ಪ್ರಗತಿ ಅಥವಾ ದಾಸ್ಯವಿಮೋಚನೆ – ೨ನೆಯ ಖಂಡ – ದೃಢನಿಶ್ಚಯ

ಪ್ರಗತಿ ಅಥವಾ ದಾಸ್ಯವಿಮೋಚನೆ – ೨ನೆಯ ಖಂಡ – ದೃಢನಿಶ್ಚಯ

“ನಿಶ್ಚಯಾಚೆ ಬಲ, ತುಕಾಮಣೆ ಹೇಚಿ ಸರ್‍ವಾಚೆ ಫಲ”

ಸಾಧುಶ್ರೇಷ್ಠರಾದ ತುಕಾರಾಮಬುವಾನವರ ಈ ವಾಕ್ಯವು ದೃಢನಿಶ್ಚಯದ ಮಹತಿಯನ್ನು ವ್ಯಕ್ತಗೊಳಿಸುತ್ತದೆ. ದೃಢನಿಶ್ಚಯದಿಂದ ಜಗತ್ತಿನಲ್ಲಿ ಬೇಕಾದಂಥ ಪದನಿಗೇರಬಹುದಾಗಿದೆ. ಪೂರ್ವದಲ್ಲಿ ಆರ್ಯಾವರ್ತದಲ್ಲಿ ದೀಪಕನೆಂಬ ಒಬ್ಬ ಮಹಾದೃಢನರಿಶ್ಚಯಿಯು ಆಗಿಹೋದನು. ಅವನು ಒಂದು ಪ್ರಸಂಗದಲ್ಲಿ ತೋರಿಸಿದ ದೃಢನಿಶ್ಚಯವು ನಮ್ಮ ವಾಚಕರ ಅವಗಾಹನೆಗೆ ತಂದು ಕೊಡುವದು ಅವಶ್ಯವೆಂದು ನಮಗೆ ನಮಗೆ ತೋರುವದರಿಂದ ಅದರ ಉಲ್ಲೇಖವನ್ನು ಇಲ್ಲಿ ಮಾಡುವೆವು.

ಈ ದೀಪಕನು ಬಾಲ್ಯದಲ್ಲಿ ವಿದ್ಯಕಲಿಯುವದಕ್ಕಾಗಿ ಒಬ್ಬ ಮಹಜ್ಞಾನಿಯಾದ ಋಷಿಯ ಬಳಿಯಲ್ಲಿರುತ್ತಿದ್ದನು. ಪೂರ್ವದ ಅಧ್ಯಾಪಕರು, ಋಷಿಗಳು, ಶಿಕ್ಷಣಕೊಡುವ ಪದ್ಧತಿಯು ಈಗಿನೆಂತೆ ಇದ್ದಿಲ್ಲ. ಅವರ ಕಲಿಸೋಣವು ಗಹನವು, ಆಗಿನ ಗುರುಗಳು ಈಗಿನಂತೆ ವಿದ್ಯಾರ್ಥಿಗಳಿಂದ ಪ್ರಥಮಿಕಪುಸ್ತಕಗಳನ್ನು ಓದಿಸಿ ಬಳಿಕ ಉಚ್ಚ ತರದ ಶಿಕ್ಷಣ ಕೊಡುವಂತೆ ಪಠ ಹೇಳುತ್ತಿದ್ದಿಲ್ಲ. ಅವರು ತಮ್ಮಲ್ಲಿಗೆ ಬಂದ ಎಲ್ಲ ವಿದ್ಯಾರ್ಥಿಗಳನ್ನು ಅವರವರ ಶೀಲ, ಗುಣಗ್ರಾಹ ಕತೆ, ದೃಢನಿಶ್ಚಯ ಮೊದಲಾದವನ್ನು ಪರೀಕ್ಷಿಸುವದಕ್ಕಾಗಿ ತಪಗಟ್ಟಲೆ ಸೇವೆಮಾಡಲು ಹಚ್ಚುವರು. ಉತ್ತಂಕನೆಂಬ ಮಹಾತ್ಮತಶಿಷ್ಯನು ಗುರುಗಳಲ್ಲಿ ದನಕಾಯ್ದು ವಿದ್ಯೆ ಸಂಪಾದಿಸಿದನು. ಶ್ರೀ ಕೃಷ್ಣನು ಕಟ್ಟಿಗೆ ತಂದು ವಿದ್ಯೆಗಲಿತನು. ಹೀಗೆ ಗುರುಗಳು ವಿದ್ಯಾರ್ಥಿಗಳನ್ನು