ಸ್ನೇಹ ಬದ್ದರಾದರು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೂರ್‍ಣ ಮಾಡು
Next post ಚಿನ್ನದ ವೈರಾಗ್ಯ

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…