ಬೇಸಿಗೆ ಬಂತೆಂದಿರೆ ಸೆಕೆ! ಸೆಕೆ! ತಂಪನ್ನೀಯುವ ಕಾಡುಗಳನ್ನು ಕಡಿಯುತ್ತ ಭೂಮಿಯಲ್ಲಿ ಸುರಂಗತೋಡುತ್ತ ಭೂಮಿಗೆ ರಾಸಾಯನಿಕಗಳನ್ನು ಮಿಶ್ರಮಾಡುತ್ತ ಹೋಗುವುದರಿಂದ ಭೂಮಿ ಹೆಚ್ಚು ಉಷ್ಣತೆಯನ್ನು ಹೊಂದುತ್ತದೆ. ಈಗಾಗಲೇ ಭೂಮಿಯ ತಾಪಮಾನ (ಉಷ್ಟತೆ) ಹೆಚ್ಚಾದ ಪರಿಣಾಮವಾಗಿ ಸಮುದ್ರ ಪ್ರದೇಶ ಹಾಗೂ ಅರಣ್ಯವಲಯಗಳಿಂದ ಅಧಿಕ ಪ್ರಮಾಣದ ಕಾರ್ಬನ್ ಡೈ ಆಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗಲಿದೆ. ಭೂಮಿಯ ಉಷ್ಣತೆಯ ಪ್ರಮಾಣ ಸದ್ಯದ ಮಟ್ಟದಲ್ಲಿಯೇ ಹೆಚ್ಚಾಗುತ್ತ ಹೋದರೆ ೨೦೧೦ ನೆ ಇಸ್ವಿಗೆ ಭೂಮಂಡಲದ ತಾಪಮಾನ ೭.೫ ಡಿಗ್ರಿ ಸೆಂಟಿಗ್ರೇಡ್‌ಗೆ ಏರಲಿದೆ, ಎಂದು ಇಂಗ್ಲೆಂಡಿನ ಬ್ರಾಕ್ನೆಲ್‌ನ ಹಾಡ್ಲೆ ಕೇಂದ್ರದ ಸಂಶೋಧಕರು ಜಿಯೋಫಿಸಿಕಲ್ ರಿಸಾರ್ಚ್ ಲೆಟರ್ಗೆ ಬರೆದ ಲೇಖನವೊಂದರಲ್ಲಿ ತಿಳಿಸಿದ್ದಾರೆ. ಈ ಪ್ರಮಾಣಕ್ಕಿಂತಲೂ ತಾಪಮಾನ ಹೆಚ್ಚಾದರೆ ಅಶಕ್ತರಿಗೆ ತೊಂದರೆ ಕಾಣಿಸಿಕೊಳ್ಳಬಹುದು, ಬೆಳೆಗಳು ಸುಟ್ಟು ಹೋಗಬಹುದು. ಒಣಗಿದ ತರೆಗೆಲೆಗಳು ತನ್ನಿಂದ ತಾನೆಹೊತ್ತಿಕೊಳ್ಳಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
*****
Related Post
ಸಣ್ಣ ಕತೆ
-
ಮರೀಚಿಕೆ
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…
-
ಉಪ್ಪು
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…
-
ಎರಡು ರೆಕ್ಕೆಗಳು
ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…
-
ಶಾಕಿಂಗ್ ಪ್ರೇಮ ಪ್ರಕರಣ
ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…
-
ದೇವರು ಮತ್ತು ಅಪಘಾತ
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…