ಸೇವೆಮಾಡಲಿಕ್ಕೆ ಹಚ್ಚಿ, ಅವರ ಅಂತಶುದ್ಧಿ ಯಾಗುವದಕ್ಕೂ, ಅವರಲ್ಲಿ ನಿಜವಾದ ಸದ್ಗುಣಗಳು ಪ್ರಾದುರ್ಭವಿಸಲಿಕ್ಕೂ ಪ್ರಸಂಗ ದೊರಕುವಂತೆ ಅವರಿಗೆ ವಿಧವಿಧದ ಕಷ್ಟಗಳನ್ನು ಕೊಡುತ್ತಿದ್ದರು. ಇದೇಪ್ರಕಾರ ದೀಪಕಶಿಷ್ಯ್ಯನಿಗೆ ಅವನ ಗುರುಗಳು ಬಹಳವಾಗಿ ಕಾಡಿಸಿದರು. ಆದರೂ ಆ ದೃಢನಿಶ್ಚಯಿಯು ವಿಮನಸ್ಕನಾಗದೆ ಗುರುಸೇವೆಯೆನ್ನು ಒಮ್ಮನಸಿನಿಂದ ಮಾಡುತ್ತಿದ್ದನು. ಒಮ್ಮೆ ಗುರುಗಳು ದೀಪಕನ ದೃಢನಿಶ್ಚಯವನ್ನು ಪರೀಕ್ಷಿಸುವದಕ್ಕಾಗಿ ಅವನನ್ನು ಕುರಿತು “ತಮ್ಮಾ ದೀಪಕ ನಾನು ‘ಜನ್ಮಾಂತರದಲ್ಲಿ ಬಹಳ ನೀಚಕರ್ಮಗಳನ್ನು ಮಾಡಿರುವೆನು. ಈ ಜನ್ಮದಲ್ಲಿ ತವೋನಿಷ್ಠನಾಗಿ ಒಹಳ ಪುಣ್ಯಸಂಪಾದಿಸಿದ್ದರೂ ಆ ಪ್ರಾಚೀನ ದುಷ್ಕೃತ್ಯವು ನನಗೆ ತೊಂದರೆಕೊಡದೆ ಇರದು, ಅದಕ್ಕಾಗಿ ಕೈಕಾಲು ಗಟ್ಟಿಯಾಗಿದ್ದು ಸ್ವತಂತ್ರನಿರುವಾಗಲೇ ನಾನು ಆ ದುಷ್ಕೃತಿಯ ವಿಮೋಚನಕ್ಕಾಗಿ ಉಪಾಯವನ್ನು ಮಾಡಬೇಕೆಂದಿರುವೆನು. ಆ ದುಷ್ಕರ್ಮದಿಂದ ನಾನು ಇಪ್ಪತ್ತೊಂದು ವರ್ಷಗಳ ವರೆಗೆ ಅಂಧನಾಗಿಯೂ, ಕುಷ್ಟದಿಂದ ಪೀಡಿತನಾಗಿಯೂ ಇರಬೇಕಾಗುವದು. ಈ ಅವಧಿಯಲ್ಲಿ ನೀನು ನನ್ನ ಸೇವೆಮಾಡಿಕೊಂಡು ಇರುವದಾದರೆ, ನಿನ್ನ ಉಚ್ಪ್ರೇಯವು ನಿಜನಾಗಿ ಆಗುವದು. ಆದರೆ ನಾನು ಹೇಳುವದನ್ನು ಪೂರ್ಣವಾಗಿ ಲಕ್ಷಗೊಟ್ಟು ಕೇಳು, ನಾನು ವ್ಯಾಧಿಪೀಡಿತನಾದಾಗ ಬಹಳ ಕಷ್ಟಪಡಬೇಕಾಗುವದು. ವ್ಯಾಧಿಗ್ರಸ್ತರು ಒಂದು ಪಾಲು ಕಷ್ಟಪಟ್ಟರೆ, ಸೇವಾತತ್ಪರರು ಹತ್ತುಪಾಲು ಕಷ್ಟಪಡಬೇಕಾಗುವದು. ಆದ್ದರಿಂದ ವಿಚರೆಮಾಡಿಕೊಂಡು, ದೃಢಮನಸ್ಸಿನಿಂದ ಸೇವೆಮಾಡಲಿಕ್ಕೆ ಬಪ್ಪುತ್ತಿದ್ದರೆ ಹೇಳು” ಎಂದರು.

ಗುರುಗಳ ಮಾತನ್ನು ಕೇಳಿ ತಾನು ನಿಶ್ಚಯಪೂರ್ವಕವಾಗಿ ಸೇವಾತತ್ಪರನಾಗುವೆನೆಂದು ದೀಪಕನು ಹೇಳಿದನು. ಬಳಿಕ ಆ ಗುರುಶಿಷ್ಯರು ಸಂಕೇತದಂತೆ ಕಾಶಿಗೆ ಹೋದರು. ಅಲ್ಲಿ ಗುರುಗಳು ಗಂಗೆಯಲ್ಲಿ ಸ್ನಾನಮಾಡಿ ವ್ಯಾಧಿಯನ್ನು ಬರಮಾಡಿಕೊಂಡರು. ಅವರ ವ್ಯಾಧಿಯು ನಿಜವಾದ ವ್ಯಾಧಿಯಾಗಿರದೆ ಶಿಷ್ಯನ ಪರೀಕ್ಷೆಗೆ ಬೇಕಂತಧರಿಸಿದ ವ್ಯಾಧಿಯಾಗಿತ್ತು. ಗುರುಗಳು ಶಿಷ್ಯನಲ್ಲಿ ದೃಢ ನಿಶ್ಚಯ ನೆಲೆಗೊಳಿಸುವದಕ್ಕಾಗಿ ಹಲವು ಪ್ರಕಾರದ ವೇಷಗಳನ್ನು ಧರಿಸಿದರು. ಅವರ ಮೈಯಲ್ಲಿ ವ್ರಣಗಳಾದವು; ಕಣ್ಣು ಕಾಣದಾದವು; ಕಿವಿಗಳು ಕೇಳದಾದವು; ದೇಹದಲ್ಲಿ ಹುಳಬಿದ್ದವು. ವ್ಯಾಧಿ ಹೆಚ್ಚಾದಂತೆ ಗುರುಗಳ ಸಂತಾಪವು ಹೆಚ್ಚಾಗತೊಡಗಿತು. ಸಂತಾಪದ ಭರದಲ್ಲಿ ಅವರು ದೀಪಕನಿಗೆ ಬಹಳ ಕಷ್ಟಕೊಡಹತ್ತಿದರು. ಅವನು ತಿರಿದುತಂದ ಭಿಕ್ಷಾನ್ನಕ್ಕೆ ಕಂಡ ಕಂಡ ಹಾಗೆ ಹೆಸರಿಡುವರು; ಒಮ್ಮೊಮ್ಮೆ ಆದು ಕಹಿಯಾಗಿದೆಯೆಂದೂ, ಮಧುರವಾಗಿಲ್ಲೆಂದೂ ಹೇಳಿ ಅದನ್ನು ನೆಲದ ಮೇಲೆ ತಿರಸ್ಕಾರದಿಂದ ಬಿಸುಟಿಬಿಡುವರು. ಮರುದಿನ ಅವನು ಒಳ್ಳೇ ಶೀಯಾದ ಹಾಗು ಮಧುರವಾದ ಅನ್ನವನ್ನು ತಂದು ನೀಡಿದರೆ, ಅವರು ಈ ಅನ್ನವು ಬಹಳ ಹುಳಿಯಾಗಿದೆಯೆಂದು ಹೇಳಿ ಊಟವನ್ನೇ ಬಿಡುವರು. ಒಂದುದಿನ ಬಟ್ಟೆ ಜಳ ಜಳಮಾಡಿಲ್ಲವೆಂದೂ ಮತ್ತೊಂದು ದಿನ ಮೇಲಿಂದೆ ಮೇಲೆ ಬಟ್ಟೆ ಜಳಜಳ ಮಾಡಬೇಡವೆಂದೂ, ಒಮ್ಮೆ ದಿನಾಲು ಜಳಕಮಾಡಿಸೆಂದೂ ಮತ್ತೊಮ್ಮೆ ನನಗೆ ಜಳಕವೇ ಬೇಡವೆಂದೂ ಹಟಹಿಡಿಯುವರು. ವ್ಯಾಧಿಯು ಹೆಚ್ಚಾದಂತೆ ಸಹಿಸದಾಗಲು ಗುರುಗಳು ಹಗಲಿರಳು ನಿದ್ದೆ-ನೀರಡಿಕೆಗಳಿಲ್ಲದೆ ಕಷ್ಟಪಡಹತ್ತಿದರು. ಅವರ ಮೈಯೊಳಗಿನ ಕ್ರಿಮಿಗಳನ್ನು ಹೊರಪಡಿಸುವದು ದುಸ್ತರವಾಯಿತು. ಮೈಮುಟ್ಟಿದರೆ ರಕ್ತವೂ, ಕೀವವೂ, ಚಿಮ್ಮುತ್ತಿದ್ದವು. ಇಂಥ ಸ್ಥಿತಿಯಲ್ಲಿ ಗುರುಸೇವಕನಾದ ದೀಪಕನು ತನ್ನ ನಾಲಿಗೆಯಿಂದ ಗುರುಗಳ ವ್ರಣಗಳೊಳಗಿನ ಕ್ರಿಮಿಗಳನ್ನು ತೆಗೆಯುತ್ತಿದ್ದನು. ಅವನ ಈ ದೃಢ ನಿಶ್ಚಯದ ಗುರುಸೇವೆಯನ್ನು ಕಂಡು ತ್ರಿಮೂರ್ತಿಗಳು ಕೂಡ ಚಕಿತರಾದರು. ಅವರು ವರಕೊಡುತ್ತೇವೆಂದು ಆಗಾಗ್ಗೆ ದೀಪಕನ ಹತ್ತಿರ ಬರುತ್ತಿದ್ದರು. ಆದರೆ ಗುರುವಾಕ್ಯದಲ್ಲಿ ದೃಡನಿಶ್ಚಯವುಳ್ಳ ದೀಪಕಶಿಷ್ಯನು ತನ್ನ ಗುರುಗಳ ಅಪ್ಪಣೆಯ ಹೊರತು ತನಗೆ ವರಗಳು ಬೇಡವೆಂದು ಹೇಳಿಬಿಟ್ಟನು. ಕಡೆಗೆ ಆ ತ್ರಿಮೂರ್ತಿಗಳು ಗುರುಗಳ ಬಳಿಗೆ ಬಂದು ದೀಪಕನ ದೃಢನಿಶ್ಚಯವನ್ನು ಅತ್ಯಂತವಾಗಿ ಹೊಗಳಿದರು. ಮಹಾಜ್ಞಾನಿಗಳಾದ ಗುರುಗಳಾದರೂ ದೀಪಕನ ದೃಢನಿಶ್ಚಯಕ್ಕೆ ಮೆಚ್ಚಿಯೇ ಇದ್ದರು. ಆಗ ಅವರು “ಮಹಾಜ್ಞಾನಿಯೂ, ದೃಢನಿಶ್ಚಯದ ದರ್ಶಕನೂ, ಲೋಕೋತ್ತರ ಕೀರ್ತಿಯುತನೂ ಆಗೆ”ಂದು ದೀಪಕನನ್ನು ಹರಸಿದರು.

ಪ್ರಖ್ಯಾತನೂ, ಕರ್ತವ್ಯನಿಷ್ಠನೂ ಆಗಬೇಕಾದರೆ ಮನುಷ್ಯನಲ್ಲಿ ದೃಢನಿಶ್ಚಯವು ಅವಶ್ಯವಾಗಿ ಇರಬೇಕು. ಈ ವರೆಗೆ ಲೋಕದಲ್ಲಿ ಪ್ರಖ್ಯಾತರಾದ ಜನರಲ್ಲಿ ಈ ಗುಣವು ಇದ್ದೇ‌ಇತ್ತು. ಶ್ರೀ ಸಮರ್ಥ ರಾಮದಾಸರು, ಶ್ರೀ ಶಿವಾಜಿಮಹಾರಾಜರು, ಜಾರ್‍ಜ್ ವಾಸಿಂಗ್ಟನ್ನನು, ಪ್ರಣ್ಯಶಾಲಿ ಆಶೋಕಚಕ್ರವರ್‍ತಿಯು, ಲಾರ್ಡ ಕ್ಲೈ ವನ್ನು, ಸರಬುಕರ ವಾಸಿಂಗ್ಟನ್ನನು, ಕೈ. ಸರ ಗೋಖಲೆಯೆವರು ಮೊದಲಾದ ಪ್ರಭಾಶಾಲಿಗಳು ಪ್ರಸಿದ್ಧಿಗೆ ಬರಲಿಕ್ಕೆ ಅವರಲ್ಲಿದ್ದ ದೃಢ ನಿಶ್ಚಯವೇ ಕಾರಣವು; ದೃಢನಿಶ್ಚಯವಿಲ್ಲದವನು ಯಾವ ಕೆಲಸದಲ್ಲಿಯೂ ಖ್ಯಾತಿಹೊಂದಲಾರನು. ಅವನ ಬಾಳು ನಾಯಿಗಿಂತಲೂ ಕಡೆಯಾಗುವದು. ಮನುಷ್ಯನು ಆತ್ಮಸಂಯಮದಿಂದ ತನ್ಬ ಧ್ಯೇಯದ ಪ್ರಕಾರ ಯಾವದಾದರೊಂದು ವಿಶಿಷ್ಟಕಾರ್ಯದಲ್ಲಿ ಮನಸ್ಸನ್ನು ತೊಡಗಿಸಿ, ಆ ಕಾರ್ಯ ಸಾಧನ ಪ್ರೀತ್ಯರ್ಥವಾಗಿ ಮನಸ್ಸನ್ನು ಸ್ಥಿರಗೊಳಿಸುವದೇ ದೃಢನಿಶ್ಚಯದ ಅಭ್ಯಾಸವಾಗಿದೆ. ಹೀಗೆ ಮನಸ್ಸಿನ ಏಕೀಕರಣವಾದವಾದಂತೆ ಹಿಡಿದ ಕಾರ್ಯಗಳಲ್ಲಿ ಹೆಚ್ಚು ಶ್ರೇಯಸ್ಸು ಪ್ರಾಪ್ತವಾಗುವದು. “ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ” ಎಂಬ ಗೀತಾವಾಕ್ಯದಂತೆ ಮನಸ್ಸೇ ಮನುಷ್ಯನ ಬಂಧನಕ್ಕೂ, ದಾಸ್ಯಕ್ಕೂ, ಮೋಕ್ಷಕ್ಕೂ, ಪ್ರಗತಿಗೂ ಕಾರಣವಾಗಿದೆ. ಆದ್ದರಿಂದ ಮನಸ್ಸನ್ನು ದೃಢಪಡಿಸುವ ಅಭ್ಯಾಸವನ್ನ ಬಾಲ್ಯದಿಂದಲೇ ಪ್ರಾರಂಭಿಸಬೇಕು. “ಮೂರು ವರ್ಷದ ಬುದ್ಧಿ ನೂರು ವರ್ಷಗಳ ವರೆಗೆ” ಎಂಬಂತೆ ಬಾಲ್ಯದಲ್ಲಿ ಅಭ್ಯಾಸವಾದ ವಿಷಯಗಳು ಆಮರಣ ಸ್ಮರಣದಲ್ಲಿರುವವು.

ಮನುಷ್ಯನ ಪ್ರಗತಿಯು ದೃಢನಿಶ್ಚಯದಿಂದ ಬಹುಬೇಗ ಆಗುವದು. ಕೈ. ವಾ. ಗೋಪಾಳ ಕೃಷ್ಣ ಗೋಖಲೆಯವರು ತೀಕ್ಷ್ಣ ಬುದ್ದಿಯವರಾಗಿರದಿದ್ದರೂ, ಬಾಲ್ಯದಿಂದಲೇ ಅವರು ತಾವೊಬ್ಬ ಪ್ರಸಿದ್ಧ ಪುರುಷರಾಗಿ ರಾಷ್ಟ್ರಕಾರ್ಯ ಮಾಡಬೇಕೆಂಬ ಹಂಬಲವುಳ್ಳವರಾಗಿದ್ದರು. ಆ ಬಗ್ಗೆ ಅವರು ಒಮ್ಮನಸಿನಿಂದ ಪ್ರಯತ್ನಿಸಿ ಪ್ರಸಿದ್ಧಿಗೆ ಬಂದರು. ಲಾರ್ಡ ಕ್ಲೈವನಲ್ಲಿ ದೃಢಮನಸ್ಸಿಲ್ಲದಿದ್ದರೆ, ಇಂಗ್ಲಿಷರ ರಾಜ್ಯವು ಹಿಂದುಸ್ತಾನದಲ್ಲಿ ನೆಲೆಗೊಳ್ಳುವದು ಸಂಶಯಾಸ್ಪದವಾಗುತ್ತಿತ್ತು. ದೇಶಹಿತ ಕಾರ್ಯದಲ್ಲಿ ದೃಢಮನಸ್ಸಿಡದಿದ್ದರೆ ಲೋಕವಾನ್ಯ ಭಾಳ ಗಂಗಾಧರ ಟಿಳಕರವರಿಂದ ಇಷ್ಟು ಕಷ್ಟ ಸಹಿಸುವದಾಗುತ್ತಿದ್ದಿಲ್ಲ. ಅದ್ದರಿಂದ ಪ್ರಗತಿಗಾಮಿಯಾಗ ಬಯಸುವ ಪ್ರತಿಯೊಬ್ಬ ಮನುಷ್ಯನು ದೃಢನಿಶ್ಚಯವುಳ್ಳವನಾಗಿರಲೇಬೇಕು, ದೃಢನಿಶ್ಚಯೆದಿಂದ ಕರ್ತವ್ಯನಿಷ್ಠೆಯೂ, ಸತ್ಯಪಕ್ಷ ಪಾತಿತ್ವವೂ, ಅತ್ಮಹಿತವೂ, ದೇಶಾಭಿವಾನವೂ, ಪರೋಪಕಾರ ಬುದ್ಧಿಯೂ, ನಿಸ್ಸೀಮವಾದ ಧೈರ್ಯವೂ, ಸ್ಪಷ್ಟವಾದಿತ್ವವೂ ಇನ್ನೂ ಅನೇಕ ಸುಗುಣಗಳೂ ಲಭಿಸಿ, ಪ್ರಗತಿಗೆ ಕಾರಣೀಭೂತಗಳಾಗುವವು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋರಿಕೆ ಮನಕ್ಕೆ
Next post ಬೆಳಗಿಸು ಬಾ ಶುಭ ಆರತಿ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…